ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಉಗ್ರರ ದಾಳಿಯ ನಡುವೆಯೇ ಭಯೋತ್ಪಾದಕರ ಫೋಟೋ ಕ್ಲಿಕ್ಕಿಸಿದ ಮಹಿಳೆ

ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಪಹಲ್ಗಾಮ್​ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಉಗ್ರರು ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ದಾಳಿಯ ನಡುವೆಯೇ ಮಹಿಳೆಯೊಬ್ಬರು ಉಗ್ರನ ಫೋಟೊವನ್ನು ಕ್ಲಿಕ್ಕಿಸಿದ್ದಾರೆ

ಪಹಲ್ಗಾಮ್​ನಲ್ಲಿ ಭಯೋತ್ಪಾದಕರ ಫೋಟೋ ಕ್ಲಿಕ್ಕಿಸಿದ ಮಹಿಳೆ

Profile Vishakha Bhat Apr 25, 2025 7:08 PM

ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಪಹಲ್ಗಾಮ್​ನಲ್ಲಿ (Pahalgam Terror Attack) ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಉಗ್ರರು ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ದಾಳಿಯ ನಡುವೆಯೇ ಮಹಿಳೆಯೊಬ್ಬರು ಉಗ್ರನ ಫೋಟೊವನ್ನು ಕ್ಲಿಕ್ಕಿಸಿದ್ದಾರೆ ಎಂದು ತಿಳಿದು ಬಂದಿದೆ. 54 ವರ್ಷದ ಜೆನ್ನಿಫರ್ ನಥಾನಿಯಲ್ ದಾಳಿಯಲ್ಲಿ ತನ್ನ ಪತಿ ಸುಶೀಲ್ ನಥಾನಿಯಲ್ ಅವರನ್ನು ಕಳೆದುಕೊಂಡಿದ್ದಾರೆ. ಅವರು ಇಂದೋರ್‌ನ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಅಲಿರಾಜ್‌ಪುರದ ನಿವಾಸಿಯಾಗಿದ್ದಾರೆ.

ಘಟನೆ ಕುರಿತು ಮಾತನಾಡಿದ ಮಹಿಳೆ ನಮಗೆ ಉಗ್ರ ಪದೇ ಪದೇ ಕುರಾನ್ ಬಗ್ಗೆ ಮಾತನಾಡುತ್ತಿದ್ದ, ರಿಜಿಸ್ಟರ್ ಮಾಡದೇ ಅಮರನಾಥ್​ ಯಾತ್ರೆಗೆ ಬನ್ನಿ ಎಂದು ಹೇಳಿದ್ದ. ನಿಮ್ಮೊಂದಿಗೆ ಹಿಂದೂಗಳು ಎಷ್ಟು ಮಂದಿ ಬಂದಿದ್ದಾರೆ ಎಂದು ಕೂಡ ಆತ ಕೇಳಿದ್ದ.ತಾನು ಕುರಾನ್ ಟೀಚರ್ ಎಂದು ಪರಿಚಯಿಸಿಕೊಂಡಿದ್ದ. ನಮ್ಮ ಜತೆ ಬಂದವರೆಲ್ಲಾ ಮುಸ್ಲಿಮರು ಎಂದು ಉಗ್ರನ ಬಳಿ ಸುಳ್ಳು ಹೇಳಿದ್ದಾಗಿ ಮಹಿಳೆ ಹೇಳಿದ್ದಾಳೆ.

ನನ್ನ ಗಂಡನಿಗೆ ಗುಂಡು ಹಾರಿಸುವ ಮೊದಲು ಭಯೋತ್ಪಾದಕರು 'ಕಲ್ಮಾ' ಪಠಿಸಲು ಹೇಳಿದರು. ಅದಕ್ಕೆ ನನ್ನ ಗಂಡ ನಾವು ಕ್ರಿಶ್ಚಿಯನ್ ಎಂದು ಅವರಿಗೆ ಹೇಳಿದರು ಮತ್ತು ಅದನ್ನು ಹೇಗೆ ಪಠಿಸಬೇಕೆಂದು ತಿಳಿದಿಲ್ಲ ಎಂದು ಹೇಳಿದೆವು. ಅದಕ್ಕೆ ಅವರು ನನ್ನ ಪತಿಯ ಮೇಲೆ ಗುಂಡು ಹಾರಿಸಿದರು ಎಂದು ಅವರು ಹೇಳಿದ್ದಾರೆ. ಬ್ಬರು ದಾಳಿಕೋರರು ಶವಗಳ ನಡುವೆ ಪರಸ್ಪರ ಫೋಟೋ ತೆಗೆದುಕೊಳ್ಳುವುದನ್ನು ನಾನು ನೋಡಿದೆ. ಒಬ್ಬರು ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿದ್ದರು, ಮತ್ತೊಬ್ಬರು ಸಾಂಪ್ರದಾಯಿಕ ಕಾಶ್ಮೀರಿ ಉಡುಗೆಯಲ್ಲಿ (ಫೆರಾನ್) ಇದ್ದರು ಎಂದು ಅವರು ತಿಳಿಸಿದ್ದಾರೆ. ನಾನು ಅನೇಕ ಮೃತ ದೇಹಗಳನ್ನು ನೋಡಿದೆ. ಈಗಲೂ ಸಹ, ನಾನು ಕಣ್ಣು ಮುಚ್ಚಿದಾಗಲೆಲ್ಲಾ, ಆ ದೃಶ್ಯಗಳು ನನ್ನ ಮುಂದೆ ಬರುತ್ತವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಿಯರು ಗೂಗಲ್‌ನಲ್ಲಿ ಹುಡುಕಿದ್ದು ಏನು ಗೊತ್ತೇ ?

ಜಮ್ಮುಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ಕಾರ್ಯಾಚರಣೆ ಕೈಗೆತ್ತಿಕೊಂಡಿರುವ ಭಾರತೀಯ ಸೇನೆ ಲಷ್ಕರ್‌- ತೊಯ್ಬಾ ಉಗ್ರ(Lashkar Terrorists) ಸಂಘಟನೆಯ ಟಾಪ್‌ ಕಮಾಂಡರ್‌ನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಎಲ್‌ಇಟಿಯ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಅನಂತ್‌ನಾಗ್ ಜಿಲ್ಲೆಯ ಮೂಲದ ಥೋಕರ್ ಮಂಗಳವಾರದ ಪಹಲ್ಗಾಮ್ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದರೆ, ಶೇಖ್ ದಾಳಿಯ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಥೋಕರ್ ಮತ್ತು ಇತರ ಇಬ್ಬರು ಭಯೋತ್ಪಾದಕರ ರೇಖಾಚಿತ್ರಗಳನ್ನು ಅನಂತ್‌ನಾಗ್ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದಾರೆ. ಇತರ ಇಬ್ಬರು ಶಂಕಿತರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅವರ ಬಂಧನಕ್ಕೆ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.