ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indi (Vijayapura) news: ಶಾಂತಿ ಸಮಾನತೆ ಸರಳತೆ ಕಾರುಣೆ ಸಂದೇಶ ನೀಡಿದ ಗೌತಮ ಬುದ್ದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಸಮಾಜದಲ್ಲಿ ಮೂಢನಂಬಿಕೆ, ಅಸಮಾನತೆ ಸಂಪ್ರದಾಯಗಳು ಸಾಕಷ್ಟು ಜಟಿಲವಾಗಿದ್ದವು ಆದರೆ ಗೌತಮ ಬುದ್ದರು ಸರಳತೆ ಮಾರ್ಗ ತೋರಿಸಿದ ಮಹಾನ್ ದಾರ್ಶನಿಕ ಪುರುಷ. ಡಾ.ಬಿ.ಆರ್ ಅಂಬೇಡ್ಕರ ವರು ಇಡೀ ವಿಶ್ವದ ಶ್ರೇಷ್ಠ ವ್ಯಕ್ತಿಗಳಲ್ಲಿ ಪ್ರಥಮ ಪಂಕ್ತಿಯಲ್ಲಿದ್ದ ಮೇರು ಪರ್ವತ ಇವರು ಅನೇಕ ಧರ್ಮಗಳ ಬಗ್ಗೆ ಅಧ್ಯಾಯನ ಮಾಡಿ ಯಾವ ಧರ್ಮ ಸರಳ ಎಂಬುದನ್ನು ಅರಿತು ಜಿಟ್ಟುಗಟ್ಟಿದ ಧರ್ಮಗಳ ಕಡೆ ವಾಲದೆ ಸರಳ ಮಾರ್ಗ ತೋರಿದ ಬುದ್ದ ಧಮ್ಮ ಸ್ವೀಕರಿಸಿದ ತನ್ನ ಜನತೆಗೆ ಸರಳ ಮಾರ್ಗ ಹಾಕಿಕೊಟ್ಟಿದ್ದಾರೆ

ಗೌತಮ ಬುದ್ದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಡಾ.ಬಿ.ಆರ್ ಅಂಬೇಡ್ಕರ ಯುವಕ ಮಂಡಳಿ ಆಯೋಜಿಸಿದ ಭಗವಾನ ಗೌತಮ ಬುದ್ದ ಜಯಂತ್ಯೋತ್ಸವ ಶಾಸಕ ಯಶವಂತರಾಯಗೌಡ ಪಾಟೀಲ ಗೌತಮ ಬುದ್ದರ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸುತ್ತಿರುವುದು.

Profile Ashok Nayak May 15, 2025 11:05 AM

ಇಂಡಿ: ಜಗತ್ತಿಗೆ ಶಾಂತಿ ಸಮಾನತೆ ಸರಳತೆ ಕಾರುಣೆ ಸಂದೇಶ ನೀಡಿದ ಗೌತಮ ಬುದ್ದರ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಡಾ.ಬಿ.ಆರ್ ಅಂಬೇಡ್ಕರ ಯುವಕ ಮಂಡಳಿ ಆಯೋಜಿಸಿದ ಭಗವಾನ ಬುದ್ದ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಮೂಢನಂಬಿಕೆ, ಅಸಮಾನತೆ ಸಂಪ್ರದಾಯಗಳು ಸಾಕಷ್ಟು ಜಟಿಲವಾಗಿದ್ದವು ಆದರೆ ಗೌತಮ ಬುದ್ದರು ಸರಳತೆ ಮಾರ್ಗ ತೋರಿಸಿದ ಮಹಾನ್ ದಾರ್ಶನಿಕ ಪುರುಷ. ಡಾ.ಬಿ.ಆರ್ ಅಂಬೇಡ್ಕರವರು ಇಡೀ ವಿಶ್ವದ ಶ್ರೇಷ್ಠ ವ್ಯಕ್ತಿಗಳಲ್ಲಿ ಪ್ರಥಮ ಪಂಕ್ತಿಯಲ್ಲಿದ್ದ ಮೇರು ಪರ್ವತ ಇವರು ಅನೇಕ ಧರ್ಮಗಳ ಬಗ್ಗೆ ಅಧ್ಯಾಯನ ಮಾಡಿ ಯಾವ ಧರ್ಮ ಸರಳ ಎಂಬುದನ್ನು ಅರಿತು ಜಿಟ್ಟುಗಟ್ಟಿದ ಧರ್ಮಗಳ ಕಡೆ ವಾಲದೆ ಸರಳ ಮಾರ್ಗ ತೋರಿದ ಬುದ್ದ ಧಮ್ಮ ಸ್ವೀಕರಿಸಿದ ತನ್ನ ಜನತೆಗೆ ಸರಳ ಮಾರ್ಗ ಹಾಕಿಕೊಟ್ಟಿದ್ದಾರೆ.

ಇದನ್ನೂ ಓದಿ: Vijayapura News: ಆಟವಾಡುತ್ತಿದ್ದ ವೇಳೆ ತೆರೆದ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

ಬುದ್ದ ಒಬ್ಬ ರಾಜವಂಶಸ್ಥ ಆದರೆ ಜೀವನದಲ್ಲಿ ಯಾವುದೇ ಶಾಶ್ವತ ಅಲ್ಲ ಎಂಬುದನ್ನು ಅರಿತರು ಆಶೇಯ ದುಖಕ್ಕೆ ಮೂಲ ಕಾರಣ ಆಶೇಯ ನಾಶವೇ ಸಂತೋಷಕ್ಕೆ ಕಾರಣ ಎಂಬ ನಿಜ ಅರಿತವರು ಇವರ ತತ್ವಗಳು ಸರ್ವಕಾಲಿಕ ಸತ್ಯವಾಗಿದೆ ಎಂದರು. ತಾಲೂಕಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಪ್ರಶಾಂತ ಕಾಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಭೀಮಾಶಂಕರ ಮೂರಮನ್,ರಾಜು ಹಾದಿಮನಿ, ವಿನೋದ ಕಾಳೆ, ಕೇತನ ಕಾಲೇಬಾಗ,ಸಿಧ್ಧಾರ್ಥ ಹಳ್ಳದಮನಿ, ಮಿಲಿಂದ ಹೊಸಮನಿ, ಸುನೀಲ ಕಾಲೇಬಾಗ, ವಿಕಾಸ ಹೊಸಮನಿ, ಸಾಗರ ಕಾಳೆ, ಶರಣು ಹಾದಿಮನಿ, ಶಿವಾನಂದ ಮೂರಮನ್, ಅಯ್ಯಪ್ಪ ಅಂಜುಟಗಿ, ರಾಜು ಹಳ್ಳದಮನಿ, ಕಲ್ಲಪ್ಪ ಅಂಜುಟಗಿ, ರವಿ ಸಿಂಗೆ, ಅಂಜನೇಯ ಹೊಸಮನಿ, ಸ್ವಾಮಿ ಹೊಸಮನಿ,ಮಲ್ಲಪ್ಪ ಹಳ್ಳದಮನಿ, ಶಿವಾನಂದ ಹಳ್ಳದಮನಿ, ಭೀಮಣ್ಣಾ ಕೌಲಗಿ, ಇಲಿಯಾಸ ಬೋರಾಮಣಿ, ಜೆಟ್ಟೆಪ್ಪ ರವಳಿ ಸೇರಿದಂತೆ ಯವಕ ಮಂಡಳಿ ಅಧ್ಯಕ್ಷರು ಸದಸ್ಯರು ಪಧಾಧಿಕಾರಿಗಳು ಗಣ್ಯರು ಇದ್ದರು.