Vishweshwar Bhat Column: ವಿದೇಶಿ ವಜ್ರ-ಸ್ವದೇಶಿ ಕಲ್ಲಿದ್ದಲು: ಜಪಾನಿಯರ ಆಯ್ಕೆ ಯಾವುದು ?
ಅಮೆರಿಕನ್ ಕಾರುಗಳು ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡವು. ಅವುಗಳ ಉದ್ದ ಮತ್ತು ಅಗಲ ಎರಡೂ ಹೆಚ್ಚು. ಈ ರೀತಿಯ ದೊಡ್ಡ ಕಾರುಗಳು ಜಪಾನಿನ ನುಣುಪು ರಸ್ತೆಗಳಲ್ಲಿ ಚಲಿಸಲು ಅನುಕೂಲಕರವಲ್ಲ. ಪ್ರತ್ಯೇಕವಾಗಿ ಜಪಾನಿನ ಮನೆಗಳ ಪಾರ್ಕಿಂಗ್ ಸ್ಥಳಗಳು ಬಹಳ ಸೀಮಿತ ವಾಗಿರುವುದರಿಂದ, ದೊಡ್ಡ ಕಾರುಗಳು ಪ್ರತಿದಿನದ ಉಪಯೋಗಕ್ಕೆ ಅನುಕೂಲಕರವಲ್ಲ.


ಇದೇ ಅಂತರಂಗ ಸುದ್ದಿ
vbhat@me.com
ಜಗತ್ತಿನ ಯಾವುದೇ ದೇಶದಲ್ಲಿ ಓಡಾಡುವಾಗ ಅಮೆರಿಕನ್ ಕಾರುಗಳ ಪಾರುಪತ್ಯ ಸಾಮಾನ್ಯ. ಆದರೆ ಜಪಾನಿನಲ್ಲಿ ಅಮೆರಿಕದ ಕಾರುಗಳು ಅಪರೂಪ. ವಿಶ್ವದೆಡೆ ಖ್ಯಾತಿ ಪಡೆದ ಅಮೆರಿಕದ ಕಾರು ಬ್ರಾಂಡ್‌ಗಳಾದ, ಪೋರ್ಡ್, ಜನರಲ್ ಮೋಟರ್ಸ್ (ಜಿಎಂ), ಟೆಸ್ಲಾ ಮುಂತಾದ ಕಂಪನಿಗಳ ಕಾರುಗಳು ಜಪಾನಿನಲ್ಲಿ ಅಪರೂಪಕ್ಕೆ ಮಾತ್ರ ಕಾಣಿಸಿಕೊಳ್ಳುತ್ತವೆ. ಟೋಕಿಯೋ, ಓಸಾಕಾ ಅಥವಾ ಕ್ಯೋಟೋದಂಥ ಶಹರಗಳಲ್ಲಿ ಮಾತ್ರ ಅಂದು-ಇಂದು ಅಮೆರಿಕನ್ ಕಾರುಗಳನ್ನು ನೋಡ ಬಹುದು. ಇದಕ್ಕೆ ಅನೇಕ ಕಾರಣಗಳಿವೆ. ಜಪಾನಿನ ಬಹುತೇಕ ನಗರಗಳಲ್ಲಿ ರಸ್ತೆಗಳು ತುಂಬಾ ಕಿರಿದು. ಈ ರಸ್ತೆಗಳ ವಿನ್ಯಾಸ ಬಹುಶಃ ಜಪಾನಿನ ಐತಿಹಾಸಿಕ ವ್ಯವಸ್ಥೆಯ ತಳಹದಿಯ ಮೇಲೆ ಆಧಾರಿತವಾಗಿದೆ. ಅನೇಕ ನಗರಗಳು ಬಹುಪಾಲು ಶತಮಾನಗಳಷ್ಟು ಹಳೆಯದಾಗಿವೆ ಮತ್ತು ಅವುಗಳಲ್ಲಿ ನವೀಕರಣವಾಗುವ ಸ್ಥಳಾಂಶವೂ ಕಡಿಮೆಯೇ.
ಅಮೆರಿಕನ್ ಕಾರುಗಳು ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡವು. ಅವುಗಳ ಉದ್ದ ಮತ್ತು ಅಗಲ ಎರಡೂ ಹೆಚ್ಚು. ಈ ರೀತಿಯ ದೊಡ್ಡ ಕಾರುಗಳು ಜಪಾನಿನ ನುಣುಪು ರಸ್ತೆಗಳಲ್ಲಿ ಚಲಿಸಲು ಅನುಕೂಲಕರವಲ್ಲ. ಪ್ರತ್ಯೇಕವಾಗಿ ಜಪಾನಿನ ಮನೆಗಳ ಪಾರ್ಕಿಂಗ್ ಸ್ಥಳಗಳು ಬಹಳ ಸೀಮಿತ ವಾಗಿರುವುದರಿಂದ, ದೊಡ್ಡ ಕಾರುಗಳು ಪ್ರತಿದಿನದ ಉಪಯೋಗಕ್ಕೆ ಅನುಕೂಲಕರವಲ್ಲ.
