Seetha Rama Serial: ಅಂತ್ಯದತ್ತ ಸೀತಾ ರಾಮ ಧಾರಾವಾಹಿ?: ಕಳಚಿ ಬೀಳುತ್ತ ಭಾರ್ಗವಿ ಮುಖವಾಡ?
ಸದ್ಯ ಭಾರ್ಗವಿಗೆ ಈ ಪತ್ರದಿಂದ ಟೆನ್ಶನ್ ಶುರುವಾಗಿದೆ. ಸಿಹಿ ಕೈ ಬರಹ ಈಗ ಎಲ್ಲಿಂದ ಬರಲು ಸಾಧ್ಯ. ಸಾಯುವುದಕ್ಕೂ ಮುಂಚೆನೇ ಬರೆದಿಟ್ಟು ಸತ್ತಳಾ? ಎಂದು ಗೊಂದಲ ಆತಂಕದಲ್ಲಿದ್ದಾಳೆ ಭಾರ್ಗವಿ. ರಾಮ್ಗೆ ಈ ಪತ್ರ ಸಿಗುತ್ತ ಅಥವಾ ಭಾರ್ಗವಿ ಏನಾದರು ಪ್ಲ್ಯಾನ್ ಮಾಡಿ ಪತ್ರವನ್ನು ಪಡೆದುಕೊಳ್ಳುತ್ತಾಳ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Seetha Rama Serial

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿ (Seetha Rama Serial) ಇನ್ನೇನು ಕೆಲವೇ ವಾರಗಳಲ್ಲಿ ಮುಗಿಯುವಂತೆ ಕಾಣುತ್ತಿದೆ. ಈಗ ಸೀತಾ ರಾಮ ಧಾರಾವಾಹಿಯಲ್ಲಿ ಭಾರ್ಗವಿಯ ಪಿತೂರಿ ಜಗಜ್ಜಾಹೀರಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಧಾರಾವಾಹಿಯಲ್ಲಿ ದೊಡ್ಡ ತಿರುವು ಎಂಬಂತೆ ಅಶೋಕನಿಗೆ ಸಿಹಿಯ ಆತ್ಮ ಇರುವುದು ಗೊತ್ತಾಗಿದೆ. ಇದೀಗ ಸುಬ್ಬಿ-ಸಿಹಿ ಹಾಗೂ ಅಶೋಕ್ ಪ್ಲ್ಯಾನ್ ಮಾಡಿ ಭಾರ್ಗವಿಯ ಮುಖವಾಆಡ ಕಳಚಲು ಮುಂದಾಗಿದ್ದಾರೆ. ಸೀರಿಯಲ್‌ನಲ್ಲಿ ಟ್ವಿಸ್ಟ್‌ಗಳನ್ನು ನೋಡುತ್ತಿದ್ದರೆ, ಇನ್ನೆನು ಹೆಚ್ಚು ದಿನ ಪ್ರಸಾರವಾಗುವಂತೆ ಕಾಣುತ್ತಿಲ್ಲ. ಬಚ್ಚಿಟ್ಟ ಸತ್ಯಗಳೀಗ ಒಂದೊಂದಾಗಿಯೇ ಹೊರಬರುತ್ತಿವೆ.
ಸಿಹಿಯ ಅಸ್ಥಿ ತೆಗೆದುಕೊಂಡು ಅಶೋಕ ಪವಿತ್ರ ಸ್ಥಳದ ನದಿಯಲ್ಲಿ ಬಿಡಲು ಆಲೋಚಿಸಿದ್ದಾರೆ. ಆದರೆ, ಏನೇ ಮಾಡಿದರೂ ಅಸ್ತಿ ಬಿಡಲು ಹೋಗಲು ಸಾಧ್ಯವಾಗಲೇ ಇಲ್ಲ. ಡೇಜಾವೂ ಸ್ಥಿತಿ ಅಶೋಕನದ್ದು. ಹೋದ ಸ್ಥಳದಲ್ಲೇ ಹೋಗುತ್ತಿದ್ದಾನೆ. ಅಶೋಕನಿಗೆ ಏನು ಮಾಡಬೇಕೆಂದು ತಿಳಿಯದೆ ಕಾರಿನಲ್ಲಿ ಅಳುತ್ತ ಕೂತಿರುವಾಗ, ಸಿಹಿ ಕಾರಿನ ಮೇಲಿರುವ ಧೂಳಿನಿಂದ ಐ ಆ್ಯಮ್ ಸಿಹಿ (ನಾನು ಸಿಹಿ) ಎಂದು ಬರೆಯುತ್ತಾಳೆ. ಈ ಮೂಲಕ ಸಿಹಿಯ ಆತ್ಮ ಇರೋದು ಆತನಿಗೆ ಗೊತ್ತಾಗಿದೆ. ಕೊನೆಗೆ ಸುಬ್ಬಿಯೇ ಅಶೋಕ್ಗೆ ಎಲ್ಲಾ ವಿಷಯ ಹೇಳುತ್ತಾಳೆ.
ಈಗ ಸಿಹಿ, ಸುಬ್ಬಿ ಮತ್ತು ಅಶೋಕ್ ಮೂವರು ಒಂದಾಗಿ ಭಾರ್ಗವಿಯ ಅಂತ್ಯವನ್ನು ಮಾಡಲು ಮುಂದಾಗಿದ್ದಾರೆ. ಇದಕ್ಕೋಸ್ಕರ ಸಿಹಿ ತನ್ನ ಸಾವಿಗೆ ಭಾರ್ಗವಿ ಕಾರಣ ಎಂಬುದನ್ನು ರಾಮ್‌ಗೆ ತಿಳಿಸಲು ಮುಂದಾಗಿದ್ದಾಳೆ. ತಾನು ಜೀವಂತವಾಗಿ ಇರದ ಕಾರಣ ಸಿಹಿ ಈಗ ಐಡಿಯಾ ಮಾಡಿದ್ದಾಳೆ. ತಾನೇ ಸ್ವತಃ ತನ್ನ ತಂದೆ ರಾಮ್‌ಗೆ ಪತ್ರ ಬರೆದಿದ್ದಾಳೆ. ಪತ್ರದಲ್ಲಿ ತನ್ನ ಸಾವಿಗೆ ಭಾರ್ಗವಿಯೇ ಕಾರಣ ಎಂದು ವಿವರಿಸಿದ್ದಾಳೆ. ಈ ಪತ್ರವನ್ನು ಹೇಗಾದರೂ ಮಾಡಿ ರಾಮ್‌ಗೆ ತಲುಪಿಸುವ ಜವಾಬ್ದಾರಿ ಅಶೋಕ್ ಮೇಲಿದೆ.
ಸಿಹಿ ಬರೆದ ಪತ್ರವನ್ನು ಇನ್ನೇನು ರಾಮ್ ಓದಬೇಕು ಎನ್ನುವಷ್ಟರಲ್ಲಿ ಭಾರ್ಗವಿ ಅಡ್ಡಗಾಲು ಹಾಕಿದ್ದಳು. ಆ ಪತ್ರ ರಾಮ್ ಓದುವ ಬದಲು ಭಾರ್ಗವಿ ಕೈ ಸೇರಿದೆ. ಆದರೆ, ಇನ್ನೇನು ಆಕೆ ಓದಬೇಕು ಎನ್ನುವಷ್ಟರಲ್ಲಿಯೇ ಅಶೋಕ ಆಗಮಿಸಿ, ಕೈಯಲ್ಲಿನ ಪತ್ರವನ್ನು ಕಸಿದುಕೊಂಡಿದ್ದಾನೆ. ಈ ಸಂದರ್ಣ, ಸುಳ್ಳನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ ಅನ್ನೋ ಅಶೋಕನ ಮಾತು ಭಾರ್ಗವಿಗೆ ನಡುಕ ಹುಟ್ಟಿಸಿದೆ. ವಾಣಿ ಅತ್ತೆ, ಪ್ರಸಾದ್ ಅಂಕಲ್ ಅನ್ನು ಕೊಂದಿದ್ದು ಯಾರು ಎಂಬುದು ಹಾಗೂ ಸಿಹಿಯ ಸಾವು ಆಕಸ್ಮಿಕ ಅಲ್ಲ. ಅದು ಕೊಲೆ ಎಂಬುದು ರಾಮ್‌ಗೆ ಗೊತ್ತಾಗುವ ಸಮಯ ಬಂದಿದೆ ಎಂದು ಭಾರ್ಗವಿ ಬಳಿ ಹೇಳಿ ಹೆದರಿಸಿದ್ದಾನೆ.
ಸದ್ಯ ಭಾರ್ಗವಿಗೆ ಈ ಪತ್ರದಿಂದ ಟೆನ್ಶನ್ ಶುರುವಾಗಿದೆ. ಸಿಹಿ ಕೈ ಬರಹ ಈಗ ಎಲ್ಲಿಂದ ಬರಲು ಸಾಧ್ಯ. ಸಾಯುವುದಕ್ಕೂ ಮುಂಚೆನೇ ಬರೆದಿಟ್ಟು ಸತ್ತಳಾ? ಎಂದು ಗೊಂದಲ ಆತಂಕದಲ್ಲಿದ್ದಾಳೆ ಭಾರ್ಗವಿ. ರಾಮ್ಗೆ ಈ ಪತ್ರ ಸಿಗುತ್ತ ಅಥವಾ ಭಾರ್ಗವಿ ಏನಾದರು ಪ್ಲ್ಯಾನ್ ಮಾಡಿ ಪತ್ರವನ್ನು ಪಡೆದುಕೊಳ್ಳುತ್ತಾಳ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Shobha Shetty: ಇನ್ನೂ ಮದುವೆನೇ ಆಗಿಲ್ಲ: ಮೊದಲ ವರ್ಷದ ಎಂಗೇಜ್ಮೆಂಟ್ ಆ್ಯನಿವರ್ಸರಿ ಆಚರಿಸಿದ ಶೋಭಾ ಶೆಟ್ಟಿ