ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼArrest Anurag Kashyapʼ: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದ ಅನುರಾಗ್‌ ಕಶ್ಯಪ್‌; ದೂರು ದಾಖಲು

Anurag Kashyap: ಬಾಲಿವುಡ್‌ ನಿರ್ದೇಶಕ, ನಟ ಅನುರಾಗ್‌ ಕಶ್ಯಪ್‌ ಇದೀಗ ಬ್ರಾಹ್ಮಣರನ್ನು ಅವಹೇಳನ ಮಾಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ''ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ?'' ಎಂದು ಅವರು ಸೋಶೀಯಲ್‌ ಮೀಡಿಯಾದಲ್ಲಿ ಪ್ರಶ್ನಿಸುವ ಮೂಲಕ ಉದ್ಧಟತನ ಮೆರೆದಿದ್ದಾರೆ.

ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದ ಅನುರಾಗ್‌ ಕಶ್ಯಪ್‌

ಅನುರಾಗ್‌ ಕಶ್ಯಪ್‌.

Profile Ramesh B Apr 18, 2025 9:31 PM

ಮುಂಬೈ: ಬಾಲಿವುಡ್‌ ನಿರ್ದೇಶಕ, ನಟ ಅನುರಾಗ್‌ ಕಶ್ಯಪ್‌ (Anurag Kashyap) ಮತ್ತು ವಿವಾದಕ್ಕೆ ಬಿಟ್ಟಿರಲಾರದ ನಂಟು. ಆಗಾಗ ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಸುವ ಅವರು ಇದೀಗ ಮತ್ತೊಮ್ಮೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ (ʼArrest Anurag Kashyapʼ). ''ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ?'' ಎಂದು ಅವರು ಸೋಶೀಯಲ್‌ ಮೀಡಿಯಾದಲ್ಲಿ ಪ್ರಶ್ನಿಸುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಸದ್ಯ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಅನುರಾಗ್‌ ಕಶ್ಯಪ್‌ನನ್ನು ಬಂಧಿಸಿ ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬಂದಿದೆ. ಜತೆಗೆ ದೂರೂ ದಾಖಲಾಗಿದೆ.

ಜಾತಿ ವ್ಯವಸ್ಥೆ ವಿರುದ್ದ ಹೋರಾಡಿದ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತರಾದ ಜ್ಯೋತಿರಾವ್‌ ಫುಲೆ ಮತ್ತು ಸಾವಿತ್ರಿಭಾಯಿ ಫುಲೆ ಅವರ ಜೀವನವನ್ನಾಧರಿಸಿ ಹಿಂದಿಯಲ್ಲಿ ʼಫುಲೆʼ ಚಿತ್ರ ನಿರ್ಮಾಣವಾಗಿದೆ. ರೋಹನ್‌ ಸಿಪ್ಪಿ ನಿರ್ದೇಶನದ ಈ ಚಿತ್ರದಲ್ಲಿನ ವಿವದಾತ್ಮಕ, ಜಾತಿ ವ್ಯವಸ್ಥೆಯನ್ನು ಸೂಚಿಸುವ ಭಾಗಗಳನ್ನು ತೆಗೆದು ಹಾಕುವಂತೆ ಸೆನ್ಸಾರ್‌ ಮಂಡಳಿ ಸೂಚಿಸಿತ್ತು. ಇದರಿಂದ ಏ. 11ರಂದು ರಿಲೀಸ್‌ ಆಗಬೇಕಿದ್ದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಕಿಡಿ ಕಾರಿದ ಅನುರಾಗ್‌ ಕಶ್ಯಪ್‌ ನಾಲಗೆ ಹರಿಯಬಿಟ್ಟಿದ್ದಾರೆ.

ಅನುರಾಗ್‌ ಕಶ್ಯಪ್‌ ಅವರ ವಿವಾದಾತ್ಮಕ ಪೋಸ್ಟ್‌:

ವಿವಾದದ ಹಿನ್ನೆಲೆ

ʼಫುಲೆʼ ಸಿನಿಮಾವನ್ನು ಇತ್ತೀಚೆಗೆ ಸೆನ್ಸಾರ್‌ ಮಂಡಳಿಗೆ ಕಳುಹಿಸಲಾಗಿತ್ತು. ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದ ಸೆನ್ಸಾರ್‌ ಮಂಡಳಿ ಯು ಸರ್ಟಿಫಿಕೆಟ್‌ ನೀಡಿತ್ತು. ಜತೆಗೆ ʼʼ3,000 ಸಾಲ್‌ ಪುರಾನಿ ಗುಲಾಮಿʼʼ ಸೇರಿದಂತೆ ಕೆಲವು ಡೈಲಾಗ್‌ ಹಾಗೂ ಜಾತಿ ಆಧಾರಿತ ಹೆಸರನ್ನು ತೆಗೆಯುವಂತೆ ಸೂಚಿಸಿತ್ತು. ಇದರ ಜತೆಗೆ ಚಿತ್ರದ ಟ್ರೈಲರ್‌ ವೀಕ್ಷಿಸಿದ ಬ್ರಾಹ್ಮಣ ಸಮುದಾಯದ ಕೆಲವರು ತಮ್ಮನ್ನು ಕೀಳಾಗಿ ಚಿತ್ರೀಕರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲ ಕಾರಣದಿಂದ ಏ. 11ಕ್ಕೆ ಚಿತ್ರ ಬಿಡುಗಡೆಯಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡ ಅನುರಾಗ್‌ ಕಶ್ಯಪ್‌ ಬ್ರಾಹ್ಮಣರ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ತಾಳ್ಮೆ ಕಳೆದುಕೊಂಡ ಅವರು ''ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ?'' ಪ್ರಶ್ನಿಸಿದ್ದಾರೆ.

ಅನುರಾಗ್‌ ಕಶ್ಯಪ್‌ ಪೋಸ್ಟ್‌ನಲ್ಲಿ ಏನಿದೆ?

ʼʼಸಹೋದರರೇ ಭಾರತದಲ್ಲಿ ಜಾತೀಯತೆ ಇದೆಯೋ ಇಲ್ಲವೋ ಎಂಬುದನ್ನು ನೀವೇ ನಿರ್ಧರಿಸಿ. ʼಧಡಕ್ 2ʼ ಚಿತ್ರದ ಪ್ರದರ್ಶನದ ವೇಳೆ ಪ್ರಧಾನಿ ಮೋದಿ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿದ್ದಾರೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ. ಅದರ ಆಧಾರದ ಮೇಲೆ, ʼಸಂತೋಷ್ʼ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಈಗ ಬ್ರಾಹ್ಮಣರಿಗೆ ʼಫುಲೆʼ ಚಿತ್ರದ ಮೇಲೆ ಕಣ್ಣು ಬಿದ್ದಿದೆʼʼ ಎಂದು ಹೇಳಿದ್ದಾರೆ.

ಮುಂದುವರಿದು, "ಜಾತೀಯತೆ ಇಲ್ಲದಿದ್ದರೆ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಏಕೆ ಅಸ್ತಿತ್ವದಲ್ಲಿದ್ದರು? ಮೋದಿ ಅವರು ಹೇಳುವಂತೆ ಜಾತಿ ವ್ಯವಸ್ಥೆಯೇ ಇಲ್ಲ ಎಂದಾದರೆ ನಿಮ್ಮ ಬ್ರಾಹ್ಮಣತ್ವವೂ ಅಸ್ತಿತ್ವದಲ್ಲಿಲ್ಲ ಎಂದರ್ಥ. ಜನರು ಮೂರ್ಖರಲ್ಲ. ನೀವು ಬ್ರಾಹ್ಮಣರ ಅಥವಾ ನಿರ್ಧಾರ ತೆಗೆದುಕೊಳ್ಳುವವರು ಬ್ರಾಹ್ಮಣರೇ?ʼʼ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ನೆಗೆಟಿವ್‌ ಕಾಮೆಂಟ್‌ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಬ್ರಾಹ್ಮಣರ ವಿರುದ್ದ ಕಿಡಿಕಾರಿದ್ದಾರೆ.

ಮುಂಬೈ ಪೊಲೀಸರಿಗೆ ದೂರು ನೀಡಿದ ಬಿಜೆಪಿ:



ದೂರು ದಾಖಲು

ಬ್ರಾಹ್ಮಣರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಅನುರಾಗ್‌ ಕಶ್ಯಪ್‌ ವಿರುದ್ದ ಇದೀಗ ದೂರು ದಾಖಲಾಗಿದೆ. ಮಹಾರಾಷ್ಟ್ರದ ಬಿಜೆಪಿ ಮುಂಬೈ ಪೊಲೀಸರಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.