ಜಪಾನಿನ ಕಾರು ಉತ್ಪಾದಕರು ಇದನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಗಾತ್ರದ, ಇಂಧನದ ಪರಿಪೋಷಕ ಕಾರುಗಳನ್ನು ಉತ್ಪಾದಿಸುತ್ತಾರೆ. ಉದಾಹರಣೆಗೆ ಕೀ ಕಾರ್ ( kei cars). ಜಪಾನಿನಲ್ಲಿ ಕಾರು ಖರೀದಿಸುವಾಗ ಪರಿಗಣಿಸುವ ಸುರಕ್ಷತಾ ಮತ್ತು ಭದ್ರತಾ ನಿಯಮಗಳು ಬಹಳ ಕಟ್ಟುನಿಟ್ಟು. ಅಮೆರಿಕನ್ ಕಾರುಗಳು ಪ್ರಮುಖವಾಗಿ ಆಮದು ( imported) ಆಗುವ ಕಾರುಗಳು ಆಗಿದ್ದರಿಂದ, ಅವುಗಳಿಗೆ ಆಮದು ತೆರಿಗೆ, ನಿಲುಗಡೆ ಪರೀಕ್ಷೆ ( inspection) ಮತ್ತು ಹೆಚ್ಚು ನವೀಕರಣ ವೆಚ್ಚ ಗಳನ್ನು ಜೋಡಿಸಲಾಗುತ್ತವೆ.
ಇದರಿಂದಾಗಿ ಗ್ರಾಹಕರಿಗೆ ಇವು ದುಬಾರಿ ಎನಿಸಿಕೊಳ್ಳುತ್ತವೆ. ಹೆಚ್ಚು ಇಂಧನ ಬಳಸುವ ಅಮೆರಿಕನ್ ಕಾರುಗಳು (ಅಂದರೆ ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳು) ಇಂಧನ ದರಗಳು ಹೆಚ್ಚು ಇರುವ ಜಪಾನಿನಲ್ಲಿ ಅರ್ಥಿಕವಾಗಿ ಅನುಕೂಲಕರವಾಗುವುದಿಲ್ಲ. ಇದರ ಹೊರತಾಗಿಯೂ ಜಪಾನ್ ಸರಕಾರವು ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುತ್ತಿದೆ, ಈ ಸೌಲಭ್ಯ ಸ್ಥಳೀಯ ಬ್ರಾಂಡ್ ಗಳಿಗಷ್ಟೇ.
ಇದನ್ನೂ ಓದಿ: Vishweshwar Bhat Column: ಜಪಾನಿನ ದೈನಿಕಗಳು
ಜಪಾನ್ ತನ್ನದೇ ಆದ ಪ್ರಬಲ ಕಾರು ಉತ್ಪಾದನಾ ಚರಿತ್ರೆಯುಳ್ಳ ರಾಷ್ಟ್ರ ಎಂಬುದು ಗಮನಾರ್ಹ. ಟೊಯೋಟಾ, ಹೋಂಡಾ, ನಿಸ್ಸಾನ್, ಸುಜುಕಿ, ಮಿತ್ಸುಬಿಷಿ ಮುಂತಾದ ಕಂಪನಿಗಳು ವಿಶ್ವದಾ ದ್ಯಾಂತ ಮಾರುಕಟ್ಟೆ ಹೊಂದಿವೆ. ಈ ಕಂಪನಿಗಳು ಜಪಾನಿನ ಒಳನಾಡು ಮಾರುಕಟ್ಟೆಯ ಬಹುಪಾಲು ಹಂಚಿಕೊಂಡಿವೆ, ಆಕ್ರಮಿಸಿಕೊಂಡಿವೆ.
ಈ ಕಾರುಗಳನ್ನು ಜಪಾನಿನ ರಸ್ತೆಗಳಿಗೆ ಸೂಕ್ತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ- ಸಣ್ಣ ಗಾತ್ರ, ಹೆಚ್ಚು ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ, ಉತ್ತಮ ತಂತ್ರಜ್ಞಾನ ಹಾಗೂ ವಿಶ್ವಾಸಾರ್ಹ ಸೇವಾ ನೆಟ್‌ವರ್ಕ್. ಇಂಥ ಶ್ರೇಷ್ಠ ಪ್ರತಿಸ್ಪರ್ಧೆಯ ಮಧ್ಯೆ ಅಮೆರಿಕನ್ ಕಾರುಗಳು ಪೈಪೋಟಿ ನಡೆಸುವುದು ಕಷ್ಟ. ಜಪಾನಿಯರು ತಮ್ಮ ಜೀವನಶೈಲಿಗೆ ಹೊಂದಿಕೆಯಾಗುವ, ಪ್ರಾಯೋಗಿಕ ಹಾಗೂ ಸುಧಾರಿತ ತಂತ್ರಜ್ಞಾನ ಹೊಂದಿರುವ ಉತ್ಪನ್ನಗಳನ್ನು ಆಯ್ಕೆ ಮಾಡುತ್ತಾರೆ.

ತಂತ್ರಜ್ಞಾನ, ನಿಖರತೆ, ಸೂಕ್ಷ್ಮ ವಿನ್ಯಾಸ- ಇವೆಲ್ಲವೂ ಜಪಾನಿ ಸಂಸ್ಕೃತಿಯ ಭಾಗ. ಅಮೆರಿಕನ್ ಕಾರುಗಳು ಈ ನಿರೀಕ್ಷೆಗಳಿಗೆ ಪೂರಕವಾಗಿರುವುದಿಲ್ಲ ಎಂಬುದು ಅಲ್ಲಿನವರ ಭಾವನೆ. ಮತ್ತೊಂದೆಡೆ, ಜಪಾನಿನ ಗ್ರಾಹಕರಿಗೆ ಬ್ರಾಂಡ್‌ನ ಮೇಲಿನ ಭರವಸೆ ಹಾಗೂ ನಂತರದ ಸೇವೆ (after-sales service) ಅತ್ಯಂತ ಮಹತ್ವಪೂರ್ಣ. ಸ್ಥಳೀಯ ಕಂಪನಿಗಳು ಈ ಸಂಬಂಧದಲ್ಲಿ ಹೆಚ್ಚು ವಿಶ್ವಾಸಾರ್ಹ.
