ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mexico Shootout: ಚುನಾವಣಾ ರ‍್ಯಾಲಿ ವೇಳೆ ಶೂಟೌಟ್‌! ಮೇಯರ್ ಅಭ್ಯರ್ಥಿ ಸೇರಿ ನಾಲ್ವರು ಬಲಿ

Shootout in Mexico Election Rally: ಮೆಕ್ಸಿಕೊದ () ವೆರಾಕ್ರೂಝ್‌ನ ಟೆಕ್ಸಿಸ್ಟೆಪೆಕ್ ಪಟ್ಟಣದಲ್ಲಿ ಭಾನುವಾರ ನಡೆದ ಚುನಾವಣಾ ರ‍್ಯಾಲಿ ಯೊಂದರಲ್ಲಿ ಮತ್ತು ಅವರ ಮೂವರು ಬೆಂಬಲಿಗರು ಗುಂಡಿನ ದಾಳಿ()ಗೆ ಬಲಿಯಾಗಿದ್ದಾರೆ. ಹಗಲಿನಲ್ಲೇ ನಡೆದ ಈ ದಾಳಿಯ ದೃಶ್ಯಗಳು ಫೇಸ್‌ಬುಕ್‌ ಲೈವ್‌ನಲ್ಲಿ ಸೆರೆಯಾಗಿದ್ದು, ಗುಂಡಿನ ಸದ್ದಿನ ನಡುವೆ ಜನರು ಓಡಾಡುತ್ತಿರುವ ಮತ್ತು ಕಿರುಚಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.

ಚುನಾವಣಾ ರ‍್ಯಾಲಿಯಲ್ಲಿ ಶೂಟೌಟ್‌; ನಾಲ್ವರು ಬಲಿ

ಮೇಯರ್ ಅಭ್ಯರ್ಥಿ ಯೆಸೆನಿಯಾ ಲಾರಾ

Profile Sushmitha Jain May 13, 2025 3:29 PM

ಮೆಕ್ಸಿಕೋ: ಮೆಕ್ಸಿಕೊದ (Mexico) ವೆರಾಕ್ರೂಝ್‌ನ ಟೆಕ್ಸಿಸ್ಟೆಪೆಕ್ (Texistepec) ಪಟ್ಟಣದಲ್ಲಿ ಭಾನುವಾರ ನಡೆದ ಚುನಾವಣಾ ರ‍್ಯಾಲಿ (Political Rally) ಯೊಂದರಲ್ಲಿ (Yesenia Lara) ಮತ್ತು ಅವರ ಮೂವರು ಬೆಂಬಲಿಗರು ಗುಂಡಿನ ದಾಳಿ(gunshots rang out)ಗೆ ಬಲಿಯಾಗಿದ್ದಾರೆ. ಹಗಲಿನಲ್ಲೇ ನಡೆದ ಈ ದಾಳಿಯ ದೃಶ್ಯಗಳು ಫೇಸ್‌ಬುಕ್‌ ಲೈವ್‌ನಲ್ಲಿ ಸೆರೆಯಾಗಿದ್ದು, ಗುಂಡಿನ ಸದ್ದಿನ ನಡುವೆ ಜನರು ಓಡಾಡುತ್ತಿರುವ ಮತ್ತು ಕಿರುಚಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಮೊರೆನಾ ಪಕ್ಷದ ಅಭ್ಯರ್ಥಿ ಯೆಸೇನಿಯಾ ಲಾರಾ, ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರೊಂದಿಗೆ ಸಂಬಂಧ ಹೊಂದಿರುವ ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದರು. ದಾಳಿಗೆ ಕೆಲವು ಗಂಟೆಗಳ ಮೊದಲು, ಅವರು ತಮ್ಮ ಪ್ರಚಾರ ಚಟುವಟಿಕೆಯ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. "ಯುವಜನರ ಶಕ್ತಿಯೇ ಪ್ರತಿದಿನ ನಡೆಯಲು ನನಗೆ ಸ್ಫೂರ್ತಿಯಾಗಿದೆ" ಎಂದು ಅವರು ಬರೆದಿದ್ದರು.

ಮೊರೆನಾ ಪಕ್ಷದ ಧ್ವಜಗಳನ್ನು ಬೀಸುತ್ತಿದ್ದ ಬೆಂಬಲಿಗರ ಬೈಕ್ ರ‍್ಯಾಲಿ ಮೇಲೆ ದಾಳಿಕೋರರು ಗುಂಡಿನ ಮಳೆ ಸುರಿಸಿದರು. ರ‍್ಯಾಲಿಯ ಲೈವ್ ಸ್ಟ್ರೀಮ್‌ನಲ್ಲಿ ಜನರು ಗುಂಡಿನ ದಾಳಿಯಿಂದ ಓಡಾಡುವ ಗೊಂದಲಮಯ ದೃಶ್ಯಗಳು ಸೆರೆಯಾಗಿವೆ. ಆನ್‌ಲೈನ್‌ನಲ್ಲಿ ಪೋಸ್ಟ್ ಆದ ಕೆಲವು ಫೋಟೋಗಳು ನೆಲದ ಮೇಲೆ ಶವಗಳು ಬಿದ್ದಿರುವುದನ್ನು ತೋರಿಸಿವೆ.



