ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಚೀನಾ ಯಾಕೆ ಯುದ್ಧದಲ್ಲಿ ಪಾಕಿಸ್ತಾನದ ಸಹಾಯಕ್ಕೆ ಬರಲಿಲ್ಲ?

Operation Sindoor: ದಶಕಗಳಿಂದಲೂ ಚೀನಾದ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ಸಹಾಯವನ್ನು ಪಾಕಿಸ್ತಾನ ಪಡೆಯುತ್ತ ಬಂದಿದೆ. ಈಗಲೂ ಈ ಕಾಳಗದ ಸಂದರ್ಭದಲ್ಲೂ ಚೀನಾದಿಂದ ಕೊಡಲ್ಪಟ್ಟ J-10C ಯುದ್ಧವಿಮಾನಗಳನ್ನು ಪಾಕಿಸ್ತಾನ, ಭಾರತದ ಫೈಟರ್‌ ಜೆಟ್‌ಗಳ ವಿರುದ್ಧ ಬಳಸಿದೆ. ಆದರೆ ಇದು ನಮಗೆ ಗೊತ್ತೇ ಇಲ್ಲ ಎಂದಿದೆ ಚೀನಾ.

ಚೀನಾ ಯಾಕೆ ಯುದ್ಧದಲ್ಲಿ ಪಾಕಿಸ್ತಾನದ ಸಹಾಯಕ್ಕೆ ಬರಲಿಲ್ಲ?

ಹರೀಶ್‌ ಕೇರ ಹರೀಶ್‌ ಕೇರ May 11, 2025 11:58 AM

ನವದೆಹಲಿ: ಭಾರತದ ಜೊತೆಗಿನ ಯುದ್ಧದಲ್ಲಿ ಚೀನಾ ತನ್ನ ಜೊತೆಗೆ ನಿಲ್ಲಬಹುದು ಎಂದು ಪಾಕಿಸ್ತಾನ ಭಾವಿಸಿತ್ತು. ಆದರೆ ಆ ಭ್ರಮೆ ನೆರೆರಾಷ್ಟ್ರಕ್ಕೆ ಬಹಳ ಬೇಗನೆ ಚದುರಿಹೋಯಿತು. "ಪಾಕ್‌ ಮೇಲಿನ ಭಾರತದ ಮಿಲಿಟರಿ ಕ್ರಮ ವಿಷಾದಕರ" "ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ" ಎಂಬ ಹೇಳಿಕೆ ಹೊರತುಪಡಿಸಿ ಪಾಕ್‌ಗೆ ಸಹಾಯ ಮಾಡುವ ವಿಶೇಷ ಕ್ರಮಗಳನ್ನೇನೂ ಚೀನಾ ಕೈಗೊಂಡಿಲ್ಲ. ಇದು ಪಾಕ್‌ಗೆ ಭ್ರಮನಿರಸನವೇ ಆಗಿದೆ.

ದಶಕಗಳಿಂದಲೂ ಚೀನಾದ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ಸಹಾಯವನ್ನು ಪಾಕಿಸ್ತಾನ ಪಡೆಯುತ್ತ ಬಂದಿದೆ. ಈಗಲೂ ಈ ಕಾಳಗದ ಸಂದರ್ಭದಲ್ಲೂ ಚೀನಾದಿಂದ ಕೊಡಲ್ಪಟ್ಟ J-10C ಯುದ್ಧವಿಮಾನಗಳನ್ನು ಪಾಕಿಸ್ತಾನ, ಭಾರತದ ಫೈಟರ್‌ ಜೆಟ್‌ಗಳ ವಿರುದ್ಧ ಬಳಸಿದೆ ಎಂದು ಸುದ್ದಿ ಇದೆ. ಆದರೆ "ಆ ಬಗ್ಗೆ ನಮಗೆ ಗೊತ್ತಿಲ್ಲ" ಎಂದು ಚೀನಾ ನುಣುಚಿಕೊಂಡಿದೆ. ಅಂದರೆ "ನಾವು ಈ ಯುದ್ಧದಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲʼ ಎಂದು ಹೇಳಿದಂತೆಯೇ.

ಹಾಗಾದರೆ ಚೀನಾ ಯಾಕೆ ಹೆಜ್ಜೆ ಮುಂದಿಡಲಿಲ್ಲ?

