ಸಶಸ್ತ್ರ ಪಡೆಗಳು ಮತ್ತು ರಾಷ್ಟ್ರದೊಂದಿಗೆ ಒಗ್ಗಟ್ಟಾಗಿ ನಿಲ್ಲುವಂತೆ 14 ಲಕ್ಷಕ್ಕೂ ಹೆಚ್ಚು ಸದಸ್ಯರು ಮತ್ತು ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಕರೆ ನೀಡಿದ ಐಸಿಎಐ (ICAI)
ಭಾರತದಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಯ ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ 1949ರ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯ್ದೆಯಡಿಯಲ್ಲಿ ಸಂಸತ್ತಿನ ಕಾಯ್ದೆಯಿಂದ ಸ್ಥಾಪಿಸಲ್ಪಟ್ಟ ವಿಶ್ವದ ಅತಿ ದೊಡ್ಡ ಲೆಕ್ಕಪತ್ರ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI), ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಇತ್ತೀಚೆಗೆ ಸರ್ಕಾರ ಮತ್ತು ಭಾರತೀಯ ಸೇನೆಯು ತೆಗೆದುಕೊಂಡ ಕ್ರಮ ಗಳಿಗೆ ತನ್ನ ಬೆಂಬಲ ನೀಡಿದೆ.


ಭಾರತದಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಯ ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ 1949ರ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯ್ದೆಯಡಿಯಲ್ಲಿ ಸಂಸತ್ತಿನ ಕಾಯ್ದೆಯಿಂದ ಸ್ಥಾಪಿಸಲ್ಪಟ್ಟ ವಿಶ್ವದ ಅತಿ ದೊಡ್ಡ ಲೆಕ್ಕಪತ್ರ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI), ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಇತ್ತೀಚೆಗೆ ಸರ್ಕಾರ ಮತ್ತು ಭಾರತೀಯ ಸೇನೆಯು ತೆಗೆದುಕೊಂಡ ಕ್ರಮ ಗಳಿಗೆ ತನ್ನ ಬೆಂಬಲ ನೀಡಿದೆ.
5 ಪ್ರಾದೇಶಿಕ ಮಂಡಳಿಗಳು, ಭಾರತದಲ್ಲಿ 177 ಶಾಖೆಗಳು ಹಾಗೂ 47 ದೇಶಗಳಲ್ಲಿ 52 ಸಾಗರೋತ್ತರ ಚಾಪ್ಟರ್‌ಗಳು ಮತ್ತು 33 ಪ್ರತಿನಿಧಿ ಕಚೇರಿಗಳಲ್ಲಿ 40,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವು ದರ ಜೊತೆಗೆ 1.4 ಮಿಲಿಯನ್‌ಗಿಂತಲೂ ಹೆಚ್ಚು ಸದಸ್ಯರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಿ ರುವ ವಿಶಾಲವಾದ ಜಾಲದೊಂದಿಗೆ ICAI ಮಾನವೀಯ ಪ್ರಯತ್ನಗಳಲ್ಲಿ ಗಮನಾರ್ಹವಾದ ಪರಿಣಾಮ ಬೀರುವುದರಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಈ ಉದ್ವಿಗ್ನತೆಯ ಸಮಯದಲ್ಲಿ, ರಾಷ್ಟ್ರೀಯ ಒಗ್ಗಟ್ಟಿಗೆ ತನ್ನ ದೃಢವಾದ ಬದ್ಧತೆಯನ್ನು ಸಂಸ್ಥೆಯು ಪುನರುಚ್ಚರಿಸುತ್ತದೆ ಮತ್ತು ದೇಶ ಹಾಗೂ ತನ್ನ ಜನರನ್ನು ಬೆಂಬಲಿಸಲು ಸಿದ್ಧವಾಗಿದೆ.
