ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Auto LPG shortage: ಬೆಂಗಳೂರಿನಲ್ಲಿ ಎಲ್‌ಪಿಜಿಗೆ ಹಾಹಾಕಾರ; ಬಂಕ್‌ಗಳ ಮುಂದೆ ಕಿ.ಮೀ.ಗಟ್ಟಲೇ ಆಟೋಗಳ ಕ್ಯೂ!

ಎಲ್‌ಪಿಜಿಗೆ ಹಾಹಾಕಾರ; ಬಂಕ್‌ಗಳ ಮುಂದೆ ಕಿ.ಮೀ.ಗಟ್ಟಲೇ ಆಟೋಗಳ ಕ್ಯೂ!

Auto LPG shortage: ರಾಜ್ಯದಲ್ಲಿ ಗ್ಯಾಸ್‌ ಕೊರತೆ ಹಿನ್ನೆಲೆಯಲ್ಲಿ ಆಟೋ ಎಲ್‌ಪಿಜಿ ದರವು ಪೆಟ್ರೋಲ್‌ ಬೆಲೆಯನ್ನೂ ಮೀರಿಸಿದೆ. ಆಟೋ ಗ್ಯಾಸ್‌ 105 ರೂ.ಗೆ ಹೆಚ್ಚಳವಾಗಿದ್ದು, ಆಟೋ ಚಾಲಕರು ಪರದಾಡುವಂತಾಗಿದೆ. ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ.

N. Santosh Hegde: ವೇದಿಕೆ ಮೇಲೆ ಅಸ್ವಸ್ಥಗೊಂಡು ಕುಸಿದುಬಿದ್ದ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ; ಆಸ್ಪತ್ರೆಗೆ ದಾಖಲು

ಅಸ್ವಸ್ಥಗೊಂಡು ಕುಸಿದುಬಿದ್ದ ಎನ್. ಸಂತೋಷ್ ಹೆಗ್ಡೆ; ಆಸ್ಪತ್ರೆಗೆ ದಾಖಲು

ಬೆಂಗಳೂರಿನ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಆಯುಕ್ತ ಪಿಜಿಆರ್‌ ಸಿಂಧ್ಯ ಅವರ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಂತೋಷ್ ಹೆಗ್ಡೆ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಸಂತೋಷ್ ಹೆಗ್ಡೆ ಅವರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.

ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಮಾಡಿದ್ದಾನೆ: ಸಮೀರ್‌ ಮುಲ್ಲಾ ವಿರುದ್ಧ ಸಂತ್ರಸ್ತ ಯುವತಿ ಆರೋಪ!

ನನ್ನ ಮೇಲೆ ಸಮೀರ್‌ ಮುಲ್ಲಾ ಅತ್ಯಾಚಾರ ಮಾಡಿದ್ದಾನೆ: ಸಂತ್ರಸ್ತ ಯುವತಿ

Hubballi love jihad Case: ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿರುವ ಸಂತ್ರಸ್ತ ಯುವತಿ, ಸಮೀರ್‌ ತನಗೆ ಮತ್ತು ಬರಿಸುವ ಪಾನೀಯ ಕೊಟ್ಟು ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ವಿಡಿಯೊ ಕೂಡ ಮಾಡಿಕೊಂಡಿದ್ದಾನೆ. ಇನ್ನೂ ಹಲವು ಯುವತಿಯರನ್ನು ಆತ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾಳೆ.

ಸುರಪುರದಲ್ಲಿ ಬಡವರ ಅನ್ನಕ್ಕೆ ಕನ್ನ, ಪಡಿತರ ಅಕ್ಕಿ ಅಕ್ರಮ ಮಾರಾಟ; ತಹಸೀಲ್ದಾರ್‌ಗೆ ದೂರು

ಸುರಪುರದಲ್ಲಿ ಬಡವರ ಅನ್ನಕ್ಕೆ ಕನ್ನ, ಪಡಿತರ ಅಕ್ಕಿ ಅಕ್ರಮ ಮಾರಾಟ!

Ration Rice Smuggling: ಸುರಪುರದ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಪಡಿತರ ವಿತರಿಸುವಾಗ 2 ಕೆಜಿ ಅಕ್ಕಿ ಕಡಿತಗೊಳಿಸಿವುದಲ್ಲದೆ, ಕೆಲ ಪಡಿತರ ಚೀಟಿದಾರರಿಂದ ಅಕ್ಕಿ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮರಹಾನಕುಳಿ ಜ್ಞಾನ ಗಿರಿಗೆ ಶತಮಾನದ ಸಂಭ್ರಮ..