ಅಮೆರಿಕನ್ ಬ್ರಾಂಡ್‌ಗಳಿಗೆ ಜಪಾನಿನಲ್ಲಿ ಬಲವಾದ ವ್ಯಾಪಾರ ಜಾಲವಿಲ್ಲದಿರುವುದರಿಂದ ಗ್ರಾಹಕರು ಅದಕ್ಕೆ ಹೆಚ್ಚು ಒಲಿಯುವುದಿಲ್ಲ. ಜಪಾನಿನ ಬಹುತೇಕ ನಗರಗಳಲ್ಲಿ ಬಹುಮುಖ ಹಾಗೂ ಅತ್ಯಂತ ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದೆ- ಶಿಂಕನ್ಸೆನ್ ( bullet trains), ಮೆಟ್ರೋ ರೈಲುಗಳು, ಸಾರ್ವಜನಿಕ ಸಾರಿಗೆ ಮುಂತಾದವು. ಅಲ್ಲಿನ ಜನರು ವಿಶೇಷವಾಗಿ ಕಾರು ಬಳಸಬೇಕಾದ ಅಗತ್ಯವಿಲ್ಲದೆ ತಮ್ಮ ದಿನಚರಿಯನ್ನು ನಿರ್ವಹಿಸಬಹುದು.
ಈ ಸಂದರ್ಭದಲ್ಲಿ ದೊಡ್ಡ ಗಾತ್ರದ ಮತ್ತು ಹೆಚ್ಚು ಇಂಧನ ಬಳಕೆ ಮಾಡುವ ಅಮೆರಿಕನ್ ಕಾರು ಗಳನ್ನು ಖರೀದಿಸಲು ಅಥವಾ ನಿರ್ವಹಿಸಲು ಉತ್ಸಾಹ ಕಡಿಮೆ. ಜಪಾನ್ ಮತ್ತು ಅಮೆರಿಕ ನಡುವೆ ವ್ಯಾಪಾರ ಸಂಬಂಧ ಆಗಾಗ ಏರುಪೇರಾಗುತ್ತಿರುತ್ತವೆ. ಕೆಲವೊಮ್ಮೆ ಜಪಾನ್ ತನ್ನ ದೇಶೀಯ ಕೈಗಾರಿಕೆಯನ್ನು ರಕ್ಷಿಸಲು ಅಮೆರಿಕದ ಉತ್ಪನ್ನಗಳ ಮೇಲೆ ನಿರ್ಬಂಧ ಅಥವಾ ಹೆಚ್ಚುವರಿ ತೆರಿಗೆ ವಿಧಿಸುತ್ತದೆ.
ಪರಿಣಾಮ, ಕೆಲವು ಅಮೆರಿಕನ್ ಕಾರು ಕಂಪನಿಗಳು- ಉದಾಹರಣೆಗೆ ಫೋರ್ಡ್- ಜಪಾನಿನ ಮಾರು ಕಟ್ಟೆಯಿಂದಲೇ ಹಿಮ್ಮೆಟ್ಟಿವೆ. ಅಮೆರಿಕನ್ ಕಾರು ಎಷ್ಟೇ ಉತ್ತಮವಿರಲಿ, ಜಪಾನಿಯರು ಅದನ್ನು ‘ಪರಕೀಯ’ ಮತ್ತು ‘ಅನನುಕೂಲಕರ’ ಎಂದೇ ಪರಿಗಣಿಸುತ್ತಾರೆ. ಜಪಾನಿಯರ ಮುಂದೆ ಎಷ್ಟೇ ಉತ್ತಮ ಬ್ರಾಂಡ್ ಇಟ್ಟರೂ, ಅವರು ಮೊದಲು ನೋಡುವುದು ಇದು ಸ್ವದೇಶಿಯೇ ಅಥವಾ ವಿದೇಶಿಯೇ ಎಂಬುದನ್ನು. ಅದು ವಿದೇಶಿ ಎಂದು ಅವರಿಗೆ ಮನವರಿಕೆಯಾದರೆ ಅವರ ಅಭಿಪ್ರಾಯವನ್ನು ಬದಲಿಸುವುದು ಕಷ್ಟ.
ವಿದೇಶಿ ಕಂಪನಿಗಳು ಮಾಡುವ ದೊಡ್ಡ ಪ್ರಮಾದವೆಂದರೆ, ಸ್ಥಳೀಯ ಗ್ರಾಹಕರ ಮನೋಭಾವನೆ ಮತ್ತು ಸಂಸ್ಕೃತಿಯ ಪ್ರಕಾರ ಮಾರ್ಕೆಟಿಂಗ್ ಮಾಡಲು ಯಶಸ್ವಿಯಾಗದಿರುವುದು. ಜಪಾನಿನಂದು ತಮಾಷೆಯ ಮಾತಿದೆ- ಜಪಾನಿಯರ ಮುಂದೆ ವಿದೇಶಿ ವಜ್ರ ಮತ್ತು ಸ್ವದೇಶಿ ಕಲ್ಲಿದ್ದಲು ಇಟ್ಟರೆ, ಅವರು ಆಯ್ಕೆ ಮಾಡಿಕೊಳ್ಳುವುದು ಸ್ವದೇಶಿ ಕಲ್ಲಿದ್ದಲನ್ನೇ!
ದೇಶಪ್ರೇಮದ ವಿಷಯದಲ್ಲಿ ಅವರು ಅಷ್ಟು ಘಾಟಿ! ಜಪಾನಿನಲ್ಲಿ ಬಳಸಿದ (used) ಕಾರು ಮಾರು ಕಟ್ಟೆ ಬಹಳ ಚುರುಕು. ಸ್ಥಳೀಯ ಬ್ರಾಂಡ್‌ಗಳ ಕಾರುಗಳಿಗೆ ಮರುಬಳಕೆಯ ಅವಕಾಶ, ಸಾಲ ಸೌಲಭ್ಯ ಹಾಗೂ ಖಾತರಿ ಸೇವೆಗಳು ಅನೇಕ. ಆದರೆ ಅಮೆರಿಕನ್ ಕಾರುಗಳಿಗೆ ಈ ರೀತಿಯ ಮೌಲ್ಯ ವರ್ಧನೆಯ ವ್ಯವಸ್ಥೆ ಇಲ್ಲ. ಇದರಿಂದಾಗಿ ಗ್ರಾಹಕರು resale value ಇಲ್ಲದ ಕಾರುಗಳನ್ನು ಖರೀದಿಸಲು ಮುಂದೆ ಬರುವುದಿಲ್ಲ.
ಜಪಾನಿನಲ್ಲಿ ಅಮೆರಿಕನ್ ಕಾರುಗಳು ಅಪರೂಪವಾಗಿರುವುದಕ್ಕೆ ಒಂದು ಅಥವಾ ಎರಡು ಕಾರಣ ಗಳಷ್ಟೇ ಕಾರಣವಲ್ಲ- ಇದು ಹಲವಾರು ಸಾಂಸ್ಕೃತಿಕ, ಆರ್ಥಿಕ, ತಾಂತ್ರಿಕ ಹಾಗೂ ರಾಜಕೀಯ ಅಂಶಗಳ ಸಂಯೋಜನೆಯ ಫಲಿತಾಂಶ. ಅಮೆರಿಕನ್ ಅಂದ್ರೆ ಶ್ರೇಷ್ಠ, ಅತ್ಯುತ್ಕೃಷ್ಟ ಎಂಬ ಭಾವನೆ ಜಗತ್ತಿನೆಡೆ ಇದ್ದರೂ, ಅದು ಜಪಾನಿನಲ್ಲಿ ನಡೆಯುವುದಿಲ್ಲ.
ಬೇರೆ ಆಯ್ಕೆಗಳು ಇಲ್ಲದಾಗ ಮಾತ್ರ ಜಪಾನಿಯರು ವಿದೇಶಿ ಬ್ರಾಂಡ್‌ಗಳನ್ನು ಒಪ್ಪಿಕೊಳ್ಳಬಹುದು. ತಮ್ಮ ದೇಶದ ಉತ್ಪನ್ನಗಳ ಮುಂದೆ ಅದೆಷ್ಟೇ ಉತ್ತಮವಾದ ವಿದೇಶಿ ಉತ್ಪನ್ನಗಳನ್ನು ಇಟ್ಟರೂ, ಜಪಾನಿಯರ ಮೊದಲ ಆಯ್ಕೆ ಸ್ವದೇಶಿ ಉತ್ಪನ್ನವೇ. ಅವರು ಫಾರಿನ್ ಬ್ರಾಂಡ್‌ಗಳ ವ್ಯಾಮೋಹಿ ಗಳಲ್ಲ.
ಹೀಗಾಗಿ ಇಂದಿಗೂ ಜಪಾನಿನಲ್ಲಿ ವಿದೇಶಿ ಬ್ರಾಂಡುಗಳು ‘ಕಾರು’ಬಾರು ನಡೆಸಲು ಸಾಧ್ಯವಾಗಿಲ್ಲ. ಇದು ಕಾರಿನ ವಿಷಯದಂದೇ ಅಲ್ಲ, ಜಪಾನಿಯರು ಎಲ್ಲ ವಿಷಯಗಳಲ್ಲೂ ಹೀಗೆ.
ಸಸಾಕಿ ಹೇಳಿದ ಸರಳತೆಯ ಪಾಠ
‘ನ್ಯೂ ಜಪಾನೀಸ್ ಮಿನಿಮಲಿಸಂ’ ಎಂಬ ಪದಪುಂಜವನ್ನು ಕೇಳಿರಬಹುದು. ಇತ್ತೀಚಿನ ವರ್ಷ ಗಳಲ್ಲಿ ಇದು ಜಗತ್ತಿನಾದ್ಯಂತ ಕೇಳಿಬರುತ್ತಿರುವ ಸಮರ್ಪಿತ ಸರಳತೆಯ ನೂತನ ಪರಿಕಲ್ಪನೆ. ಈ ಕುರಿತು ಫ್ಯೂಮಿಯೋ ಸಸಾಕಿ ಎಂಬಾತ ಬರೆದ Goodbye, Things ಕೃತಿ ಬಹುಬೇಗ ಜನಪ್ರಿಯ ವಾಗಿದ್ದನ್ನು ಕೇಳಿರಬಹುದು.
