ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ತಲೆಯೆತ್ತಿ ನಡೆಯಲು ತಲೆತಗ್ಗಿಸುವುದನ್ನೂ ಕಲಿಯಬೇಕು

ಬಿರುಗಾಳಿ ಬರಲಿ ನಾವೇನು ಹೆದರುವುದಿಲ್ಲ ಸೋಲುವುದಿಲ್ಲ, ಮುರಿದುಬಿದ್ದರೂ ಸರಿಯೇ ನಾವು ಮಾತ್ರ ತಲೆಬಾಗುವುದಿಲ್ಲ ಎಂದುಕೊಂಡು ಅವು ನೆಟ್ಟಗೇ ನಿಂತಿದ್ದವು. ಚಿಕ್ಕ ಚಿಕ್ಕ ಸಸಿಗಳು ಯಾವುದೇ ಬಗೆಯ ಅಹಂಕಾರವನ್ನೂ ಸೊಕ್ಕನ್ನು ತೋರಿಸಲಿಲ್ಲ, ಬಿರುಗಾಳಿಯೊಂದಿಗೆ ಸೆಣಸಾ ಡಲೂ ಇಲ್ಲಾ, ಅವು ಬಿರುಗಾಳಿಯೊಂದಿಗೆ ಆಟವಾಡಿದವಷ್ಟೇ, ಬಿರುಗಾಳಿ ಅವುಗಳನ್ನು ಬಗ್ಗಿಸಿ ದಾಗ ಅವು ಬಗ್ಗಿದವು, ಪ್ರೇಮದಿಂದ ಗಾಳಿಯೊಡನೆ ವಾಲಿದವು. ಅವು ಯಾವುದೇ ವಿರೋಧವನ್ನೂ ವ್ಯಕ್ತಪಡಿಸ ಲಿಲ್ಲ. ಬಿರುಗಾಳಿ ಅವುಗಳಲ್ಲಿದ್ದ ಧೂಳು ಕೊಳಕುಗಳನ್ನೆಲ್ಲಾ, ಜಾಡಿಸಿ ತೆಗೆದು ಅವುಗಳನ್ನ ಶುದ್ಧ ಗೊಳಿಸಿ ತಷ್ಟೇ.

ತಲೆಯೆತ್ತಿ ನಡೆಯಲು ತಲೆತಗ್ಗಿಸುವುದನ್ನೂ ಕಲಿಯಬೇಕು

ಒಂದೊಳ್ಳೆ ಮಾತು

ಒಮ್ಮೆ ಜೋರಾಗಿ ಬಿರುಗಾಳಿ ಬೀಸಿತು. ಸೊಕ್ಕಿನಿಂದ ನೆಟ್ಟಗೆ ನಿಂತಿದ್ದ ದೊಡ್ಡ ದೊಡ್ಡ ಹೆಮ್ಮರಗಳು ಗಾಳಿಯ ಆರ್ಭಟಕ್ಕೆ ಸಿಕ್ಕಿ ಕೆಳಗುರುಳಿದವು. ಆದರೆ ಚಿಕ್ಕ ಚಿಕ್ಕ ಸಸಿಗಳು ಬಿರುಗಾಳಿಯೊಂದಿಗೆ ಸೆಣ ಸಾಡದೇ ಬಾಗುತ್ತಿದ್ದವು. ಸ್ವಲ್ಪ ಸಮಯದಲ್ಲಿ ಬಿರುಗಾಳಿ ನಿಂತಿತು. ದೊಡ್ಡ ದೊಡ್ಡ ಮರಗಳು ಬೇರು ಸಹಿತವಾಗಿ ಕೆಳಗೆ ಬಿದ್ದವು. ಬಾಗಿದ ಚಿಕ್ಕ ಸಸಿಗಳು ಪುನಃ ನೆಟ್ಟಗೆ ನಿಂತುಕೊಂಡವು. ಹೀಗೆ ಬಿರುಗಾಳಿ ಸಣ್ಣ ಸಸಿಗಳಿಗೆ ಜೀವನವನ್ನು ಕೊಟ್ಟು ಹೋಗುತ್ತದೆ. ಸೊಕ್ಕಿನಿಂದ ಅಹಂಕಾರದಿಂದ ನಿಂತಿದ್ದ ಮರಗಳನ್ನು ಉರುಳಿಸಿ ಹೋಗುತ್ತದೆ. ತಲೆ ಬಾಗಿದವು ಬದುಕುತ್ತವೆ, ಅಹಂಕಾರ ದಿಂದ ಎತ್ತರಕ್ಕೆ ಬೆಳೆದ ಶಕ್ತಿಶಾಲಿಗಳು ಬಾಗದೇ ಮುರಿದೇ ಬೀಳುತ್ತವೆ. ಇದೆಷ್ಟು ವಿಚಿತ್ರವಲ್ಲವೇ? ಗಾಳಿ ಬಂದಾಗ ತಾವು ಬಹಳ ಬಲಶಾಲಿಗಳೆಂದು ಹೆಮ್ಮರಗಳು ಸ್ವಲ್ಪವೂ ಭಾಗದೇ ನೇರವಾಗೇ ನಿಂತಿದ್ದವು.

ಬಿರುಗಾಳಿ ಬರಲಿ ನಾವೇನು ಹೆದರುವುದಿಲ್ಲ ಸೋಲುವುದಿಲ್ಲ, ಮುರಿದುಬಿದ್ದರೂ ಸರಿಯೇ ನಾವು ಮಾತ್ರ ತಲೆಬಾಗುವುದಿಲ್ಲ ಎಂದುಕೊಂಡು ಅವು ನೆಟ್ಟಗೇ ನಿಂತಿದ್ದವು. ಚಿಕ್ಕ ಚಿಕ್ಕ ಸಸಿಗಳು ಯಾವುದೇ ಬಗೆಯ ಅಹಂಕಾರವನ್ನೂ ಸೊಕ್ಕನ್ನು ತೋರಿಸಲಿಲ್ಲ, ಬಿರುಗಾಳಿಯೊಂದಿಗೆ ಸೆಣಸಾ ಡಲೂ ಇಲ್ಲಾ, ಅವು ಬಿರುಗಾಳಿಯೊಂದಿಗೆ ಆಟವಾಡಿದವಷ್ಟೇ, ಬಿರುಗಾಳಿ ಅವುಗಳನ್ನು ಬಗ್ಗಿಸಿ ದಾಗ ಅವು ಬಗ್ಗಿದವು, ಪ್ರೇಮದಿಂದ ಗಾಳಿಯೊಡನೆ ವಾಲಿದವು. ಅವು ಯಾವುದೇ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಬಿರುಗಾಳಿ ಅವುಗಳಲ್ಲಿದ್ದ ಧೂಳು ಕೊಳಕುಗಳನ್ನೆಲ್ಲಾ, ಜಾಡಿಸಿ ತೆಗೆದು ಅವುಗಳನ್ನ ಶುದ್ಧಗೊಳಿಸಿತಷ್ಟೇ.

ಇದನ್ನೂ ಓದಿ: Roopa Gururaj Column: ಎಲ್ಲಿಯೂ ಸಲ್ಲದ ಬಾವಲಿಗಳು

ಅವುಗಳಲ್ಲಿದ್ದ ಒಣಗಿದ ಎಲೆಗಳು ಉದುರಿದವಷ್ಟೇ ನಂತರ ಬಿರುಗಾಳಿ ಹೊರಟು ಹೋಯಿತು. ಪುನಃ ಇವೆಲ್ಲವೂ ತಲೆಯೆತ್ತಿ ನಿಂತವು. ಮೊದಲಿಗಿಂತ ಹೆಚ್ಚಿನ ಉತ್ಸಾಹದಿಂದ ಹರ್ಷದಿಂದ ಆಕಾಶ ದೆಡೆಗೆ ನೋಡಿ ನಕ್ಕವು. ನಿಜ ಜೀವನದಲ್ಲೂ ಕೂಡ ನಾವು ನಮಗಿಂತ ಬಲಿಷ್ಠರಾದ ಅನೇಕರನ್ನ ನೋಡಿ ಕೆಲವೊಮ್ಮೆ ಹೆದರಿಕೊಳ್ಳುತ್ತೇವೆ.

ಕೆಲವೊಮ್ಮೆ ಜೀವನ ಅವರಿಗೆ ಎಷ್ಟೊಂದು ಸೌಲಭ್ಯಗಳನ್ನ ನೀಡಿದೆ ಎಂದು ಅವರ ಬಗ್ಗೆ ನಮಗೆ ಅಸೂಯೆ ಕೂಡ ಉಂಟಾಗುತ್ತದೆ. ಹಣ ಬಲದಿಂದ, ದೇಹ ಬಲದಿಂದ, ಅಥವಾ ಮತ್ತಾವುದಾದರೂ ವಿಷಯದಲ್ಲಿ ಬಲಿಷ್ಠರಾದವರು ಪರಿಸ್ಥಿತಿಗೆ ತಕ್ಕ ಹಾಗೆ ತಮ್ಮ ನಿಲುವುಗಳನ್ನು ಬದಲಾಯಿಸಿ ಕೊಂಡು ಬಾಗಿ ಮಾಗಿ ನಡೆದರೆ ಸರಿ. ಅದರ ಬದಲು ತಮಗಿರುವ ಬಲದ ಮದದಲ್ಲಿ ಯಾರನ್ನೂ ಲೆಕ್ಕಿಸದೆ, ದುಷ್ಟತನದಿಂದ ಬದುಕಿದರೆ ಅದಕ್ಕೆ ಬದುಕು ತನ್ನದೇ ರೀತಿಯಲ್ಲಿ ಪಾಠ ಕಲಿಸುತ್ತದೆ.