ಮರಹಾನಕುಳಿ ಜ್ಞಾನ ಗಿರಿಗೆ ಶತಮಾನದ ಸಂಭ್ರಮ..

ಬ್ರಿಟಿಷರ ಆಳ್ವಿಕೆಯ ಸಂದರ್ಭ ಅಂದರೆ 1925 ರಲ್ಲಿ ಹೊಸಳ್ಳಿ ಆಂಜನೇಯ ದೇವಾಲಯದಲ್ಲಿ ಸ್ಥಾಪನೆಗೊಂಡ ಶಾಲೆ ನಂತರ ಹಿಂಡು ನಂಜುಂಡಪ್ಪನವರ ಮನೆ ಅಂಗಳಕ್ಕೆ ಬಂದು ತದ ನಂತರ ಮರಹಾನುಕುಳಿ ದೇವಸ್ಥಾನ ದಲ್ಲಿ ನಡೆದು ಕೆಲ ವರ್ಷಗಳ ನಂತರ ಸರಕಾರಿ ಕಟ್ಟಡ ದಲ್ಲಿ ಆರಂಭವಾಯಿತು.

ಕರ್ನಾಟಕದಲ್ಲಿ ಮೂರು ವರ್ಷದಲ್ಲಿ 2,809 ರೈತರ ಸಾವು: ಕಾಂಗ್ರೆಸ್‌ ಸರ್ಕಾರದ ಆಡಳಿತದ ಬಗ್ಗೆ ಸಚಿವ ಸೋಮಣ್ಣ ಕಿಡಿ

ಮೂರು ವರ್ಷದಲ್ಲಿ 2,809 ರೈತರ ಸಾವು: ಸಚಿವ ಸೋಮಣ್ಣ ಕಿಡಿ

V Somanna: ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಿತಿಮೀರಿದೆ. ಅವ್ಯವಸ್ಥೆಯ ಆಗರವಾಗಿದೆ. ತಮ್ಮವರೇ ನಿಂದಿಸಿದರೂ ಎಚ್ಚೆತ್ತುಕೊಳ್ಳದ ನಿರ್ಲಿಪ್ತ ಸರ್ಕಾರ ಸಿದ್ದರಾಮಯ್ಯ ಅವರದು ಎಂದು ಟೀಕಿಸಿದ ಕೇಂದ್ರ ಸಚಿವ ವಿ. ಸೋಮಣ್ಣ, ಮೂಲಭೂತ ಸೌಕರ್ಯದತ್ತ ಎಲ್ಲೂ ಗಮನ ಕೊಡದೇ ಇಡೀ ಸಚಿವ ಸಂಪುಟ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಷ್ಟ್ರಪತಿ ಬಂದಾಗ ಶಿಷ್ಟಾಚಾರ ಉಲ್ಲಂಘನೆ; ಗೊಂದಲಕ್ಕೆ ತೆರೆ ಎಳೆದ ಸಿದ್ದಗಂಗಾ ಶ್ರೀ! Video

ಶಿಷ್ಟಾಚಾರ ಉಲ್ಲಂಘನೆ ಗೊಂದಲಕ್ಕೆ ತೆರೆ ಎಳೆದ ಸಿದ್ದಗಂಗಾ ಶ್ರೀ!

ತುಮಕೂರಿನಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮವರ್ಧಂತಿ ಮಹೋತ್ಸವದ ವೇದಿಕೆಯಲ್ಲಿ ಸಿದ್ದಲಿಂಗ ಶ್ರೀಗಳಿಗೆ ಕೊನೆಯಲ್ಲಿ ಆಸನ ವ್ಯವಸ್ಥೆ ಮಾಡಿದ್ದ ಬಗ್ಗೆ ಭಕ್ತರಲ್ಲಿ ಅಸಮಾಧಾನ ಮೂಡಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಉಂಟಾಗಿದ್ದ ಶಿಷ್ಟಾಚಾರ ಗೊಂದಲದ ಬಗ್ಗೆ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

Hubballi news: ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಆರೋಪ, ಸಮೀರ್ ಪೊಲೀಸ್​ ವಶಕ್ಕೆ‌, ಯುವತಿ ಮನೆಗೆ ನುಗ್ಗಿ ಯುವಕನ ಕುಟುಂಬಸ್ಥರಿಂದ ಗಲಾಟೆ

ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಆರೋಪ, ಎರಡೂ ಕಡೆಯವರಿಂದ ಗಲಾಟೆ

ಯುವತಿ ಮತ್ತು ಸಮೀರ್ ನಡುವೆ ಜಿಮ್‌ನಲ್ಲಿ ಪರಿಚಯವಾಗಿತ್ತು. ಹಿಂದೂ ಕಾರ್ಯಕರ್ತರು ಯುವಕನನ್ನು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದು, ಇದಾದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಸಮೀರ್ ಕುಟುಂಬದವರು ವಿಕಾಸನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂಬ ಆರೋಪ ಕೇಳಿಬಂದಿದೆ.

ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ: ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟನೆ

ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ

Tumkur News: ತುಮಕೂರಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮವರ್ಧಂತಿ ಮಹೋತ್ಸವದ ವೇದಿಕೆಯ ಕೊನೆಯಲ್ಲಿ ಆಸನ ವ್ಯವಸ್ಥೆ ಮಾಡಿದ್ದ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಅವರು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ; ಬೆಂಗಳೂರಿನಲ್ಲಿ ಕಿಲೋ ಮೀಟರ್‌ಗಟ್ಟಲೆ ರಿಕ್ಷಾ ಸಾಲು Video

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ

LPG Crisis: ಪಶ್ಚಿಮ ಏಷ್ಯಾ ಸಂಘರ್ಷ ಏನಾಗಲಿದೆ ಎನ್ನುವ ಗೊಂದಲ ಒಂದೆಡೆಯಾದರೆ, ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಮೀರಿದ ಸಮಸ್ಯೆ ಇದೀಗ ಆಟೋ ಗ್ಯಾಸ್‌ನಲ್ಲಿ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗ್ಯಾಸ್ ಸಿಗದೆ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕುವಂತಾಗಿದೆ. ರಾಜ್ಯದ ಹಲವು ಭಾಗದಲ್ಲಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಇಡೀ ರಾತ್ರಿ ಸ್ಟೇಷನ್‌ಗಳ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಂಗಳೂರಿನ ಹಲವು ಎಲ್‌ಪಿಜಿ ಬಂಕರ್‌ಗಳು ಇಂಧನ ಸಿಗದೇ ಬಂದಾಗಿವೆ.

Coorg News: ತಡಿಯಂಡಮೋಳ್‌ ಚಾರಣಕ್ಕೆ ಹೋದ ಯುವತಿ ನಾಪತ್ತೆ

ತಡಿಯಂಡಮೋಳ್‌ ಚಾರಣಕ್ಕೆ ಹೋದ ಯುವತಿ ನಾಪತ್ತೆ

ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿ ಬಂದಿದ್ದ ಶರಣ್ಯ ಒಬ್ಬರೇ ಬಂದಿದ್ದರು. ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಇರುವುದರಿಂದ ಬೇರೆ ಪ್ರವಾಸಿಗರ ಜೊತೆಯಲ್ಲಿ ಕಳುಹಿಸಲಾಗಿದೆ. ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ಹಿಂತಿರುಗಿ ಬಾರದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ.

Gold Price Today On 3rd April 2026: ಮತ್ತೆ ಹೆಚ್ಚಾಯ್ತು ಚಿನ್ನದ ದರ; ಇಂದು ಏರಿಕೆಯಾಗಿದ್ದು ಬರೋಬ್ಬರಿ 1,440 ರುಪಾಯಿ

ಮತ್ತೆ ಹೆಚ್ಚಾಯ್ತು ಚಿನ್ನದ ದರ

Gold Silver Price Today: ಶುಕ್ರವಾರ (ಏಪ್ರಿಲ್‌ 3) ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 180 ರುಪಾಯಿ ಹೆಚ್ಚಾಗಿದ್ದು13,835 ರುಪಾಯಿಗೆ ಏರಿಕೆಯಾಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 196 ರುಪಾಯಿ ಅಧಿಕವಾಗಿದ್ದು, 15,093 ರುಪಾಯಿಗೆ ಬಂದು ತಲುಪಿದೆ. ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

