Vastu Tips: ಕುಡಿಯುವ ನೀರು ಇಡುವ ಜಗ್ ಎಲ್ಲಿ, ಹೇಗಿಡಬೇಕು ಗೊತ್ತೇ?
ಕುಡಿಯುವ ನೀರು ಶುದ್ಧ ಮತ್ತು ಆರೋಗ್ಯಕರವಾಗಿರಬೇಕು. ಇದು ಕೇವಲ ನಮ್ಮ ಆರೋಗ್ಯದ ಬಗ್ಗೆ ಮಾತ್ರವಲ್ಲ ನಮ್ಮ ಮನೆಯ ಆರೋಗ್ಯಕ್ಕೂ ಮುಖ್ಯವಾಗಿರುತ್ತದೆ. ಮನೆಗಳಲ್ಲಿ ಕುಡಿಯುವ ನೀರನ್ನು ಸಂಗ್ರಹಿಸುವ ಪಾತ್ರೆಗಳು ಉತ್ತಮವಾಗಿಲ್ಲದಿದ್ದರೆ ಇದರಿಂದ ವಾಸ್ತುವಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲೂ ಕುಡಿಯುವ ನೀರನ್ನು ಸಂಗ್ರಹಿಸಿಡುವ ಜಗ್ ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಈ ಜಗ್ ಗಳು ನಾನಾ ರೀತಿಯ ತೊಂದರೆಗಳನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.


ಕೆಲವೊಂದು ಪಾತ್ರೆಗಳು ಮನೆಯ ಸೌಂದರ್ಯದಲ್ಲಿ ಮಾತ್ರವಲ್ಲ ವಾಸ್ತುವಿಗೆ ಸಂಬಂಧಿಸಿದ ವಿಷಯಗಳಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ನೀರನ್ನು (vastu for drinking water) ಸಂಗ್ರಹಿಸಿ ಇಡಲು ಬಳಸುವ ಜಗ್ ಗಳು. ಇಲ್ಲವಾದರೆ ಇದು ನಾನಾ ತೆರನಾದ ತೊಂದರೆಗಳನ್ನು ಆಹ್ವಾನಿಸಬಹುದು. ನೀರಿನ ಜಗ್ (Vastu for water mug) ಗಳು ಮನೆಗೆ ಸಕಾರಾತ್ಮಕತೆ ಮತ್ತು ಸಾಮರಸ್ಯವನ್ನು ಆಹ್ವಾನಿಸುತ್ತದೆ. ಆದರೆ ಇದನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಇಡುವುದು ಮುಖ್ಯವಾಗಿರುತ್ತದೆ ಎನ್ನುತ್ತಾರೆ ವಾಸ್ತು (Vastu Tips) ತಜ್ಞರು. ವಾಸ್ತು ಶಾಸ್ತ್ರದ ಪ್ರಕಾರ ನೀರಿನ ಜಗ್ ಇಡಲು ಕೆಲವು ನಿಯಮಗಳಿವೆ. ಈ ಬಗ್ಗೆ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞರಾದ ಅಶುತೋಷ್ ಅವರು ಹೇಳಿರುವುದು ಹೀಗೆ..
ಕುಡಿಯುವ ನೀರನ್ನು ತುಂಬಿಸಿ ಮನೆಯ ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ. ಹಾಗಿದ್ದರೆ ಮಾತ್ರ ಅದು ಮನೆಗೆ ಸುಖ, ಶಾಂತಿ, ಸಮೃದ್ಧಿಯಂತಹ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.

ಸರಿಯಾದ ಸ್ಥಳ
ಉತ್ತರ ಅಥವಾ ಈಶಾನ್ಯ ಮೂಲೆ ಮನೆಯಲ್ಲಿ ನೀರಿನ ಜಗ್ ಅನ್ನು ಇಡಲು ಉತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಉತ್ತರ ಮತ್ತು ಈಶಾನ್ಯ ದಿಕ್ಕುಗಳು ನೀರಿನ ಸಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಕುಡಿಯುವ ನೀರಿನ ಮಗ್ ಅನ್ನು ಅಡುಗೆ ಮನೆ, ಊಟದ ಕೋಣೆ ಅಥವಾ ಮಲಗುವ ಕೋಣೆಯ ಈ ಭಾಗದಲ್ಲಿ ಇಟ್ಟರೆ ಅದು ಮನೆಯಲ್ಲಿ ಶಾಂತಿ ನೆಲೆಸಲು ಸಹಾಯ ಮಾಡುತ್ತದೆ. ಇದರಿಂದ ಮನೆ ಮಂದಿ ಮಾನಸಿಕವಾಗಿ ಹೆಚ್ಚು ಸ್ಪಷ್ಟ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರಲು ಸಾಧ್ಯ.
ಸರಿಯಾದ ವಸ್ತು
ಮನೆಯಲ್ಲಿ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಿ ಇಡುವುದನ್ನು ತಪ್ಪಿಸಿ. ನೀರನ್ನು ಸಂಗ್ರಹಿಸಲು ತಾಮ್ರ ಅಥವಾ ಬೆಳ್ಳಿಯ ಪಾತ್ರೆಯನ್ನೇ ಬಳಸಿ. ತಾಮ್ರವು ನೀರನ್ನು ತಂಪಾಗಿರಿಸುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿ ಇರಿಸುತ್ತದೆ.
ನೀರಿನ ಮಗ್ ಬಳಸುವ ಮುನ್ನ
ತಾಮ್ರದ ಜಗ್ ನಲ್ಲಿ ನೀರು ತುಂಬಿಸಿಡಿ. ದೇವರ ಪ್ರಾರ್ಥನೆ ಮಾಡುತ್ತಾ ಅದಕ್ಕೆ ನೀರು ತುಂಬಿಸಿ. ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನೀರು ಕುಡಿಯುವವರಿಗೆ ಇದು ಶಕ್ತಿಯನ್ನು ನೀಡುತ್ತದೆ. ಮನೆ ಮಂದಿಯಲ್ಲಿ ಸಕಾರಾತ್ಮಕತೆ ಭಾವನೆಯನ್ನು ಬೆಳೆಸುತ್ತದೆ.
ಮಗ್ ಅನ್ನು ಮುಚ್ಚಿಡಿ
ನೀರಿನ ಜಗ್ ಅನ್ನು ಯಾವಾಗಲೂ ಮುಚ್ಚಳ ಅಥವಾ ಶುದ್ಧ ಬಟ್ಟೆಯಿಂದ ಮುಚ್ಚಿಡಿ. ತೆರೆದ ನೀರು ಸುತ್ತಲೂ ತೇಲುತ್ತಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಅದನ್ನು ಮುಚ್ಚಿಡುವುದರಿಂದ ಶಕ್ತಿ ಮತ್ತು ನೀರು ಶುದ್ಧವಾಗಿರುತ್ತದೆ.
ನೀರಿನ ಜಗ್ ಈ ಜಾಗದಲ್ಲಿ ಇಡಬಾರದು
ಗ್ಯಾಸ್ ಸ್ಟೌವ್ ಬಳಿ ನೀರಿನ ಜಗ್‌ಗಳನ್ನು ಇಡಬೇಡಿ. ಯಾಕೆಂದರೆ ಇದರಿಂದ ಮನೆಯ ವಾತಾವರಣದಲ್ಲಿ ಉದ್ವಿಗ್ನತೆ ಮತ್ತು ಅಸಮತೋಲನ ಉಂಟಾಗುತ್ತದೆ. ಜಗ್ ನಲ್ಲಿರುವ ನೀರನ್ನು ಪ್ರತಿದಿನ ಬದಲಾಯಿಸಿ ಮತ್ತು ಹಳೆಯ ನೀರನ್ನು ಸಸ್ಯಗಳಿಗೆ ಉಣಿಸಿ.
ಇದನ್ನೂ ಓದಿ: Vastu Tips: ಯಶಸ್ಸು ತರುತ್ತೆ ಕಚೇರಿ ಟೇಬಲ್ ಮೇಲಿಡುವ ಹೂವು
ನಿಂಬೆ ತುಂಡು ಅಥವಾ ಕೆಲವು ತುಳಸಿ ಎಲೆ
ಪ್ರತಿ ನಿತ್ಯ ಕುಡಿಯುವ ನೀರಿನ ಜಗ್ ಗೆ ನಿಂಬೆ ತುಂಡು ಮತ್ತು ತುಳಸಿಯನ್ನು ಹಾಕಿ. ಇದು ನೀರನ್ನು ಶಕ್ತಿಯುತವಾಗಿ ಮತ್ತು ಶುದ್ಧವಾಗಿಡಲು ಸಹಾಯ ಮಾಡುತ್ತದೆ.
ಮಲಗುವ ಸ್ಥಳದಲ್ಲಿಡಬೇಡಿ
ಕೆಲವರು ರಾತ್ರಿಯಲ್ಲಿ, ವಿಶೇಷವಾಗಿ ಬೇಸಿಗೆಯಲ್ಲಿ ತಮ್ಮ ಹಾಸಿಗೆಯ ಕೆಳಗೆ ನೀರಿನ ಬಾಟಲಿಗಳನ್ನು ಇಡುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಸರಿಯಲ್ಲ. ಮಲಗುವ ಪ್ರದೇಶದಲ್ಲಿ ನೀರು ಇಡುವುದರಿಂದ ಭಾವನಾತ್ಮಕ ಸಮಸ್ಯೆ ಕಾಡುತ್ತದೆ ಮತ್ತು ನಿದ್ರೆಗೆ ತೊಂದರೆಯಾಗತೊಡಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.