Manpreet Singh: 400ನೇ ಅಂತಾರಾಷ್ಟ್ರೀಯ ಹಾಕಿ ಪಂದ್ಯ ಪೂರ್ಣಗೊಳಿಸಿದ ಮನ್‌ಪ್ರೀತ್ ಸಿಂಗ್
ಭಾನುವಾರ ನಡೆದ ಎಫ್ಐಎಚ್ ಹಾಕಿ ಪ್ರೊ ಲೀಗ್‌ನ(FIH Hockey Pro League) ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಮನ್‌ಪ್ರೀತ್ ಸಿಂಗ್ 400ನೇ ಪಂದ್ಯವನ್ನಾಡಿದ ಸಾಧನೆ ಮಾಡಿದರು. ಆದರೆ ಪಂದ್ಯದಲ್ಲಿ ಭಾರತ 2-3 ಅಂತರದಿಂದ ಸೋಲು ಕಂಡಿತ್ತು. ಭಾರತ ಗೆಲ್ಲುತ್ತಿದ್ದರೆ ಮನ್‌ಪ್ರೀತ್‌ಗೆ ಈ ಪಂದ್ಯ ಸ್ಮರಣೀಯವಾಗುತ್ತಿತ್ತು.


ನವದೆಹಲಿ: ಭಾರತ ಹಾಕಿ ತಂಡದ ಮಿಡ್‌ಫೀಲ್ಡರ್ ಆಟಗಾರ ಮನ್‌ಪ್ರೀತ್ ಸಿಂಗ್(Manpreet Singh) ಅವರು ತಮ್ಮ ಅಂತಾರಾಷ್ಟ್ರೀಯ ಹಾಕಿ ವೃತ್ತಿಜೀವನದಲ್ಲಿ ಮಹತ್ವ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಭಾರತ ತಂಡದ ಪರ 400ನೇ ಪಂದ್ಯವನ್ನಾಡಿದ ಎರಡನೇ ಮತ್ತು ವಿಶ್ವದ 8ನೇ ಆಟಗಾರ ಎನಿಕೊಂಡಿದ್ದಾರೆ. ಭಾರತೀಯ ದಾಖಲೆ ಭಾರತದ ಮಾಜಿ ನಾಯಕ, ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ(412) ಹೆಸರಿನಲ್ಲಿದೆ.
ಭಾನುವಾರ ನಡೆದ ಎಫ್ಐಎಚ್ ಹಾಕಿ ಪ್ರೊ ಲೀಗ್‌ನ(FIH Hockey Pro League) ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಮನ್‌ಪ್ರೀತ್ ಸಿಂಗ್ 400ನೇ ಪಂದ್ಯವನ್ನಾಡಿದ ಸಾಧನೆ ಮಾಡಿದರು. ಆದರೆ ಪಂದ್ಯದಲ್ಲಿ ಭಾರತ 2-3 ಅಂತರದಿಂದ ಸೋಲು ಕಂಡಿತ್ತು. ಭಾರತ ಗೆಲ್ಲುತ್ತಿದ್ದರೆ ಮನ್‌ಪ್ರೀತ್‌ಗೆ ಈ ಪಂದ್ಯ ಸ್ಮರಣೀಯವಾಗುತ್ತಿತ್ತು.
