Rakesh Poojary: ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ತೆರಳದ ಚಿತ್ರತಂಡ ವಿರುದ್ಧ ಹಿತೇಶ್ ಆಕ್ರೋಶ
ರಾಕೇಶ್ ಪೂಜಾರಿ ಅವರ ಅಂತಿಮ ಕಾರ್ಯ ಅವರ ಹುಟ್ಟೂರು ಉಡುಪಿಯಲ್ಲಿ ನಡೆದಿದೆ. ಅವರ ಅಂತಿಮ ದರ್ಶನ ಪಡೆಯಲು ಹಲವು ಸೆಲೆಬ್ರಿಟಿಗಳು, ಸಹಕಲಾವಿದರು ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಂದ ಆಗಮಿಸಿದ್ದರು. ರಾಕೇಶ್ ಪೂಜಾರಿ ನಿಧನದ ಬಳಿಕ ಚಿತ್ರತಂಡವೊಂದು ತೋರಿದ ವರ್ತನೆ ಬಗ್ಗೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಪ್ಯಾಕು ಪ್ಯಾಕು ಹಿತೇಶ್ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Rakesh Poojary Death,Pyaku Pyaku Hithesh Annoyed With Movie team

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿ ಮೂಲಕ ಜನರನ್ನು ಮನರಂಜಿಸಿದ್ದ ಯುವನಟ ರಾಕೇಶ್ ಪೂಜಾರಿ (Rakesh Poojary) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ಅಂತಿಮ ಕಾರ್ಯ ಅವರ ಹುಟ್ಟೂರು ಉಡುಪಿಯಲ್ಲಿ ನಡೆದಿದ್ದು, ಅಂತಿಮ ದರ್ಶನ ಪಡೆಯಲು ಹಲವು ಕಲಾವಿದರು, ಸೆಲೆಬ್ರಿಟಿಗಳು, ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಂದ ಆಗಮಿಸಿದ್ದರು. ಈ ಮಧ್ಯೆ ರಾಕೇಶ್ ಪೂಜಾರಿ ನಿಧನದ ಬಳಿಕ ಚಿತ್ರತಂಡವೊಂದು ತೋರಿದ ವರ್ತನೆ ಬಗ್ಗೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಪ್ಯಾಕು ಪ್ಯಾಕು ಹಿತೇಶ್ (Hithesh) ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಝೀ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಲ್ಲಿ ಮೂರನೇ ಸ್ಥಾನ ಗಳಿಸಿದ್ದ 'ಪ್ಯಾಕು ಪ್ಯಾಕು' ಖ್ಯಾತಿಯ ಹಿತೇಶ್ ರಾಕೇಶ್ ಪೂಜಾರಿಯ ಆಪ್ತ ಸ್ನೇಹಿತರಾಗಿದ್ದರು. ಇದೀಗ ಹಿತೇಶ್ ಅವರು ಚಿತ್ರತಂಡವೊಂದು ತೋರಿದ ವರ್ತ ನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
ಪ್ಯಾಕು ಪ್ಯಾಕು ಹಿತೇಶ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ʼʼನಮ್ಮ ಸಿನಿಮಾ, ನಮ್ಮ ಸಿನಿಮಾ ಅಂದವರು... ಅವರ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದ ಇನ್ನಿಲ್ಲ ಎಂದಾಗ ಅವರು ಮಾಡಿದ್ದು... ಸಂತಾಪವಲ್ಲಾ... ಬದಲಿಗೆ ಶೂಟಿಂಗ್ ಎಂತಾ ಅವಸ್ಥೆ. ಬರೀ ಕರ್ಮಷಿಯಲ್ ಮೈಂಡ್, ಕಲಾವಿದನಿಗೆ ಬೆಲೆಯೇ ಇಲ್ಲʼʼ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ರಾಕೇಶ್ ಪೂಜಾರಿ ಅಭಿನಯಿಸುತ್ತಿದ್ದ ಚಿತ್ರ ತಂಡವೊಂದರ ವಿರುದ್ಧ ಪ್ಯಾಕು ಪ್ಯಾಕು ಹಿತೇಶ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆದರೆ ಅದು ಯಾವ ಚಿತ್ರತಂಡ ಎಂದು ಹಿತೇಶ್ ಬಹಿರಂಗಪಡಿಸಿಲ್ಲ.
ಇದನ್ನು ಓದಿ: Rakesh Poojary: ಕಾಮಿಡಿ ಕಿಲಾಡಿಗಳು ಗೆದ್ದಾಗ ಸಿಕ್ಕಿದ 8 ಲಕ್ಷವನ್ನು ರಾಕೇಶ್ ಏನು ಮಾಡಿದ್ರು ಗೊತ್ತೇ?
ರಾಕೇಶ್ ಪೂಜಾರಿ ಇತ್ತೀಚೆಗೆ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಿದ್ದರು. ರಾಕೇಶ್ ಪೂಜಾರಿಯ ಅಂತಿಮ ಕಾರ್ಯ ಅವರ ಹುಟ್ಟೂರಿನಲ್ಲಿ ನಡೆದಿದ್ದು ಸಹಕಲಾವಿದರು ಸೇರಿದಂತೆ ದೂರದ ಬೇರೆ ಬೇರೆ ನಗರಗಳಿಂದ ಆಗಮಿಸಿದ್ದರು. ಆದರೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದರೂ ʼಕಾಂತರʼ ಚಿತ್ರತಂಡವಾಗಲೀ ಅಥವಾ ರಿಷಬ್ ಶೆಟ್ಟಿ ರಾಕೇಶ್ ಅವರ ಅಂತಿಮ ದರ್ಶನಕ್ಕೆ ಬರದೇ ಇರುವುದು ಹಲವರಲ್ಲಿ ಅಸಮಾಧಾನ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟೀಕೆ ಕೂಡ ವ್ಯಕ್ತವಾಗಿದೆ.