“ನಮಗೆ ಯಾವುದರಿಂದ ಸಂತಸ ಸಿಗುವುದೆಂದು ಅಂದುಕೊಳ್ಳುತ್ತೇವೋ, ಅದರಿಂದ ಅದು ಸಿಗುವು ದಿಲ್ಲ. ಅದಕ್ಕಾಗಿ ನಮಗೆ ಅಗತ್ಯವಿಲ್ಲದಿದ್ದರೂ ಸಾಮಾನುಗಳನ್ನು ಖರೀದಿಸುತ್ತಾ ಹೋಗು ತ್ತೇವೆ. ಸಾಮಾನುಗಳಲ್ಲಿ ಸಂತಸವಿದೆ ಎಂದು ಅಂದುಕೊಂಡಿರುತ್ತವೆ. ಆದರೆ ನಾವು ಖರೀದಿಸಿದ ಹೊಸ ಸಾಮಾನುಗಳಲ್ಲಿ ಸಂತಸ ಇಲ್ಲ ಎಂಬುದು ನಮಗೆ ಬಹುಬೇಗ ಅರ್ಥವಾಗುತ್ತಾ ಹೋಗುತ್ತದೆ. ಆದರೆ ಇದು ಮತ್ತಷ್ಟು ಸಾಮಾನುಗಳನ್ನು ಕೊಳ್ಳಲು ಪ್ರೇರೇಪಿಸುತ್ತದೆ.

ಕೊನೆಗೂ ನಮಗೆ ವಸ್ತುಗಳಲ್ಲಿ ಸಂತಸ ಇಲ್ಲ ಎಂಬುದು ಗೊತ್ತಾಗುವುದೇ ಇಲ್ಲ. ನಿಜವಾದ ಸಂತಸ, ನೆಮ್ಮದಿ ಇರುವುದು ಅತ್ಯಂತ ಕಮ್ಮಿ ವಸ್ತುಗಳನ್ನು ಹೊಂದಿರುವುದರಲ್ಲಿ" ಅಂತಾನೆ ಸಸಾಕಿ. ಅವನ ಮಿನಿಮಲಿಸಂ ತತ್ವಕ್ಕೆ ಇದೇ ಬುನಾದಿ.
“ನಮ್ಮಲ್ಲಿ ಹಠಾತ್ ಬೇಸರ, ಖಿನ್ನತೆ ಮೂಡಬೇಕೆಂದರೆ ಏನು ಮಾಡಬೇಕು? ನಮ್ಮನ್ನು ಬೇರೆಯವ ರೊಂದಿಗೆ ಹೋಲಿಸಿಕೊಳ್ಳಬೇಕು" ಎನ್ನುವ ಸಸಾಕಿ, ಟೋಕಿಯೋ ನಗರದಲ್ಲಿ 215 ದರ ಅಡಿ ಪುಟ್ಟ ಮನೆಯಲ್ಲಿ ವಾಸವಾಗಿzನೆ. ಆತನ ಮನೆಯಲ್ಲಿ ಮಡಚಿಡಬಹುದಾದ ಮರದ ಪೆಟ್ಟಿಗೆ ಬಿಟ್ಟರೆ ಬೇರಾವ ಪೀಠೋಪಕರಣಗಳೂ ಇಲ್ಲ. ಬರೆಯಲು, ಊಟ ಮಾಡಲು, ತರಕಾರಿ ಕತ್ತರಿಸಲು, ಕಂಪ್ಯೂಟರ್ ಇಟ್ಟುಕೊಳ್ಳಲು... ಹೀಗೆ ಎಲ್ಲದಕ್ಕೂ ಆ ಮರದ ಪೆಟ್ಟಿಗೆಯೇ ಪೀಠೋಪಕರಣ. ಪುಸ್ತಕ ಪ್ರಕಾಶನ ಸಂಸ್ಥೆಯಲ್ಲಿ ಸಂಪಾದಕನಾಗಿದ್ದ ಸಸಾಕಿ, ಸರಳತೆಯೇ ಸುಖಕ್ಕೆ ಮೂಲ ಎಂಬ ತತ್ವ ವನ್ನು ಬಲವಾಗಿ ಪ್ರತಿಪಾದಿಸಿದ್ದಾನೆ.
“ನಮಗೆ ಅಗತ್ಯವಿಲ್ಲದ ಅಷ್ಟೊಂದು ಸಾಮಾನುಗಳು ಏಕೆ ಬೇಕು? ಅವುಗಳನ್ನು ಹೊಂದುವ ಉದ್ದೇಶವಾದರೂ ಏನು? ವಸ್ತುಗಳಲ್ಲಿ, ಸಾಮಗ್ರಿಗಳಲ್ಲಿ ಸಂತೋಷವಿದೆ ಎಂದು ನಾವು ತಪ್ಪಾಗಿ ಭಾವಿಸಿದ್ದೇವೆ. ಪೀಠೋಪಕರಣಗಳಲ್ಲಿ ಸುಖ ಇದೆ ಎಂದು ಅಂದುಕೊಂಡಿದ್ದೇವೆ. ಹೆಚ್ಚು ಹೆಚ್ಚು ಸಾಮಾನುಗಳನ್ನು ಶೇಖರಿಸುತ್ತಾ ಮನೆಯನ್ನು ಗುಜರಿ, ಗೋದಾಮನ್ನಾಗಿ ಪರಿವರ್ತಿಸಿದ್ದೇವೆ. ಇವುಗಳನ್ನು ಹೊಂದುವುದರಲ್ಲಿ ನಮ್ಮ ಸುಖದ ಮೂಲ ಇದೆ ಎಂದು ಭ್ರಮಿಸಿದ್ದೇವೆ" ಅಂತಾನೆ ಸಸಾಕಿ.