ಪಂದ್ಯಕ್ಕೂ ಮುನ್ನ ಮಾತನಾಡಿದ ಮನ್‌ಪ್ರೀತ್ ಸಿಂಗ್, "ನನ್ನ ಚೊಚ್ಚಲ ಪಂದ್ಯದಲ್ಲಿ ನಾನು ಅನುಭವಿಸಿದ ರೋಮಾಂಚನ ನನಗೆ ಇನ್ನೂ ನೆನಪಿದೆ. ಆದರೆ ಇದು 400 ಪಂದ್ಯಗಳ ವರೆಗೆ ವಿಸ್ತರಿಸುತ್ತದೆ ಎಂದು ಚಿಂತಿಸಿಯೂ ಇಲ್ಲ. ಈ ಮೈಲಿಗಲ್ಲು ತಲುಪಲು ನನಗೆ ಸಹಾಯ ಮಾಡಿದ ಪ್ರತಿಯೊಬ್ಬ ತರಬೇತುದಾರರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳು ಕಾರಣ. ನಾನು ಇನ್ನೂ ಕಲಿಯುತ್ತಿದ್ದೇನೆ, ಇನ್ನೂ ಬೆಳೆಯುತ್ತಿದ್ದೇನೆ. ಮತ್ತು 19ನೇ ವಯಸ್ಸಿನಲ್ಲಿ ನನ್ನಲ್ಲಿದ್ದ ಅದೇ ಹುಮ್ಮಸ್ಸಿನಿಂದ ಈಗಲೂ ಆಡುತ್ತೇನೆ" ಎಂದು ಹಾಕಿ ಇಂಡಿಯಾಗೆ ತಿಳಿಸಿದರು.
400 caps. Infinite inspiration 🇮🇳
— Hockey India (@TheHockeyIndia) June 15, 2025
From the roar of his first cap to the silence of sacrifices made, Manpreet Singh’s journey is not just about numbers.
It’s about heart. It’s about hustle. It’s about India. 💙🏑
Here’s to a leader, a fighter, and a legend who’s worn the jersey… pic.twitter.com/IOYpiCZxX3
2011 ರಲ್ಲಿ 19 ವರ್ಷ ಪ್ರಾಯದಲ್ಲಿ ಭಾರತ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ ಮನ್‌ಪ್ರೀತ್ ಅವಳಿ ಒಲಿಂಪಿಕ್ ಕಂಚಿನ ಪದಕ ಗೆದ್ದ ತಂಡದ ಸದಸ್ಯನಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಇವರ ನಾಯಕತ್ವದಲ್ಲೇ ಕಂಚಿನ ಪದಕ ಗೆದ್ದಿತ್ತು. ಈ ಮೂಲಕ 1980 ರ ನಂತರ ಮೊದಲ ಬಾರಿಗೆ ಹಾಕಿ ಪಂದ್ಯದಲ್ಲಿ ಭಾರತೀಯ ತಂಡ ಪದಕ ಗೆದ್ದ ಸಾಧನೆ ಮಾಡಿತ್ತು. ಕಳೆದ ವರ್ಷ ಪ್ಯಾರಿಸ್‌ನಲ್ಲಿ ಕಂಚಿನ ಪದಕ ಗೆದ್ದಾಗಲೂ ಮನ್‌ಪ್ರೀತ್ ತಂಡದಲ್ಲಿದ್ದರು.
ಮನ್‌ಪ್ರೀತ್‌ಗೆ 2018 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2021 ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಅವರು 2019 ರಲ್ಲಿ ಎಫ್‌ಐಎಚ್ ವರ್ಷದ ಪುರುಷರ ಆಟಗಾರರಾಗಿದ್ದರು.
ಮನ್‌ಪ್ರೀತ್ ಸಿಂಗ್ ಪ್ರಮುಖ ಸಾಧನೆಗಳು
2 ಒಲಿಂಪಿಕ್ ಕಂಚಿನ ಪದಕಗಳು (2020 ನಾಯಕನಾಗಿ, 2024)
2 ಏಷ್ಯನ್ ಗೇಮ್ಸ್ ಚಿನ್ನದ ಪದಕಗಳು (2014, 2023)
2 ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕಗಳು (2014, 2022)
4 ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗಳು (2013, 2018, 2023, 2024)
ಪೋಡಿಯಂ 2014-15 ಮತ್ತು 2016-17ರ FIH ವರ್ಲ್ಡ್ ಲೀಗ್ ಮತ್ತು ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ 2018 ರಲ್ಲಿ.