ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೆಸ್ಟ್‌ ನಿವೃತ್ತಿ ಬೆನ್ನಲ್ಲೇ ಸಿಎಂ ಫಡ್ನವೀಸ್‌ ಭೇಟಿಯಾದ ರೋಹಿತ್‌; ಇದು ರಾಜಕೀಯ ಸೇರುವ ಸುಳಿವು ಎಂದ ನೆಟ್ಟಿಗರು

Rohit meets Fadnavis: ಕಳೆದ ಬುಧವಾರದಂದು ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ರೋಹಿತ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ‘ಟೆಸ್ಟ್ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದು ದೊಡ್ಡ ಗೌರವ. ಇಷ್ಟು ವರ್ಷ ನೀವು ತೋರಿದ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು. ಇನ್ನು ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದೇನೆ’ ಎಂದು ಹೇಳುವ ಮೂಲಕ ಟೆಸ್ಟ್‌ಗೆ ನಿವೃತ್ತಿ ಹೇಳಿದ್ದರು.

ಟೆಸ್ಟ್‌ ನಿವೃತ್ತಿ ಬೆನ್ನಲ್ಲೇ ಸಿಎಂ ಫಡ್ನವೀಸ್‌ ಭೇಟಿಯಾದ ರೋಹಿತ್‌

Profile Abhilash BC May 14, 2025 2:32 PM

ಮುಂಬಯಿ: ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತ ಕ್ರಿಕೆಟ್‌ ತಂಡದ ಅನುಭವಿ ಬ್ಯಾಟರ್‌ ರೋಹಿತ್‌ ಶರ್ಮ(Rohit Sharma) ಅವರು ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್‌(CM Devendra Fadnavis) ಅವರನ್ನು ಭೇಟಿ ಮಾಡಿರುವುದು(Rohit meets Fadnavis) ಇದೀಗ ರೋಹಿತ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕೆಲ ನೆಟ್ಟಿಗರು ರೋಹಿತ್‌ ಶೀಘ್ರದಲ್ಲೇ ರಾಜಕೀಯಕ್ಕೆ ಸೇರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರದಂದು ರೋಹಿತ್ ಶರ್ಮಾ ಅವರು ದೇವೇಂದ್ರ ಫಡ್ನವೀಸ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಈ ವೇಳೆ ರೋಹಿತ್‌ಗೆ ಫಡ್ನವೀಸ್ ಶಾಲು ಹೊದಿಸಿ, ಗೌರವಿಸಿ ಸನ್ಮಾನಿಸಿದ್ದರು. ಇದರ ಫೋಟೊವನ್ನು ಫಡ್ನವೀಸ್ ಟ್ವಿಟರ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

"ನನ್ನ ಅಧಿಕೃತ ನಿವಾಸದಲ್ಲಿ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ಸ್ವಾಗತಿಸಲು, ಭೇಟಿಯಾಗಲು ಮತ್ತು ಸಂವಹನ ನಡೆಸಿದ್ದು ಸಂತೋಷವಾಯಿತು. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಅವರಿಗೆ ಮತ್ತು ಅವರ ಪ್ರಯಾಣದ ಮುಂದಿನ ಅಧ್ಯಾಯದಲ್ಲಿ ನಿರಂತರ ಯಶಸ್ಸಿಗೆ ನಾನು ಶುಭಾಶಯಗಳನ್ನು ಕೋರುತ್ತೇನೆ!" ಎಂದು ಫಡ್ನವೀಸ್ ಪೋಸ್ಟ್‌ ಮಾಡಿದ್ದಾರೆ. ಫಡ್ನವೀಸ್ ಪೋಸ್ಟ್‌ ಕಂಡ ಅನೇಕರ ನೆಟ್ಟಿಗರು ರೋಹಿತ್‌ ಅವರು ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ.



ಕಳೆದ ಬುಧವಾರದಂದು ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ರೋಹಿತ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ‘ಟೆಸ್ಟ್ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದು ದೊಡ್ಡ ಗೌರವ. ಇಷ್ಟು ವರ್ಷ ನೀವು ತೋರಿದ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು. ಇನ್ನು ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದೇನೆ’ ಎಂದು ಹೇಳುವ ಮೂಲಕ ಟೆಸ್ಟ್‌ಗೆ ನಿವೃತ್ತಿ ಹೇಳಿದ್ದರು.

2013ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಬಾರಿ ಟೆಸ್ಟ್‌ ಆಡಿದ್ದ ರೋಹಿತ್, ಈ ವರೆಗೂ ಭಾರತ ಪರ 67 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 12 ಶತಕ, 18 ಅರ್ಧಶತಕ ಸೇರಿದಂತೆ 40.57ರ ಸರಾಸರಿಯಲ್ಲಿ 4301 ರನ್‌ ಕಲೆಹಾಕಿದ್ದಾರೆ.