ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಮಗಳು ಆತ್ಮಹತ್ಯೆ ಮಾಡಿಕೊಂಡದ್ದು ಕಂಡು ಅದೇ ಫ್ಯಾನಿಗೆ ನೇಣು ಬಿಗಿದುಕೊಂಡ ತಾಯಿ

Self Harming: ಮಗಳ ಸಾವನ್ನು ಕಂಡು ಆಕೆಯ ತಾಯಿ ರಕ್ಷಿತಾ, ಪತಿಗೆ ಫೋನ್ ಮಾಡಿದ್ದು, ಮಗಳಿಲ್ಲದೆ ನನಗೂ ಬದುಕಲು ಸಾಧ್ಯವಿಲ್ಲ ಎಂದು ಕರೆ ಕಟ್ ಮಾಡಿ‌, ಮಗಳ ಮೃತದೇಹವವನ್ನು ಕೆಳಗಿಳಿಸಿ ಅದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಮಗಳು ಆತ್ಮಹತ್ಯೆ ಮಾಡಿದ್ದು ಕಂಡು ಅದೇ ಫ್ಯಾನಿಗೆ ನೇಣು ಬಿಗಿದುಕೊಂಡ ತಾಯಿ

ಮೃತ ಶ್ರೀಜಾ, ರಕ್ಷಿತಾ

ಹರೀಶ್‌ ಕೇರ ಹರೀಶ್‌ ಕೇರ Jul 15, 2025 1:23 PM

ಬೆಂಗಳೂರು: ಮಗಳು (daughter) ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ತಾಯಿಯೊಬ್ಬರು (mother) ನೊಂದು ತಾವೂ ಅದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (self harming) ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru Crime news) ವೈಟ್‌ಫೀಲ್ಡ್ (Whitefield) ಪೊಲೀಸ್ ಠಾಣಾ ವ್ಯಾಪ್ತಿಯ ನಾಗಗೊಂಡನಹಳ್ಳಿಯಲ್ಲಿ ನಡೆದಿದೆ. ನೇಣು ಹಾಕಿಕೊಳ್ಳುವ ಮುನ್ನ ಗೃಹಿಣಿ ತಮ್ಮ ಗಂಡನಿಗೆ ಕರೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವೆನೆಂದು ತಿಳಿಸಿದ್ದಾರೆ. ಗಂಡ ಮನೆಗೆ ಬರುವಷ್ಟರಲ್ಲಿ ಇಬ್ಬರ ಜೀವವೂ ಹೊರಟುಹೋಗಿದೆ.

ಮಗಳು ಶ್ರೀಜಾ ರೆಡ್ಡಿ (24) ಹಾಗೂ ತಾಯಿ ರಕ್ಷಿತಾ (48) ಹೀಗೆ ಪ್ರಾಣ ಕಳೆದುಕೊಂಡವರು. ನನ್ನ ಸಾವಿಗೆ ನಾನೇ ಕಾರಣ ಅಂತ ಡೆತ್ ನೋಟ್ ಬರೆದು ಶ್ರೀಜಾ ರೆಡ್ಡಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಳು. ಇದನ್ನು ನೋಡಿದ ಆಕೆಯ ತಾಯಿ ರಕ್ಷಿತಾ, ಪತಿಗೆ ಫೋನ್ ಮಾಡಿದ್ದು, ಮಗಳಿಲ್ಲದೆ ನನಗೂ ಬದುಕಲು ಸಾಧ್ಯವಿಲ್ಲ ಎಂದು ಕರೆ ಕಟ್ ಮಾಡಿ‌, ಮಗಳ ಮೃತದೇಹವವನ್ನು ಕೆಳಗಿಳಿಸಿ ಅದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಈ ಕುಟುಂಬ ಆಂಧ್ರಪ್ರದೇಶ (Andhra Pradesh) ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರೀಜಾ ರೆಡ್ಡಿ ಖಾಸಗಿ ಕಂಪನಿಯಲ್ಲಿ ಡೇಟಾ ಅನಾಲಿಸ್ಟ್ ಆಗಿ ಕೆಲಸ ನಿರ್ವಹಿಸ್ತಿದ್ದಳು. ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ. ವೈಟ್‌ಫೀಲ್ಡ್ ಪೊಲೀಸರು ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಾಲದ ಬಡ್ಡಿ ಹಣ ಕೊಡದಿದ್ದುದಕ್ಕೆ ಗಂಡ-ಹೆಂಡತಿ ಮೇಲೆ ಹಲ್ಲೆ

ಚಿಂತಾಮಣಿ: ಬಡ್ಡಿ ಹಣ ಕೊಡದೆ ಇರುವ ಕಾರಣಕ್ಕೆ ಗಂಡ ಹಾಗೂ ಹೆಂಡತಿ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಗಿರಿ ಕೋಟೆಯಲ್ಲಿ ನಡೆದಿದೆ. ಚಿಂತಾಮಣಿ ನಗರದ ವೆಂಕಟಗಿರಿ ಕೋಟೆಯ ವಾಸಿ ಆರಿಫ್ ಪಾಷಾ ಬಿನ್ ಚೋಟು ಸಾಬ್(32ವರ್ಷ) ಚಿಂತಾಮಣಿ ಹೊರವಲಯದ ಕರಿಯ ಪಲ್ಲಿಯ ವಾಸಿ ಬಾಬಾಜಾನ್ ರವರಿಂದ 50 ಸಾವಿರ ರೂ.ಸಾಲವಾಗಿ ಪಡೆದುಕೊಂಡು ಪ್ರತಿ ತಿಂಗಳು ಅವರಿಗೆ 1800 ರೂಪಾಯಿ ಹಣವನ್ನು ಬಡ್ಡಿಯ ರೂಪದಲ್ಲಿ ಕೊಡುತ್ತಿದ್ದರು.

ಕಳೆದ ಆರು ತಿಂಗಳಿನಿಂದ ಬಡ್ಡಿ ಹಣ ನೀಡುತ್ತಿಲ್ಲ ಎಂದು ಬಾಬಾಜಾನ್ ಗುಂಪು ಕಟ್ಟಿಕೊಂಡು ಬಂದು ಆರಿಫ್ ಪಾಷಾ ರವರ ಹೆಂಡತಿ ಫರಹನಾ ತಾಜ್(29 ವರ್ಷ)ಎಂಬುವರ ಮೇಲೆ ಹಲ್ಲೆ ನಡೆಸಿ ಅಲ್ಲಿಗೆ ಬಂದ ಪತಿ ಆರಿಫ್ ಪಾಷಾ ರವರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ. ಹಲ್ಲೆಗೆ ಒಳಗಾದ ಪತಿ ಪತ್ನಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಗರ ಠಾಣೆಯ ಪೊಲೀಸರು ಆಸ್ಪತ್ರೆಗೆ ಬಂದು ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: Physical Abuse: ವಿದ್ಯೆ ಕಲಿಸುವ ಗುರುವೇ ಮಂಚಕ್ಕೆ ಕರೆದ; ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ವಿದ್ಯಾರ್ಥಿನಿ