ಪ್ರಧಾನಿ ಮೋದಿ ಮಾತು ಮುಗಿಸಿದ ಬೆನ್ನಲ್ಲೇ ಸಾಂಬ, ಜಲಂಧರ್‌ನಲ್ಲಿ ಡ್ರೋನ್ ದಾಳಿ!
ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಕದನ ವಿರಾಮ ಘೋಷಿಸಲಾಗಿದ್ದರೂ, ಪಂಜಾಬ್‌ನ ಜಲಂಧರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಾಂಬ ಪ್ರದೇಶಗಳಲ್ಲಿ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಭಾರತೀಯ ಸೇನಾ ಪಡೆಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಸಾಂಬ, ಜಲಂಧರ್‌ನಲ್ಲಿ ಡ್ರೋನ್ ದಾಳಿ.

ಜಲಂಧರ್: ಭಾರತ ಮತ್ತು ಪಾಕಿಸ್ತಾನ (IND vs PAK War) ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಕದನ ವಿರಾಮ ಘೋಷಿಸಲಾಗಿದ್ದರೂ, ಪಂಜಾಬ್‌ನ ಜಲಂಧರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಾಂಬ ಪ್ರದೇಶಗಳಲ್ಲಿ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಜಲಂಧರ್‌ನ ಸುರನುಸ್ಸಿ ಪ್ರದೇಶದಲ್ಲಿ ಸೋಮವಾರ ರಾತ್ರಿ 9.30 ರ ಸುಮಾರಿಗೆ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ನಂತರ ಆ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿ ಹಿಮಾಂಶು ಅಗರ್ವಾಲ್ ತಿಳಿಸಿದ್ದಾರೆ.
ಡ್ರೋನ್ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತವು ನಗರದ ಸುರಾನುಸ್ಸಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವನ್ನು ವಿಧಿಸಿದೆ. ಈ ಹಿಂದೆ ಅಮೃತಸರ, ಹೋಶಿಯಾರ್‌ಪುರ ಮತ್ತು ದಾಸುಹಾದಲ್ಲಿ ಈಗಾಗಲೇ ವಿದ್ಯುತ್ ಕಡಿತಗೊಳಿಸಲಾಗಿತ್ತು ಮತ್ತು ಇದೀಗ ಜಲಂಧರ್‌ನ ಸುರನುಸ್ಸಿ ಪ್ರದೇಶದಲ್ಲೂ ವಿದ್ಯುತ್ ಕಡಿತಗೊಳಿಸಲಾಗಿದೆ.
india-pakistan tension: ಬಾರ್ಮರ್‌ನಲ್ಲಿ ಡ್ರೋನ್ ದಾಳಿಗೆ ಯತ್ನ; ಬ್ಲ್ಯಾಕ್ಔಟ್ ಘೋಷಣೆ
ಅದೇ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಮತ್ತೆ ಭಾರೀ ಗುಂಡಿನ ದಾಳಿ ನಡೆದಿರುವ ಸುದ್ದಿಯಿದ್ದು, ಭಾರತೀಯ ಸೇನೆಯು ಸೂಕ್ತ ಪ್ರತ್ಯುತ್ತರ ನೀಡುತ್ತಿದೆ. ಅದೇ ಸಮಯದಲ್ಲಿ, ಡ್ರೋನ್‌ಗಳು ನಿರಂತರವಾಗಿ ಆಕಾಶದಲ್ಲಿ ಕಾಣಿಸಿಕೊಂಡಿವೆ. ಆದಾಗ್ಯೂ ಕೆಲವು ಡ್ರೋನ್‌ಗಳನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.