Bagalkot Byelection: ಬಾಗಲಕೋಟೆಯಲ್ಲಿ ಕಾಂಗ್ರೆಸ್‌ʼಗೆ ಒಳೇಟಿನ ಭೀತಿ

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ʼಗೆ ಒಳೇಟಿನ ಭೀತಿ

ಎಚ್.ವೈ ಮೇಟಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಪುತ್ರ ಉಮೇಶ್ ಮೇಟಿ ಸ್ಪರ್ಧಿಸಿದ್ದಾರೆ. ಆದರೆ ಕೇವಲ ಅನುಕಂಪದ ಅಲೆಯನ್ನೇ ಮೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರ ರನ್ನು ಸೆಳೆಯುವುದೇ ಸವಾಲಿನ ಕೆಲಸವಾಗಿದೆ. ಇಡೀ ಸರಕಾರವೇ ಮೇಟಿ ಪರ ಪ್ರಚಾರದಲ್ಲಿ ತೊಡಗಿದರು ಸಮನ್ವಯ ಕೊರತೆ ಎದ್ದು ಕಾಣುತ್ತಿದೆ

Hindi in SSLC: ಎಸ್ಸೆಸ್ಸೆಲ್ಸಿಯಲ್ಲಿ ಹಿಂದಿ ಭಾಷೆ ಪರೀಕ್ಷೆ ಅಂಕಕ್ಕೆ ಖೊಕ್‌: ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರ ಪತ್ರ

ಎಸ್ಸೆಸ್ಸೆಲ್ಸಿಯಲ್ಲಿ ಹಿಂದಿ ಅಂಕಕ್ಕೆ ಖೊಕ್‌: ಸಿಎಸ್‌ಗೆ ರಾಜ್ಯಪಾಲರ ಪತ್ರ

ಸರ್ಕಾರದ ಈ ನಿರ್ಧಾರ ವಿದ್ಯಾರ್ಥಿಗಳ ಕಲಿಯುವ ಆಸಕ್ತಿಯ ಮೇಲೆ ಪರಿಣಾಮ ಬೀರಬಹುದು. ಪೋಷಕರಿಗೂ ಆತಂಕ ಇದ್ದು, ರಾಜ್ಯಪಾಲರು ಈ ವಿಷಯವನ್ನು ಗಮನಿಸಿದ್ದಾರೆ. ಹೀಗಾಗಿ ಶೈಕ್ಷಣಿಕ, ಆಡಳಿತಾತ್ಮಕ ಅಂಶ ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶೈಕ್ಷಣಿಕ ಉದ್ದೇಶಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಎಸ್​ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

Self Harming: ಕಬ್ಬನ್‌ ಪಾರ್ಕ್‌ನಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಕಬ್ಬನ್‌ ಪಾರ್ಕ್‌ನಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಗುರುವಾರದಿಂದಲೇ ಕಾಣೆಯಾಗಿದ್ದ ಕಬ್ಬನ್ ಪೇಟೆ ಸುರೇಶ್, ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಹೆಚ್​ಎಸ್ಆರ್ ಪೊಲೀಸ್ ಠಾಣೆಗೆ ಆತನ ಕುಟುಂಬಸ್ಥರು ದೂರು ನೀಡಿದ್ದರು. ಇಂದು ಬೆಳಗ್ಗೆ ಪಾರ್ಕ್‌ನ ಮರೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಅಮೆಜಾನ್ ಬಿಸಿನೆಸ್ ಎಂಡ್ ಆಫ್ ಫೈನಾನ್ಷಿಯಲ್ ಇಯರ್ ಸೇಲ್

ಅಮೆಜಾನ್ ಬಿಸಿನೆಸ್ ಎಂಡ್ ಆಫ್ ಫೈನಾನ್ಷಿಯಲ್ ಇಯರ್ ಸೇಲ್

ಲ್ಯಾಪ್ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಂದ ಹಿಡಿದು ಆಫೀಸ್ ಫರ್ನಿಚರ್, ಇಂಡಸ್ಟ್ರಿಯಲ್ ಸಪ್ಲೈಸ್ ಮತ್ತು ಕಿಚನ್ ಅಪ್ಲೈಯನ್ಸ್ ವರೆಗೆ, ಗ್ರಾಹಕರು ಏಸರ್, ಎಚ್‌ಪಿ, ಲೆನೊವೊ, ಬಾಷ್, ಹ್ಯಾವೆಲ್ಸ್, ನಾಯ್ಸ್‌, ಬೋಟ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳಿಂದ ಆಕರ್ಷಕ ಡೀಲ್‌ಗಳನ್ನು ಪಡೆಯಬಹುದು.