1) 2023ರಲ್ಲಿ ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರ $136 ಶತಕೋಟಿಗಿಂತ ಹೆಚ್ಚಿತ್ತು. ಗಾಲ್ವಾನ್‌ನಲ್ಲಿ ನಡೆದ ಘರ್ಷಣೆಗಳ ಹೊರತಾಗಿಯೂ, ಎರಡೂ ಕಡೆಯವರು ಆರ್ಥಿಕ ವ್ಯವಹಾರವನ್ನು ಚಾಲನೆಯಲ್ಲಿಟ್ಟಿದ್ದರು. ಇದು ವಾಸ್ತವಿಕವಾದ ಹಾಗೂ ಉಳಿವಿನ ಪ್ರಶ್ನೆ. ಚೀನಾ ತನ್ನ ಸಂಪೂರ್ಣ ಜಾಗತಿಕ ನಿಲುವನ್ನು ಆರ್ಥಿಕ ಪ್ರಾಬಲ್ಯದ ಮೇಲೆ ನಿರ್ಮಿಸಿದೆ. ಪಾಕಿಸ್ತಾನದಿಂದ ಆಗುವ ಯುದ್ಧಕ್ಕೆ ಸಹಾಯ ಮಾಡಿದರೆ ಚೀನಾದ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿ.

2) ಕೋವಿಡ್ ನಂತರ ಬೀಜಿಂಗ್ ಹೆಚ್ಚು ಹೆಚ್ಚು ಒಳಮುಖವಾಗಿ ನೋಡುತ್ತಿದೆ. ಆಂತರಿಕ ಭಿನ್ನಾಭಿಪ್ರಾಯವನ್ನು ಸ್ಥಿರಗೊಳಿಸುವುದು, ನಿಧಾನಗತಿಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ವ್ಯಾಪಾರದ ಮೂಲಕ ಶಕ್ತಿಯನ್ನು ವಿಸ್ತರಿಸುವುದರ ಮೇಲೆ ಗಮನವಿಟ್ಟಿದೆ. ಪಾಕಿಸ್ತಾನದಂತಹ ಅಸ್ಥಿರ ಮತ್ತು ರಾಜತಾಂತ್ರಿಕವಾಗಿ ದುರ್ಬಲ ಗಿರಾಕಿ ಪರವಾಗಿ ಮಿಲಿಟರಿ ಸಾಹಸಕ್ಕಿಳಿದರೆ ಕಾಲು ಮೇಲೆ ಕಲ್ಲು ಹಾಕಿಕೊಂಡಂತೆ. ಅದು ಎರಡೂ ದೇಶಗಳಲ್ಲಿನ ತನ್ನ ಹೂಡಿಕೆಗಳನ್ನು ಸುರಕ್ಷಿತವಾಗಿಡಲು ಬಯಸುತ್ತದೆ.

3) ಈ ನಡುವೆ ರಷ್ಯಾ, ಭಾರತದೊಂದಿಗೆ ಈಗಲೂ, ಐತಿಹಾಸಿಕವಾಗಿಯೂ ಉತ್ತಮ ಸಂಬಂಧವನ್ನು ಹೊಂದಿದೆ. ಈ ಸಂಬಂಧ ರಕ್ಷಣಾತ್ಮಕವಾಗಿಯೂ ಮಹತ್ವದ್ದು ಎಂದು ಚೀನಾಗೆ ಗೊತ್ತಾಗಿದೆ. ಎಸ್ -400 ವ್ಯವಸ್ಥೆಗಳಿಂದ ಹಿಡಿದು ನೌಕಾ ಸಹಕಾರ ಮತ್ತು ಬ್ರಹ್ಮೋಸ್‌ವರೆಗೆ, ರಷ್ಯಾ ಭಾರತದ ಯುದ್ಧ ಹೋರಾಟದ ಸಾಮರ್ಥ್ಯಕ್ಕೆ ನೇರವಾಗಿ ಕೊಡುಗೆ ನೀಡಿದೆ. ಈಗ ಬೀಜಿಂಗ್‌ ಕೂಡ ಮಾಸ್ಕೋಗೆ ಹತ್ತಿರವಾಗುತ್ತಿದೆ. ಚೀನಾದ ಕೈಯನ್ನು ರಷ್ಯಾ ಕಟ್ಟಿಹಾಕಬಹುದು.

