ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಶತಕ ಬಾರಿಸಿದ ಸರ್ಫರಾಜ್‌; ಕಳಪೆ ಪ್ರದರ್ಶನ ತೋರಿದ ಬುಮ್ರಾ

intra-squad match: ಎರಡನೇ ದಿನದ ಅಂತ್ಯಕ್ಕೆ ಭಾರತ ಎ ತಂಡ 6 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿ, ಪ್ರಮುಖ ಭಾರತ ತಂಡಕ್ಕಿಂತ 160 ರನ್‌ಗಳ ಹಿನ್ನಡೆಯಲ್ಲಿದೆ. ಸಾಯಿ ಸುದರ್ಶನ್ 60 ಎಸೆತಗಳಲ್ಲಿ 38 ರನ್ ಗಳಿಸಿದರೆ, ಇಶಾನ್ ಕಿಶನ್ 55 ಎಸೆತಗಳಲ್ಲಿ 45 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ವಾಷಿಂಗ್ಟನ್ ಸುಂದರ್ ಸ್ಥಿರ 35 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಶತಕ ಬಾರಿಸಿದ ಸರ್ಫರಾಜ್‌; ಕಳಪೆ ಪ್ರದರ್ಶನ ತೋರಿದ ಬುಮ್ರಾ

Profile Abhilash BC Jun 15, 2025 11:41 AM

ಬೆಕೆನ್‌ ಹಾಮ್‌ (ಕೆಂಟ್‌): ಇಲ್ಲಿನ ಕೆಂಟ್ ಕೌಂಟಿ ಮೈದಾನದಲ್ಲಿ ನಡೆಯುತ್ತಿರುವ ಇಂಟ್ರಾ-ಸ್ಕ್ವಾಡ್(intra-squad match) ಪಂದ್ಯದ 2ನೇ ದಿನವಾದ ಶನಿವಾರವೂ ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ಸಿದ್ಧತೆಗಳು ಮುಂದುವರೆದವು. ಸರ್ಫರಾಜ್ ಖಾನ್(Sarfaraz Khan) ಭರ್ಜರಿ ಶತಕ ಬಾರಿಸಿದರೆ, ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ವಿಕೆಟ್ ಲೆಸ್‌ ಎನಿಸಿಕೊಂಡರು.

ಮೊದಲ ದಿನದಂದು ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅರ್ಧಶತಕಗಳೊಂದಿಗೆ ಪ್ರಭಾವ ಬೀರಿದ ನಂತರ, ಎರಡನೇ ದಿನದಂದು ಭಾರತ ಎ ಪರ ಆಡುತ್ತಿರುವ ಸರ್ಫರಾಜ್ ಗಮನ ಸೆಳೆದರು. ಐದು ಪಂದ್ಯಗಳ ಸರಣಿಗೆ ಭಾರತದ ಅಧಿಕೃತ ತಂಡದಲ್ಲಿ ಹೆಸರಿಸದಿದ್ದರೂ, 27 ವರ್ಷದ ಬಲಗೈ ಬೌಲರ್ ಕೇವಲ 76 ಎಸೆತಗಳಲ್ಲಿ 15 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದರು.

ಸರ್ಫರಾಜ್ ಅವರನ್ನು ಮುಖ್ಯ ತಂಡದಿಂದ ಕೈಬಿಟ್ಟಿರುವುದು ಅಭಿಮಾನಿಗಳು ಮತ್ತು ತಜ್ಞರು ಪ್ರಶ್ನೆ ಮಾಡುವಂತೆ ಮಾಡಿದೆ. ಕ್ಯಾಂಟರ್ಬರಿಯಲ್ಲಿ ನಡೆದ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ಅವರು 92 ರನ್ ಗಳಿಸಿದ್ದರು. ಭಾರತ ಪರ ಇದುವರೆಗೆ ಆರು ಟೆಸ್ಟ್ ಪಂದ್ಯಗಳನ್ನು ಆಡಿಡುವ ಸರ್ಫರಾಜ್ 37.10 ಸರಾಸರಿಯಲ್ಲಿ 371 ರನ್ ಗಳಿಸಿದ್ದಾರೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮರಣೀಯ 150 ರನ್ ಬಾರಿಸಿದ್ದರು.

ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ ವಿಕೆಟ್ ಪಡೆಯದೆ ಪ್ರತಿ ಓವರ್‌ಗೆ ಐದು ರನ್‌ಗಳಂತೆ ಬಿಟ್ಟುಕೊಟ್ಟರು. ಇದು ಬುಮ್ರಾ ಲಯ ಮತ್ತು ಸಿದ್ಧತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮೊಹಮ್ಮದ್ ಸಿರಾಜ್ ಎರಡು ವಿಕೆಟ್‌ಗಳನ್ನು ಪಡೆದಿದ್ದರೂ, ದುಬಾರಿಯಾಗಿದ್ದರು, ಪ್ರತಿ ಓವರ್‌ಗೆ ಏಳು ರನ್‌ಗಳಿಗಿಂತ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟರು. ಸರಣಿ ಆರಂಭಕ್ಕೂ ಮುನ್ನವೇ ಭಾರತದ ವೇಗಿಗಳ ಈ ಕಳಪೆ ಪ್ರದರ್ಶನ ಭಾರೀ ಚಿಂತೆ ಪಡುವಂತೆ ಮಾಡಿದೆ.

ಇದನ್ನೂ ಓದಿ IND vs ENG: ಕೆಎಲ್‌ ರಾಹುಲ್‌ ಬೇಡ, ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಲಿ ಎಂದ ಬ್ರಾಡ್ ಹಾಗ್!

ಎರಡನೇ ದಿನದ ಅಂತ್ಯಕ್ಕೆ ಭಾರತ ಎ ತಂಡ 6 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿ, ಪ್ರಮುಖ ಭಾರತ ತಂಡಕ್ಕಿಂತ 160 ರನ್‌ಗಳ ಹಿನ್ನಡೆಯಲ್ಲಿದೆ. ಸಾಯಿ ಸುದರ್ಶನ್ 60 ಎಸೆತಗಳಲ್ಲಿ 38 ರನ್ ಗಳಿಸಿದರೆ, ಇಶಾನ್ ಕಿಶನ್ 55 ಎಸೆತಗಳಲ್ಲಿ 45 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ವಾಷಿಂಗ್ಟನ್ ಸುಂದರ್ ಸ್ಥಿರ 35 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಆದಾಗ್ಯೂ, ಭಾರತ ಎ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾದರು.