ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್ ಸಿಂದೂರ ಮುಗಿದಿಲ್ಲ; ಇದು ಭಾರತ ಸ್ಥಾಪಿತ ನೀತಿ ಎಂದ ಮೋದಿ

ಮೇ7ರಂದು ಆರಂಭಿಸಲಾದ ಆಪರೇಷನ್ ಸಿಂದೂರದ ಮೂಲಕ 9 ಉಗ್ರ ನೆಲೆಗಳನ್ನು ನಾಶ ಮಾಡಲಾಗಿತ್ತು. ಆ ಬಳಿಕ ಪಾಕಿಸ್ತಾನದ ಎಲ್ಲಾ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಇದೇ ವೇಳೆ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಯಶಸ್ಸಿಗಾಗಿ ಭಾರತೀಯ ಸೇನೆಗೆ ಅಭಿನಂದನೆಯನ್ನೂ ಮೋದಿ ಸಲ್ಲಿಸಿದರು.

ಆಪರೇಷನ್ ಸಿಂದೂರ ಮುಗಿದಿಲ್ಲ; ಇದು ಭಾರತ ಸ್ಥಾಪಿತ ನೀತಿ

Profile Abhilash BC May 12, 2025 9:41 PM

ನವದೆಹಲಿ: ಆಪರೇಷನ್ ಸಿಂದೂರ ಯಶಸ್ವಿ ಬೆನ್ನಲ್ಲೇ ದೇಶದ ಜನತೆಯನ್ನುದ್ದೇಶಿಸಿದ ಮಾತನಾಡಿದ ಪ್ರಧಾನಿ ಮೋದಿ, ಆಪರೇಷನ್‌ ಸಿಂದೂರ ಕೇವಲ ಒಂದು ಸೇನಾ ಕಾರ್ಯಾಚರಣೆ ಅಷ್ಟೇ ಆಗಿರಲಿಲ್ಲ, ಉಗ್ರವಾದದ ವಿರುದ್ಧದ ಭಾರತದ ರಾಜಕೀಯ, ಸಾಮಾಜಿಕ ಮತ್ತು ವ್ಯೂಹಾತ್ಮಕ ಸಂಕಲ್ಪದ ಪ್ರತೀಕವಾಗಿತ್ತು. ಈ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ತನ್ನದೇ ಆದ ಷರತ್ತುಗಳ ಮೇಲೆ ಭಯೋತ್ಪಾದನೆಯ ವಿರುದ್ಧ ಭಾರತ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಮೋದಿ ಹೇಳಿದರು.

ಸೋಮವಾರ ದೇಶದ ಜನತೆಯನ್ನುದ್ದೇಶಿಸಿದ ಮಾತನಾಡಿದ ಮೋದಿ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಆಪರೇಷನ್ ಸಿಂದೂರ ಈಗ ಭಾರತದ ಸ್ಥಾಪಿತ ನೀತಿಯಾಗಿದ್ದು, ಭಾರತದ ಕಾರ್ಯತಂತ್ರದ ವಿಧಾನದಲ್ಲಿ ನಿರ್ಣಾಯಕ ಬದಲಾವಣೆಯನ್ನು ಗುರುತಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ, ಅದು ಭಯೋತ್ಪಾದನೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಮಾತ್ರ ಇರುತ್ತದೆ. ಭಾರತದ ನಿಲುವು ಸ್ಪಷ್ಟವಾಗಿದೆ. ಭಯೋತ್ಪಾದನೆ, ವ್ಯಾಪಾರ ಮತ್ತು ಮಾತುಕತೆಗಳನ್ನು ಒಟ್ಟಿಗೆ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದರು.

"ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದಾಗಲೆಲ್ಲಾ ಬಲವಾದ ಪ್ರತಿಕ್ರಿಯೆ ನೀಡಲಾಗುವುದು. ಭಾರತವು ತನ್ನದೇ ಆದ ನಿಯಮಗಳಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತದೆ, ಭಯೋತ್ಪಾದಕ ಕೇಂದ್ರಗಳನ್ನು ಅವುಗಳ ಬೇರುಗಳಲ್ಲಿ ಗುರಿಯಾಗಿಸುತ್ತದೆ" ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.



ಭಾರತದ ನಿಲುವು ಸ್ಪಷ್ಟವಾಗಿದೆ

ಸದ್ಯಕ್ಕೆ ಪಾಕಿಸ್ತಾನದ ಭಯೋತ್ಪಾದಕ ಮತ್ತು ಮಿಲಿಟರಿ ತಾಣಗಳ ಮೇಲಿನ ದಾಳಿಯನ್ನು ನಾವು ನಿಲ್ಲಿಸಿದ್ದೇವೆ ಅಷ್ಟೇ. ಆದರೆ ಪಾಕಿಸ್ತಾನ ಅಪ್ರಚೋದಿತ ದಾಳಿಗಳು ನಡೆದರೆ ಅದಕ್ಕೆ ತಕ್ಕ ಉತ್ತರವನ್ನು ನಮ್ಮ ಸೇನಾ ಪಡೆಗಳು ನೀಡಲಿವೆ ಎಂದರು. ಯಾವುದೇ ಪರಮಾಣು ಬೆದರಿಕೆಗಳು ಅಥವಾ ಬ್ಲ್ಯಾಕ್‌ಮೇಲಿಂಗ್ ಗಳು ನಮ್ಮ ಮುಂದೆ ನಡೆಯುವುದಿಲ್ಲ ಎಂದು ಒತ್ತಿ ಹೇಳಿದ ಮೋದಿ, ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಗೆ ಸೂಕ್ತ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದರು.

ಇದನ್ನೂ ಓದಿ Operation Sindoor: "ಪಿಒಕೆ ನಮ್ಮದು" ಪಾಕಿಸ್ತಾನದ ವಿರುದ್ಧ ಗುಡುಗಿದ ಮೋದಿ

ಮೇ7ರಂದು ಆರಂಭಿಸಲಾದ ಆಪರೇಷನ್ ಸಿಂದೂರದ ಮೂಲಕ 9 ಉಗ್ರ ನೆಲೆಗಳನ್ನು ನಾಶ ಮಾಡಲಾಗಿತ್ತು. ಆ ಬಳಿಕ ಪಾಕಿಸ್ತಾನದ ಎಲ್ಲಾ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಇದೇ ವೇಳೆ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಯಶಸ್ಸಿಗಾಗಿ ಭಾರತೀಯ ಸೇನೆಗೆ ಅಭಿನಂದನೆಯನ್ನೂ ಮೋದಿ ಸಲ್ಲಿಸಿದರು.