ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶುಭಮನ್‌ ಗಿಲ್‌ ಅಲ್ಲ! ಭಾರತ ಟೆಸ್ಟ್‌ ತಂಡಕ್ಕೆ ಮುಂದಿನ ನಾಯಕನನ್ನು ಆರಿಸಿದ ಆರ್‌ ಅಶ್ವಿನ್‌!

R Ashwin on India's next test Captain: ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಗೂ ಮುನ್ನ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಭಾರತ ಟೆಸ್ಟ್‌ ತಂಡಕ್ಕೆ ನೂತನ ನಾಯಕನನ್ನು ಆರಿಸಲು ಬಿಸಿಸಿಐ ಎದುರು ನೋಡುತ್ತಿದೆ. ಅದರಂತೆ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಅವರು ಟೆಸ್ಟ್‌ ತಂಡಕ್ಕೆ ಸೂಕ್ತ ನಾಯಕನನ್ನು ಆರಿಸಿದ್ದಾರೆ.

ಭಾರತ ಟೆಸ್ಟ್‌ ತಂಡಕ್ಕೆ ಸೂಕ್ತ ನಾಯಕನನ್ನು ಆರಿಸಿದ ಆರ್‌ ಅಶ್ವಿನ್‌!

ಭಾರತ ಟೆಸ್ಟ್‌ ತಂಡಕ್ಕೆ ನೂತನ ನಾಯಕನನ್ನು ಆರಿಸಿದ ಆರ್‌ ಅಶ್ವಿನ್‌.

Profile Ramesh Kote May 13, 2025 3:39 PM

ನವದೆಹಲಿ: ಏಕಕಾಲದಲ್ಲಿ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ (Rohit sharma) ಹಾಗೂ ವಿರಾಟ್‌ ಕೊಹ್ಲಿ (Virat Kohli) ತಮ್ಮ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ವಿರುದ್ಧ ಮುಂಬರುವ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತ ಟೆಸ್ಟ್‌ ತಂಡದ ನೂತನ ನಾಯಕನನ್ನಾಗಿ ಆರಿಸಲು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಪ್ರಯತ್ನ ನಡೆಸುತ್ತಿದೆ. ಹಿರಿಯ ಆಟಗಾರರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ಭಾರತ ತಂಡ ಮುಂದಿನ ದಿನಗಳನ್ನು ಕಠಿಣ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ (R Ashwin), ಟೆಸ್ಟ್‌ ತಂಡಕ್ಕೆ ನಾಯಕನಾಗಲು ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನ ಅಶ್‌ ಕೀ ಬಾತ್‌ ಇತ್ತೀಚಿನ ಎಪಿಸೋಡ್‌ನಲ್ಲಿ ಮಾತನಾಡಿದ ಆರ್‌ ಅಶ್ವಿನ್‌, "ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವಣ ಪಂದ್ಯದ ವೇಳೆ ರೋಹಿತ್‌ ಶರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಇದೀಗ ವಿರಾಟ್‌ ಕೊಹ್ಲಿ ಕೊಟ್ಟಿದ್ದಾರೆ. ಎರಡು ದಿನಗಳ ಹಿಂದೆಯೇ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂಬ ವಿಷಯವನ್ನು ನಾನು ಕೇಳಿದ್ದೆ. ಆದರೆ, ಬಿಸಿಸಿಐ ಕೊಹ್ಲಿ ಅವರೊಂದಿಗೆ ಸಂವಹನ ನಡೆಸಬೇಕಾಗಿತ್ತು. ಅವರ ವೈಯಕ್ತಿಕ ಸಂವಹನವನ್ನು ನಾನಿಲ್ಲಿ ತರಲು ಇಷ್ಟವಿಲ್ಲ," ಎಂದು ಹೇಳಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್‌ ಕೊಹ್ಲಿಗೆ ಸಚಿನ್‌ ತೆಂಡೊಲ್ಕರ್ ವಿಶೇಷ ಸಂದೇಶ!

"ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಹಠಾತ್‌ ವಿದಾಯ ಹೇಳುತ್ತಾರೆಂದು ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ತಂಡ ಪ್ರಸ್ತುತ ಕಠಿಣ ಸನ್ನಿವೇಶವನ್ನು ಎದುರಿಸುತ್ತಿದೆ," ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಗೌತಮ್‌ ಗಂಭೀರ್‌ ಅವರ ಹೊಸ ಯುಗ ಇದಾಗಿದೆ ಎಂದು ಆರ್‌ ಅಶ್ವಿನ್‌ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಸೋಲು ಹಾಗೂ ನ್ಯೂಜಿಲೆಂಡ್‌ ವಿರುದ್ಧದ ತವರು ಟೆಸ್ಟ್‌ ಸರಣಿಯ ವೈಟ್‌ವಾಷ್‌ ಆಘಾತ ಗಂಭೀರ್‌ಗೆ ಸಾಕಷ್ಟು ಹಿನ್ನಡೆಯನ್ನು ತಂದಿದೆ. ಇದೀಗ ಅವರಿಗೆ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಕಠಿಣ ಸವಾಲು ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.

Virat Kohli: ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿಯ ಅತ್ಯಂತ ಶ್ರೇಷ್ಠ ಇನಿಂಗ್ಸ್‌ಗಳು!

ಜಸ್‌ಪ್ರೀತ್‌ ಬುಮ್ರಾಗೆ ಟೆಸ್ಟ್‌ ನಾಯಕತ್ವ ನೀಡಬೇಕೆಂದ ಅಶ್ವಿನ್‌

"ಇದು ಗೌತಮ್‌ ಗಂಭೀರ್‌ ಅವರ ಹೊಸ ಯುಗದ ಆರಂಭ ಇದಾಗಿದೆ ಎಂದು ನಾನು ಖಚಿತವಾಗಿ ಹೇಳುತ್ತೇನೆ. ಗೌತಮ್‌ ಗಂಭೀರ್‌ ಅವರು ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ಸಂಪೂರ್ಣವಾಗಿ ಹೊಸ ತಂಡವನ್ನು ಕರೆದುಕೊಂಡು ಹೋಗಲಿದ್ದಾರೆ, ಇದು ಸಂಪೂರ್ಣವಾಗಿ ರೂಪಾಂತರಗೊಂಡ ಹೊಸ ತಂಡವಾಗಿದ್ದು,

ಇದರಲ್ಲಿ ಜಸ್‌ಪ್ರೀತ್‌ ಬುಮ್ರಾ ಎಲ್ಲರಿಗಿಂತಲೂ ಹಿರಿಯ ಆಟಗಾರರಾಗಲಿದ್ದಾರೆ," ಎಂದು ಅವರು ತಿಳಿಸಿದ್ದಾರೆ.

"ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ಜಸ್‌ಪ್ರೀತ್‌ ಬುಮ್ರಾ ಕೂಡ ಒಂದು ಆಯ್ಕೆಯಾಗಿದೆ. ನಾಯಕತ್ವಕ್ಕೆ ಅವರು ಅರ್ಹರಾಗಿದ್ದಾರೆಂದು ನಾನು ನಂಬುತ್ತೇನೆ, ಆದರೆ, ಅವರ ಫಿಟ್‌ನೆಸ್‌ ಆಧಾರದ ಮೇಲೆ ಬಿಸಿಸಿಐ ಆಯ್ಕೆದಾರರು ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೈ ಗೊಳ್ಳಲಿದ್ದಾರೆ," ಎಂದು ಆರ್‌ ಅಶ್ವಿನ್‌ ಹೇಳಿದ್ದಾರೆ.