RCB vs CSK: ಎ.5 ರಂದು ರಾತ್ರಿ 2ರವರೆಗೆ ಮೆಟ್ರೋ ಸೇವೆ ವಿಸ್ತರಣೆ, ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ವ್ಯವಸ್ಥೆ

ಆರ್‌ಸಿಬಿ vs ಚೆನ್ನೈ ಪಂದ್ಯದಂದು ರಾತ್ರಿ 2ರವರೆಗೆ ಮೆಟ್ರೋ ಸೇವೆ ವಿಸ್ತರಣೆ

IPL 2026: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಎಚ್‌ಎಎಲ್ ರಸ್ತೆ ಮೂಲಕ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ, ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್‌ ಸಿಟಿಗೆ, ನಾಗವಾರ–ಟ್ಯಾನರಿ ರಸ್ತೆ ಮೂಲಕ ಆರ್‌.ಕೆ. ಹೆಗಡೆ ನಗರಕ್ಕೆ, ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‌ಶಿಪ್‌ಗೆ ಸಂಚರಿಸಲಿವೆ. ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ಹೊಸಕೋಟೆ, ಬನಶಂಕರಿ ನಿಲ್ದಾಣಗಳಿಗೆ ಬಸ್‌ ಇರಲಿದೆ.

Bengaluru: ಬೆಂಗಳೂರಿನಲ್ಲಿ ಭಯ ಮೂಡಿಸಿದ ಬಿಳಿ ಬೊಲೆರೋ ಅನುಮಾನಾಸ್ಪದ ಸಂಚಾರ

ಬೆಂಗಳೂರಿನಲ್ಲಿ ಭಯ ಮೂಡಿಸಿದ ಬಿಳಿ ಬೊಲೆರೋ ಅನುಮಾನಾಸ್ಪದ ಸಂಚಾರ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು, ಕಾರಿನ ಚಲನಚಲನ ಅನುಮಾನ ಮೂಡಿಸಿದೆ. ಈ ಕಾರು ಕರ್ನಾಟಕದ್ದಲ್ಲ, ಉತ್ತರ ಪ್ರದೇಶದ ನೋಂದಣಿ ನಂಬರ್ ಇರುವ ಬಿಳಿ ಬೊಲೆರೋ ಕಾರು ಅನ್ನೋದು ಗೊತ್ತಾಗಿದೆ. ವಾಹನದ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ವಿಡಿಯೋ ಇದ್ದು, ವಿಡಿಯೋ ಬಗ್ಗೆ ಬನಶಂಕರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Karnataka weather: ರಾಜ್ಯದಲ್ಲಿ ಇಂದು ಸಾಧಾರಣ ಮಳೆ, ಹಲವೆಡೆ ಯೆಲ್ಲೋ ಅಲರ್ಟ್‌

ರಾಜ್ಯದಲ್ಲಿ ಇಂದು ಸಾಧಾರಣ ಮಳೆ, ಹಲವೆಡೆ ಯೆಲ್ಲೋ ಅಲರ್ಟ್‌

ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಈ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

Kalaburagi Murder: ಕಲಬುರಗಿಯಲ್ಲಿ ಮಾಜಿ ಸಚಿವರ ಸಂಬಂಧಿಕನ ಕೊಚ್ಚಿ ಕೊಲೆ

ಕಲಬುರಗಿಯಲ್ಲಿ ಮಾಜಿ ಸಚಿವರ ಸಂಬಂಧಿಕನ ಕೊಚ್ಚಿ ಕೊಲೆ

ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಅನಿಲ ರಾಠೋಡ್‌ನನ್ನು ಹಣಕಾಸಿನ ವಿಚಾರಕ್ಕೆ ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿರುವ ಮೃತ ಅನಿಲನ ಕಚೇರಿಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಎನ್ನಲಾಗುತ್ತಿದೆ.

SSLC valuation: ಎಸ್‌ಎಸ್‌ಎಲ್‌ಸಿ ಮೌಲ್ಯಮಾಪಕರಿಗೆ ಗುಡ್‌ ನ್ಯೂಸ್‌, ಸಂಭಾವನೆ ಹೆಚ್ಚಳ

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪಕರಿಗೆ ಗುಡ್‌ ನ್ಯೂಸ್‌, ಸಂಭಾವನೆ ಹೆಚ್ಚಳ

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಒಟ್ಟು 262 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೌಲ್ಯಮಾಪನ ಕಾರ್ಯ ನಡೆಯಲಿದೆ.ಉಪ ಮುಖ್ಯ ಮೌಲ್ಯಮಾಪಕರು ಏಪ್ರಿಲ್ 7ರಂದು ಹಾಜರಾಗಬೇಕು. ಸಹಾಯಕ ಮೌಲ್ಯಮಾಪಕರು ಏಪ್ರಿಲ್ 8ರಂದು ಕೇಂದ್ರಗಳಿಗೆ ವರದಿ ಮಾಡಿಕೊಳ್ಳಬೇಕು. ತೃತೀಯ ಭಾಷೆಗಳಾದ ಹಿಂದಿ ಮತ್ತು ಸಂಸ್ಕೃತ ವಿಷಯಗಳ ಮೌಲ್ಯಮಾಪನವು ಏಪ್ರಿಲ್ 9ರಿಂದ ಆರಂಭವಾಗಲಿದೆ.

NOTA: ದಾವಣಗೆರೆಯಲ್ಲಿ ಕಾಂಗ್ರೆಸ್‌ʼಗೆ ʼನೋಟಾʼ ಆತಂಕ

NOTA: ದಾವಣಗೆರೆಯಲ್ಲಿ ಕಾಂಗ್ರೆಸ್‌ʼಗೆ ʼನೋಟಾʼ ಆತಂಕ

ಕಾಂಗ್ರೆಸ್ ಆತಂಕದಲ್ಲಿದ್ದರೆ ಬಹುತೇಕ ಅಲ್ಪಸಂಖ್ಯಾತ ಮತದಾರರು ಜಾರಿಗೆ ಮತ ಹಾಕಬೇಕೆ ನ್ನುವ ಗೊಂದಲದಲ್ಲಿದ್ದು, ಇವರಲ್ಲಿ ಹೆಚ್ಚಿನ ಮಂದಿ ಮೇಲಿನ ಯಾವ ಅಭ್ಯರ್ಥಿಯೂ ಬೇಡ ಎನ್ನುವವರು ‘ನೋಟಾ’ ಮತದಾನ ಮಾಡುವ ಸಾಧ್ಯತೆ ಹೆಚ್ಚು ಕಂಡು ಬರುತ್ತಿದೆ ಎನ್ನುತ್ತಾರೆ ಆ ಸಮುದಾಯದ ಮುಖಂಡರು.

ಹೇಮಾವತಿ ಹೆಗಡೆ ಜನ್ಮದಿನ ಹಿರಿಯ ಜೀವಿಗಳ ಯೋಗಕ್ಷೇಮ ವಿಚಾರಣೆ

ಹೇಮಾವತಿ ಹೆಗಡೆ ಜನ್ಮದಿನ ಹಿರಿಯ ಜೀವಿಗಳ ಯೋಗಕ್ಷೇಮ ವಿಚಾರಣೆ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ವಾತ್ಸಲ್ಯ ಮಾಶಾಸನ ಫಲಾನುಭವಿಗಳನ್ನು ಭೇಟಿ ಮಾಡಿದ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧಿಕಾರಿ ವರ್ಗವು ಹಣ್ಣು ಹಂಪಲು ವಿತರಿಸಲಾಯಿತು. ಹೇಮಾವತಿ ಹೆಗಡೆಯವರ ಹುಟ್ಟಿದ ದಿನದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜ್ಞಾನ ವಿಕಾಸದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಾಶಾಸನ ಪಡೆಯುವ ಫಲಾನು ಭವಿಗಳಿಗೆ ಹಣ್ಣು ಹಂಪಲು ವಿತರಿಸಿ ಆರೋಗ್ಯ ಯೋಗ ಕ್ಷೇಮ ವಿಚಾರಿಸಲಾಯಿತು.

Chinthamani News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ

Chinthamani News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ

ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀಅಮರನಾರೇಯಣ ಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ, ಮತ್ತು ಅಷ್ಟಾವಧಾನ ಸೇವೆಯನ್ನು ನೇರವೇರಿಸಿ, ಮಹಾ ಮಂಗಳಾರತಿ ಯನ್ನು ಬೆಳಗಲಾಯಿತು. ರಥೋತ್ಸವವನ್ನು ನಡೆಸಲಾಯಿತು. ಭಕ್ತಾದಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.

Loading...