Murder Case: ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಶವವಾಗಿ ಪತ್ತೆ!
Murder Case: 2022ರಲ್ಲಿ ಸಿದ್ದರಾಮಯ್ಯ ಅವರು ಕೊಡಗು ಭೂಕುಸಿತ ಅವಲೋಕನಕ್ಕೆಂದು ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ವ್ಯಕ್ತಿಯೊಬ್ಬ ಮೊಟ್ಟೆ ಎಸೆದಿದ್ದ ಪ್ರಕರಣ ನಡೆದಿತ್ತು. ಇದೀಗ ಈ ಪ್ರಕರಣದ ಆರೋಪಿಯ ಶವ ಹಾಸನದಲ್ಲಿ ಪತ್ತೆಯಾಗಿದೆ.


ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿ ಶವವಾಗಿ (Murder Case) ಪತ್ತೆಯಾಗಿದ್ದಾನೆ. ಸಂಪತ್ ಕುಮಾರ್ ಮೃತ ವ್ಯಕ್ತಿ. 2022ರಲ್ಲಿ ಸಿದ್ದರಾಮಯ್ಯ ಅವರು ಕೊಡಗು ಭೂಕುಸಿತ ಅವಲೋಕನಕ್ಕೆಂದು ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಸಂಪತ್ ಕುಮಾರ್ ಮೊಟ್ಟೆ ಎಸೆದಿದ್ದ ಪ್ರಕರಣ ನಡೆದಿತ್ತು. ಇದೀಗ ಈ ಪ್ರಕರಣದ ಆರೋಪಿ ಎನ್ನಲಾದ ಸಂಪತ್ ಕುಮಾರ್‌ನ ಶವ ಹಾಸನದಲ್ಲಿ ಪತ್ತೆಯಾಗಿದೆ.
ಏಪ್ರಿಲ್ 9ರಂದು ಕೊಡಗಿನ ಕುಶಾಲನಗರದಿಂದ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಬಂದಿದ್ದ, ಏ.10ರಂದು ಕಾರು ಹಾಸನ ಜಿಲ್ಲೆಯ ಸಕಲೇಶಪುರದ ಕಲಹಳ್ಳಿಬಳಿ ಪತ್ತೆಯಾಗಿತ್ತು ಕಾರಿನಲ್ಲಿ ರಕ್ತದ ಕಲೆಗಳು ಇದ್ದವು. ಆದರೆ ಸಂಪತ್ ಸುಳಿವು ಇರಲಿಲ್ಲ ಕುಶಾಲನಗರ ಠಾಣೆಯಲ್ಲಿ ಸಂಪತ್ ಕುಮಾರ್ ನಾಪತ್ತೆ ಕೇಸ್ ದಾಖಲಾಗಿತ್ತು.
ಇತ್ತ ಕಾರು ಪತ್ತೆಯಾದ ಬಗ್ಗೆ ಸ್ಥಳೀಯರು ಯಸಳೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು ಆದರೆ ಈಗ ಸಂಮತ್ ಕುಮಾರ್ ಮೃತದೇಹ ಕಲಹಳ್ಳಿ ಬಳಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಬಳಿಕ ಶವವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಈ ಸುದ್ದಿಯನ್ನೂ ಓದಿ | Murder Case: ತಂದೆಯನ್ನು ಕೊಂದು ಶಾರ್ಟ್ ಸರ್ಕ್ಯೂಟ್ ಎಂದು ಬಿಂಬಿಸಿದ ಮಗ; ಸುಳಿವು ನೀಡಿದ ಸಿಸಿಟಿವಿ
ತಂದೆಯ ಎದುರೇ ಮಗಳ ಕಿಡ್ನ್ಯಾಪ್; ರಕ್ಷಿಸಲು ಹೋದ ತಂದೆಯನ್ನು 200 ಮೀಟರ್ ಎಳೆದೊಯ್ದ ಕಾರು!

