ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻಕಳೆದ 3 ವರ್ಷಗಳಿಂದ...!ʼ-ಗರ್ಲ್‌ಫ್ರೆಂಡ್‌ ಬಗ್ಗೆ ಮೌನ ಮುರಿದ ಶುಭಮನ್‌ ಗಿಲ್‌!

Shubman Gill on relationship rumours: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌ ಅವರ ಗೆಳೆತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸ್ವತಃ ಗಿಲ್‌ ಅವರೇ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಗರ್ಲ್‌ಫ್ರೆಂಡ್‌ ಬಗ್ಗೆ ಕೊನೆಗೂ ಮೌನ ಮುರಿದ ಶುಭಮನ್‌ ಗಿಲ್!

ಶುಭಮನ್‌ ಗಿಲ್‌, ಸಾರಾ ತೆಂಡೂಲ್ಕರ್‌

Profile Ramesh Kote Apr 26, 2025 9:20 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ವೇಳೆ ಗುಜರಾತ್‌ ಟೈಟನ್ಸ್‌ (Gujarat Titans) ನಾಯಕ ಹಾಗೂ ಸುಂದರ ಯುವಕ ಶುಭಮನ್‌ ಗಿಲ್‌ (Shubman Gill) ಅವರ ಗೆಳೆತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿಯೂ ಶುಭಮನ್‌ ಗಿಲ್‌ಗೆ ಕ್ರಿಕೆಟ್‌ ನಿರೂಪಕರು ಇದೇ ಪ್ರಶ್ನೆಯನ್ನು ಕೇಳಿದ್ದರು. ಇದೀಗ ಸ್ವತಃ ಶುಭಮನ್‌ ಗಿಲ್‌ ಅವರೇ ಊಹಾಪೋಹಾಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ನಾನು ಸಿಂಗಲ್‌ ಆಗಿ ಇದ್ದೇನೆ. ನನಗೆ ಕ್ರಿಕೆಟ್‌ ವೃತ್ತಿ ಜೀವನದ ಕಡೆಗೆ ಗಮನ ಹರಿಸುವುದು ಮುಖ್ಯ ಎಂದು ಜಿಟಿ ನಾಯಕ ತಿಳಿಸಿದ್ದಾರೆ.

ಎನ್‌ಡಿ ಟಿವಿ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಮಾತನಾಡಿದ ಶುಭಮನ್‌ ಗಿಲ್‌, "ಕಳೆದ ಮೂರು ವರ್ಷಗಳಿಂದ ನಾನು ಸಿಂಗಲ್‌ ಆಗಿ ಇದ್ದೇನೆ. ನನ್ನನ್ನು ಬೇರೆ ಬೇರೆ ಯುವತಿಯರೊಂದಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಹಲವಾರು ಊಹಾಪೋಹಗಳು ಮತ್ತು ವದಂತಿಗಳು ಹಬ್ಬಿವೆ. 'ನಾನು ಈ ವ್ಯಕ್ತಿಯೊಂದಿಗೆ ಮತ್ತು ಆ ವ್ಯಕ್ತಿಯೊಂದಿಗೆ ನಾನು ಬೇರೆಲ್ಲಿಯೂ ಇರುತ್ತೇನೆ' ಎಂಬ ವದಂತಿಗಳನ್ನು ನಾನು ಕೇಳುತ್ತಿರುತ್ತೇನೆ. ಕೆಲವೊಮ್ಮೆ, ನಾನು ಆ ವ್ಯಕ್ತಿಯನ್ನು ನನ್ನ ಜೀವನದಲ್ಲಿ ಎಂದಿಗೂ ನೋಡಿರುವುದಿಲ್ಲ ಅಥವಾ ಭೇಟಿಯಾಗಿಲ್ಲ ಎಂಬುದು ತುಂಬಾ ಹಾಸ್ಯಾಸ್ಪದವಾಗಿದೆ," ಎಂದು ಸ್ಪಷ್ಟನೆ ನೀಡಿದ್ದಾರೆ.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಸುರೇಶ್‌ ರೈನಾ!

ವರ್ಷವೀಡಿ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಕ್ರಿಕೆಟಿಗನಾಗಿ ಸಕ್ರಿಯರಾಗಿರಬೇಕಾದರೆ ಗಲ್‌ಫ್ರೆಂಡ್‌ ಅಥವಾ ವೈಯಕ್ತಿಕ ಸಂಬಂಧಗಳಿಗೆ ಸಮಯ ನೀಡಲು ಆಗುವುದಿಲ್ಲ ಎಂದು ಶುಭಮನ್‌ ಗಿಲ್‌ ತಿಳಿಸಿದ್ದಾರೆ.

ಗೆಳತಿಯನ್ನು ಪಡೆಯಲು ಸಮಯ ಇಲ್ಲ

"ನನ್ನ ವೃತ್ತಿ ಜೀವನದಲ್ಲಿ ನಾನು ಯಾವುದರ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ನನ್ನ ಜೀವನದಲ್ಲಿ ವರ್ಷಕ್ಕೆ 300 ದಿನಗಳಂತೆ ಯಾರೊಂದಿಗಾದರೂ ಇರಲು ಜಾಗವಿಲ್ಲ. ನಾವು ಎಲ್ಲಿಗೋ ಪ್ರಯಾಣ ಬೆಳೆಸುತ್ತಿರುವ ರಸ್ತೆಯಲ್ಲಿದ್ದೇವೆ. ಹಾಗಾಗಿ ಗೆಳತಿಯನ್ನು ಹೊಂದಲು ಅಥವಾ ಯಾರೊಂದಿಗಾದರೂ ಸಂಬಂಧವನ್ನು ಹೊಂದಲು ನಮಗೆ ಸಮಯ ಸಿಗುವುದಿಲ್ಲ," ಎಂದು ಗುಜರಾತ್‌ ಟೈಟನ್ಸ್‌ ನಾಯಕ ಹೇಳಿದ್ದಾರೆ.

IPL 2025: ಕೆಕೆಆರ್‌ ಪಂದ್ಯಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

305 ರನ್‌ ಗಳಿಸಿರುವ ಶುಭಮನ್‌ ಗಿಲ್‌

ಪ್ರಸ್ತುತ ಸಾಗುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಮನ್‌ ಗಿಲ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 8 ಇನಿಂಗ್ಸ್‌ಗಳಿಂದ 153.26ರ ಸ್ಟ್ರೈಕ್‌ ರೇಟ್‌ನಲ್ಲಿ 305 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಪ್ರಿಲ್‌ 28ರಂದು ಜೈಪುರದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು ಗುಜರಾತ್‌ ಟೈಟನ್ಸ್‌ ಕಾದಾಟ ನಡೆಸಲಿದೆ.

ಅಗ್ರ ಸ್ಥಾನದಲ್ಲಿರುವ ಜಿಟಿ

ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ ಈ ಸಲ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಎರಡರಲ್ಲಿ ಸೋಲು ಅನುಭವಿಸಿದೆ. ಒಟ್ಟು12 ಅಂಕಗಳನ್ನು ಕಲೆ ಹಾಕಿರುವ ಗುಜರಾತ್‌ ಟೈಟನ್ಸ್‌ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.