ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ತಾಂಡವ್ ಆಫೀಸ್​ನಲ್ಲೇ ದೊಡ್ಡದಾಗಿ ಕ್ಯಾಂಟೀನ್ ಶುರುಮಾಡಿದ ಭಾಗ್ಯ

ಮತ್ತೊಂದು ದೊಡ್ಡ ಹೆಜ್ಜೆ ಭಾಗ್ಯ ಟೀಮ್ ಒಟ್ಟಿದೆ. ತಾಂಡವ್-ಶ್ರೇಷ್ಠಾ ಕೆಲಸ ಮಾಡುವ ಆಫೀಸ್ನಲ್ಲೇ ಇವರು ಕೈ ತುತ್ತು ಕ್ಯಾಂಟೀನ್ ತೆರೆದಿದ್ದಾರೆ. ತಾಂಡವ್ನ ಬಾಸ್ ಬಂದು ಭಾಗ್ಯಾಳನ್ನು ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿದ್ದಾರೆ. ಇವತ್ತಿಂದ ನಮ್ಮ ಕ್ಯಾಂಟೀನ್ ಎಲ್ಲ ಜವಾಬ್ದಾರಿ ಭಾಗ್ಯ ಮತ್ತು ತಂಡ ವಹಿಸಿಕೊಳ್ಳುತ್ತದೆ ಎಂದು ಬಾಸ್ ಹೇಳಿದ್ದಾರೆ.

ತಾಂಡವ್ ಆಫೀಸ್​ನಲ್ಲೇ ಕ್ಯಾಂಟೀನ್ ಶುರುಮಾಡಿದ ಭಾಗ್ಯ

Bhagya Lakshmi Serial

Profile Vinay Bhat Apr 24, 2025 12:33 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ತನ್ನ ತಾಂಡವ್-ಶ್ರೇಷ್ಠಾ ವಿರುದ್ಧ ಸೇಡಿ ತೀರಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ತಯಾರಾಗಿದ್ದಾಳೆ. ಅಷ್ಟರ ಮಟ್ಟಿಗೆ ಭಾಗ್ಯಾಗೆ ಇವರು ತೊಂದರೆ ಕೊಟ್ಟಿದ್ದಾಳೆ. ಕನ್ನಿಕಾಗೆ ಎಷ್ಟು ಅವಮಾನ ಮಾಡಿದರೂ-ಬುದ್ದಿ ಹೇಳಿದರೂ ಆಕೆ ಬದಲಾಗುತ್ತಿಲ್ಲ. ಇದೀಗ ಭಾಗ್ಯ ಮತ್ತೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು, ತನ್ನ ಮಾಜಿ ಪತಿ ಇರುವ ಆಫೀಸ್​ನಲ್ಲೇ ಕೈ ತುತ್ತು ಬ್ಯುಸಿನೆಸ್ ದೊಡ್ಡದಾಗಿ ಶುರುಮಾಡಿದ್ದಾಳೆ. ತಾಂಡವ್ ಆಫೀಸ್​ನಲ್ಲಿ ಭಾಗ್ಯ ತನ್ನ ಕ್ಯಾಂಟೀನ್ ಶುರು ಮಾಡಿದ್ದಾಳೆ.