ಭಾರತ-ಪಾಕಿಸ್ತಾನ ಗಡಿಯ ಬಳಿ ಇರುವ 13 ಕ್ಕೂ ಹೆಚ್ಚು ಶಾಖೆಗಳು ಸೇರಿದಂತೆ ಭಾರತದಲ್ಲಿ ಸುಮಾರು 17,000 ಪಿನ್ ಕೋಡ್‌ಗಳಲ್ಲಿ ICAI ವ್ಯಾಪಕ ಉಪಸ್ಥಿತಿಯನ್ನು ಹೊಂದಿದೆ. ಈ ಗಡಿ ಪ್ರದೇಶಗಳಲ್ಲಿನ ಚಾರ್ಟರ್ಡ್ ಅಕೌಂಟೆಂಟ್‌ಗಳು ಸಾಂಕೇತಿಕ ಬೆಂಬಲವನ್ನು ಮೀರಿ ತಮ್ಮ ಸಮಯ, ಪರಿಣತಿ ಮತ್ತು ಸಂಪನ್ಮೂಲಗಳನ್ನು ಬಳಸುತ್ತ ಸಕ್ರಿಯವಾಗಿ ಸ್ವಯಂಸೇವಕರಾಗಿ ಸೇವೆಯನ್ನು ನೀಡುವ ಮೂಲಕ ಸ್ಥಳೀಯ ಸಮುದಾಯಗಳು ಮತ್ತು ಅಧಿಕಾರಿಗಳಿಗೆ ಅಗತ್ಯವಿರುವ ಕಡೆ ಸಹಾಯ ಮಾಡಲು ಸಜ್ಜಾಗಿದ್ದಾರೆ. ICAI ನಲ್ಲಿನ ಬಲಿಷ್ಠ ಸ್ಥಳೀಯ ಜಾಲಗಳ ಮೂಲಕ ಇದರ ಸದಸ್ಯರು ಮತ್ತು ವಿದ್ಯಾರ್ಥಿ ಸ್ವಯಂಸೇವಕರು ಅಗತ್ಯವಿರುವವರಿಗೆ ಸಕಾಲಿಕ ಮತ್ತು ಪರಿಣಾಮ ಕಾರಿ ಸಹಾಯವನ್ನು ತಲುಪಿಸಲು ಸರ್ಕಾರಿ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು (NGOಗಳು) ಮತ್ತು ಪರಿಹಾರ ಸಂಸ್ಥೆಗಳೊಂದಿಗೆ ಸಹಕರಿಸಬಹುದು.
ಇದನ್ನೂ ಓದಿ: Grater Bangalore: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್
ICAI ಸ್ವಯಂಸೇವಕರು ಪರಿಹಾರ ಪ್ರಯತ್ನಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ – ಸ್ಥಳಾಂತರಿಸು ವಿಕೆ, ಸ್ಥಳಾಂತರಗೊಂಡ ನಾಗರಿಕರಿಗೆ ಆಶ್ರಯ ಶಿಬಿರಗಳನ್ನು ಸ್ಥಾಪಿಸುವುದು, ಆಂಬ್ಯುಲೆನ್ಸ್ ಸೇವೆಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಅಗತ್ಯ ಔಷಧಿಗಳನ್ನು ವಿತರಿಸುವಂತಹ ಕೆಲಸ ಗಳನ್ನು ನಿರ್ವಹಿಸುವುದರ ಮೂಲಕ ಪ್ರಮುಖ ಪಾತ್ರವನ್ನು ವಹಿಸಬಹುದು. ಅವರು ರಕ್ತದಾನ ಶಿಬಿರಗಳು ಮತ್ತು ಇತರ ನಿರ್ಣಾಯಕ ನೆರವಿನ ಸೇವೆಗಳನ್ನು ಸಹ ಆಯೋಜಿಸಬಹುದು, ಇದಲ್ಲದೆ, ICAI ಫ್ರೆಟರ್ನಿಟಿ ಜಾಗರೂಕರಾಗಿರಬೇಕು ಮತ್ತು ಯಾವುದೇ ಅನುಮಾನಾಸ್ಪದ ಅಥವಾ ರಾಷ್ಟ್ರ ವಿರೋಧಿ ಚಟುವಟಿಕೆಗಳು ಕಂಡುಬಂದಲ್ಲಿ, ಅದನ್ನು ವರದಿ ಮಾಡಬೇಕು ಮತ್ತು ಈ ನಿರ್ಣಾಯಕ ಸಮಯದಲ್ಲಿ ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸಲು ಸಿದ್ಧರಾಗಿರಬೇಕು ಎಂದು ಕೋರಲಾಗಿದೆ.
ICAI ಅಧ್ಯಕ್ಷರಾದ CA. ಚರಣ್‌ಜೋತ್ ಸಿಂಗ್ ನಂದಾ ಅವರು, ಭಾರತೀಯ ಸಶಸ್ತ್ರ ಪಡೆಗಳ ವೀರೋಚಿತ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ದೇಶಾದ್ಯಂತದ ಇಡೀ CA ಫ್ರೆಟರ್ನಿಟಿಗೆ ನಮ್ಮ ಸಶಸ್ತ್ರ ಪಡೆಗಳೊಂದಿಗೆ ನಿಲ್ಲಲು ಸ್ಪಷ್ಟವಾದ ಕರೆಯನ್ನು ನೀಡಿದರು ಹಾಗೂ ICAI ನ 14 ಲಕ್ಷಕ್ಕೂ ಹೆಚ್ಚು ಆರ್ಥಿಕ ಸೈನಿಕರು ಕೇವಲ ಮಾತಿನಲ್ಲಿ ಮಾತ್ರವಲ್ಲ, ಅರ್ಥಪೂರ್ಣ ಕಾರ್ಯ ನಿರ್ವಹಣೆಗೂ ಬದ್ಧರಾಗಿದ್ದಾರೆ ಎಂದು ಒತ್ತಿ ಹೇಳಿದರು.
