ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕೈ ತುತ್ತಿಗೆ ಲೈಸನ್ಸ್ ಸಿಕ್ಕಿದ ಖುಷಿಯಲ್ಲಿ ಭಾಗ್ಯ ಸಖತ್ ಡ್ಯಾನ್ಸ್: ವೈರಲ್ ಆಗ್ತಿದೆ ವಿಡಿಯೋ

ಸದ್ಯ ಭಾಗ್ಯಾಗೆ ಫುಡ್ ಲೈಸನ್ಸ್ ಸಿಕ್ಕಿದೆ. ಈ ಎಲ್ಲ ಖುಷಿಯಲ್ಲಿ ಭಾಗ್ಯ ಸಖತ್ ಆಗಿ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾಗ್ಯ/ಸುಷ್ಮಾ, ರಿಯಲ್ಗಾಗಿ ಸೀರಿಯಲ್ ಮಗಳು ತನ್ವಿ ಜೊತೆ ಸಕತ್ ರೀಲ್ಸ್ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಕೈ ತುತ್ತಿಗೆ ಲೈಸನ್ಸ್ ಸಿಕ್ಕಿದ ಖುಷಿಯಲ್ಲಿ ಭಾಗ್ಯ ಸಖತ್ ಡ್ಯಾನ್ಸ್

Bhagya Lakshmi Serial Sushma K Rao

Profile Vinay Bhat Apr 26, 2025 7:30 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ನಾಯಕಿ ಸುಷ್ಮಾ ಕೆ ರಾವ್ (Sushma K Rao) ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಧಾರಾವಾಹಿಯಲ್ಲಿ ಇವರು ಮಾಡುತ್ತಿರುವ ಪಾತ್ರ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಗಂಡ ಮೋಸ ಮಾಡಿ ಬೇರೊಬ್ಬಳ ಜೊತೆ ಇದ್ದರೂ ಎಷ್ಟೇ ಕಷ್ಟ ಕೊಟ್ರು ಜಗ್ಗದೇ ಮಕ್ಕಳು, ಅತ್ತೆ ಮಾವನ ಜೊತೆ ನಿಂತು ಬದುಕನ್ನು ದಿಟ್ಟವಾಗಿ ಎದುರಿಸುತ್ತಿದ್ದಾಳೆ ಭಾಗ್ಯ. ಇದಕ್ಕಾಗಿಯೆ ಟಾಪ್​ ಲಿಸ್ಟ್​ನಲ್ಲಿ ಭಾಗ್ಯ ಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ.

ಸದ್ಯ ಭಾಗ್ಯಾಗೆ ಫುಡ್ ಲೈಸನ್ಸ್ ಸಿಕ್ಕಿದೆ. ಕನ್ನಿಕಾ-ತಾಂಡವ್-ಶ್ರೇಷ್ಠಾ ಮಾಡಿದ ಮಾಸ್ಟರ್ ಪ್ಲ್ಯಾನ್ ಯಾವುದೂ ವರ್ಕ್ ಆಗಲಿಲ್ಲ. ಲೈಸನ್ಸ್ ಸಿಕ್ಕಿದ ಕೂಡಲೇ ಒಂದು ಹೆಜ್ಜೆ ಮುಂದೆ ಹೋಗಿರುವ ಭಾಗ್ಯ ತಾಂಡವ್​ನ ಆಫೀಸ್​ನಲ್ಲೇ ಕ್ಯಾಂಟೀನ್ ಕೂಡ ತೆರೆದಿದ್ದಾಳೆ. ಸ್ವತಃ ತಾಂಡವ್​ನ ಬಾಸ್ ಬಂದೇ ಭಾಗ್ಯಾಳನ್ನು ಗ್ರ್ಯಾಂಡ್ ಆಗಿ ವೆಲ್​ಕಮ್ ಮಾಡಿ, ಇವತ್ತಿಂದ ನಮ್ಮ ಕ್ಯಾಂಟೀನ್​ನ ಎಲ್ಲ ಜವಾಬ್ದಾರಿ ಭಾಗ್ಯ ಮತ್ತು ತಂಡ ವಹಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇದನ್ನ ಕೇಳಿ ತಾಂಡವ್-ಶ್ರೇಷ್ಠಾಗೆ ಶಾಕ್ ಆಗಿದೆ.

ಈ ಎಲ್ಲ ಖುಷಿಯಲ್ಲಿ ಭಾಗ್ಯ ಸಖತ್ ಆಗಿ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾಗ್ಯ/ಸುಷ್ಮಾ, ರಿಯಲ್​ಗಾಗಿ ಸೀರಿಯಲ್​ ಮಗಳು ತನ್ವಿ ಜೊತೆ ಸಕತ್​ ರೀಲ್ಸ್ ​ಮಾಡಿದ್ದಾರೆ. ಇವರು ಸೀರಿಯಲ್​ ಮಕ್ಕಳು, ತಾಂಡವ್​ ಜೊತೆ ರೀಲ್ಸ್​ ಮಾಡುತ್ತಲೇ ಇರುತ್ತಾರೆ. ಇದೀಗ ಮಗಳ ಜೊತೆ ರೀಲ್ಸ್​ ಮಾಡಿದ್ದಾರೆ. ಇದನ್ನು ನೋಡಿ ಆಹಾ ಕ್ಯಾಂಟೀನ್​ ಒಡತಿಯ ಖುಷಿ ನೋಡಿ ಎಂದು ನಟಿಯ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

ಸುಷ್ಮಾ ಅವರು ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಎಸ್‌. ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಇವರು ಸೀರಿಯಲ್​ನಿಂದ ಕೊಂಚ ಬ್ರೇಕ್ ಪಡೆದುಕೊಂಡು ಮೌಂಟ್ ಎವರೆಸ್ಟ್ ಕ್ಯಾಂಪ್​ನಲ್ಲಿದ್ದಾರೆ.

Shobha Shetty: ಇನ್ನೂ ಮದುವೆನೇ ಆಗಿಲ್ಲ: ಮೊದಲ ವರ್ಷದ ಎಂಗೇಜ್ಮೆಂಟ್ ಆ್ಯನಿವರ್ಸರಿ ಆಚರಿಸಿದ ಶೋಭಾ ಶೆಟ್ಟಿ