ದೇಶೀಯ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಿದ ಬೆಂಗಳೂರು ಮಂದಿ - ಜನಪ್ರಿಯ ತಾಣಗಳ ಪಟ್ಟಿಯ ಮುಂಚೂಣಿಯಲ್ಲಿ ಗೋವಾ ಮತ್ತು ಊಟಿ
ನೇಷನ್ ಆನ್ ವೆಕೇಶನ್ ಅಭಿಯಾನವು ದೇಶದ ಪ್ರವಾಸ ಪ್ರಿಯರು ಅತಿ ಹೆಚ್ಚು ಕಾತರದಿಂದ ಕಾಯುವ ಬೇಸಿಗೆ ಪ್ರವಾಸದ ಮಾರಾಟ ಮೇಳಗಳಲ್ಲಿ ಒಂದಾಗಿದೆ. ಎಷ್ಟರ ಮಟ್ಟಿಗೆ ಎಂದರೆ ನೇಷನ್ ಆನ್ ವೆಕೇಷನ್ ಆರಂಭ ವಾದರೆ ಬೇಸಿಗೆ ಆರಂಭವಾದಂತೆ ಎಂದು ಎಷ್ಟೋ ಮಂದಿ ಭಾವಿಸಿದ್ದಾರೆ


ಬೆಂಗಳೂರು: ಫ್ಲಿಪ್‌ಕಾರ್ಟ್ ಅಧೀನದ ಕಂಪನಿಯಾದ ಕ್ಲಿಯರ್‌ಟ್ರಿಪ್, ತನ್ನ ನೇಷನ್ ಆನ್ ವೆಕೇಶನ್ ಪ್ರವಾಸ ಮಾರಾಟ ಮೇಳದ ಸಮಯದಲ್ಲಿ ಬೇಸಿಗೆ ಪ್ರವಾಸದಲ್ಲಿ ಗಮನಾರ್ಹ ಏರಿಕೆ ಆಗಿದೆ ಎಂದು ಘೋಷಿಸಿದ್ದು, ಅದರಲ್ಲೂ ಪ್ರವಾಸ ಹೋಗುವ ವಿಚಾರದಲ್ಲಿ ದೇಶೀಯವಾಗಿ ಬೆಂಗಳೂರು ಮುಂಚೂಣಿಯಲ್ಲಿರುವುದಾಗಿ ತಿಳಿಸಿದೆ.
ಪ್ರವಾಸ ವಿಶೇಷತೆಗಳು:
* ಒಟ್ಟು ದೇಶೀಯ ಪ್ರವಾಸ ಬುಕಿಂಗ್ ಗಳಲ್ಲಿ ಶೇ.12ರಷ್ಟು ಬುಕಿಂಗ್ ಬೆಂಗಳೂರಿನಿಂದ ಆಗಿದ್ದು, ಭಾರತದ ವಿವಿಧ ರಾಜ್ಯಗಳಿಗಿಂತ ಅತಿ ಹೆಚ್ಚಿನ ಪಾಲನ್ನು ಬೆಂಗಳೂರು ಪಡೆದಿದೆ.
* ಆದ್ಯತೆಯ ದೇಶೀಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗೋ ಇದೆ. ನಂತರದ ಸ್ಥಾನಗಳಲ್ಲಿ ಊಟಿ, ಲೋನಾವಾಲಾ ಮತ್ತು ಮನಾಲಿ ಸ್ಥಾನ ಪಡೆದಿವೆ,
* ಜಾರ್ಜಿಯಾ ಮತ್ತು ಅಜರ್‌ಬೈಜಾನ್‌ನಂತಹ ವಿಶಿಷ್ಟ ಅಂತರರಾಷ್ಟ್ರೀಯ ಸ್ಥಳಗಳ ಮೇಲೆ ಬೆಂಗಳೂರು ಪ್ರವಾಸಿಗರು ಜಾಸ್ತಿ ಆಕರ್ಷಣೆ ಹೊಂದಿದ್ದಾರೆ.
ಇದನ್ನೂ ಓದಿ: Bangalore News: ಸಾಯಿ ಬಾಬಾ ಪಾದುಕೆ ದರ್ಶನ ಪಡೆಯುತ್ತಿರುವ ಭಕ್ತರು
ನೇಷನ್ ಆನ್ ವೆಕೇಷನ್ ಅಭಿಯಾನದ ಯಶಸ್ಸಿನ ಕುರಿತು ಮಾತನಾಡಿರುವ ಕ್ಲಿಯರ್‌ಟ್ರಿಪ್‌ನ ಚೀಫ್ ಮಾರ್ಕೆಟಿಂಗ್ ಆಫೀಸರ್ ತವ್‌ಲೀನ್ ಭಾಟಿಯಾ ಅವರು, “ನೇಷನ್ ಆನ್ ವೆಕೇಶನ್ ಅಭಿಯಾನವು ದೇಶದ ಪ್ರವಾಸ ಪ್ರಿಯರು ಅತಿ ಹೆಚ್ಚು ಕಾತರದಿಂದ ಕಾಯುವ ಬೇಸಿಗೆ ಪ್ರವಾಸದ ಮಾರಾಟ ಮೇಳಗಳಲ್ಲಿ ಒಂದಾಗಿದೆ. ಎಷ್ಟರ ಮಟ್ಟಿಗೆ ಎಂದರೆ ನೇಷನ್ ಆನ್ ವೆಕೇಷನ್ ಆರಂಭ ವಾದರೆ ಬೇಸಿಗೆ ಆರಂಭವಾದಂತೆ ಎಂದು ಎಷ್ಟೋ ಮಂದಿ ಭಾವಿಸಿದ್ದಾರೆ.
ಈ ವರ್ಷ ದೊರೆತಿರುವ ಅದ್ಭುತ ಪ್ರತಿಕ್ರಿಯೆಯಿಂದ ನಾವು ಸಂತೋಷ ಹೊಂದಿದ್ದೇವೆ. ಉತ್ತಮ ಪ್ರಯೋಜನವನ್ನು ಒದಗಿಸಿ ಹೆಚ್ಚಿನ ಭಾರತೀಯರಿಗೆ ಬೇಸಿಗೆ ರಜೆಯನ್ನು ಆನಂದಿಸಲು ಸಹಾಯ ಮಾಡಿದ್ದಕ್ಕೆ ನಮಗೆ ಸಂತೋಷವಿದೆ. ಪ್ರವಾಸದ ಯೋಜನೆ ರೂಪಿಸುವಿಕೆ ಮತ್ತು ಬುಕಿಂಗ್ ಮಾಡು ವಿಕೆಯನ್ನು ಸರಳ, ಸ್ಮಾರ್ಟ್ ಮತ್ತು ಆನಂದದಾಯಕಗೊಳಿಸುವುದು ಕ್ಲಿಯರ್‌ಟ್ರಿಪ್ ನ ಗುರಿಯಾಗಿದೆ” ಎಂದರು.
ಬೆಂಗಳೂರಿನ ಜನರ ಪ್ರವಾಸದ ಆಯ್ಕೆಗಳಲ್ಲಿ ಸಾಂಪ್ರದಾಯಿಕ ಜನಪ್ರಿಯ ತಾಣಗಳು ಮತ್ತು ಹೊಸ ಅಡ್ವೆಂಚರ್ ತಾಣಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ.