Bhagya Lakshmi Serial: ಭಾಗ್ಯ ಮನೆಗೆ ಬಂದು ಧಮ್ಕಿ: ಇನ್ನೂ ಬುದ್ದಿ ಕಲಿಯದ ತಾಂಡವ್
ಭಾಗ್ಯ ಮನೆಯಲ್ಲಿ ಭಾಗ್ಯ ತಂಗಿ ಪೂಜಾಗೆ ಮದುವೆ ಮಾಡಲು ನೋಡುತ್ತಿದ್ದು ಗಂಡಿನ ಕಡೆಯವರು ಬಂದಿದ್ದಾರೆ. ಆದರೆ, ಇಲ್ಲಿ ತಾಂಡವ್ ಬಂದು ಹುಳಿ ಹಿಂಡಿದ್ದಾನೆ. ಅಲ್ಲದೆ ಭಾಗ್ಯ ಮನೆಗೆ ಬಂದು ಭಾಗ್ಯಾಗೆ ಅವಾಝ್ ಹಾಕಿ ಹೋಗಿದ್ದಾನೆ. ಇದರಿಂದ ಎಲ್ಲರಿಗೂ ಅವಮಾನ ಆಗಿದೆ.

Bhagya Lakshmi serial

‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನ್ನ ಮಾಜಿ ಗಂಡನ ಸಹಾಯಕ್ಕೆ ನಿಂತು ಆತನಿಗೆ ಗೊತ್ತಿಲ್ಲದೆ ಅದೇ ಹಳೆಯ ಕಂಪನಿಯಲ್ಲಿ ಕೆಲಸ ತೆಗೆಸಿಕೊಟ್ಟಿದ್ದಾಳೆ. ಆದರೆ, ತಾಂಡವ್ ಇದರಿಂದ ಖುಷಿ ಪಡದೆ ಭಾಗ್ಯಾಳ ಮೇಲೆ ಮತ್ತಷ್ಟು ಕೋಪಗೊಂಡಿದ್ದಾರೆ. ಭಾಗ್ಯ ಮೇಲಿನ ಸೇಡು ಇನ್ನಷ್ಟು ಹೆಚ್ಚಾಗಿದೆ. ಇದರ ಮಧ್ಯೆ ಭಾಗ್ಯ ಮನೆಯಲ್ಲಿ ಭಾಗ್ಯ ತಂಗಿ ಪೂಜಾಗೆ ಮದುವೆ ಮಾಡಲು ನೋಡುತ್ತಿದ್ದು ಗಂಡಿನ ಕಡೆಯವರು ಬಂದಿದ್ದಾರೆ. ಆದರೆ, ಇಲ್ಲಿ ತಾಂಡವ್ ಬಂದು ಹುಳಿ ಹಿಂಡಿದ್ದಾನೆ. ಅಲ್ಲದೆ ಭಾಗ್ಯ ಮನೆಗೆ ಬಂದು ಭಾಗ್ಯಾಗೆ ಅವಾಝ್ ಹಾಕಿ ಹೋಗಿದ್ದಾನೆ. ಇದರಿಂದ ಎಲ್ಲರಿಗೂ ಅವಮಾನ ಆಗಿದೆ.
ಈ ಹಿಂದೆ ತಾಂಡವ್ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕ್ಯಾಂಟೀನ್ ನಡೆಸಲು ಭಾಗ್ಯಗೆ ಅನುಮತಿ ಸಿಕ್ಕಿತ್ತು. ಅದೇ ದಿನ ಭಾಗ್ಯಾಗೆ ಅವಮಾನ ಮಾಡಿದ್ದಕ್ಕೆ ತಾಂಡವ್, ಶ್ರೇಷ್ಠಾರನ್ನು ಬಾಸ್ ಕಂಪನಿಯಿಂದ ತೆಗೆದು ಹಾಕಿದ್ದರು. ಬಳಿಕ ತಾಂಡವ್ಗೆ ಒಂದೇ ಒಂದು ಕೆಲಸ ಸಿಕ್ಕಿಲ್ಲ. ಬಂದ ಒಂದೆರಡು ಆಫರ್ ಅನ್ನು ಇದು ನನ್ನ ಲೆವೆಲ್ಗೆ ಇಲ್ಲ ಎಂದು ರಿಜೆಕ್ಟ್ ಮಾಡಿದ್ದಾನೆ. ಮಗನಿಗೆ ಕೆಲಸವಿಲ್ಲ ಅಂತ ತಾಯಿ ಕುಸುಮಾ ಒಳಗೊಳಗೇ ಸಂಕಟ ಪಡುತ್ತಿರುವುದನ್ನು ಕಂಡು ಭಾಗ್ಯ ಬಾಸ್ ಬಳಿ ಹೋಗಿ ತಾಂಡವ್ಗೆ ಕೆಲಸ ಪುನಹ ಕೊಡಿಸಿ ಎಂದು ರಿಕ್ವೆಸ್ಟ್ ಮಾಡಿದ್ದಾಳೆ. ಭಾಗ್ಯಾಳ ಮಾತಿಗೆ ಬೆಲೆ ಕೊಟ್ಟು ಅವರು ತಾಂಡವ್-ಶ್ರೇಷ್ಠಾರನ್ನು ಪುನಃ ಕೆಲಸಕ್ಕೆ ಕರೆದಿದ್ದಾರೆ.
ಆದರೆ, ಕೆಲಸ ವಾಪಸ್ ಸಿಕ್ತು ಅಂತ ಖುಷಿ ಪಡುವ ಬದಲು ತಾಂಡವ್-ಶ್ರೇಷ್ಠಾ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾರೆ. ಈ ಗೆಲುವು ನಾವು ಅಂದುಕೊಂಡ ಹಾಗೆ ಸಿಕ್ಕಿರುವುದಲ್ಲ.. ಈಗ ನಮ್ಗೆ ಕೆಲಸ ಸಿಕ್ಕಿರೋದು ಆ ಎಮ್ಮೆ ಭಾಗ್ಯಾಳಿಂದ. ಅವಳಿಗೆ ಬುದ್ದಿ ಕಲಿಸಬೇಕು ಎಂದು ಪ್ಲ್ಯಾನ್ ಮಾಡುತ್ತಾರಎ. ಅತ್ತ ಭಾಗ್ಯ ಮನೆಯಲ್ಲಿ ಪೂಜಾಳನ್ನು ನೋಡಲು ಗಂಡಿನ ಕಡೆಯವರು ಬಂದಿರುತ್ತಾರೆ. ಆರಂಭದಲ್ಲಿ ಎಲ್ಲರೂ ಈ ಸಂಬಂಧಕ್ಕೆ ಒಪ್ಪಿಕೊಳ್ಳುತ್ತಾರೆ. ಅಡುಗೆ ಮಾಡಲು- ಸೀರೆ ಉಡಲು ಬರದಿದ್ದರೂ ತೊಂದರೆಯಿಲ್ಲ.. ಮುಂದೆ ಕಲಿಯುತ್ತಾಳೆ ಎಂದು ಹುಡುಗನ ಕಡೆಯವರು ಹೇಳಿ ಒಪ್ಪುತ್ತಾರೆ.
ಆದರೆ, ಇದೇವೇಳೆ ಅವರಿಗೆ ಭಾಗ್ಯಾಳ ವೈಯಕ್ತಿಕ ಜೀವನದ ವಿಷಯ ಗೊತ್ತಾಗಿದೆ. ತಾಂಡವ್ ಬಂದು ಎಲ್ಲ ಹೇಳಿದ್ದಾನೆ. ಗಂಡನಿಗೆ ತಾಳಿ ತೆಗೆದುಕೊಟ್ಟು ಬಂದವಳು ಎಂಬುದು ಹುಡುಗನ ಕಡೆಯವರಿಗೆ ತಿಳಿದಿದೆ. ಆಗ ಅವರು ಈ ಸಂಬಂಧ ನಮಗೆ ಬೇಡ ಎಂದು ಹೇಳುತ್ತಾರೆ. ಅಕ್ಕ ಹೀಗೆ ಇದ್ದಾಳೆ.. ಇನ್ನು ತಂಗಿ ಹೇಗೆ ಆಗುತ್ತಾಳೊ ಎಂದು ಅವರು ಹೇಳುತ್ತಾರೆ. ಇದರಿಂದ ಕೋಪಗೊಂಡ ಪೂಜಾ, ನನ್ನ ಅಕ್ಕನಿಗೆ ಮರಿಯಾದೆ ಇರದೆ ಇರುವ ಜಾಗದಲ್ಲಿ ನನ್ನ ಚಪ್ಪಲಿ ಕೂಡ ಬಿಡಲ್ಲ ಎಂದು ಅವರನ್ನು ಗೆಟ್ ಲಾಸ್ಟ್ ಎಂದು ಹೇಳುತ್ತಾಳೆ.
ಅವರು ಹೋದ ಬಳಿಕ ತಾಂಡವ್ ಭಾಗ್ಯಾಗೆ ಅವಾಜ್ ಹಾಕಿದ್ದಾನೆ. ತುಂಬಾ ಮೆರೆದಾಡ್ತಿದ್ದೆ.. ಇವಾಗ ನೋಡು ಯಾವ ಪರಿಸ್ಥಿತಿಗೆ ಬಂದಿದ್ದೀಯ ಅಂತ, ನಿನ್ನ ಮುಖದ ಮೇಲೆ ಉಗುದು ಬಿಟ್ಟು ಹೋದ್ರು ಅವರು ಗಂಡ ಬಿಟ್ಟವಳು ಅಂತಾ.. ಗಂಡ ಇಲ್ಲದೆ ಬದಕೋಕೆ ಆಗಲ್ಲ ಅನ್ನೋದನ್ನ ಪ್ರೂವ್ ಮಾಡ್ತೀನಿ ಅಂತ ಚಾಲೆಂಜ್ ಮಾಡಿದ್ದಾನೆ. ಸದ್ಯ ಪೂಜಾಳ ಪರಿಸ್ಥಿತಿ ಏನು?, ಭಾಗ್ಯ ಹೀಗೆ ಇದ್ದರೆ ಪೂಜಾಗೆ ಮದುವೆ ಆಗುವುದು ಅನುಮಾನ, ಅತ್ತ ತಾಂಡವ್-ಶ್ರೇಷ್ಠಾ ಇನ್ನೇನು ಮಾಡ್ತಾರೆ ಅನ್ನೋದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Mokshitha Pai: ಕೆಂಪು ಬಣ್ಣದ ಸೀರೆಯಲ್ಲಿ ಮಿರಮಿರ ಮಿಂಚಿದ ಮೋಕ್ಷಿತಾ ಪೈ: ವಿಡಿಯೋ ನೋಡಿ