CA ಫ್ರೆಟರ್ನಿಟಿಯನ್ನುದ್ದೇಶಿಸಿ ಮಾತನಾಡಿದ ಅವರು, “ICAI ನಮ್ಮ ಸೈನಿಕರ ಧೈರ್ಯ ಮತ್ತು ದೃಢಸಂಕಲ್ಪಕ್ಕೆ ವಂದಿಸುತ್ತದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಜೀವಗಳ ದುರಂತ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವಲ್ಲಿ ಅವರು ತೋರಿರುವ ಶೌರ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ಆಪರೇಷನ್ ʼಸಿಂಧೂರ್ʼ ಕಾರ್ಯಾಚರಣೆಯು ನವ ಭಾರತದಿಂದ ಬಂದ ಪ್ರಬಲ ಸಂದೇಶವಾಗಿದ್ದು, ಭಾರತದ ಸಾರ್ವಭೌಮತ್ವವನ್ನು ರಕ್ಷಿಸುವ ವಿಷಯದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಎಂಬುದನ್ನು ಇದು ಪ್ರತಿಪಾದಿಸುತ್ತದೆ. ICAI ಯಾವಾಗಲೂ ʼರಾಷ್ಟ್ರ ಮೊದಲುʼ ಎಂಬ ತತ್ವದ ಜೊತೆಗೆ ಬದುಕಿದೆ. ನಮ್ಮ ದೇಶವನ್ನು ಅಲುಗಾಡಿ ಸಿದ ಪ್ರತಿಯೊಂದು ಬಿರುಗಾಳಿಯಲ್ಲೂ, ನಾವು ನಮ್ಮ ಮಾತೃಭೂಮಿಗೆ ಆಧಾರ ಸ್ತಂಭದಂತೆ ಗಟ್ಟಿಯಾಗಿ ನಿಂತಿದ್ದೇವೆ,” ಎಂದು ಹೇಳಿದರು.
ಎಲ್ಲಾ ICAI ಸದಸ್ಯರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭಕ್ಕೆ ತಕ್ಕಂತೆ ಎದ್ದು ನಿಲ್ಲಬೇಕು, ಜಾಗರೂ ಕರಾಗಿರಬೇಕು ಮತ್ತು ರಾಷ್ಟ್ರದ ಸಮಗ್ರತೆ ಮತ್ತು ಭದ್ರತೆಯನ್ನು ರಕ್ಷಿಸುವ ಮೂಲಕ ಸೇವೆಯ ಅತ್ಯುನ್ನತ ಆದರ್ಶಗಳನ್ನು ಎತ್ತಿ ಹಿಡಿಯಬೇಕೆಂದು ಅಧ್ಯಕ್ಷರು ಒತ್ತಾಯಿಸಿದರು.
“ಈ ನಿರ್ಣಾಯಕ ಸಮಯದಲ್ಲಿ ನಾವು ಒಗ್ಗಟ್ಟಾಗಿ ಇರೋಣ. CA ಫ್ರೆಟರ್ನಿಟಿಯು ಮಾದರಿಯಾಗಿ ಮುನ್ನಡೆಯಲಿ ಮತ್ತು ನಾವು ಆರ್ಥಿಕ ಮೇಲ್ವಿಚಾರಕರು ಮಾತ್ರವಲ್ಲ, ನಮ್ಮ ರಾಷ್ಟ್ರದ ಶಕ್ತಿ, ಸಹಾನುಭೂತಿ ಮತ್ತು ಪುನಶ್ಚೈತನ್ಯಶಕ್ತಿಯ ಆಧಾರಸ್ತಂಭಗಳಾಗಿದ್ದೇವೆ ಎಂಬುದನ್ನು ಸಾಬೀತು ಪಡಿಸಲಿ” ಎಂದು ಅವರು ಹೇಳಿದರು.
“ನಾವು ನಮ್ಮ ತಾಯ್ನಾಡಿನ ಆರ್ಥಿಕ ಸೈನಿಕರು. ರಾಷ್ಟ್ರೀಯ ಅಗತ್ಯದ ಪ್ರತಿ ಗಂಟೆಯಲ್ಲೂ, ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ನಾವು ಸಿದ್ಧರಿದ್ದೇವೆ” ಎಂದು ICAI ಉಪಾಧ್ಯಕ್ಷರಾದ CA. ಪ್ರಸನ್ನ ಕುಮಾರ್ ಡಿ ಅವರು ಹೇಳಿದರು.
