ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anant Ambani: ಪ್ರೀತಿಯ ಶ್ವಾನ ʼಹ್ಯಾಪಿʻಯನ್ನು ಕಳೆದುಕೊಂಡ ಅಂಬಾನಿ ಕುಟುಂಬ! ಭಾವನಾತ್ಮಕ ಪೋಸ್ಟ್ ವೈರಲ್

ಹೆಚ್ಚಿನವರ ಮನೆಯಲ್ಲಿ ನಾಯಿ ಸಾಕಾಣಿಕೆ ಇದ್ದೇ ಇರುತ್ತದೆ. ಕೆಲವರಂತು ಸಾಕು ನಾಯಿಗೆ ಮನೆ ಮಕ್ಕಳ ಸ್ಥಾನವನ್ನೇ ತುಂಬಿ ಬಿಡುತ್ತಾರೆ‌. ಅಂತೆಯೇ ಅಂಬಾನಿ ಕುಟುಂಬದಲ್ಲಿ ಕೂಡ ಮುದ್ದಾದ ನಾಯಿಗಳು ಇವೆ. ಅದರಲ್ಲಿ ಹ್ಯಾಪಿ ಅನ್ನೊ ಶ್ವಾನ ಇಡೀ ಕುಟುಂಬದ ಪ್ರೀತಿಯನ್ನೇ ಗಳಿಸಿದೆ.‌ ಇಡೀ ಕುಟುಂಬಕ್ಕೆ ಹ್ಯಾಪಿ ನಾಯಿ ಎಂದರೆ ಬಹಳ ಅಚ್ಚು ಮೆಚ್ಚು. ಆದರೆ ಹ್ಯಾಪಿ ಸಾವನ್ನಪ್ಪಿದ್ದು ಅಂಬಾನಿ ಕುಟುಂಬ ಕಂಬನಿ ಮಿಡಿಯುವಂತಾಗಿದೆ.

ಪ್ರೀತಿಯ ಶ್ವಾನ ಹ್ಯಾಪಿಯನ್ನು ಕಳೆದುಕೊಂಡ ಅಂಬಾನಿ ಕುಟುಂಬ

Profile Pushpa Kumari May 2, 2025 8:12 PM

ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ಮನೆತನಗಳಲ್ಲಿ ಅಂಬಾನಿ ಕುಟುಂಬವೂ ಒಂದು. ಭಾರತೀಯ ಅರ್ಥಿಕ ವ್ಯವಸ್ಥೆ ಯಲ್ಲಿ ಅಂಬಾನಿ ಅವರ ಕೊಡುಗೆ ಮಹತ್ತರವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ಜಿಯೊ ದಂತಹ ದೈತ್ಯ ಕಂಪೆನಿ ಗಳನ್ನು ಹುಟ್ಟುಹಾಕಿ ಭಾರತದಲ್ಲಿ ಒಂದು ದೊಡ್ಡ ಕೈಗಾರಿಕಾ ಕಂಪನಿಯಾಗಿ ಮಾರ್ಪಡಿಸಿದ್ದ ಅಂಬಾನಿ ಕುಟುಂಬ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತದೆ‌ . ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಕೂಡ ಸೋಶಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಇತ್ತೀಚೆಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ಬಹಳಷ್ಟು (Viral Post) ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ಅಂಬಾನಿ ತಮ್ಮ ಸಾಕು ನಾಯಿ ಮೃತ ಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.

