DishTV ಯ WATCHO APPನಲ್ಲಿ “FLIQS” ಎಂಬ ಹೊಸ ವಿಶೇಷ ಡಿಜಿಟಲ್ ಕಂಟೆಂಟ್ ವಿಭಾಗ ಪ್ರಾರಂಭ, OTT ಕ್ಷೇತ್ರದಲ್ಲಿ ಒಂದು ಕ್ರಾಂತಿ
ಕಂಟೆಂಟ್ ಇಂಡಿಯಾ, 2025 ಶೃಂಗಸಭೆಯನ್ನು ಮೊದಲ ಬಾರಿಗೆ ಏಪ್ರಿಲ್ 2025ರಲ್ಲಿ ನಡೆಸು ವುದು ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ. ಮುಂದೆ ಇದನ್ನೇ ಅನುಸರಿಸಿ, DishTV ತನ್ನ WATCHO APPನಲ್ಲಿ “FLIQS” ಎಂಬ ಹೊಸ ರೀತಿಯ ವಿಶೇಷ ಡಿಜಿಟಲ್ ಕಂಟೆಂಟ್ ವಿಭಾಗವನ್ನು ಪ್ರಾರಂಭಿಸುವ ಮೂಲಕ OTT ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಈ ವಿಭಾಗವನ್ನು ಅಧಿಕೃತವಾಗಿ WAVES 2025 ರಲ್ಲಿ ಅನಾವರಣಗೊಳಿಸಲಾಯಿತು


ಭಾರತದ ಪ್ರಮುಖ ಕಂಟೆಂಟ್ (ವಿಷಯ) ವಿತರಣಾ ಕಂಪನಿಗಳಲ್ಲಿ ಒಂದಾದ ಮತ್ತು ಭಾರತದ ಮೊದಲ ಡೈರೆಕ್ಟ್ ಟು ಹೋಮ್ ಆಪರೇಟರ್ ಆಗಿರುವ DishTV ಇಂಡಿಯಾ ಲಿಮಿಟೆಡ್ ನವೀನ ಉತ್ಪನ್ನಗಳನ್ನು ಪ್ರಾರಂಭಿಸುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಡಿಜಿಟಲ್ ಬಳಕೆಯು ಹೆಚ್ಚಾದ ನಂತರ, DishTV ಯು ಸೃಷ್ಟಿಕರ್ತರ ಆರ್ಥಿಕತೆ, ವೃತ್ತಿಪರ ಕಂಟೆಂಟ್ ರಚನೆಕಾರರು ಮತ್ತು ಗ್ರಾಹಕರಿಗಾಗಿ ಸಂಪೂರ್ಣ ಎಕೋಸಿಸ್ಟಮ್ ಅನ್ನು ಸೃಷ್ಟಿಸುವ ಕಾರ್ಯ ವನ್ನು ಕೈಗೊಂಡಿತು.
ಕಂಟೆಂಟ್ ಇಂಡಿಯಾ, 2025 ಶೃಂಗಸಭೆಯನ್ನು ಮೊದಲ ಬಾರಿಗೆ ಏಪ್ರಿಲ್ 2025 ರಲ್ಲಿ ನಡೆಸು ವುದು ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ. ಮುಂದೆ ಇದನ್ನೇ ಅನುಸರಿಸಿ, DishTV ತನ್ನ WATCHO APP ನಲ್ಲಿ “FLIQS” ಎಂಬ ಹೊಸ ರೀತಿಯ ವಿಶೇಷ ಡಿಜಿಟಲ್ ಕಂಟೆಂಟ್ ವಿಭಾಗವನ್ನು ಪ್ರಾರಂಭಿಸುವ ಮೂಲಕ OTT ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಈ ವಿಭಾಗವನ್ನು ಅಧಿಕೃತವಾಗಿ WAVES 2025 ರಲ್ಲಿ ಅನಾವರಣಗೊಳಿಸಲಾಯಿತು. DishTV ಯ ಈ ಹೆಜ್ಜೆಯು ಒಂದು ಪ್ರಮುಖ ಆವಿಷ್ಕಾರವಾಗಿದ್ದು, ಕಂಟೆಂಟ್ ವಿತರಣೆಯನ್ನು ಪ್ರಜಾಸತ್ತಾತ್ಮಕವಾಗಿಸುವ ಹಾಗೂ ಭಾರತದ ಎಲ್ಲಾ ಕಂಟೆಂಟ್ ರಚನೆಕಾರರಿಗೆ ಮತ್ತು ಜಾಗತಿಕವಾಗಿಯೂ, ಕಂಟೆಂಟ್ ರಚನೆಕಾರರಿಗೆ ಭಾರತದಲ್ಲಿ ತಮ್ಮ ಕಂಟೆಂಟ್ ಅನ್ನು ಬಳಸಿಕೊಳ್ಳುವುದರ ಜೊತೆಗೆ ಹಣಗಳಿಕೆಯ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Bangalore News: ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ
ವೃತ್ತಿಪರ ಕಂಟೆಂಟ್ ರಚನೆಕಾರರು ತಮ್ಮ ಕಂಟೆಂಟ್ ಅನ್ನು ಲಕ್ಷಾಂತರ ವೀಕ್ಷಕರಿಗೆ ಪ್ರದರ್ಶಿಸಲು ಮತ್ತು ತಮ್ಮ ಕಂಟೆಂಟ್ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳದೆ ಹಣ ಗಳಿಸುವುದರ ಸಲು ವಾಗಿ ಅವರಿಗೆ ಸ್ವಾತಂತ್ರ್ಯವನ್ನು ನೀಡುವ ಗುರಿಯನ್ನು Watcho FLIQS ಹೊಂದಿದೆ. ಇದು ಪ್ರತಿ ಯೊಬ್ಬ ಕಂಟೆಂಟ್ ರಚನೆಕಾರರು ತನ್ನದೇ ಆದ OTT app ಹೊಂದಿರುವ ರೀತಿ ಇರುತ್ತದೆ.
ಇದು ಗ್ರಾಹಕರು ಮತ್ತು ಕಂಟೆಂಟ್ ರಚನೆಕಾರರಿಗಾಗಿ ವಿನ್ಯಾಸಗೊಳಿಸಲಾಗಿರುವ ಕಾರ್ಯತಂತ್ರದ ಆವಿಷ್ಕಾರವಾಗಿದೆ. ಇದು DishTV Watcho app ನಲ್ಲಿ ಒಂದೇ ಕ್ಯುರೇಟೆಡ್ ಪರಿಸರದಲ್ಲಿ ಫಿಲ್ಮ್‌ಗಳು ಮತ್ತು ವೆಬ್ ಸರಣಿಗಳಿಂದ ಹಿಡಿದು ಕಿರು-ಸ್ವರೂಪದ (ಶಾರ್ಟ್ ಫಾರ್ಮೇಟ್) ಕಂಟೆಂಟ್ ವರೆಗೆ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಭಾಷೆಗಳ ಒಂದು ಶ್ರೇಣಿಯಲ್ಲಿ ಲಭ್ಯವಿರುವ ವಿಶೇಷ, ಮೂಲ (ಒರಿಜಿನಲ್), ಪ್ರಶಸ್ತಿ ವಿಜೇತ ಮತ್ತು ಪ್ರೀಮಿಯಂ ಡಿಜಿಟಲ್ ಕಂಟೆಂಟ್ ಅನ್ನು ನೀಡುತ್ತದೆ. ಈ ಕಂಟೆಂಟ್ ನಲ್ಲಿ, ಗ್ರಾಹಕರಿಗೆ ಪ್ರತಿ ಕಂಟೆಂಟ್ ಟೈಟಲ್‌ಗೆ (ಶೀರ್ಷಿಕೆ) ರೂ. 9/- ರಿಂದ ಪ್ರಾರಂಭ ವಾಗುವ ದರದ ಜೊತೆಗೆ ದೊಡ್ಡ ಪ್ರಮಾಣದ ಉಚಿತ ಮತ್ತು ಲಘುವಾದ ಕಂಟೆಂಟ್ ಲಭ್ಯವಿರು ತ್ತದೆ.
ಈ ಸೇರ್ಪಡೆಯು DishTV Watcho ಅನ್ನು ಸಮಗ್ರ ಡಿಜಿಟಲ್ ಮನರಂಜನಾ ತಾಣವನ್ನಾಗಿ ಮಾಡು ವುದರ ಮೂಲಕ ಇದರ ವಿಕಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಇದು ಡಿಜಿಟಲ್ ಕಂಟೆಂಟ್ ಎಕೋಸಿಸ್ಟಮ್ ನಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಿದೆ ಮತ್ತು ಕಂಟೆಂಟ್ ಸಂಗ್ರಾಹಕವಾಗಿದ್ದ ಇದು ಸಮಗ್ರ ಮನರಂಜನಾ ಪ್ಲಾಟ್‌ಫಾರ್ಮ್ ಆಗಿ ರೂಪುಗೊಳ್ಳು ತ್ತಿದೆ ಹಾಗೂ ಕ್ಯುರೇಟೆಡ್ ಮತ್ತು ತಲ್ಲೀನಗೊಳಿಸುವ ಅನುಭವಗಳನ್ನು ನೀಡುತ್ತದೆ.
