Virat Kohli: ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ಕಿಂಗ್ ಕೊಹ್ಲಿ
RCB vs CSK: ರನ್ ಮಾತ್ರವಲ್ಲದೆ ಸಿಕ್ಸರ್ ಮೂಲಕವೂ ಕೊಹ್ಲಿ ಈ ಪಂದ್ಯದಲ್ಲಿ ದಾಖಲೆ ಬರೆದರು. ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 300+ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾದರು. ಅವರು ಆರ್‌ಸಿಬಿ ಪರ ಐಪಿಎಲ್, ಚಾಂಪಿಯನ್ಸ್ ಲೀಗ್ ಸೇರಿ ಒಟ್ಟು 278 ಪಂದ್ಯಗಳಲ್ಲಿ 304 ಸಿಕ್ಸರ್ ಸಿಡಿಸಿದ್ದಾರೆ.


ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್(RCB vs CSK) ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಆರ್‌ಸಿಬಿಯ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಐಪಿಎಲ್‌ನಲ್ಲಿ(IPL 2025) ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 18 ಆವೃತ್ತಿಯ ಐಪಿಎಲ್ ಇತಿಹಾಸದಲ್ಲಿ 8 ಆವೃತ್ತಿಗಳಲ್ಲಿ ತಲಾ 500+ ರನ್ ಕಲೆಹಾಕಿದ ಮೊದಲ ಆಟಗಾರ ಎಂಬ ಮೈಲುಗಲ್ಲು ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್(7), ಕನ್ನಡಿಗ ಕೆ.ಎಲ್ ರಾಹುಲ್(6) ಆವೃತ್ತಿಯಲ್ಲಿ ತಲಾ 500+ ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ 2011, 2013, 2015, 2016, 2028, 2023, 2024 ಹಾಗೂ 2025ರ ಆವೃತ್ತಿಯಲ್ಲಿ 500 + ರನ್ ಕಲೆಹಾಕಿದ್ದಾರೆ. ಚೆನ್ನೈ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೊಹ್ಲಿ 33 ಎಸೆತಗಳಿಂದ ತಲಾ 5 ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ 62 ರನ್ ಬಾರಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ 8500 ರನ್ ಪೂರ್ಣಗೊಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಸದ್ಯ 263 ಪಂದ್ಯಗಳ ಇನಿಂಗ್ಸ್‌ಗಳಲ್ಲಿ 8509 ರನ್ ಗಳಿಸಿದ್ದಾರೆ.
ಸಿಕ್ಸರ್ ದಾಖಲೆ
ರನ್ ಮಾತ್ರವಲ್ಲದೆ ಸಿಕ್ಸರ್ ಮೂಲಕವೂ ಕೊಹ್ಲಿ ಈ ಪಂದ್ಯದಲ್ಲಿ ದಾಖಲೆ ಬರೆದರು. ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 300+ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾದರು. ಅವರು ಆರ್‌ಸಿಬಿ ಪರ ಐಪಿಎಲ್, ಚಾಂಪಿಯನ್ಸ್ ಲೀಗ್ ಸೇರಿ ಒಟ್ಟು 278 ಪಂದ್ಯಗಳಲ್ಲಿ 304 ಸಿಕ್ಸರ್ ಸಿಡಿಸಿದ್ದಾರೆ.
Eat. Sleep. Score a 5️⃣0️⃣. 🔁
— IndianPremierLeague (@IPL) May 3, 2025
Half-century No. 7️⃣ for Virat Kohli in #TATAIPL 2025 as he keeps #RCB on 🔝
Updates ▶ https://t.co/I4Eij3Zfwf#RCBvCSK | @RCBTweets | @imVkohli pic.twitter.com/61dQqApx7d
2 ರನ್ ರೋಚಕ ಗೆಲುವು
ಕೊನೆಯ ಎಸೆತದ ತನಕ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಶನಿವಾರ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ 2 ರನ್ ಅಂತರದ ಗೆಲುವು ಸಾಧಿಸಿತು. ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ತನ್ನ ಪ್ಲೇ ಆಫ್ ಸ್ಥಾನವನ್ನು ಕೂಡ ಬಹುತೇಕ ಖಚಿತಪಡಿಸಿಕೊಂಡಿದೆ.