ಅಂಬಾನಿ ಕುಟುಂಬದಲ್ಲಿ ಮುದ್ದಾದ ನಾಯಿಗಳು ಇವೆ. ಅದರಲ್ಲಿ ಹ್ಯಾಪಿ ಅನ್ನೊ ನಾಯಿ ಇಡೀ ಕುಟುಂಬದ ಪ್ರೀತಿಯನ್ನೇ ಗಳಿಸಿದೆ.‌ ಅನಂತ್ ಅಂಬಾನಿ ಅವರ ನಿಶ್ಚಿತಾರ್ಥದಲ್ಲಿ ಅವರ ಉಂಗುರವನ್ನು ಹ್ಯಾಪಿ ನಾಯಿಯೇ ತಂದುಕೊಟ್ಟಿತ್ತು. ಆಗ ಅಲ್ಲಿ ನೆರೆದಿದ್ದ ಜನರಿಗೂ ಬಹಳ ಆಶ್ಚರ್ಯವೆನಿಸಿತ್ತು. ಹೀಗೆ ಅಂಬಾನಿ ಕುಟುಂಬದ ಸದಸ್ಯನಂತೆ ಎಲ್ಲ ಕಾರ್ಯಕ್ರಮಕ್ಕೂ ಹ್ಯಾಪಿ ಉಪಸ್ಥಿತಿ ಇದ್ದೇ ಇರುತ್ತಿತ್ತು. ಇಡೀ ಕುಟುಂಬಕ್ಕೆ ಹ್ಯಾಪಿ ನಾಯಿ ಎಂದರೆ ಬಹಳ ಅಚ್ಚು ಮೆಚ್ಚು. ಆದರೆ ಹ್ಯಾಪಿ ವಯಸ್ಸಾಗಿ ಸಾವನ್ನಪ್ಪಿದ್ದು ಅಂಬಾನಿ ಕುಟುಂಬ ಕಂಬನಿ ಮಿಡಿಯುವಂತಾಗಿದೆ.

@ambani_update ಹೆಸರಿನ Instagram ಖಾತೆಯಿಂದ ಭಾವನಾತ್ಮಕ ಪೋಸ್ಟ್ ವೈರಲ್ ಆಗಿದ್ದು ವಿಶೇಷ ಕ್ಯಾಪ್ಶನ್ ಇರುವುದನ್ನು ಕಾಣಬಹುದು. ಹ್ಯಾಪಿ ನಾಯಿಯು ಇನ್ನು ಮುಂದೆ ನಮ್ಮೊಂದಿಗಿಲ್ಲ , ಆದರೆ ಯಾವಾಗಲೂ ನಮ್ಮ ನೆನಪಿನಲ್ಲಿ‌ ಸದಾ ಇರುತ್ತದೆ ಎಂದು ಭಾವನಾತ್ಮಕವಾಗಿ ಬರೆಯಲಾಗಿದ್ದ ಕ್ಯಾಪ್ಟನ್ ಅನ್ನು ಕಾಣಬಹುದು. ಇದರ ಜೊತೆಗೆ ಅನಂತ್ ಅಂಬಾನಿಯವರ ವಿವಾಹದ ವಿಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಮುದ್ದು ನಾಯಿ ಹ್ಯಾಪಿ ಮುದ್ದಾದ ಉಡುಪನ್ನು ಧರಿಸಿಕೊಂಡಿದ್ದನ್ನು ಕಾಣಬಹುದು. ಇತ್ತೀಚೆಗಷ್ಟೇ ಹ್ಯಾಪಿಗಾಗಿ ಸ್ಮರಣಾರ್ಥ ಪ್ರಾರ್ಥನಾ ಸಭೆ ಸಹ ಅಂಬಾನಿ ಕುಟುಂಬ ಕೈಗೊಂಡಿದ್ದು ಈ ಸಭೆಯಲ್ಲಿ ನಿನ್ನ ನೆನಪು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಅಂಬಾನಿ ಅವರು ಭಾವನಾತ್ಮಕವಾಗಿ ನುಡಿದಿದ್ದರಂತೆ.

ಇದನ್ನು ಓದಿ: Viral News: ಗಡ್ಡ ಬಿಟ್ಟ ಪತಿಯನ್ನು ಬಿಟ್ಟು ಕ್ಲೀನ್‍ಶೇವ್ ಮಾಡುತ್ತಿದ್ದ ಮೈದುನನ ಜೊತೆ ಓಡಿ ಹೋದ ಮಹಿಳೆ; ಏನಿದು ಘಟನೆ?

ಅಂಬಾನಿ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದು ಅನೇಕ ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮುದ್ದು ನಾಯಿಯನ್ನು ಮಗುವಂತೆ ಸಲಹುವ ಪ್ರತಿಯೊಬ್ಬರಿಗೂ ಈ ನೋವು ಕಾಡುತ್ತದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಹಾಕಿದರೆ ಇನ್ನು ಕೆಲವರು ಹ್ಯಾಪಿಗೆ ವಯಸ್ಸು ಎಷ್ಟು? ಹೇಗೆ ಮೃತವಾಯ್ತು ಎಂದೆಲ್ಲ ಪ್ರಶ್ನೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