Vishweshwar Bhat Column: ಹೆಚ್ಚುತ್ತಿರುವ ಒಂಟಿ ಮರಣ
ಜಪಾನಿನ ಜನಪ್ರಿಯ ‘ಜಪಾನ್ ಟೈಮ್ಸ್’ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಅದು ತೊಂಬ ತ್ತೆಂಟು ವರ್ಷದ ವೃದ್ಧನೊಬ್ಬನ ನಿಧನ ಸುದ್ದಿ. ವಿಷಯ ಅದಲ್ಲ, ಆತ ಸತ್ತು ಹನ್ನೊಂದು ದಿನಗಳ ಬಳಿಕ, ಅದು ಸುತ್ತಲಿನವರಿಗೆ ಗೊತ್ತಾಗಿತ್ತು. ಹೌದು, ಜಪಾನಿನಲ್ಲಿ ಇತ್ತೀಚಿನ ದಿನಗಳಲ್ಲಿ ಒಂಟಿ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಜಪಾನಿಯರು ’ಕೊಡೋ ಕುಶಿ’ ಎಂದು ಕರೆಯುತ್ತಾರೆ


ಸಂಪಾದಕರ ಸದ್ಯಶೋಧನೆ
ಕೆಲವು ದಿನಗಳ ಹಿಂದೆ, ಜಪಾನಿನ ಜನಪ್ರಿಯ ‘ಜಪಾನ್ ಟೈಮ್ಸ್’ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟ ವಾಗಿತ್ತು. ಅದು ತೊಂಬತ್ತೆಂಟು ವರ್ಷದ ವೃದ್ಧನೊಬ್ಬನ ನಿಧನ ಸುದ್ದಿ. ವಿಷಯ ಅದಲ್ಲ, ಆತ ಸತ್ತು ಹನ್ನೊಂದು ದಿನಗಳ ಬಳಿಕ, ಅದು ಸುತ್ತಲಿನವರಿಗೆ ಗೊತ್ತಾಗಿತ್ತು. ಹೌದು, ಜಪಾನಿನಲ್ಲಿ ಇತ್ತೀಚಿನ ದಿನಗಳಲ್ಲಿ ಒಂಟಿ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಜಪಾನಿಯರು ’ಕೊಡೋ ಕುಶಿ’ ಎಂದು ಕರೆಯುತ್ತಾರೆ. ಇದು ಜಪಾನಿನಲ್ಲಿ ಕಂಡುಬರುತ್ತಿರುವ ಒಂದು ಸಾಮಾಜಿಕ ದುರಂತ. ಇದು ವ್ಯಕ್ತಿಯೊಬ್ಬನು ಒಂಟಿಯಾಗಿ ಸಾವನ್ನಪ್ಪಿದ ನಂತರ, ಅವನ ಮೃತದೇಹವು ದಿನಗಳು, ವಾರ ಗಳು ಅಥವಾ ಕೆಲವೊಮ್ಮೆ ತಿಂಗಳುಗಳ ಕಾಲ ಅನಾವರಣವಾಗದೇ ಇರುವ ಪರಿಸ್ಥಿತಿಯನ್ನು ಸೂಚಿಸುತ್ತದೆ.
ಹಾಗೆ ನೋಡಿದರೆ, ವೃದ್ಧರಲ್ಲಿ ಒಂಟಿ ಮರಣದ ಮೊದಲ ಪ್ರಕರಣ ಸಂಭವಿಸಿದ್ದು 1970ರ ದಶಕ ದಲ್ಲಿ. ಅದಾಗಿ ಮೂವತ್ತು ವರ್ಷಗಳ ಬಳಿಕ, ಅಂದರೆ 2000ರಲ್ಲಿ, 69 ವರ್ಷದ ವೃದ್ದನೊಬ್ಬನ ಮೃತದೇಹವು ಮೂರು ವರ್ಷಗಳ ನಂತರ ಪತ್ತೆಯಾದಾಗ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ ಕೊಡೋಕುಶಿ ಇತ್ತೀಚಿನ ದಿನಗಳಲ್ಲಿ ಸಹಜ ಎನ್ನಿಸುವಷ್ಟು ಆಗಾಗ ಸಂಭವಿಸು ತ್ತಿರುವುದು ನಿಜಕ್ಕೂ ಗಾಬರಿ ಹುಟ್ಟಿಸುತ್ತಿದೆ.
