Bro Gowda Marriage: ಬ್ರೋ ಗೌಡ ಭಾವಿ ಪತ್ನಿಯಿಂದ ಭರ್ಜರಿ ಬ್ಯಾಚುಲರ್ ಪಾರ್ಟಿ
ಬ್ರೋ ಗೌಡ ಅವರು ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಆಗಿರುವ ಕುರಿತ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ಮೇಘನಾ ಎನ್ನುವವರ ಜತೆ ಶಮಂತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಮೇಘನಾ ಅವರು ಭರ್ಜರಿ ಆಗಿ ಬ್ಯಾಚುಲರ್ ಪಾರ್ಟಿ ಆಯೋಜಿಸಿದ್ದಾರೆ.

Meghana Bro gowda wife

ಬ್ರೋ ಗೌಡ (Bro Gowda) ಎಂದೇ ಖ್ಯಾತಿಯಾಗಿರುವ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿ ಶಮಂತ್ ಇತ್ತೀಚೆಗಷ್ಟೆ ಫೆಬ್ರವರಿ 14 ರಂದು ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟರು. ಸಿಂಗರ್ ಆಗಿ, ಲವ್ವರ್ ಬಾಯ್ ಆಗಿ ಈಗ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿ ಎಲ್ಲರ ಮನಸ್ಸನ್ನು ಗೆದ್ದಿರುವ ಶಮಂತ್ ರಿಯಲ್ ಲೈಫ್ ನಲ್ಲೂ ಹೊಸ ಬಾಳಿನ ಕಡೆಗೆ ಹೆಜ್ಜೆಯಾಕುತ್ತಿದ್ದೇನೆ ಎಂದರು.
ಬ್ರೋ ಗೌಡ ಅವರು ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಆಗಿರುವ ಕುರಿತ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ಮೇಘನಾ ಎನ್ನುವವರ ಜತೆ ಶಮಂತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಇಬ್ಬರ ಪ್ರೀತಿ ವಿಚಾರವನ್ನು ಹೇಳುವುದಕ್ಕೆಂದೆ ಒಂದು ಬ್ಯೂಟಿಫುಲ್ ವಿಡಿಯೋ ಮಾಡಿದ್ದರು. ಇದೀಗ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಮೇಘನಾ ಅವರು ಭರ್ಜರಿ ಆಗಿ ಬ್ಯಾಚುಲರ್ ಪಾರ್ಟಿ ಆಯೋಜಿಸಿದ್ದಾರೆ.
ಹೌದು, ಶಮಂತ್ ಬ್ರೋ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಂದು ಕಡೆ ನಟ ಶಮಂತ್ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚುವುದರಲ್ಲಿ ತುಂಬಾ ಬ್ಯುಸಿಯಾಗಿದ್ದರೆ ಅತ್ತ ಭಾವಿ ಪತ್ನಿ ಸ್ನೇಹಿತರ ಜೊತೆ ಬ್ಯಾಚುಲರ್ ಪಾರ್ಟಿ ಆಯೋಜನೆ ಮಾಡಿದ್ದಾರೆ. ರೆಸಾರ್ಟ್ವೊಂದಲ್ಲಿ ಮೇಘನಾ ಗೆಳತಿಯರು ಬ್ಯಾಚುಲರ್ ಪಾರ್ಟಿ ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ ಮೇಘನಾ ಅವರು ಮಸ್ತ್ ಎಂಜಾಯ್ ಮಾಡಿದ್ದಾರೆ.
ನೀಲಿ ಬಣ್ಣದ ಸಿಂಗಲ್ ಪೀಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿರುವ ಮೇಘನಾ ನೋಡಲು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೆ ಶಮಂತ್ ಅವರು ಸಂದರ್ಶನವೊಂದರಲ್ಲಿ ತಮ್ಮ ಪ್ರೀತಿಯ ಕುರಿತು ಹೇಳಿಕೊಂಡಿದ್ದರು, ನಮ್ಮ ಪ್ರೀತಿ ವಿಚಾರ ಕೆಲವು ಆತ್ಮೀಯರಿಗೆ ಗೊತ್ತಿತ್ತು ಆದರೆ ನಾನೇ ಬಾಯಿ ಮುಚ್ಚಿಸಿದ್ದೆ. ನಾವು ಎಂಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಯಾರಿಗೂ ಹೇಳದೇ ಆ ಸಿಕ್ರೇಟ್ ಅನ್ನು ಕಾಪಾಡಿಕೊಂಡಿದ್ದೆವು ಎಂದು ತಮ್ಮ ಪ್ರೀತಿಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಕಾಲೇಜಿನಲ್ಲಿ ನನ್ನ ಸ್ನೇಹಿತರದು ಗೆಟ್ ಟುಗೆದರ್ ಇತ್ತು. ಅದೇ ಸಮಯದಲ್ಲಿ ಫೆಸ್ಟ್ ಕೂಡ ನಡೆಯುತ್ತಿತ್ತು. ಆ ಫೆಸ್ಟ್‌ಗೆ ಹೋದಾಗ ಅಲ್ಲಿ ಅವರ ಪರಿಚಯ ಆಯ್ತು. ಅಲ್ಲಿಂದ ಮುಂದುವರಿದು ಇಲ್ಲಿದೆ ಬಂದಿದೆ. ಹಿಂದೆ ತಿರುಗಿ ನೋಡಿದಾಗ ಎಂಟು ವರ್ಷ ಆಗಿ ಬಿಟ್ಟಿದೆ. ಇದು ಸೂಕ್ತವಾದ ಸಮಯ ಎಂದುಕೊಂಡು ಮನೆಯಲ್ಲಿ ಒಪ್ಪಿಸಿ ಎಲ್ಲರಿಗೂ ಹೇಳಿದೆವು. ಬಳಿಕ ಫೆ. 14 ರಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡೆವು ಎಂದಿದ್ದಾರೆ.
Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಎಮೋಷನಲ್ ಎಪಿಸೋಡ್: ಭಾಗ್ಯಾಗೆ ನೀನು ನನ್ನ ಅಮ್ಮ ಎಂದ ಪೂಜಾ