ಇತ್ತೀಚಿನ ತಲೆಮಾರಿಗೆ ‘ಮಿನಿಮಲಿಸಂ’ ಅಥವಾ ‘ಸರಳತೆಯ ತತ್ವ’ ಹೊಸದಾಗಿ ರೂಪುಗೊಂಡ ಶೈಲಿಯಾಗಿದೆ. ಇದು ಕೇವಲ ಅಲಂಕಾರ ಅಥವಾ ವಾಸ್ತುಶಿಲ್ಪಕ್ಕಷ್ಟೇ ಸೀಮಿತವಲ್ಲದೆ, ಮನಃ ಶಾಸ, ಆತ್ಮಶುದ್ಧಿ, ಪರಿಸರ ಸಂರಕ್ಷಣೆ ಮತ್ತು ಅಧ್ಯಾತ್ಮಕ್ಕೂ ಸಂಬಂಧಿಸಿರುವ ಪ್ರeಪೂರ್ವಕವಾದ ಆಯ್ಕೆಗಳ ಸಂಕಲನವಾಗಿದೆ.
Goodbye, Things ಎಂಬ ಕೃತಿಯಲ್ಲಿ ಸಸಾಕಿ ತಾನು ಹೇಗೆ ಸಾವಿರಾರು ವಸ್ತುಗಳನ್ನು ಬಿಟ್ಟು ಸರಳ ಜೀವನಕ್ಕೆ ಪ್ರವೇಶಿಸಿದೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಿದ್ದಾನೆ. ನನಗೆ ಸಸಾಕಿ ಹೇಳಿದ ಒಂದು ಮಾತು ಬಹಳ ಇಷ್ಟ- Immerse yourself in life, not belongings, and you'll be rich. ಹಾಗೆ ನೋಡಿದರೆ, ಮಿನಿಮಲಿಸಂ ಹೊಸ ತತ್ವವೇನೂ ಅಲ್ಲ. ಅದು ಜಪಾನಿನ ಮೌಲಿಕ ಸಂಸ್ಕೃತಿಯಲ್ಲಿ ಶತಶತಮಾನಗಳಿಂದ ಮಿಳಿತವಾಗಿದೆ.
ಝೆನ್ ಬೌದ್ಧಧರ್ಮ, ತಾತ್ವಿಕ ಶಿಂಟೋ ತತ್ವಗಳು ಮತ್ತು ವಾಬಿ-ಸಾಬಿ (ಅಪೂರ್ಣದಲ್ಲಿ ಸೌಂದರ್ಯ ಕಾಣುವುದು) ಈ ತತ್ವದ ಮೂಲ ಆಧಾರಗಳಾಗಿವೆ. ಇವು ಎಲ್ಲವೂ ‘ಮೂಲಭೂತಕ್ಕೆ ಮರಳುವುದು’, ‘ಹಾಸ್ಯವಿಲ್ಲದ ಶ್ರೇಷ್ಠತೆ’ ಮತ್ತು ‘ಪ್ರಕೃತಿಯೊಂದಿಗೆ ಹೊಂದಾಣಿಕೆ’ ಎಂಬ ಅಂಶ ಗಳನ್ನು ಪ್ರಮುಖವಾಗಿ ಒತ್ತಿಹೇಳುತ್ತವೆ. ಆದರೆ ಇತ್ತೀಚಿನ ಪೀಳಿಗೆ- ವಿಶೇಷವಾಗಿ 21ನೇ ಶತಮಾನ ದಲ್ಲಿನ ನಗರ ಜೀವನ, ಹೆಚ್ಚಿನ ಆರ್ಥಿಕ ಒತ್ತಡ, ತಂತ್ರಜ್ಞಾನದ ಅತಿರೇಕ ಮತ್ತು ಮಾನಸಿಕ ಅಶಾಂತಿ- ಇವೆಲ್ಲವು ಮನುಷ್ಯರನ್ನು ಪುನಃ ಸರಳತೆಯೆಡೆಗೆ ಆಕರ್ಷಿಸುತ್ತಿವೆ.
‘ನ್ಯೂ ಜಪಾನೀಸ್ ಮಿನಿಮಲಿಸಂ’ ಎಂಬ ಪದ ಈ ತತ್ವದ ನವೀನ ರೂಪವನ್ನು ಸೂಚಿಸುತ್ತದೆ. ಇದು ಶ್ರೇಯಸ್ಸು ಮತ್ತು ಶ್ರೇಷ್ಠತೆಗಾಗಿ ಹೆಚ್ಚು ವಸ್ತುಗಳನ್ನು ಸಂಗ್ರಹಿಸಬೇಕೆಂಬ ಮನೋಭಾವಕ್ಕೆ ವಿರುದ್ಧವಾಗಿ, ಅತ್ಯವಶ್ಯಕ ವಸ್ತುಗಳ ಜತೆಗೆ ಸಮಾಧಾನವಾಗಿ ಬದುಕುವುದು ಎಂಬುದರ ಪರಿಕಲ್ಪನೆಯಾಗಿದೆ. ಇದು ಪ್ರತಿಯೊಬ್ಬರ ಜೀವನವನ್ನು ಸ್ಪಷ್ಟಗೊಳಿಸುವ, ಸಮರ್ಪಕಗೊಳಿಸುವ ಹಾಗೂ ಸುಖದಾಯಕವಾಗಿಸುವ ಚಿಂತನೆ.
