ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vaishnavi Gowda: ಮದುವೆ ಬಳಿಕ ವೈಷ್ಣವಿ ಗೌಡ ಭಾರತದಲ್ಲಿ ಇರಲ್ವಾ?, ಸ್ಪಷ್ಟನೆ ಕೊಟ್ಟ ನಟಿ

ವೈಷ್ಟಣಿ ಅವರು ಮದುವೆ ಆದ ಬಳಿಕ ಭಾರತದಲ್ಲಿ ಇರಲ್ಲ.. ವಿದೇಶದಲ್ಲಿ ಸೆಟಲ್ ಆಗಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದೀಗ ವೈಷ್ಣವಿ ಗೌಡ ಈ ಎಲ್ಲ ಮಾತುಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಕುರಿತು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ವೈಷ್ಣವಿ ಗೌಡ, ಕರ್ನಾಟಕದ ಜನ ನನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದಾರೆ, ಅದೆಲ್ಲ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಮದುವೆ ಬಳಿಕ ವೈಷ್ಣವಿ ಗೌಡ ಭಾರತದಲ್ಲಿ ಇರಲ್ವಾ?

vaishnavi gowda

Profile Vinay Bhat May 14, 2025 4:00 PM

ಸೀತರಾಮ ಧಾರಾವಾಹಿಯ ಸೀತೆಗೆ ಕಂಕಣಭಾಗ್ಯ ಕೂಡಿ ಬಂದಿದೆ. ಮನ ಮೆಚ್ಚಿದ ಹುಡುಗ ವೈಷ್ಣವಿಯ (Vaishnavi Gowda) ಕೈ ಹಿಡಿಯಲಿದ್ದಾನೆ. ಇತ್ತೀಚೆಗಷ್ಟೆ ಅಗ್ನಿಸಾಕ್ಷಿ ಸನ್ನಿಧಿಯ ನಿಶ್ಚಿತಾರ್ಥ ಅದ್ಧೂರಿಯಾಗಿ ನೇರವೇರಿತ್ತು. ಭಾರತೀಯ ವಾಯುಸೇನೆಯಲ್ಲಿ ಇರುವ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಎಂಗೇಜ್​​ಮೆಂಟ್ ಮಾಡಿಕೊಂಡಿದ್ದರು. ಕುಟುಂಬಸ್ಥರು, ಆಪ್ತರು ಮತ್ತು ತಾರೆಯರ ಸಮ್ಮುಖದಲ್ಲಿ ವೈಷ್ಣವಿ ಗೌಡ ಮತ್ತು ಅನುಕೂಲ್‌ ಮಿಶ್ರಾ ಅವರ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಪೋಷಕರು ಈ ಮದುವೆ ನಿಶ್ಚಯಿಸಿದರು. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ, ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದು ಮೊನ್ನೆಯಷ್ಟೆ ವೈಷ್ಣವಿ ಹೇಳಿದ್ದರು. ಇದರ ಜೊತೆಗೆ ವೈಷ್ಟಣಿ ಅವರು ಮದುವೆ ಆದ ಬಳಿಕ ಭಾರತದಲ್ಲಿ ಇರಲ್ಲ.. ವಿದೇಶದಲ್ಲಿ ಸೆಟಲ್ ಆಗಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಇದೀಗ ವೈಷ್ಣವಿ ಗೌಡ ಈ ಎಲ್ಲ ಮಾತುಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಕುರಿತು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ವೈಷ್ಣವಿ ಗೌಡ, ಕರ್ನಾಟಕದ ಜನ ನನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದಾರೆ, ಅದೆಲ್ಲ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ನನ್ನ ದೇಶ, ನನ್ನ ಜಾಗದಲ್ಲಿ ನನಗೆ ಇಷ್ಟೆಲ್ಲ ಸಿಗುತ್ತಿರುವಾಗ ನಾನ್ಯಾಕೇ ದೇಶ ಬಿಡಬೇಕು ಎಂದು ಪ್ರಶ್ನೆ ಕೇಳಿದ್ದಾರೆ.ಮುಂದುವರೆದು ನನ್ನ ಕೊನೆಯ ಉಸಿರು ಇರುವವರೆಗೂ ನಾನು ಕನ್ನಡ ಇಂಡಸ್ಟ್ರೀಯಲ್ಲಿಯೇ ಕೆಲಸ ಮಾಡುತ್ತೇನೆ, ಕಲಾ ಸೇವೆಯನ್ನು ಮಾಡುತ್ತೇನೆ, ನಿಮ್ಮೆಲ್ಲರನ್ನು ಮನರಂಜಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

Bhagya Lakshmi Serial: ಕಿಶನ್​ನ ಹುಡುಕಿಕೊಂಡು ಜಿಮ್​ಗೆ ಬಂದ ಕುಸುಮಾ: ಪ್ಲ್ಯಾನ್ ವರ್ಕ್ ಆಗುತ್ತಾ?

ನಾವಿಬ್ಬರು ಪರಿಚಯವಾಗಿ ಒಂದು ವರ್ಷ ಆಗುತ್ತಾ ಬಂತು. ಆದರೆ ನಾನು ಯಾರಿಗೂ ಹೇಳಿರಲಿಲ್ಲ, ಯಾವ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲೂ ಪೋಸ್ಟ್ ಹಂಚಿಕೊಂಡಿರಲಿಲ್ಲ. ಇದು ಅರೇಂಜ್ಡ್‌ ಮ್ಯಾರೇಜ್‌ ಆಗಿರುವುದರಿಂದ ನಮಗೆ ಒಬ್ಬರೊನೊಬ್ಬರನ್ನು ಅರ್ಥ ಮಾಡಿಕೊಳ್ಳಲು ಟೈಮ್‌ ಬೇಕಾಗಿರುತ್ತದೆ ಅಲ್ವಾ? ಹಾಗಾಗಿ ನಾವು ಸಮಯ ತೆಗೆದುಕೊಂಡಿದ್ದೆವು ಎಂದು ಹೇಳಿದ್ದಾರೆ.