ಇದರೊಂದಿಗೆ ಮುಂದುವರಿಯುತ್ತಾ, ಪ್ರಸ್ತುತ ಬೇರೆ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿಲ್ಲದ ಹೆಚ್ಚಿನ ಅಂತರರಾಷ್ಟ್ರೀಯ ಟೈಟಲ್‌ಗಳು, ಪ್ರಾದೇಶಿಕ ಟೈಟಲ್ ಗಳು, ಹಿಂದಿಯಲ್ಲಿ ಡಬ್ ಮಾಡ ಲಾದ ಮಾರ್ಕ್ಯೂ ಇಂಗ್ಲಿಷ್ ಕಂಟೆಂಟ್, ಕ್ಲಾಸಿಕ್ ಮೂವೀಸ್ ಇತ್ಯಾದಿಗಳನ್ನು ಸೇರಿಸುವ ಮೂಲಕ ಇದರ ಗ್ರಂಥಾಲಯವನ್ನು ವಿಸ್ತರಿಸಲಾಗುವುದು.
ಇದರ ತಡೆರಹಿತ ಬಳಕೆದಾರ ಇಂಟರ್‌ಫೇಸ್, AI-ಚಾಲಿತ ರೆಕಮೆಂಡೇಷನ್ ಎಂಜಿನ್ ಮತ್ತು ಬಹು-ಪರದೆಯ (ಮಲ್ಟಿ ಸ್ಕ್ರೀನ್) ಸಂವಹನಗಳೊಂದಿಗೆ, FLIQS ಪ್ರೇಕ್ಷಕರಿಗೆ ಹೈಪರ್-ಪರ್ಸನಲೈಸ್ಡ್ ಮನರಂಜನಾ ಅನುಭವವನ್ನು ನೀಡುತ್ತದೆ.
Dish TV ಇಂಡಿಯಾ ಲಿಮಿಟೆಡ್‌ನ CEO ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ. ಮನೋಜ್ ದೋಭಾಲ್ ಅವರು, “FLIQS ನೊಂದಿಗೆ, OTT ಸೇವೆ ಏನಾಗಿರಬಹುದು ಎಂಬುದನ್ನು ಮರು ವ್ಯಾಖ್ಯಾನಿಸುತ್ತ ನಾವು ದೊಡ್ಡ ಮತ್ತು ದಿಟ್ಟ ಹೆಜ್ಜೆಯನ್ನು ಇಡುತ್ತಿದ್ದೇವೆ. ಇದು ಕೇವಲ ಮತ್ತೊಂದು ಕಂಟೆಂಟ್ ಬಿಡುಗಡೆಯಲ್ಲ, ಇದು ನಮ್ಮ ಉದ್ದೇಶದ ಹೇಳಿಕೆಯಾಗಿದೆ. ವಿಭಿನ್ನವಾದ ಮತ್ತು ಹೆಚ್ಚಿನ ಮೌಲ್ಯದ ಕಂಟೆಂಟ್ ಗಾಗಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯೊಂದಿಗೆ ಹೊಂದಿ ಕೊಳ್ಳುವಂತಹ ಹೊಸ ಪೀಳಿಗೆಯ ಕ್ಯುರೇಟೆಡ್ ಮತ್ತು ವಿಶೇಷ ಡಿಜಿಟಲ್ ಕಥೆ ಹೇಳುವುದನ್ನು FLIQS ಪ್ರತಿನಿಧಿಸುತ್ತದೆ, ಉದ್ಯಮವು ಪ್ಲಾಟ್‌ಫಾರ್ಮ್ ಗಳ ಪ್ರಸರಣವನ್ನು ಕಂಡಿದ್ದರೂ, ಕೆಲವೇ ಕೆಲವು ಮಾತ್ರ ನಿಜವಾಗಿಯೂ ವಿಭಿನ್ನವಾದುದ್ದನ್ನು ನೀಡುತ್ತವೆ. ಹೇಳದಂತಹ ಕಥೆಗಳು ಮತ್ತು ಒರಿಜಿನಲ್ ಪ್ರೊಡಕ್ಷನ್ಸ್ ಗಳನ್ನು ತರುವುದು ಮತ್ತು ವಿಶೇಷ ಟೈಟಲ್ ಗಳನ್ನು ಕೈಗೆಟುಕುವ ಎಕೋಸಿಸ್ಟಮ್ ಗೆ ತಂದು ಅದನ್ನು ಹೆಚ್ಚು ವೈಯಕ್ತಿಕಗೊಳಿಸುವ ಮೂಲಕ FLIQS ಈ ಅಂತರ ವನ್ನು ತುಂಬುತ್ತದೆ” ಎಂದು ಹೇಳಿದರು.
ಅವರು ಮುಂದುವರೆದು, “ಭಾರತದ ಬೆಳೆಯುತ್ತಿರುವ ಸ್ವತಂತ್ರ ಕಥೆಗಾರರ ಸಮುದಾಯವು ತಮ್ಮ ಕೆಲಸಗಳನ್ನು ಪ್ರದರ್ಶಿಸಲು, ವಿಶಾಲ ಪ್ರೇಕ್ಷಕರನ್ನು ತಲುಪಲು ಮತ್ತು ಹಣಗಳಿಕೆಯ ಅವಕಾಶಗಳನ್ನು ಅನ್‌ಲಾಕ್ ಮಾಡಲು ಪ್ರೀಮಿಯಂ ಪ್ಲಾಟ್‌ಫಾರ್ಮ್ ಅನ್ನು ಒದಗಿಸುವ ಮೂಲಕ FLIQS ಅವರನ್ನು ಬೆಂಬಲಿಸುತ್ತದೆ - ಇದು ಡಿಜಿಟಲ್-ಫಸ್ಟ್ ಸೃಜನಶೀಲ ಉದ್ಯಮ ಶೀಲತೆಗೆ Dish TV ಯು ಹೊಂದಿರುವ ಬದ್ಧತೆಯನ್ನು ಬಲಪಡಿಸುತ್ತದೆ. ಇದು Dish TV ಗೆ ಮಾತ್ರವಲ್ಲ, ಇಡೀ ಭಾರತೀಯ OTT ಚಿತ್ರಣಕ್ಕೆ ಮಹತ್ವದ ಹೆಜ್ಜೆಯಾಗಿದೆ” ಎಂದು ಅಭಿಪ್ರಾಯ ಪಟ್ಟರು.
Watcho ದ CTO ಮತ್ತು ವ್ಯವಹಾರ ಮುಖ್ಯಸ್ಥರಾದ ಶ್ರೀ. ವಿ.ಕೆ. ಗುಪ್ತಾ ಅವರು “ವಿಶಿಷ್ಟತೆ, ವಿಶೇಷತೆ ಮತ್ತು ತಮ್ಮ ಮನರಂಜನೆಯ ಮೇಲಿನ ನಿಯಂತ್ರಣಕ್ಕಾಗಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಗಳಿಗೆ ನಮ್ಮ FLIQS ಪರಿಹಾರವಾಗಿದೆ. ಇದು ಕೇವಲ ಒಂದು ಆಡ್-ಆನ್ ಅಲ್ಲ, ಇದು Watcho ದೊಳಗಿನ ಒಂದು ಪರಿವರ್ತನೆಯ ಪದರವಾಗಿದ್ದು, ಸ್ಮಾರ್ಟ್ ಮತ್ತು ಹೆಚ್ಚು ಪ್ರಸ್ತುತ ಅನುಭವವನ್ನು ನೀಡುತ್ತದೆ. FLIQS ನೊಂದಿಗೆ, Watcho ದೊಡ್ಡ ಕಂಟೆಂಟ್ ನ ವಿಕಾಸದ ಆರಂಭವನ್ನು ಗುರುತಿಸುವುದರೊಂದಿಗೆ OTT ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸು ತ್ತಿದೆ” ಎಂದು ಹೇಳಿದರು.
ಡಿಜಿಟಲ್ ಕಂಟೆಂಟ್ ನ ಆರ್ಥಿಕತೆಯು ಪ್ರಬುದ್ಧವಾಗುತ್ತಾ ಹೋದಂತೆ, ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಭಾರತದ ವಿಶಾಲ ಡಿಜಿಟಲ್ ರೂಪಾಂತರಕ್ಕೆ ಅರ್ಥಪೂರ್ಣವಾದ ಕೊಡುಗೆಯನ್ನು ನೀಡುವುದರೊಂದಿಗೆ, ಹೊಸತನ, ಪಡೆದುಕೊಳ್ಳುವಿಕೆ ಮತ್ತು ವಿಭಿನ್ನ ಗ್ರಾಹಕ ಮೌಲ್ಯಕ್ಕೆ Dish TV ಯು ಹೊಂದಿರುವ ಬದ್ಧತೆಯನ್ನು FLIQS ಪುನರುಚ್ಚರಿಸುತ್ತದೆ.