‘ನ್ಯೂ ಜಪಾನೀಸ್ ಮಿನಿಮಲಿಸಂ’ ತತ್ವದ ಪ್ರಮುಖ ಅಂಶಗಳೆಂದರೆ:
1.ಮಾನಸಿಕ ಸ್ಪಷ್ಟತೆ ( Mental Clarity): ಕಡಿಮೆ ವಸ್ತುಗಳು ಮನಸ್ಸಿಗೆ ಹೆಚ್ಚು ಶಾಂತಿಯನ್ನು ಒದಗಿಸುತ್ತವೆ. ಹೆಚ್ಚು ವಸ್ತುಗಳು ಗೊಂದಲವನ್ನುಂಟುಮಾಡುತ್ತವೆ, ಸರಳವಾದ ವಾತಾವರಣ ಹೆಚ್ಚು ಸ್ಪಷ್ಟ ಹಾಗೂ ಕೇಂದ್ರೀಕೃತ ಚಿಂತನೆಗೆ ಕಾರಣವಾಗುತ್ತದೆ.
2.ಪರಿಸರ ಸ್ನೇಹಿ ಜೀವನಶೈಲಿ ( Eco-conscious Living): ನ್ಯೂ ಮಿನಿಮಲಿಸಂ ಗಾಳಿಗೆ, ನೀರಿಗೆ, ಭೂಮಿಗೆ ಪ್ರೀತಿಯಿಂದ ನಡೆದುಕೊಳ್ಳುವುದನ್ನು ಉತ್ತೇಜಿಸುತ್ತದೆ. ಕಡಿಮೆ ಉತ್ಪನ್ನಗಳ ಬಳಕೆ, ಮರುಬಳಕೆ ಮತ್ತು ನಾವೀನ್ಯದೊಂದಿಗೆ ಶಿಷ್ಟ ಉಪಭೋಗದ ದಾರಿಯಾಗಿದೆ.
3.ಆತ್ಮಾನುಶಾಸನ ಮತ್ತು ಪ್ರಜ್ಞಾಪೂರ್ವಕ ಬದುಕು: ತಕ್ಷಣ ಸುಖ ಅಥವಾ ತೃಪ್ತಿಯ ಅನುಭವದ ಬದಲು, ಜೀವನವನ್ನು ಮೌಲ್ಯಯುತವಾಗಿ ನಿರ್ವಹಿಸಲು ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳುವ ರೀತಿ ಇದಾಗಿದೆ.
4.ಸಂವೇದನೆ ಮತ್ತು ಸೌಂದರ್ಯ: ಮಿನಿಮಲಿಸ್ಟಿಕ್ ವಿನ್ಯಾಸದಲ್ಲಿ ಸ್ಪಷ್ಟತೆಯ ಜತೆಗೆ ಮೃದುತನ, ಬೆಳಕು ಮತ್ತು ಸ್ಥಿತಿಗತಿಯ ಸಮತೋಲನವಿರುತ್ತವೆ. ಇದು ಜಪಾನಿಯರ ಒಳಾಂಗಣ ವಿನ್ಯಾಸದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಹೆಸರು ಹೇಳುವ ಸಂಸ್ಕೃತಿಯ ಮಹತ್ವ
ಜಪಾನಿ ಭಾಷೆಯಲ್ಲಿ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡುವಾಗ, ಅವನ ಅಥವಾ ಅವಳ ಹೆಸರಿನ ಜತೆಗೆ ಯಾವ ಉಪಸರ್ಗ ( suffix ) ಅಥವಾ ಪದವನ್ನು ಬಳಸಲಾಗುತ್ತಿದೆ ಎಂಬುದಕ್ಕೆ ತುಂಬಾ ಮಹತ್ವ. ಈ ಉಪಸರ್ಗಗಳು ಸಂಬಂಧದ ನಿಕಟತೆ, ಗೌರವದ ಮಟ್ಟ, ವ್ಯಕ್ತಿಯ ಸ್ಥಾನಮಾನ ಮತ್ತು ಅವರೊಡನೆಯ ಅನುಬಂಧವನ್ನು ಪ್ರತಿಬಿಂಬಿಸುತ್ತವೆ. ಇದಕ್ಕೆ ಉದಾಹರಣೆಗಳು ಹೀಗಿವೆ:
ಸಾನ್: ಇದು ಸಾಮಾನ್ಯ ಉಪಸರ್ಗ. ಇದನ್ನು ಗೌರವ ಸೂಚಕವಾಗಿ ಬಳಸಲಾಗುತ್ತದೆ. ಇದನ್ನು ‘ಶ್ರೀ’ ಅಥವಾ ‘ಸೌ’ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ: ತಾಕಾಹಾಶಿ-ಸಾನ್. ಚಾನ್: ಸ್ನೇಹಪೂರ್ಣ, ಜೋಕು ಅಥವಾ ಪ್ರೀತಿಯ ಭಾವನೆ ಹೊಂದಿರುವ ಉಪಸರ್ಗ. ಸಾಮಾನ್ಯ ವಾಗಿ ಮಕ್ಕಳಿಗೆ ಅಥವಾ ತುಂಬಾ ಹತ್ತಿರದ ಸ್ನೇಹಿತರಿಗೆ ಬಳಸುತ್ತಾರೆ.