ಹಾಸನ: ತಂದೆಯ ಎದುರೇ ಮಗಳನ್ನು ಅಪಹರಿಸಿದ ಘಟನೆ (Kidnap case) ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಗಳನ್ನು ಕಾಪಾಡಲು ಹೋಗಿ ತಂದೆ ಚಲಿಸುತ್ತಿದ್ದ ಕಾರಿನ ಡೋರ್ಗೆ ನೇತಾಡುತ್ತ ಸುಮಾರು 200 ಮೀಟರ್ ದೂರ ಸಾಗಿದ್ದಾರೆ. ಆದರೂ ನಿಲ್ಲಿಸದೇ ದುರುಳರೂ ಮುಂದೇ ಸಾಗಿದ್ದರಿಂದ ಕೆಳಗೆ ಬಿದ್ದು ಯುವತಿಯ ತಂದೆ ಗಾಯಗೊಂಡಿದ್ದಾರೆ.
ಚನ್ನರಾಯಪಟ್ಟಣ ಮೂಲದ ಯುವಕ ಪ್ರಜ್ವಲ್ ಮತ್ತು ಮಲಸಾವರ ಗ್ರಾಮದ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ (19) ಪರಸ್ಪರ ಪ್ರೀತಿಸಿ, ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ಈ ವಿಚಾರ ತಿಳಿದ ಯುವತಿ ತಂದೆ-ತಾಯಿ ಮರಳಿ ಮನೆಗೆ ಬರುವಂತೆ ಮಗಳ ಮೇಲೆ ಒತ್ತಡ ಹೇರಿದ್ದರು. ಪೋಷಕರ ಒತ್ತಡ ಹಿನ್ನೆಲೆಯಲ್ಲಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಮರಳಿ ಮನೆಗೆ ಬಂದಿದ್ದಳು.
ಮಗಳು ಮನೆಗೆ ಮರಳುತ್ತಿದ್ದಂತೆ ಆಕೆಯ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತಿ ಪ್ರಜ್ವಲ್ಗೆ ಯುವತಿ ಹೇಳಿದ್ದು, ತನ್ನನ್ನು ಕರೆದುಕೊಂಡು ಹೋಗುವಂತೆಯೂ ತಿಳಿಸಿದ್ದಳು ಎನ್ನಲಾಗಿದೆ.
ಪತ್ನಿಯ ಇಚ್ಚೆಯಂತೆ ಅರೇಹಳ್ಳಿ ಗ್ರಾಮಕ್ಕೆ ಪ್ರಜ್ವಲ್ ಬಂದಿದ್ದಾನೆ. ಪತ್ನಿಯನ್ನು ತನ್ನ ಜೊತೆ ಕಳುಹಿಸಿಕೊಡುವಂತೆ ಪ್ರಜ್ವಲ್ ಕೇಳಿದಾಗ, ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಂದೆ ಜತೆ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಅರೇಹಳ್ಳಿ ಪಟ್ಟಣದ ಹೈಸ್ಕೂಲ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರಜ್ವಲ್, ಪತ್ನಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ರನ್ನು ಕರೆದುಕೊಂಡು ಹೋಗಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ಆಸ್ತಿಗಾಗಿ ನಾಲ್ಕು ಜನರ ಕೊಲೆ ಮಾಡಿದ ಮಗನಿಗೆ ಗಲ್ಲು, ಅಪ್ಪನಿಗೆ ಜೀವಾವಧಿ ಶಿಕ್ಷೆ
ಈ ವೇಳೆ ತಡೆಯಲು ಹೋಗಿ ತಂದೆ ಕಾರಿನ ಡೋರ್ಗೆ ಜೋತು ಬಿದ್ದಿದ್ದಾರೆ. ಚಾಲಕ ಮಾತ್ರ ಕಾರು ನಿಲ್ಲಿಸಿದೆ ಸುಮಾರು 200 ಮೀಟರ್ ಎಳೆದೊಯ್ದಿದ್ದಾನೆ. ಇದರಿಂದ ತಂದೆ ಬಿದ್ದು ಗಾಯಗೊಂಡಿದ್ದಾರೆ. ಬಳಿಕ ದಂಪತಿ ಚನ್ನರಾಯಪಟ್ಟಣ ಶಹರ ಠಾಣೆ ಪೊಲೀಸರ ಎದುರು ಹಾಜಾರಾಗಿದ್ದಾರೆ ಎಂದು ತಿಳಿದುಬಂದಿದೆ.