India Pak Ceasefire: ಆಪರೇಷನ್ ಸಿಂದೂರ್ ಇನ್ನೂ ಜಾರಿಯಲ್ಲಿದೆ; ಉಗ್ರರ ಸಂಹಾರ ಫಿಕ್ಸ್ ಎಂದ ವಾಯುಸೇನೆ
ಭಾರತ ಹಾಗೂ ಪಾಕಿಸ್ತಾನ ಕದನ ವಿರಾಮ ಘೋಷಿಸಿದ ಒಂದು ದಿನದ ಬಳಿಕ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯ ವಿರುದ್ಧ ಪ್ರತಿದಾಳಿಯಾಗಿ ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್ ಇನ್ನೂ ಪ್ರಗತಿಯಲ್ಲಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಭಾನುವಾರ ತಿಳಿಸಿದೆ .


ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಕದನ ವಿರಾಮ ಘೋಷಿಸಿದ (India Pak Ceasefire) ಒಂದು ದಿನದ ಬಳಿಕ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯ ವಿರುದ್ಧ ಪ್ರತಿದಾಳಿಯಾಗಿ ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್ ಇನ್ನೂ ಪ್ರಗತಿಯಲ್ಲಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಭಾನುವಾರ ತಿಳಿಸಿದೆ . "ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿರುವುದರಿಂದ, ವಿವರವಾದ ಬ್ರೀಫಿಂಗ್ ಅನ್ನು ಸರಿಯಾದ ಸಮಯದಲ್ಲಿ ನಡೆಸಲಾಗುವುದು. ಪರಿಶೀಲಿಸದ ಮಾಹಿತಿಯ ಊಹಾಪೋಹಗಳನ್ನು ಹರಡಬೇಡಿ ಎಂದು ವಾಯುಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ವಾಯುಸೇನೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಭಾರತೀಯ ವಾಯುಪಡೆ (IAF) ಆಪರೇಷನ್ ಸಿಂಧೂರ್‌ನಲ್ಲಿ ತನಗೆ ನಿಯೋಜಿಸಲಾದ ಕಾರ್ಯಗಳನ್ನು ನಿಖರತೆ ಮತ್ತು ವೃತ್ತಿಪರತೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಕಾರ್ಯಾಚರಣೆಗಳನ್ನು ಉದ್ದೇಶಪೂರ್ವಕ ಮತ್ತು ವಿವೇಚನಾಯುಕ್ತ ರೀತಿಯಲ್ಲಿ, ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ನಡೆಸಲಾಯಿತು" ಎಂದು ತಿಳಿಸಿದೆ.
ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವೆ ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಹೇಳಿಕೊಂಡ ಒಂದು ದಿನದ ನಂತರ ವಾಯುಪಡೆಯಿಂದ ಈ ಹೇಳಿಕೆ ಬಂದಿದೆ. ಕದನ ವಿರಾಮ ಏರ್ಪಟ್ಟಿದ್ದರೂ, ಪಾಕಿಸ್ತಾನ ತನ್ನ ನೀಚತನವನ್ನು ಮುಂದುವರಿದಿದೆ. ನಿನ್ನೆ ತಡರಾತ್ರಿ ಜಮ್ಮು ಕಾಶ್ಮೀರ, ಉದಮ್‌ಪುರ್, ಅಮೃತಸರ ಸೇರಿದಂತೆ ಡ್ರೋನ್ ಹಾಗೂ ಮಿಸೈಲ್‌ಗಳ ಮೂಲಕ ದಾಳಿಗೆ ಯತ್ನಿಸಿದೆ. ಈ ಪ್ರದೇಶದಲ್ಲಿ ಹಲವಾರು ಡ್ರೋನ್‌ಗಳು ಕಂಡುಬಂದ ನಂತರ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತೆ ಕಾರ್ಯಪ್ರವೃತ್ತವಾಗಿವೆ, ಭಾರತವು ಸೇನಾ ಪ್ರಧಾನ ಕಚೇರಿಯ ಬಳಿ ಕನಿಷ್ಠ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಶನಿವಾರ ಸಂಜೆ ಶ್ರೀನಗರ ಮತ್ತು ಬಾರಾಮುಲ್ಲಾದಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಪೋಟದ ಅನುಭವವಾದ ಕೂಡಲೇ ಅಲ್ಲಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. . ಗುರುವಾರ ಸಿರ್ಸಾ ವಾಯುನೆಲೆ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪಾಕಿಸ್ತಾನ ಹಾರಿಸಿತ್ತು. ಇದರ ಪ್ರತೀಕಾರವಾಗೀ ಭಾರತ ಪಾಕಿಸ್ತಾನಕ್ಕೆ ಬಹು ದೊಡ್ಡ ಆಘಾತವನ್ನೇ ನೀಡಿದೆ. ಪಾಕಿಸ್ತಾನದ 10 ವಾಯುನೆಲೆಗಳ ಮೇಲೆ ಶುಕ್ರವಾರ ಭಾರತ ನಡೆಸಿದ ದಾಳಿಯು "ಮೇ 7 ರಂದು ನಡೆದ 'ಆಪರೇಷನ್ ಸಿಂದೂರ್' ಗಿಂತ ದೊಡ್ಡದಾಗಿದೆ" ಎಂದು ಭಾರತ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: ʻನಮ್ಮ ಯುದ್ದತಂತ್ರದ ನೈಪುಣ್ಯತೆʼ:ಪುಲ್ವಾಮಾ ದಾಳಿಯಲ್ಲಿ ನಮ್ಮ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ!
ಪಿಂಡಿ ವಾಯು ನೆಲೆ ಸೇರಿದಂತೆ ಹಲವು ಕಡೆ ಭಾರತ ಅತೀ ದೊಡ್ಡ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ದಾಳಿ ಮಾಡಲು ಬ್ರಹ್ಮೋಸ್ ಕ್ಷಿಪಣಿಗಳ ಬಳಕೆಯಾಗಿದೆ ಎಂದು ಭಾರತ ಹೇಳಿದೆ. 90 ನಿಮಿಷಗಳಲ್ಲಿ ಭಾರತವು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಶೋರ್ಕೋಟ್‌ನ ರಫೀಕಿ ವಾಯುನೆಲೆ, ಪಂಜಾಬ್‌ನ ಮುರಿಯದ್ ವಾಯುನೆಲೆ, ಸಿಂಧ್‌ನ ಸುಕ್ಕೂರ್ ವಾಯುನೆಲೆ, ಸಿಯಾಲ್‌ಕೋಟ್ ವಾಯುನೆಲೆ, ಪಸ್ರೂರ್ ವಾಯುನೆಲೆ, ಸರ್ಗೋಧಾ ವಾಯುನೆಲೆ, ಸ್ಕಾರ್ಡು ವಾಯುನೆಲೆ, ಕರಾಚಿ ಬಳಿಯ ಭೋಲಾರಿ ವಾಯುನೆಲೆ ಮತ್ತು ಜಕೋಬಾಬಾದ್ ವಾಯುನೆಲೆಯ ಮೇಲೆ ದಾಳಿ ಮಾಡಿತು. ಚುನಿಯನ್ ರಾಡಾರ್ ಸ್ಥಾಪನೆಯನ್ನು ಸಹ ಧ್ವಂಸ ಮಾಡಲಾಗಿದೆ.