ಕುನ್: ಮಕ್ಕಳಿಗೆ, ಹುಡುಗರಿಗೆ ಅಥವಾ ಹಿರಿಯರು ಯುವಕರಿರೊಂದಿಗೆ ಮಾತನಾಡುವಾಗ ಬಳಸುತ್ತಾರೆ.
ಸೆನ್ಸೈ: ಗುರುಗಳು, ವೈದ್ಯರು ಅಥವಾ ಇತರ ಗೌರವಾನ್ವಿತ ವ್ಯಕ್ತಿಗಳಿಗೆ ಬಳಸಲಾಗುತ್ತದೆ.
ಸಮಾ: ಅತ್ಯಂತ ಗೌರವಪೂರ್ಣ ರೂಪ, ವ್ಯಾಪಾರಿಕ ಮಾತುಕತೆಗಳಲ್ಲಿ ಅಥವಾ ರಾಜಕೀಯ ಹಿನ್ನೆಲೆಯಲ್ಲಿ ಬಳಸುತ್ತಾರೆ.
ಜಪಾನಿ ಸಮಾಜದಲ್ಲಿ ಹೈರರ್ಕಿ ( hierarchy) ಬಹುಮುಖ್ಯ. ಹಿರಿಯರು, ಮೇಲಧಿಕಾರಿಗಳು ಅಥವಾ ಅನುಭವಿಗಳ ಎದುರು ಹೇಗೆ ಮಾತನಾಡುವುದು ಎಂಬುದು ತುಂಬಾ ನಿಖರವಾಗಿದೆ. ಇದು ಶಿಷ್ಟ ಭಾಷಾಶೈಲಿಯಿಂದ ವ್ಯಕ್ತಗೊಳ್ಳುತ್ತದೆ. ಹೀಗಾಗಿ ಯಾರಿಗೂ ಹೆಸರಿನಿಂದಲೇ, ತಪ್ಪಾಗಿ ಅಥವಾ ಗಡುಸಾಗಿ ಕರೆದರೆ ಅದು ಅಗೌರವ ಎಂದು ಅನಿಸಿಕೊಳ್ಳಬಹುದು. ಉದಾಹರಣೆಗೆ, ಮ್ಯಾನೇಜರ್ ಅಥವಾ ಅಧ್ಯಾಪಕರಿಗೆ ಅವರ ಹೆಸರನ್ನು ಕೇವಲ ತಾಕಾಹಾಶಿ ಎಂದು ಕರೆಯುವುದು ಸರಿ ಅಲ್ಲ. ‘ತಾಕಾಹಾಶಿ-ಸಾನ್’ ಅಥವಾ ‘ತಾಕಾಹಾಶಿ-ಸೆನ್ಸೈ’ ಎಂದು ಕರೆಯುವುದು ಶಿಷ್ಟ.
ಬಹಳಷ್ಟು ವಿದೇಶಿಗರಿಗೆ ಜಪಾನಿಗೆ ಬಂದಾಗ, ಹೆಸರು ಹೇಳುವ ಈ ಸಂಸ್ಕೃತಿಯ ತಳಹದಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು. ಆದರೆ ಅವರು ಪದೇ ಪದೆ ತಪ್ಪು ಉಪಸರ್ಗಗಳನ್ನು ಬಳಸಿದರೆ, ಅದು ಸ್ಥಳೀಯರ ಕಣ್ಣಲ್ಲಿ ಅಗೌರವವಾಗಿ ಕಾಣಬಹುದು. ಆದ್ದರಿಂದ, ವಿದೇಶಿಗರಿಗೆ ‘ಸಾನ್’ ಎಂಬ ಉಪಸರ್ಗವನ್ನು ಸಾಮಾನ್ಯವಾಗಿ ಬಳಸುವುದನ್ನು ಸಲಹೆ ಮಾಡಲಾಗುತ್ತದೆ.
ಇದು ತಪ್ಪಾಗದ, ಸರಳ ಉಪಾಯ. ಜಪಾನಿನಲ್ಲಿ ಯಾರನ್ನಾದರೂ ಅವರ ಹೆಸರನ್ನು ಯಾವುದೇ ಉಪಸರ್ಗವಿಲ್ಲದೇ ಕರೆದರೆ, ಅದನ್ನು ಬಹಳ ಅಹಂಕಾರದ ಅಥವಾ ದರ್ಪದ ಶೈಲಿ ಎಂದು ಪರಿಗಣಿಸಬಹುದು. ಇದು ಮುಖ್ಯವಾಗಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಬಂದಿರುವ ಪದ್ಧತಿಯಾದರೂ ಜಪಾನಿನಲ್ಲಿ ಇನ್ನೂ ಸ್ವೀಕೃತವಾಗಿಲ್ಲ. ಕೇವಲ ಅತ್ಯಂತ ಹತ್ತಿರದ ಸಂಬಂಧ ಗಳಲ್ಲಿ ಅಥವಾ ದಂಪತಿಗಳ ನಡುವೆ ಮಾತ್ರ ಈ ಪದ್ಧತಿಯನ್ನು ಬಳಸಬಹುದು.