ರಾಷ್ಟ್ರೀಯ ಕಾರ್ಯಗಳಿಗೆ ಕೊಡುಗೆಯನ್ನು ನೀಡುವ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ನಾಗರಿಕ ರನ್ನು ಬೆಂಬಲಿಸುವ ಪರಂಪರೆಯನ್ನು ICAI ಹೊಂದಿದೆ. 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ, ICAI ಸದಸ್ಯರು ಹುತಾತ್ಮರ ಕುಟುಂಬಗಳಿಗೆ ಉಚಿತ ಸೇವೆಗಳನ್ನು ಒದಗಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ಕರಾಳ ದಿನಗಳಲ್ಲಿ, ICAI ದು:ಖದಲ್ಲಿರುವ ಕುಟುಂಬಗಳಿಗೆ ಬೆಂಬಲ ನೀಡಿತು, ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿತು ಮತ್ತು ಅವರ ಕನಸುಗಳನ್ನು ಜೀವಂತವಾಗಿರಿಸಲು, ಶುಲ್ಕವನ್ನು ಮನ್ನಾ ಮಾಡಿತು. ಸಂಸ್ಥೆಯ ಸದಸ್ಯರು ನಮ್ಮ ಸದಸ್ಯರ ಜೊತೆಗೆ ಸಾರ್ವಜನಿಕರಿಗೂ ಆಹಾರ ಅಭಿಯಾನಗಳು, ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರಗಳು ಮತ್ತು ಲಸಿಕೆ ಶಿಬಿರಗಳನ್ನು ಸಹ ಆಯೋಜಿಸಿದರು.
ನಮ್ಮ ಪ್ರಾದೇಶಿಕ ಮಂಡಳಿಗಳು, ಶಾಖೆಗಳು, ಸಾಗರೋತ್ತರ ಚಾಪ್ಟರ್‌ಗಳು, ಅಧ್ಯಯನ ವಲಯ ಗಳು ಮತ್ತು ಅಧ್ಯಯನ ಚಾಪ್ಟರ್‌ಗಳ ಮೂಲಕ, ICAI ನ ವಿಶೇಷ COVID ಕಾರ್ಯಪಡೆಗಳು ಆಮ್ಲ ಜನಕ ಸಿಲಿಂಡರ್‌ಗಳು ಮತ್ತು ಕಾನ್ಸೆಂಟ್ರೇಟರ್ಸ್‌ಗಳು, ಆಸ್ಪತ್ರೆ ಹಾಸಿಗೆಗಳು, ಔಷಧಿಗಳು, ಆಂಬ್ಯು ಲೆನ್ಸ್‌ಗಳು ಮತ್ತು ಊಟದ ವ್ಯವಸ್ಥೆ ಮಾಡುವುದು ಸೇರಿದಂತೆ ನಿರ್ಣಾಯಕ ಸಹಾಯವನ್ನು ಒದಗಿಸಿತು. ಹಲವಾರು ಶಾಖೆಗಳು ಆಸ್ಪತ್ರೆಗಳಿಗೆ ಪ್ರಮುಖ ಸಾಮಗ್ರಿಗಳನ್ನು ದಾನ ಮಾಡು ವುದರೊಂದಿಗೆ ಸ್ಥಳೀಯ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚು ಅಗತ್ಯವಿದ್ದಾಗ ಬಲಪಡಿಸಿತು.
ಈ ಕೊಡುಗೆಗಳು ಕೇವಲ ಅಂಕಿಅಂಶಗಳಲ್ಲ, ಇವು ನಮ್ಮ ಭಾರತಮಾತೆಗೆ ICAI ಫ್ರೆಟೆರ್ನಿಟಿಯು ನೀಡಿರುವ ಸಹಾನುಭೂತಿಯ ಹೆಜ್ಜೆಗುರುತುಗಳಾಗಿವೆ. ರಾಷ್ಟ್ರ ನಿರ್ಮಾಣದಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ, ICAI ಸಶಸ್ತ್ರ ಪಡೆಗಳು, ಪ್ರಧಾನ ಮಂತ್ರಿಗಳು ಮತ್ತು ಭಾರತದ ನಾಗರಿಕರನ್ನು ಬೆಂಬಲಿಸಲು ಬದ್ಧವಾಗಿದೆ. ಸಂಸ್ಥೆಯು ಹಣಕಾಸು ವೃತ್ತಿಪರರನ್ನು ತಮ್ಮ ವೃತ್ತಿಯನ್ನು ಮೀರಿ ದೇಶಭಕ್ತಿ, ಸಹಾನುಭೂತಿ ಮತ್ತು ರಾಷ್ಟ್ರಕ್ಕಾಗಿ ಅಚಲ ಕರ್ತವ್ಯದೊಂದಿಗೆ ದೇಶವನ್ನು ಮುನ್ನಡೆಸು ವುದಕ್ಕಾಗಿ ಪ್ರೇರೇಪಿಸುವುದನ್ನು ಮುಂದುವರೆಸಿದೆ.