"ಟೆಕ್ಸಿಸ್ಟೆಪೆಕ್‌ನಲ್ಲಿ ಮೊರೆನಾ ಅಭ್ಯರ್ಥಿ ಮತ್ತು ಬೆಂಬಲಿಗರ ಕೊಲೆಗೆ ಕಾರಣರಾದವರನ್ನು ನಾವು ಕಂಡುಹಿಡಿಯುತ್ತೇವೆ. ನಾಲ್ವರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ," ಎಂದು ವೆರಾಕ್ರೂಝ್ ರಾಜ್ಯದ ಗವರ್ನರ್ ರೊಸಿಯೊ ನಹ್ಲೆ, ಸೋಷಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದಾರೆ. "ಯಾವುದೇ ಹುದ್ದೆಯೋ ಅಥವಾ ಜವಾಬ್ದಾರಿಯೋ ಒಬ್ಬ ವ್ಯಕ್ತಿಯ ಜೀವಕ್ಕಿಂತ ಮುಖ್ಯವಲ್ಲ" ಎಂದು ಅವರು ಹೇಳಿದ್ದಾರೆ. ಅಲ್ಲದೆ ರಾಜ್ಯದ ಅಟಾರ್ನಿ ಜನರಲ್ ಕಚೇರಿ ಈ ದಾಳಿಯ ಬಗ್ಗೆ ತನಿಖೆ ಆರಂಭಿಸಿದೆ.

ಈ ಸುದ್ದಿಯನ್ನು ಓದಿ: Crime News: ಮತ್ತೊಮ್ಮೆ ಗೋವಿನ ಮೇಲೆ ವಿಕೃತಿ, ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

ಮೆಕ್ಸಿಕೊದಲ್ಲಿ ರಾಜಕಾರಣಿಗಳ ವಿರುದ್ಧ ಹಿಂಸಾಚಾರ

ಮೆಕ್ಸಿಕೊದಲ್ಲಿ, ವಿಶೇಷವಾಗಿ ಸ್ಥಳೀಯ ರಾಜಕಾರಣಿಗಳನ್ನು ಗುರಿಯಾಗಿಸಿ ಹಿಂಸಾಚಾರ ಹೆಚ್ಚಾಗುತ್ತಿದೆ. 2006 ರಿಂದ ಸುಮಾರು 4,80,000 ಜನರು ಕೊಲೆಯಾಗಿದ್ದಾರೆ, ಇವರಲ್ಲಿ ಬಹಳಷ್ಟು ಜನರು ಡ್ರಗ್ ಕಾರ್ಟೆಲ್‌ಗಳು ಮತ್ತು ಸಂಘಟಿತ ಅಪರಾಧಗಳೊಂದಿಗೆ ಸಂಬಂಧ ಹೊಂದಿದ್ದವರು.

ಯೆಸೆನಿಯಾ ಲಾರಾ ಅವರ ಕೊಲೆಯು ಈ ಆತಂಕಕಾರಿ ಪ್ರವೃತ್ತಿಯ ಒಂದು ಭಾಗವಾಗಿದೆ. ಕೇವಲ ಎರಡು ದಿನಗಳ ಹಿಂದೆ, ಜಾಲಿಸ್ಕೊದ ಕೌನ್ಸಿಲ್‌ವುಮನ್ ಸೆಸಿಲಿಯಾ ರುವಾಲ್ಕಾಬಾ ಆಸ್ಪತ್ರೆಯೊಂದರಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದರು. ಕಳೆದ ತಿಂಗಳು, ತಿಯೊಕಾಲ್ಟಿಚೆಯ ಉನ್ನತ ನಗರ ಅಧಿಕಾರಿ ಜೋಸ್ ಲೂಯಿಸ್ ಪೆರೀರಾ, ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಕೊಲೆಯಾದರು.

ಇತರ ಪ್ರಮುಖ ಕೊಲೆಗಳಲ್ಲಿ, 2024ರ ಡಿಸೆಂಬರ್‌ನಲ್ಲಿ ವೆರಾಕ್ರೂಝ್‌ನಲ್ಲಿ ಕಾಂಗ್ರೆಸ್ ಸದಸ್ಯನೊಬ್ಬ ಗುಂಡಿನ ದಾಳಿಗೆ ಬಲಿಯಾದದ್ದು, ಗುರೆರೊದಲ್ಲಿ ಮೇಯರ್ ಒಬ್ಬರನ್ನು ಕೊಂದು ಶಿರಚ್ಛೇದ ಮಾಡಿದ್ದು, ಮತ್ತು ಕಳೆದ ವರ್ಷ ದೇಶದ ಇತರ ಭಾಗಗಳಲ್ಲಿ ಕೆಲವು ಕೌನ್ಸಿಲ್ ಸದಸ್ಯರು ಮತ್ತು ಮೇಯರ್‌ಗಳ ಕೊಲೆಯಾಗಿರುವುದು ಸೇರಿವೆ.