ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ನ್ಯೂಕ್ಲಿಯರ್‌ ದಾಳಿ ಬೆದರಿಕೆಗೆ ಭಾರತ ಹೆದರಲ್ಲ; ಪಾಕಿಸ್ತಾನವನ್ನು ಉಗ್ರ ಪೋಷಕ ಎಂದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಮಾಡಿದ ಭಾಷಣದಲ್ಲಿ ಪಾಕಿಸ್ತಾನದ ವಿರುದ್ದ ನೇರಾ ನೇರಾ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕ ಪೋಷಕ ರಾಷ್ಟ್ರ ಎಂದು ಕರೆದ ಅವರು, ಭಯೋತ್ಪಾದಕತೆಯೇ ನಿಮಗೆ ಮುಳುವಾಗಲಿದೆ ಎಂದು ಹೇಳಿದ್ದಾರೆ.

ನ್ಯೂಕ್ಲಿಯರ್‌ ದಾಳಿ ಬೆದರಿಕೆಗೆ ಭಾರತ ಹೆದರಲ್ಲ; ಪ್ರಧಾನಿ ಮೋದಿ

Profile Vishakha Bhat May 12, 2025 9:37 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ರಾತ್ರಿ ಮಾಡಿದ ಭಾಷಣದಲ್ಲಿ ಪಾಕಿಸ್ತಾನದ ವಿರುದ್ದ ನೇರಾ ನೇರಾ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕ ಪೋಷಕ (Operation Sindoor) ರಾಷ್ಟ್ರ ಎಂದು ಕರೆದ ಅವರು, ಭಯೋತ್ಪಾದಕತೆಯೇ ನಿಮಗೆ ಮುಳುವಾಗಲಿದೆ ಎಂದು ಹೇಳಿದ್ದಾರೆ. ಮೇ 7 ರಂದು ಭಾರತ ದಾಳಿ ಮಾಡಿದ ಎರಡು ತಾಣಗಳಾದ ಬಹಾವಲ್ಪುರ್ ಮತ್ತು ಮುರ್ಡಿಕೆಗಳನ್ನು "ಭಯೋತ್ಪಾದನೆಯ ಜಾಗತಿಕ ವಿಶ್ವವಿದ್ಯಾಲಯಗಳು ಎಂದು ಮೋದಿ ಕರೆದರು. ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತದ ಜೊತೆ ಕೈ ಜೋಡಿಸುವ ಬದಲು ಪಾಕಿಸ್ತಾನ ನಮ್ಮೊಂದಿಗೆ ಯುದ್ಧಕ್ಕಿಳಿದಿದೆ ಎಂದು ಅವರು ಹೇಳಿದ್ದಾರೆ.

ಭಾರತ ಪಾಕಿಸ್ತಾನದ ಸಂಘರ್ಷದ ಕುರಿತು ಮಾತನಾಡಿ, ಪಾಕಿಸ್ತಾನ ಭಾರತಕ್ಕೆ ಪರಮಾಣು ಬಾಂಬ್‌ಗಳ ಬೆದರಿಕೆ ಹಾಕುತ್ತಿದೆ. ಇದಕ್ಕೆಲ್ಲಾ ಭಾರತ ಬಗ್ಗುವುದಿಲ್ಲ. ಆಪರೇಷನ್‌ ಸಿಂದೂರ್‌ ನಿಂತಿಲ್ಲ. ಕೇವಲ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉಗ್ರರ ದಾಳಿಗೆ ಯುದ್ಧದ ಮೂಲಕವೇ ಉತ್ತರಿಸಲಾಗುತ್ತದೆ. ಭಯೋತ್ಪಾದನೆ ಸಹಿಸುವ ಮಾತೇ ಇಲ್ಲ. ಉಗ್ರರನ್ನು ಅನ್ನ ಆಹಾರ, ಆಶ್ರಯ ನೀಡಿ ಉಗ್ರರನ್ನು ಪೋಷಣೆ ನೀಡುತ್ತಿರುವ ಪಾಕಿಸ್ತಾನ ಒಂದು ದಿನ ಭಯೋತ್ಪಾದನೆಯಿಂದಲೇ ಸರ್ವನಾಶ ಆಗುತ್ತದೆ ಎಂದು ಹೇಳಿದ್ದಾರೆ.

ಬಹಾವಲ್ಪುರ್ ಮತ್ತು ಮುರಿಡ್ಕೆ ಜಾಗತಿಕ ಭಯೋತ್ಪಾದಕ ವಿಶ್ವವಿದ್ಯಾಲಯಗಳಾಗಿ ಮಾರ್ಪಟ್ಟಿದ್ದವು. ಲಂಡನ್ ಟ್ಯೂಬ್ ಬಾಂಬ್ ದಾಳಿಗಳು ಮತ್ತು ಕಳೆದ ದಶಕದಲ್ಲಿ ಭಾರತದ ನೆಲದಲ್ಲಿ ನಡೆದ ಪ್ರತಿಯೊಂದು ದಾಳಿಯನ್ನು ಇದೇ ಭಯೋತ್ಪಾದಕ ಸಂಘಟನೆಗಳು ಹೊತ್ತುಕೊಂಡಿದೆ. ಭಯೋತ್ಪಾದಕತೆ ಹಾಗೂ ವ್ಯಾಪಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದಕ ನೆಲದಲ್ಲಿ ನಮ್ಮ ನೀರು ಹರಿಯಲ್ಲಿ ಬಿಡುವುದಿಲ್ಲ ಎಂದು ಹೇಳುವ ಮೂಲಕ ಸಿಂಧೂ ನದಿ ನೀರಿನ ಹಂಚಿಕೆಯ ರದ್ದು ಇನ್ನೂ ಮುಂದುವರಿಯಲಿದೆ ಎಂದು ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್‌ನಲ್ಲಿ ಪ್ರತಿಧ್ವನಿಸಿದ ಶಿವ ತಾಂಡವ್ ಸ್ತೋತ್ರ ; ವಿಡಿಯೋ ನೋಡಿ

ಮೇ 7 ರಂದು ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತ್ತು. ಲಷ್ಕ್‌, ಜೈಶ್‌ ಉಗ್ರರು ಸೇರಿದಂತೆ ಈ ಕಾರ್ಯಾಚರಣೆಯಲ್ಲಿ ಪ್ರಮುಖವಾದ ಉಗ್ರ ಸಂಘಟನೆಗಳ 100 ಕ್ಕೂ ಅಧಿಕ ಉಗ್ರರು ಈ ಕಾರ್ಯಾಚರಣೆಯಲ್ಲಿ ಹತರಾಗಿದ್ದರು.