ಕೈ ತುತ್ತು ಬ್ಯುಸಿನೆಸ್​ಗೆ ಭಾಗ್ಯಾಘೆ ಲೈಸನ್ಸ್ ಸಿಕ್ಕಿದೆ. ತಾಂಡವ್-ಶ್ರೇಷ್ಠಾ-ಕನ್ನಿಕಾ ಮಾಡಿದ ಪ್ಲ್ಯಾನ್ ಇಲ್ಲೂ ಹಾಳಾಗಿದೆ. ಇದೀಗ ಭಾಗ್ಯ ಇವರೆಲ್ಲರ ಎದುರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಈಗಾಗಲೇ ಭಾಗ್ಯ ಹಾಗೂ ಅತ್ತೆ ಕುಸುಮಾ ಕನ್ನಿಕಾಳ ಆಫೀಸ್​ಗೆ ಹೋಗಿ ಎಲ್ಲರ ಮುಂದೆ ಮರ್ಯಾದೆ ತೆಗೆದಿದ್ದಾರೆ. ನಿಮ್ಮ ಬಾಸ್ ಇದ್ದಾಳಲ್ಲ ಕನ್ನಿಕಾ ಇವರ ಅಂಡರ್​ನಲ್ಲಿ ನೀವು ಕೆಲಸ ಮಾಡಿದ್ರೆ ನಿಮ್ಮ ಜೀವನ, ದೊಡ್ಡ ದೊಡ್ಡ ಕನಸೆಲ್ಲ ಕನಸಾಗಿಯೇ ಉಳಿದುಬಿಡುತ್ತೆ.. ಇವಳು ಒಳ್ಳೆಯವಳಲ್ಲ.. ತುಂಬಾ ಕೆಟ್ಟವಳು.. ಎಲ್ಲರ ಜೀವನ ಹಾಳು ಮಾಡ್ತಾಳೆ, ಇನ್ನೊಬ್ಬರ ಮನೆಗೆ ಕನ್ನ ಹಾಕುತ್ತಾಳೆ. ಈ ಮನೆಹಾಳಿನ ನೀವು ನಬ್ಬಿಂದ್ರೆ ನಿಮ್ಮ ಜೀವನ ಉದ್ದಾರ ಆಗಲ್ಲ. ಆದಷ್ಟು ಬೇಗ ಬೇರೆ ಕೆಲಸ ನೋಡಿಕೊಂಡು ಈ ಜಾಗ ಖಾಲಿ ಮಾಡಿ ಎಂದು ಹೇಳಿದ್ದಾಳೆ ಕುಸುಮಾ.

ಇದಾದ ಬಳಿಕ ಮತ್ತೊಂದು ದೊಡ್ಡ ಹೆಜ್ಜೆ ಭಾಗ್ಯ ಟೀಮ್ ಒಟ್ಟಿದೆ. ತಾಂಡವ್-ಶ್ರೇಷ್ಠಾ ಕೆಲಸ ಮಾಡುವ ಆಫೀಸ್​ನಲ್ಲೇ ಇವರು ಕೈ ತುತ್ತು ಕ್ಯಾಂಟೀನ್ ತೆರೆದಿದ್ದಾರೆ. ತಾಂಡವ್​ನ ಬಾಸ್ ಬಂದು ಭಾಗ್ಯಾಳನ್ನು ಗ್ರ್ಯಾಂಡ್ ಆಗಿ ವೆಲ್​ಕಮ್ ಮಾಡಿದ್ದಾರೆ. ಇವತ್ತಿಂದ ನಮ್ಮ ಕ್ಯಾಂಟೀನ್ ಎಲ್ಲ ಜವಾಬ್ದಾರಿ ಭಾಗ್ಯ ಮತ್ತು ತಂಡ ವಹಿಸಿಕೊಳ್ಳುತ್ತದೆ ಎಂದು ಬಾಸ್ ಹೇಳಿದ್ದಾರೆ. ಆಗ ಮೈ ತುಂಬಾ ಒಡವೆ ಹಾಕಿಕೊಂಡು ಭಾಗ್ಯಾಳ ಎಂಟ್ರಿ ಆಗಿದೆ. ಭಾಗ್ಯಾಳನ್ನು ಕಂಡು ತಾಂಡವ್-ಶ್ರೇಷ್ಠಾಗೆ ಶಾಕ್ ಆಗಿದೆ.



ನನ್ನ ಕಾಲು ಎಳೆದು ಎದುರು ಹಾಕಿಕೊಳ್ಳಬಹುದು ಅಂದುಕೊಂಡಿದ್ದವರನ್ನೆಲ್ಲ ತುಳಿದು ಮೇಲೆ ಬಂದಿದ್ದೀನಿ ನಾನು ಎಂದು ಭಾಗ್ಯ ಎಚ್ಚರಿಕೆ ಕೊಟ್ಟಿದ್ದಾಳೆ. ಇದಕ್ಕೂ ಮುನ್ನ ತಾಂಡವ್, ಭಾಗ್ಯಾಳ ಮನೆಗೆ ಬಂದು ಅಲ್ಲುಕೂಡ ಅವಮಾನ ಅನುಭವಿಸಿದ್ದ. ಭಾಗ್ಯಾಳ ಅಡುಗೆ ಎಂದು ಗೊತ್ತಿಲ್ಲದೆ ಆಫೀಸ್​ನಲ್ಲಿ ಯಾರೋ ಆರ್ಡರ್ ಮಾಡಿದ ಅಡುಗೆ ತಿಂದು ತಾಂಡವ್ ಆ ರುಚಿಗೆ ಮರುಳಾಗಿರುತ್ತಾನೆ. ನಿನಗಿಂತ ಚೆನ್ನಾಗಿ ಯಾರೋ ಒಬ್ಬರು ಅಡುಗೆ ಮಾಡುತ್ತಾರೆ ಎಂದು ಆರ್ಡರ್ ಮಾಡಿದ ತಿಂಡಿ ತೆಗೆದುಕೊಂಡು ಭಾಗ್ಯಾಗೆ ಹೇಳಲು ಅವಳ ಮನೆಗೆ ಹೋಗುತ್ತಾನೆ.

ಭಾಗ್ಯಾಳಿಗಿಂತ ಉತ್ತಮ ಅಡುಗೆಯನ್ನು ನಾನು ನೋಡಿದ್ದೇನೆ, ತಿಂದಿದ್ದೇನೆ. ಅದರ ರುಚಿ ನೀವೂ ಕೂಡ ನೋಡಬೇಕು, ಅದಕ್ಕಾಗಿ ನಿಮಗೆ ತೋರಿಸಲು ಇಲ್ಲಿಗೆ ತೆಗೆದುಕೊಂಡು ಬಂದೆ ಎಂದು ಹೇಳಿದ್ದಾನೆ. ಎಲ್ಲರಿಗೂ ಟೇಸ್ಟ್ ಮಾಡಲು ಕೊಟ್ಟಿದ್ದಾನೆ. ಮನೆಯವರಿಗೆ ಅದು ಭಾಗ್ಯಳ ಅಡುಗೆ ಎಂದು ಗೊತ್ತಾಗುತ್ತದೆ. ಆಗ ಕುಸುಮಾ, ಹೌದು ತಾಂಡವ್, ಊಟ ತುಂಬಾ ಚೆನ್ನಾಗಿದೆ. ಭಾಗ್ಯ ಹೀಗೆ ಅಡುಗೆ ಮಾಡಲು ಸಾಧ್ಯವಿಲ್ಲ, ನಾವು ಕೂಡ ಅಲ್ಲಿಂದಲೇ ಊಟ ತರಿಸಿಕೊಳ್ಳುತ್ತಿದ್ದೇವೆ ಎಂದು ತಾಂಡವ್‌ಗೆ ಅಡುಗೆ ಮನೆಯಲ್ಲಿದ್ದ ಊಟದ ಬಾಕ್ಸ್‌ಗಳನ್ನು ತೋರಿಸುತ್ತಾಳೆ. ಅದನ್ನು ನೋಡಿ ತಾಂಡವ್ ಪೆಚ್ಚಾಗುತ್ತಾನೆ. ಅಷ್ಟರಲ್ಲಿ ಭಾಗ್ಯ ಬಂದು, ಈ ಬಿಜಿನೆಸ್ ಮಾಡುತ್ತಿರುವುದು ನಾನೇ ಎಂದು ಹೇಳುತ್ತಾಳೆ. ಇಲ್ಲೂ ತಾಂಡವ್​ಗೆ ದೊಡ್ಡ ಅವಮಾನ ಆಗುತ್ತದೆ.

ಸದ್ಯ ಆಫೀಸ್ ವರೆಗೆ ಬಂದಿರುವ ಭಾಗ್ಯಾಳನ್ನು ತಾಂಡವ್-ಶ್ರೇಷ್ಠಾ ಏನು ಮಾಡುತ್ತಾರೆ ಎಂಬುದು ನೋಡಬೇಕಿದೆ. ಅಲ್ಲಿಂದ ಓಡಿಸಲು ಏನಾದರು ಹೊಸ ಪ್ಲ್ಯಾನ್ ಮಾಡುತ್ತಾರ ಅಥವಾ ಅವರೇ ಆಫೀಸ್ ಬಿಟ್ಟು ಹೋಗುತ್ತಾರ?, ಭಾಗ್ಯಾಳ ಬ್ಯುಸಿನೆಸ್ ಹೇಗೆ ಸಾಗುತ್ತದೆ ಎಂಬುದೆಲ್ಲ ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Mokshitha Pai: ಚಿನ್ನದ ರೇಟ್ ಹೆಚ್ಚಲು ಮೋಕ್ಷಿತಾ ಕಾರಣ ಎಂದ ಫ್ಯಾನ್ಸ್: ಫೋಟೋ ಫುಲ್ ವೈರಲ್