ಇದನ್ನೂ ಓದಿ: Vinayak V Bhat Column: ನರೆದಲೆಗ ಮತ್ತು ವ್ರಿಹಿಗಗಳಲ್ಲಿ ಶ್ರೇಷ್ಠರು ಯಾರು ?
2024ರಲ್ಲಿ, ಜಪಾನಿನಲ್ಲಿ ಒಂಟಿಯಾಗಿ ಸಾವನ್ನಪ್ಪಿದವರ ಸಂಖ್ಯೆ 76 ಸಾವಿರಕ್ಕಿಂತ ಅಧಿಕವಾಗಿದ್ದು, ಅವರಲ್ಲಿ ಶೇ.76 ಮಂದಿ 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು. ಈ ಪೈಕಿ 85 ವರ್ಷ ಅಥವಾ ಹೆಚ್ಚು ವಯಸ್ಸಿನವರು ಹದಿನೈದು ಸಾವಿರಕ್ಕಿಂತ ಹೆಚ್ಚಾಗಿದ್ದಾರೆ. ಈ ಪಿಡುಗನ್ನು ತಡೆಯಲು, ಟೋಕಿಯೋದ ಟೋಕಿವದೈರಾ ಪ್ರದೇಶದಲ್ಲಿ ಹಾಟ್ ಲೈನ್ ಗಳು, ಸ್ವಯಂಸೇವಕರ ಗಸ್ತು ಮತ್ತು ಸೆನ್ಸರ್ ಉಪಕರಣಗಳ ಮೂಲಕ ಹಿರಿಯರ ಮೇಲೆ ನಿಗಾ ಇಡಲಾಗುತ್ತಿದೆ.
ಜಪಾನಿನಲ್ಲಿ ಹಿರಿಯರು ಬಹುಪಾಲು ಒಂಟಿಯಾಗಿ ಬದುಕುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ವೃದಖರ ಒಂಟಿ ಜೀವನ ಸಾಮಾನ್ಯವಾಗಿದೆ. ಸಾವು ಗೊತ್ತಾಗದಿರಲು ಇದೇ ಮುಖ್ಯ ಕಾರಣ. ಇದು ಕುಟುಂಬ ಬಂಧಗಳ ಸಂಪರ್ಕ ಹೀನತೆಯನ್ನು ಎತ್ತಿ ಹಿಡಿದಿದೆ.
ಪಿಂಚಣಿ ಯೋಜನೆಗಳು ಮತ್ತು ಆರ್ಥಿಕ ಸಹಾಯದ ಕೊರತೆಯಿಂದಾಗಿ, ಹಲವರು ತಮ್ಮ ಜೀವನೋಪಾಯವನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ, ಹುಪೀಳಿಗೆಯ ಕುಟುಂಬಗಳು ಸಾಮಾನ್ಯವಾಗಿದ್ದವು. ಆದರೆ ಈಗ, ಹೆಚ್ಚು ಮಂದಿ ತಮ್ಮ ಕುಟುಂಗಳಿಂದ ದೂರ ವಿರುವ ನಗರಗಳಲ್ಲಿ ವಾಸಿಸುತ್ತಿದ್ದಾರೆ.
ಈ ಮಧ್ಯೆ ಜಪಾನಿನಲ್ಲಿ ವೃದ್ಧರ ಜನಸಂಖ್ಯೆ ಏರುತ್ತಿದೆ. 2050ರ ವೇಳೆಗೆ, ಒಂಟಿಯಾಗಿ ಬದುಕು ತ್ತಿರುವ ಹಿರಿಯರ ಸಂಖ್ಯೆ ಶೇ.47ರಷ್ಟು ಏರಲಿದೆ. ಈ ಸವಾಲುಗಳನ್ನು ಎದುರಿಸಲು, ಸರಕಾರವು ಸಮುದಾಯ ಆಧಾರಿತ ಸೇವೆಗಳು, ಪಿಂಚಣಿ ಸುಧಾರಣೆಗಳು ಮತ್ತು ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಿಸುವಂಥ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು.