4) ಪಾಕ್‌ ಮುಳುಗುತ್ತಿರುವ ಹಡಗು ಎಂದು ಚೀನಾಗೆ ತಿಳಿದಿದೆ. ಹಣದುಬ್ಬರ ಶೇಕಡಾ 40 ದಾಟಿದೆ. ರೂಪಾಯಿ ಕುಸಿತ ಮತ್ತು ಐಎಂಎಫ್ ನಿಯಂತ್ರಣ ಹಿಂದೆಂದಿಗಿಂತಲೂ ಬಿಗಿಯಾಗಿದೆ. ಪಾಕಿಸ್ತಾನದ ಮಿಲಿಟರಿ ಸನ್ನದ್ಧತೆ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ. ಇಂಧನವನ್ನು ಪಡಿತರ ರೂಪದಲ್ಲಿ ನೀಡಲಾಗುತ್ತದೆ. ಬಿಡಿಭಾಗಗಳ ಕೊರತೆಯಿದೆ ಮತ್ತು ಗಡಿ ಹೊರಠಾಣೆಗಳು ಸಹ ವಿದ್ಯುತ್ ಕಡಿತಗೊಳಿಸಿವೆ. ಈ ಸನ್ನಿವೇಶದಲ್ಲಿ, ವಿಶೇಷವಾಗಿ ಮರುಚುನಾವಣೆ ಬಯಸುತ್ತಿರುವ ಸರ್ಕಾರದ ವೇಳೆ, ಮಿಲಿಟರಿ ಪ್ರತಿಕ್ರಿಯೆಯನ್ನು ಪ್ರಚೋದಿಸುವುದು ಮೂರ್ಖತನವಾಗಿ ಕಂಡಿದೆ.

5) ಯುದ್ಧದ ಸಮಯದಲ್ಲಿ ಚೀನಾಗೆ ಪಾಕಿಸ್ತಾನ ಶಸ್ತ್ರ ನೀಡಲು ಪ್ರಯತ್ನಿಸಿದರೆ, ಭಾರತ ಅದರ ಪೂರೈಕೆ ಸರಪಳಿಗೆ ತಡೆ ಹಾಕಲಿದೆ. ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಪ್ರಾಬಲ್ಯವಿದೆ. ಅದು ಚೀನಾದ CPEC ಜೀವನಾಡಿಗಳು ಮತ್ತು ಸಮುದ್ರ ಮಾರ್ಗಗಳನ್ನು ಉಸಿರುಗಟ್ಟಿಸಬಹುದು. ಐಎನ್‌ಎಸ್ ವಿಕ್ರಾಂತ್, ಜಲಾಂತರ್ಗಾಮಿ ನೌಕಾಪಡೆಗಳು ಮಲಕ್ಕಾ ಜಲಸಂಧಿ ಮತ್ತು ಅಡೆನ್ ಕೊಲ್ಲಿಯಂತಹ ಚೋಕ್‌ಪಾಯಿಂಟ್‌ಗಳನ್ನು ಚೀನಾಕ್ಕಿಂತ ಹೆಚ್ಚು ನಿಯಂತ್ರಿಸುತ್ತದೆ. ಬೀಜಿಂಗ್‌ಗೆ ಇದು ಲೈಫ್‌ಲೈನ್.‌

6) ತಾನು ಚೀನಾದ ತಾಳಕ್ಕೆ ಕುಣಿಯಲಾರೆ ಎಂದು ಭಾರತ ಈ ಮೊದಲೇ ಸ್ಪಷ್ಟಪಡಿಸಿದೆ. ಗಲ್ವಾನ್‌ ಘರ್ಷಣೆ ವೇಳೆ ಇದು ಗೊತ್ತಾಗಿದೆ. ಪೂರ್ಣ ಪ್ರಮಾಣದ ಯುದ್ಧಕ್ಕೆ ತಿರುಗದೆ ವಾಸ್ತವಿಕ ನಿಯಂತ್ರಣ ರೇಖೆಯನ್ನು (LAC) ಹಿಡಿದಿಟ್ಟುಕೊಳ್ಳಬಹುದು ಎಂದು ಭಾರತ ಸಾಬೀತುಪಡಿಸಿದೆ. ಗಾಲ್ವಾನ್‌ನಲ್ಲಿ, "ನೀವು ಘರ್ಷಣೆಗೆ ಪ್ರಯತ್ನಿಸಿದರೆ ನಾವು ಪ್ರತಿಕ್ರಿಯಿಸುತ್ತೇವೆ, ಆದರೆ ನಾವು ನಂತರ ಮುಗಿಸಬಹುದಾದದ್ದನ್ನು ಪ್ರಾರಂಭಿಸುವುದಿಲ್ಲ." ಎಂದಿದೆ ಭಾರತ.

ಇದನ್ನೂ ಓದಿ: Operation Sindoor: ನಾಲ್ಕು ದಿನಗಳಲ್ಲಿ ಆಪರೇಶನ್‌ ಸಿಂದೂರ್‌ ಪಾಕ್‌ಗೆ ಮಾಡಿದ ಹಾನಿ ಎಷ್ಟು?