ಒಂದು ಹಂತದಲ್ಲಿ ಅವರು ಮಾಡಿದ್ದೆಲ್ಲಾ ಸರಿ ಅವರು ಏನನ್ನು ಮಾಡಿದರು ನೀಗಿಸಿಕೊಂಡು ಬಿಡುತ್ತಾರೆ ಎಂದು ನಮಗೆ ಅವರ ಬಗ್ಗೆ ಅನ್ನಿಸುತ್ತದೆ. ಆದರೆ ಬದುಕಿನ ಲೆಕ್ಕಾಚಾರಗಳು ನಾವಂದು ಕೊಂಡಂತೆ ಇರುವುದಿಲ್ಲ. ಬದುಕಿನ ಸವಾಲುಗಳೇ ಬೇರೆ ಬದುಕು ಪ್ರತಿಯೊಬ್ಬರನ್ನು ಪರೀಕ್ಷಿಸುವ ರೀತಿಯೇ ಬೇರೆ. ಹಣ ಬಲ ,ಬುದ್ಧಿ ಬಲ, ದೇಹ ಬಲ ಯಾವುದೇ ಆಗಲಿ ಅದರೊಡನೆ ವಿನಯವು ಇದ್ದಾಗ ಮಾತ್ರ ಆ ಬಲಕ್ಕೆ ಒಂದು ಸಾರ್ಥಕತೆ.

ಅದಿಲ್ಲದೆ ಎಂತಹ ಪರಿಸ್ಥಿತಿಯಲ್ಲೂ ಅಹಂಕಾರದಿಂದ ಮೆರೆಯುತ್ತೇನೆ ಎಂದು ನಿರ್ಧರಿಸಿದರೆ ಬದುಕು ಅವರನ್ನು ತನ್ನದೇ ರೀತಿಯಲ್ಲಿ ಮಟ್ಟುಗೊಲು ಹಾಕುತ್ತದೆ. ಅದಾವುದೂ ಇಲ್ಲದೆ ಒಂದು ಸರಳ ಹಿನ್ನೆಲೆಯಿಂದ ಬಂದಂತ ಅನೇಕರು ಬದುಕಿನಲ್ಲಿ ಮೇಲೆ ಬರುವ ಉದ್ದೇಶದಿಂದ ಭಯ ಭಕ್ತಿಯಿಂದ ನಡೆದುಕೊಳ್ಳುವ ರೀತಿ ಅವರನ್ನು ಬಹಳ ದೂರ ಕರೆದುಕೊಂಡು ಹೋಗುತ್ತದೆ.

ಬದುಕಿನಲ್ಲಿ ಯಶಸ್ಸು ಗಳಿಸಲು, ನಾವಂದುಕೊಂಡದ್ದನ್ನು ಸಾಧಿಸಲು ಅನೇಕ ಬಾರಿ ಹಣ, ಬುದ್ಧಿ, ದೇಹ ಬಲ ಇವೆಲ್ಲಕ್ಕಿಂತ ಹೆಚ್ಚಾಗಿ ಒಂದು ಕೃತಜ್ಞತಾ ಭಾವ, ಹಿರಿಯರ ಬಗೆಗಿನ ಗೌರವ, ಬದುಕಿನ ಬಗ್ಗೆ ಬದುಕಿನ ಸವಾಲುಗಳ ಬಗ್ಗೆ ಶಿಸ್ತು ಇವೆಲ್ಲವನ್ನ ರೂಢಿಸಿ ಕೊಂಡಾಗ ಅದೇ ಬುನಾದಿಯಾಗು ತ್ತದೆ.

ಸಾಧಕರು ಎನಿಸುವ ಅನೇಕರನ್ನು ನೀವು ಗಮನಿಸಿ ನೋಡಿದಾಗ, ಅವರು ಯಾವುದೇ ಬಲದ ಹಿನ್ನೆಲೆಯಿಂದ ಬಂದಿರುವುದಿಲ್ಲ. ಆದರೆ ಜೀವನದಲ್ಲಿ ಶ್ರದ್ಧೆ , ಶಿಸ್ತು, ವಿನಯ ಇವೆಲ್ಲವುಗಳನ್ನು ರೂಢಿಸಿಕೊಂಡು ಬದುಕಿನಲ್ಲಿ ಪರಿಸ್ಥಿತಿಗಳಿಗೆ ತಮ್ಮನ್ನ ಬದಲಾಯಿಸಿಕೊಳ್ಳುತ್ತಾ ಬಹು ಎತ್ತರಕ್ಕೆ ಏರಿರುತ್ತಾರೆ. ಮಾಗಿ ಬಾಗುವ ಮನಸ್ಥಿತಿ ಇದ್ದಾಗ ಯಶಸ್ಸು ಇಂದಲ್ಲ ನಾಳೆ ಕಟ್ಟಿಟ್ಟ ಬುತ್ತಿ.