ಜಪಾನಿನ ಸಾಮಾಜಿಕ ಅಧ್ಯಯನಗಳಲ್ಲಿ ಹೇಳಿರುವಂತೆ, ‘ಒಂಟಿತನದ ನೋವು ಮರಣಕ್ಕಿಂತಲೂ ಹೆಚ್ಚು ನೋವು ತರುವಂಥದ್ದು.’ ಇದು ಮನುಷ್ಯನ ಮೂಲಭೂತ ಮಾನವೀಯ ಸಂಬಂಧದ ಅಗತ್ಯವನ್ನೇ ಅಣಕ ಮಾಡಿದಂತೆ. ಓರ್ವ ವ್ಯಕ್ತಿ ಸತ್ತರೂ ಗೊತ್ತಾಗದಿರುವುದು, ವಿಷಯ ತಿಳಿದರೂ ಅಂತ್ಯಸಂಸ್ಕಾರಕ್ಕೆ ಬಾರದಿರುವುದು ದಲಾಗುತ್ತಿರುವ ಸಮಾಜದ ಕ್ರೂರ ಮುಖಗಳಂತೆ ಭಾಸವಾಗು ತ್ತಿದೆ.
ಒಂಟಿ ಮರಣಕ್ಕೆ ಇನ್ನೂ ಒಂದು ಕಾರಣವಿದೆ. ಜಪಾನಿನ ಸಮಾಜ ಜೀವನ ಮತ್ತು ಸಂಸ್ಕೃತಿಯಲ್ಲಿ ವ್ಯಕ್ತಿಗತ ಜೀವನ (individualism) ಮತ್ತು ಸ್ವಯಂ ನಿಯಂತ್ರಣ (self-restraint) ದೊಡ್ಡ ಪಾತ್ರ ವಹಿಸುತ್ತವೆ. ಜನರು ತಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಹೇಳಿಕೊಳ್ಳಲು ಹಿಂಜರಿಯು ತ್ತಾರೆ. ಕೆಲವೊಮ್ಮೆ ಸಹಾಯ ಕೇಳುವುದು ಲಜ್ಜೆಯ ವಿಷಯವೆಂದು ಭಾವಿಸುತ್ತಾರೆ. ಪರಿಣಾಮ, ಓರ್ವ ವ್ಯಕ್ತಿ ತನ್ನ ಆರೋಗ್ಯ ಅಥವಾ ಸಾಮಾಜಿಕ ಸ್ಥಿತಿ ಕುಸಿದರೂ, ಯಾರಿಗೂ ತಿಳಿಸದೇ, ಸಹಾಯ ವಿಲ್ಲದೇ ದುಕುತ್ತಾರೆ ಮತ್ತು ಕೊನೆಗೆ ಮರಣ ಹೊಂದುತ್ತಾರೆ.
ಒಂಟಿಯಾಗಿ ಸಾವನ್ನಪ್ಪಿದವರ ಮನೆಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ‘ಕೊಡೋಕುಶಿ ಕ್ಲೀನರ್ಸ್’ ಎಂ ಉದ್ಯಮಗಳು ಜಪಾನಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡಿವೆ. ಈ ಉದ್ಯಮವನ್ನು ‘ವಿಶೇಷ ಸ್ವಚ್ಛತಾ ಸೇವೆ’ ಎಂದು ಕರೆಯುತ್ತಾರೆ. ಇವು ಮೃತದೇಹ ಪತ್ತೆಯಾಗದೇ ಇರುವ ದಿನಗಳಲ್ಲಿ ಉಂಟಾಗುವ ವಾಸನೆ, ಕೊಳೆತ ದೇಹದಿಂದ ಹಬ್ಬಿದ ಕ್ರಿಮಿ-ಕೀಟಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತವೆ.