ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Singer Prithvi Bhat: ಮಗಳನ್ನು ವಶೀಕರಣ ಮಾಡಿ ಮದ್ವೆ ಮಾಡಿಸಿದ್ದಾರೆ... ಗಾಯಕಿ ಪೃಥ್ವಿ ಭಟ್‌ ತಂದೆ ಆಡಿಯೊ ವೈರಲ್‌

Singer Prithvi Bhat Marriage Controversy: ಕಿರುತೆರೆಯ ಕೆಲವು ಧಾರಾವಾಹಿಗಳ ಹಾಡಿನ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಪೃಥ್ವಿ ಭಟ್ ಅವರು ಅಪ್ಪ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಮನೆ ತೊರೆದು ಪ್ರೀತಿಸಿದವನ ಜತೆ ಮದುವೆಯಾಗಿದ್ದಾರೆ. ಇದರಿಂದ ಮನನೊಂದ ಅಪ್ಪ ಸುದೀರ್ಘ ಆಡಿಯೊ ಮಾಡಿ ನೋವು ತೋಡಿಕೊಂಡಿದ್ದಾರೆ. ತಮ್ಮ ಮಗಳನ್ನು ವಶೀಕರಣ ಮಾಡಿ ಮದುವೆಯಾಗಿದ್ದಾರೆ ಎಂದೂ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಆರೋಪಿಸಿದ್ದಾರೆ.

ಸರಿಗಮಪ ಖ್ಯಾತಿಯ ಪೃಥ್ವಿ ಭಟ್‌ ತಂದೆಯ ಆಡಿಯೊ ವೈರಲ್‌

Profile Rakshita Karkera Apr 21, 2025 10:03 AM

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ 'ಸರಿಗಮಪ ಸೀಸನ್ 15'ರ ಸ್ಪರ್ಧಿಯಾಗಿ ಮತ್ತು ಆ ಬಳಿಕ ಕಿರುತೆರೆಯ ಕೆಲವು ಧಾರಾವಾಹಿಗಳ ಹಾಡಿನ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಪೃಥ್ವಿ ಭಟ್(Singer Prithvi Bhat) ಅವರು ಅಪ್ಪ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಮನೆ ತೊರೆದು ಪ್ರೀತಿಸಿದವನ ಜತೆ ಮದುವೆಯಾಗಿದ್ದಾರೆ. ಇದರಿಂದ ಮನನೊಂದ ಅಪ್ಪ ಸುದೀರ್ಘ ಆಡಿಯೊ ಮಾಡಿ ನೋವು ತೋಡಿಕೊಂಡಿದ್ದಾರೆ. ಮುದ್ದಿನ ಮಗಳು ಮನೆ ಬಿಟ್ಟು ಓಡಿ ಹೋಗಲು ಯಾರು ಕಾರಣರು ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ತಮ್ಮ ಮಗಳನ್ನು ವಶೀಕರಣ ಮಾಡಿ ಮದುವೆಯಾಗಿದ್ದಾರೆ ಎಂದೂ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಆರೋಪಿಸಿದ್ದಾರೆ.

ಪೃಥ್ವಿ ಭಟ್ ಅವರು ಜೀ ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬುವರನ್ನು ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಈ ಸುದ್ದಿ ಅವರ ತಂದೆ ಮತ್ತು ತಾಯಿ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತನ್ನು ಧಿಕ್ಕರಿಸಿ ಮಗಳು ಮದುವೆಯಾಗಿರುವ ಬಗ್ಗೆ ತಂದೆ ದುಃಖ ವ್ಯಕ್ತಪಡಿಸಿದ್ದಾರೆ. ಆ ಹುಡುಗನ ಜತೆ ಮದುವೆ ಆಗುವುದಿಲ್ಲ ಎಂದು ಮಗಳು ದೇವರ ಮುಂದೆ ಪ್ರಮಾಣ ಮಾಡಿದ್ದಳು. ಆದರೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋದಳು ಎಂದು ತಂದೆ ನೋವು ತೋಡಿಕೊಂಡಿದ್ದಾರೆ. ತಮ್ಮ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ. ಇದರ ಹಿಂದೆ ಜೀ ಟಿವಿ ಕನ್ನಡದ ರಿಯಾಲಿಟಿ ಶೋನ ಜೂರಿ ನರಹರಿ ದೀಕ್ಷಿತ್ ಅವರ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಸಾವಿರಾರು ಜನ ಓಡಾಡೋ ಹೈವೇಯಲ್ಲಿ ನೇತಾಡುತ್ತಿದೆ ಅಪಾಯಕಾರಿ ಕೇಬಲ್‌ ವೈರ್‌! ವಿಡಿಯೊ ಫುಲ್‌ ವೈರಲ್‌

ಪೃಥ್ವಿ ಭಟ್‌ ಅಪ್ಪ ಆಡಿಯೋದಲ್ಲಿ ಹೇಳಿದ್ದೇನು?

ನನ್ನ ಮಗಳು ಫೃಥ್ವಿ ಮಾ.27ರಂದು ಜೀ ಕನ್ನಡದಲ್ಲಿ ಕೆಲಸ ಮಾಡುವ ಅಭಿಷೇಕ್‌ ಎಂಬಾತನನ್ನು ಮದುವೆ ಆಗಿದ್ದಾಳೆ. ಆತ ಬ್ರಾಹ್ಮಣನೂ ಅಲ್ಲ..ಇದರ ಹಿಂದೆ ಸಂಗೀತ ಶಿಕ್ಷಕ, ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋನ ಜ್ಯೂರಿಗಳಲ್ಲಿ ಒಬ್ಬರಾದ ನರಹರಿ ದೀಕ್ಷಿತ್‌ ಕೈವಾಡ ಇದೆ. ಎಲ್ಲವನ್ನೂ ಮುಚ್ಚಿಟ್ಟು ಆತನೇ ನಿಂತು ಮದುವೆ ಮಾಡಿದ್ದಾನೆ. ಕೇಳಿದಕ್ಕೆ ಜೀ ಕನ್ನಡ ಹೇಳಿದ್ದಕ್ಕೆ ಮಾಡಿರೋದಾಗಿ ಹೇಳುತ್ತಾನೆ. ಅದೂ ಅಲ್ಲದೇ ನಮ್ಮ ಮಗಳು ಕೆಲವು ದಿನಗಳಿಂದ ವಶೀಕರಣಕ್ಕೆ ಒಳಗಾದಂತೆ ವರ್ತಿಸುತ್ತಿದ್ದಳು. ನರಹರಿ ದೀಕ್ಷಿತ್‌ ತನ್ನ ಲಾಭಕ್ಕಾಗಿ ಇಂತಹ ನೀಚ ಕೆಲಸವನ್ನು ಆತ ಮಾಡಿದ್ದಾನೆ ಎಂದು ದೂರಿದ್ದಾರೆ.



ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ 'ಸರಿಗಮಪ ಸೀಸನ್ 15'ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಪೃಥ್ವಿ ಭಟ್ ಆಡಿಶನ್‌ನಲ್ಲಿಯೇ ಕಿರುತೆರೆ ವೀಕ್ಷಕರ ಜೊತೆಗೆ ತೀರ್ಪುಗಾರರ ಮನ ಸೆಳೆದಾಕೆ. ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ಎಂದು ಹಾಡಿನ ಮೂಲಕ ಕಿರುತೆರೆಗೆ ಕಾಲಿಟ್ಟ ಪೃಥ್ವಿ ಭಟ್ ಸುಮಧುರ ಕಂಠದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿ ಪಾಪ್ಯುಲರ್ ಆಗಿದ್ದಾರೆ. ನಾನಿಂದು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ನನ್ನ ಅಪ್ಪ ಅಮ್ಮನೇ ಕಾರಣ ಎಂದು ಪೃಥ್ವಿ ಭಟ್ ಹಲವಾರು ರಿಯಾಲಿಟಿ ಶೋಗಳಲ್ಲಿ ಹೇಳಿಕೊಂಡಿದ್ದರು. ಭಾಗ್ಯ ಲಕ್ಷ್ಮಿ ಸೇರಿದಂತೆ ಹಲವು ಧಾರಾವಾಹಿಗಳಿಗೆ ಇವರು ಹಾಡಿದ್ದಾರೆ. ಇವರು ಹಾಡಿರುವ ಭಕ್ತಿ ಗೀತೆಗಳೂ ಜನಪ್ರಿಯವಾಗಿವೆ.