ರೋಹಿತ್ ಶರ್ಮಾಗೆ ಸನ್ಮಾನ ಮಾಡಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್!
ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್ ನಿವೃತ್ತಿಯ ಹೊರತಾಗಿಯೂ, ಅವರು ಟೀಮ್ ಇಂಡಿಯಾ ಪರ ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಿದ್ದಾರೆ. ಟೆಸ್ಟ್ ನಿವೃತ್ತಿಯ ನಂತರ ರೋಹಿತ್ ಶರ್ಮಾ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗೌರವಿಸಿದ್ದಾರೆ.

ರೋಹಿತ್ ಶರ್ಮಾರನ್ನು ಗೌರವಿಸಿದ ಮಹಾರಾಷ್ಟ್ರ ಸಿಎಂ.

ನವದೆಹಲಿ: ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit sharma) ಇಂಗ್ಲೆಂಡ್ ಪ್ರವಾಸಕ್ಕೂ (IND vs ENG) ಮುನ್ನ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದಾಗ್ಯೂ, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ರೋಹಿತ್ ಶರ್ಮಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅವರನ್ನು ಭೇಟಿಯಾಗಿದ್ದಾರೆ. ರೋಹಿತ್ ಶರ್ಮಾ ಅವರ ಈ ಭೇಟಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷಾದಲ್ಲಿ ನಡೆಯಿತು. ರೋಹಿತ್ ಅವರ ಟೆಸ್ಟ್ ನಿವೃತ್ತಿಗೆ ಸಿಎಂ ಫಡ್ನವಿಸ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಈ ವೇಳೆ ಸಿಎಂ ದೇವೇಂದ್ರ ಫಡ್ನವಿಸ್ ಅವರು ಗೌರವ ಸೂಚಕವಾಗಿ ರೋಹಿತ್ ಶರ್ಮಾ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಮುಖ್ಯಮಂತ್ರಿಯಿಂದ ದೊರೆತ ಈ ಗೌರವದಿಂದ ರೋಹಿತ್ ಶರ್ಮಾ ಕೂಡ ತುಂಬಾ ಸಂತೋಷಗೊಂಡಂತೆ ಕಾಣುತ್ತಿದ್ದರು. ಸಿಎಂ ಫಡ್ನವಿಸ್, ರೋಹಿತ್ ಶರ್ಮಾ ಅವರೊಂದಿಗಿನ ಭೇಟಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
Rohit sharma Test Retirement: ರೋಹಿತ್ ಶರ್ಮಾರ ಟೆಸ್ಟ್ ಕ್ರಿಕೆಟ್ ದಾಖಲೆಗಳು!
"ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ನನ್ನ ಅಧಿಕೃತ ನಿವಾಸದ ವರ್ಷಾದಲ್ಲಿ ಸ್ವಾಗತಿಸಲು, ಅವರನ್ನು ಭೇಟಿಯಾಗಿ ಸಂವಹನ ನಡೆಸಲು ಸಂತೋಷವಾಯಿತು. ಟೆಸ್ಟ್ ಕ್ರಿಕೆಟ್‌ನಿಂದ ಅವರ ನಿವೃತ್ತಿ ಮತ್ತು ಅವರ ಪ್ರಯಾಣದ ಮುಂದಿನ ಅಧ್ಯಾಯದಲ್ಲಿ ಯಶಸ್ಸು ಮುಂದುವರಿಯಲಿ ಎಂದು ನಾನು ಅವರಿಗೆ ಹಾರೈಸಿದ್ದೇನೆ," ಎಂದು ತಮ್ಮ ಎಕ್ಸ್ ಖಾತೆಯಲ್ಲಿ ರೋಹಿತ್ ಶರ್ಮಾ ಅವರ ಫೋಟೋವನ್ನು ಹಂಚಿಕೊಂಡು ಶ್ಲಾಘಿಸಿದ್ದಾರೆ.
It was great to welcome, meet and interact with Indian cricketer Rohit Sharma at my official residence Varsha. I extended my best wishes to him on his retirement from Test cricket and for continued success in the next chapter of his journey!@ImRo45#Maharashtra #Mumbai… pic.twitter.com/G0pdzj6gQy
— Devendra Fadnavis (@Dev_Fadnavis) May 13, 2025
ರೋಹಿತ್ ಬಗ್ಗೆ ಊಹಾಪೋಹಗಳು ಶುರು
ಸಿಎಂ ಫಡ್ನವಿಸ್ ಅವರೊಂದಿಗಿನ ಭೇಟಿಯೊಂದಿಗೆ ರೋಹಿತ್ ಶರ್ಮಾ ಬಗ್ಗೆ ಊಹಾಪೋಹಗಳು ಶುರುವಾಗಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ರೋಹಿತ್ ಶರ್ಮಾ ಅವರ ಈ ಭೇಟಿಯನ್ನು ಅವರ ರಾಜಕೀಯ ಜೀವನದ ಆರಂಭವೆಂದು ಭಾವಿಸಿದ್ದಾರೆ. ಆದರೆ, ಇದು ಸದ್ಯಕ್ಕೆ ಇದು ನಡೆಯುವುದಿಲ್ಲ. ಏಕೆಂದರೆ ರೋಹಿತ್ ಶರ್ಮಾ ಇನ್ನೂ ಏಕದಿನ ಕ್ರಿಕೆಟ್ ಆಡಲಿದ್ದಾರೆ.
ರೋಹಿತ್ ಶರ್ಮಾ ಟಿ20 ಮತ್ತು ಟೆಸ್ಟ್ ಮಾದರಿಗಳಿಂದ ನಿವೃತ್ತರಾಗಿದ್ದಾರೆ, ಆದರೆ ಏಕದಿನ ಮಾದರಿಯಲ್ಲಿ ಆಡುವುದನ್ನು ಮುಂದುವರಿಸುವ ನಿರ್ಧಾರವನ್ನು ಉಳಿಸಿಕೊಂಡಿದ್ದಾರೆ. ಅವರು 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಆಡುವ ನಿರೀಕ್ಷೆಯಿದೆ.
ರೋಹಿತ್ ಶರ್ಮಾರ ಟೆಸ್ಟ್ ಅಂಕಿಅಂಶಗಳು
ರೋಹಿತ್ ಶರ್ಮಾ ಅವರು 67 ಟೆಸ್ಟ್ ಪಂದ್ಯಗಳಿಂದ 40.57ರ ಸರಾಸರಿಯಲ್ಲಿ 4301 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಇದರಲ್ಲಿ 12 ಶತಕಗಳು ಹಾಗೂ 18 ಅರ್ಧಶತಕಗಳನ್ನು ಬಾರಿಸಿದ್ದಾರೆ. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಗಳಿಸಿದ 212 ರನ್‌ಗಳು ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.