ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ತುಮಕೂರು ದಸರಾ: ಪೌರಕಾರ್ಮಿಕರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸಿದ ಡಿಸಿಎಂ ಡಾ.ಜಿ. ಪರಮೇಶ್ವರ್‌

ತುಮಕೂರು ದಸರಾ: ಪೌರಕಾರ್ಮಿಕರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸಿದ ಡಿಸಿಎಂ

Dr G Parameshwara: ಹಬ್ಬದ ಬೆಳಕು ಎಲ್ಲರ ಬದುಕಿನಲ್ಲೂ ಸಂತೋಷವನ್ನು ತುಂಬುವ ಈ ಸಂದರ್ಭದಲ್ಲಿ, ಆ ಬೆಳಕಿನ ಹಿಂದೆ ಮೌನವಾಗಿ ಶ್ರಮಿಸುವ ಕೈಗಳನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪೌರಕಾರ್ಮಿಕರ ಶ್ರಮಕ್ಕೆ ಗೌರವ, ಅವರ ಬದುಕಿಗೆ ಘನತೆ ಮತ್ತು ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವುದೇ ನಿಜವಾದ ಮಾನವೀಯತೆಯಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.

Vijayanagara News: ವಾಸಂತಿದೇವಿ ಬಲ್ಡೋಟ ರಕ್ತಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ

ವಾಸಂತಿದೇವಿ ಬಲ್ಡೋಟ ರಕ್ತಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ

Vijayanagara News: ಅಭೆರಾಜ್ ಬಲ್ಡೋಟ ಫೌಂಡೇಶನ್ ವತಿಯಿಂದ ಅಭೆರಾಜ್ ಎಚ್. ಬಲ್ಡೋಟ 2001ರಲ್ಲಿ ಹೊಸಪೇಟೆ ನಗರದಲ್ಲಿ ಸ್ಥಾಪಿಸಿದ ವಾಸಂತಿದೇವಿ ಬಲ್ಡೋಟ ರಕ್ತಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ ಜರುಗಿತು. ಡಾ. ನರೇಂದ್ರ ಕುಮಾರ್ ಎ. ಬಲ್ಡೋಟ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

SIR, ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಮೋದಿ ಜತೆ ನಾಳೆ ಚರ್ಚೆ: ಮಲ್ಲಿಕಾರ್ಜುನ್ ಖರ್ಗೆ

SIR, ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ಪಿಎಂ ಜತೆ ನಾಳೆ ಚರ್ಚೆ: ಖರ್ಗೆ

Mallikarjun Kharge: ಕಲಬುರಗಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಸ್‌ಐಆರ್‌ನ ಸಂಭಾವ್ಯ ಪರಿಣಾಮ, ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಜಾರಿಯಲ್ಲಿ ಆಗುತ್ತಿರುವ ವಿಳಂಬ ಸೇರಿದಂತೆ ಪ್ರಮುಖ ರಾಜಕೀಯ ವಿಚಾರಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಾಳೆ ಚರ್ಚಿಸುವುದಾಗಿ ಹೇಳಿದ್ದಾರೆ.

ಚಿತ್ತಾಪುರದಲ್ಲಿ ರಸ್ತೆ ಕಾಮಗಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ; ಹಲವರಿಗೆ ಗಾಯ

ಚಿತ್ತಾಪುರದಲ್ಲಿ ರಸ್ತೆ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿಯಲ್ಲಿ ಗಲಾಟೆ ನಡೆದಿದೆ. ರಸ್ತೆ ಕಾಮಗಾರಿ ಕುರಿತು ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಎರಡೂ ಗುಂಪಿನವರು ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿಕೊಂಡ ಪರಿಣಾಮ ಹಲವರಿಗೆ ಗಾಯಗಳಾಗಿವೆ.

ಮದುವೆಗೆ ಒಪ್ಪದ ಮಾವನ ಮಗ; ಡೆತ್‌ನೋಟ್‌ ಬರೆದಿಟ್ಟು ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

ಕೊಪ್ಪಳದಲ್ಲಿ ಡೆತ್‌ನೋಟ್‌ ಬರೆದಿಟ್ಟು ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

Koppal News: ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿರುವ ಶಿಕ್ಷಕಿ, ಸುಮಾರು 14 ವರ್ಷಗಳಿಂದ ತನ್ನ ಸಂಬಂಧಿಯೊಬ್ಬರನ್ನು ಪ್ರೀತಿ ಮಾಡುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಆದರೆ, ಮದುವೆಗೆ ಯುವಕನ ಮನೆಯಲ್ಲಿ ಒಪ್ಪದ ಹಿನ್ನೆಲೆಯಲ್ಲಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Power Tariff Hike: ರಾಜ್ಯದ ಜನರಿಗೆ ವಿದ್ಯುತ್ ದರ‌ ಏರಿಕೆಯ ಶಾಕ್;‌ ಪ್ರತಿ ಯೂನಿಟ್‌ಗೆ 40-50 ಪೈಸೆ ಹೆಚ್ಚಳ!

ರಾಜ್ಯದ ಜನರಿಗೆ ವಿದ್ಯುತ್ ದರ‌ ಏರಿಕೆಯ ಶಾಕ್;‌ ಎಷ್ಟು ಹೆಚ್ಚಳ?

Electricity Bill: ಈ ವಿದ್ಯುತ್ ದರ ಏರಿಕೆಯು ‘ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ’ ನಿಯಮಾವಳಿಗಳ ಅಡಿಯಲ್ಲಿ ಬರಲಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಅಂತಿಮ ಅನುಮೋದನೆಯೊಂದಿಗೆ ಜಾರಿಗೆ ಬರಲಿದೆ. ‘ಗೃಹ ಜ್ಯೋತಿ’ ಯೋಜನೆಯ ವ್ಯಾಪ್ತಿಗೆ ಬಾರದ ಗ್ರಾಹಕರಿಗೆ ಈ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ನಟಿ ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಅನುಚಿತ ವರ್ತನೆ ತೋರಿದ ಅಭಿಮಾನಿ: ಗರಂ ಆದ 'ಡಿಂಪಲ್ ಕ್ವೀನ್'

ನಟಿ ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಅಭಿಮಾನಿಯ ಅನುಚಿತ ವರ್ತನೆ

Rachita Ram: ಸ್ಯಾಂಡಲ್‌ವುಡ್ ಜನಪ್ರಿಯ ನಟಿ 'ಡಿಂಪಲ್ ಕ್ವೀನ್' ರಚಿತಾ ರಾಮ್ ಅವರೊಂದಿಗೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ತುಮಕೂರಿನಲ್ಲಿ ಜರುಗಿದೆ. ತುಮಕೂರು ದಸರಾ ಮಹೋತ್ಸವದ ವೇದಿಕೆಯಲ್ಲಿ ನಟಿಯ ಯಾವುದೇ ಪೂರ್ವಾನುಮತಿಯಿಲ್ಲದೆ ಅವರ ಹೆಗಲ ಮೇಲೆ ಕೈಹಾಕಿ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ, ಅನುಚಿತ ವರ್ತನೆ ತೋರಿಸಿದ್ದಾನೆ.

ಹೊಸ ಕಾರು ಖರೀದಿ ಸಂಭ್ರಮ ಕ್ಷಣದಲ್ಲಿ ಮಾಯ; ಶೋರೂಮ್‌ನಿಂದ ನೇರವಾಗಿ ರಸ್ತೆಗೆ ನುಗ್ಗಿದ ಕಾರು, ಇಬ್ಬರಿಗೆ ಗಾಯ! Video

ಶೋರೂಮ್‌ನಿಂದ ನೇರವಾಗಿ ರಸ್ತೆಗೆ ನುಗ್ಗಿದ ಕಾರು; ಇಬ್ಬರಿಗೆ ಗಾಯ

Sagara Car Accident: ಶಿವಮೊಗ್ಗ ಜಿಲ್ಲೆ ಸಾಗರದ ಮಾರುತಿ ಕಾರು ಶೋರೂಮ್‌ ಬಳಿ ಈ ಘಟನೆ ನಡೆದಿದೆ. ಶೋರೂಮ್‌ನಲ್ಲಿ ಹೊಸ ಕಾರನ್ನು ಪಡೆದು, ಹೊರಬರುವ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಶೋರೂಮ್ ಎದುರಿನ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ರಸ್ತೆಗೆ ನುಗ್ಗಿದೆ.

ಏರ್ ಇಂಡಿಯಾಕ್ಕೆ ಹಕ್ಕಿ ಡಿಕ್ಕಿ: ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿದ ವಿಮಾನ

ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ

ವಿಶಾಖಪಟ್ಟಣನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿಯೊಂದು ಮಂಗಳವಾರ ಡಿಕ್ಕಿಯಾಗಿದೆ. ಬಳಿಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಬಳಿಕ ತಾಂತ್ರಿಕ ತಂಡಗಳು ವಿಮಾನವನ್ನು ಪರಿಶೀಲನೆ ನಡೆಸಿದವು. ವಿಮಾನದಲ್ಲಿ 148 ಪ್ರಯಾಣಿಕರಿದ್ದರು. ಘಟನೆಯಲ್ಲಿ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ ಎನ್ನಲಾಗಿದೆ.

ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿದ್ದು ಕೇಂದ್ರ ಸರ್ಕಾರ: ಬಿ.ವೈ. ವಿಜಯೇಂದ್ರ

ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿದ್ದು ಕೇಂದ್ರ ಸರ್ಕಾರ: ಬಿವೈವಿ

BY Vijayendra: ಬಿಜೆಪಿ ಈಗ ವಿರೋಧ ಪಕ್ಷದಲ್ಲಿದೆ. ಜನ ನಮ್ಮನ್ನು ವಿರೋಧ ಪಕ್ಷದಲ್ಲಿ ಇಟ್ಟಿದ್ದಾರೆ. ಇನ್ನೂ ಉಳಿದ ಅವಧಿಗೂ ವಿರೋಧ ಪಕ್ಷದಲ್ಲಿ ಇರ್ತೆವೆ‌. ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಿ ಸಿಎಂ ಬೀಳಿಸುವ ಅಗತ್ಯ ಇಲ್ಲ. ಮೂರನೇ ಸಿಎಂ ಬಗ್ಗೆ ಸದ್ಯದಲ್ಲೇ ತಿಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

Mysuru Dasara 2026: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಹೇಗಿತ್ತು ನೋಡಿ; Video

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

Dasara Ayudha Puja at Mysuru Palace: ಮಂಗಳವಾರ ಬೆಳಗ್ಗೆ ಮೈಸೂರು ಅರಮನೆಯ ಕಲ್ಯಾಣ ಮಂಟಪದಲ್ಲಿ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಮನೆತನದ ಖಾಸಾ ಆಯುಧಗಳಿಗೆ, ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.

Ayudha Puja 2026: ಸದಾಶಿವನಗರದ ನಿವಾಸದಲ್ಲಿ ಆಯುಧ ಪೂಜೆ ನೆರವೇರಿಸಿದ ಸಿಎಂ ಡಿ.ಕೆ.ಶಿವಕುಮಾರ್‌

ಸದಾಶಿವನಗರದ ನಿವಾಸದಲ್ಲಿ ಆಯುಧ ಪೂಜೆ ನೆರವೇರಿಸಿದ ಸಿಎಂ

ನಮ್ಮ ದಿನನಿತ್ಯದ ಕಾಯಕಕ್ಕೆ ನೆರವಾಗುವ ವಾಹನ, ಯಂತ್ರೋಪಕರಣ, ಪುಸ್ತಕ ಮತ್ತು ಸಾಧನಗಳಿಗೆ ಭಕ್ತಿಯಿಂದ ಕೃತಜ್ಞತೆ ಸಲ್ಲಿಸುವ ಶುಭ ದಿನವಿದು. ನಾಡದೇವತೆ ತಾಯಿ ಚಾಮುಂಡೇಶ್ವರಿಯು ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು, ಸುಖ ಮತ್ತು ನೆಮ್ಮದಿಯನ್ನು ಕರುಣಿಸಲಿ. ಸರ್ವರಿಗೂ ಆಯುಧ ಪೂಜೆಯ ಶುಭಾಶಯಗಳು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ

ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ

ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ರಾಜವೈಭವವನ್ನು ಜಗತ್ತಿಗೆ ಸಾರುವ ಮೈಸೂರು ದಸರಾ ಮಹೋತ್ಸವದ ಅಂತಿಮ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿಯನ್ನು ಸಂಭ್ರಮದ ಸಾಗರವಾಗಿಸಿದ್ದ ನಾಡಹಬ್ಬ, ಅ.೨೧ರ ಬುಧವಾರ ವಿಜಯದಶಮಿಯಂದು ನಡೆಯಲಿರುವ ಐತಿಹಾಸಿಕ ಜಂಬೂಸವಾರಿ ಹಾಗೂ ಬನ್ನಿಮಂಟಪದ ಪಂಜಿನ ಕವಾಯತಿನೊಂದಿಗೆ ತನ್ನ ವೈಭವದ ಪರಾಕಾಷ್ಠೆ ತಲುಪಲಿದೆ.

Tumkur News: ಪದವಿಧರ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿ ಚಿಕ್ಕರಾಜು ಬಿರುಸಿನ ಪ್ರಚಾರ: ಅಹಿಂದ ವರ್ಗಗಳ ಪದವಿಧರ ಮತದಾರರ ಬೆಂಬಲದ ವಿಶ್ವಾಸ

ಪದವಿಧರ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿ ಚಿಕ್ಕರಾಜು ಬಿರುಸಿನ ಪ್ರಚಾರ

ನಿವೃತ್ತ ವೈದ್ಯಾಧಿಕಾರಿ, ಅಹಿಂದ ವರ್ಗಗಳ ಜಾಗೃತಿ ವೇದಿಕೆ ಅಧಕ್ಷರಾದ ಡಾ.ಬಿ. ಯಲ್ಲಪ್ಪ ಅವರು ಚಿಕ್ಕರಾಜು ಎಸ್. ಯಾದವ್ ಅವರನ್ನು ಬೆಂಬಲಿಸಿ ಕೆಲಸ ಮಾಡುತ್ತಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರ ಅಹಿಂದ ವರ್ಗವು ಚಿಕ್ಕರಾಜು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಚಿಕ್ಕರಾಜು ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ.

Haveri News: ಪ.ಪದವೀಧರ ಕ್ಷೇತ್ರದ ಕೈ ಗೆಲುವು ಖಚಿತ: ಉಸ್ತುವಾರಿ ಮಿನಿಸ್ಟರ್ ಆರ್.ಲಮಾಣಿ

‌ಪ.ಪದವೀಧರ ಕ್ಷೇತ್ರದ ಕೈ ಗೆಲುವು ಖಚಿತ: ಉಸ್ತುವಾರಿ ಮಿನಿಸ್ಟರ್ ಆರ್.ಲಮಾಣಿ

ದೇ 23ರಂದು ಪಶ್ಚಿಮ ಪದವೀಧರ ಕ್ಷೇತ್ರದ ಸಾರ್ವಜನಿಕ ಚುನಾವಣಾ ಮತದಾನ ನಡೆಯಲಿದ್ದು ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಮೋಹನ ಲಿಂಬಿಕಾಯಿ ಗೆಲವು ಖಚಿತ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಮಾಧ್ಯಮದೊಂದಿಗೆ ಮಾತನಾಡಿದರು.

ಇಮ್ರಾನ್ ಖಾನ್‌ಗೆ ಭಾರತ ತೊರೆಯುವಂತೆ ಪೊಲೀಸ್ ನೋಟಿಸ್: ಅ.26ರಂದು ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆ

ಇಮ್ರಾನ್ ಖಾನ್‌ಗೆ ಭಾರತ ತೊರೆಯುವಂತೆ ನೋಟಿಸ್:

ಅಮೆರಿಕದ ಪ್ರಜೆ ಹಾಗೂ ನಟ ಇಮ್ರಾನ್ ಖಾನ್ ಅವರಿಗೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೀಡಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಅಕ್ಟೋಬರ್ 26ರಂದು ನಡೆಸಲಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರನ್ನು ಪೊಲೀಸರು ಸ್ವಲ್ಪ ಸಮಯ ವಶಕ್ಕೆ ಪಡೆದಿದ್ದರು.

ಇಂದೂ ಸಹ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ರಾಜ್ಯದಲ್ಲಿ ಹವಾಮಾನ ಹೇಗಿದೆ?

ಇಂದೂ ಸಹ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ಇಂದು (ಅಕ್ಟೋಬರ್ 20) ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿವಿಧ ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

23 ರಂದು ಮತದಾನ; ಮತಗಟ್ಟೆಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ನಿರ್ಬಂಧ

ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ: ಅ.21ರಿಂದ ನಿಷೇಧಾಜ್ಞೆ

ಅ.23ರಂದು ನಡೆಯಲಿರುವ ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಮೆರವಣಿಗೆ ನಡೆಸುವುದು, ಪ್ರತಿಭಟನೆ ಮಾಡು ವುದು, ಶಸ್ತ್ರಾಸ್ತ್ರಗಳನ್ನು ಹಿಡಿದು ಸಂಚರಿಸುವುದು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಚಟುವಟಿಕೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

ಅ.23ರಂದು ಅರ್ಹ ಪದವೀಧರ, ಶಿಕ್ಷಕ ಮತದಾರರಿಗೆ ಮಾತ್ರ ರಜೆ

ಅ.23ರಂದು ಅರ್ಹ ಪದವೀಧರ, ಶಿಕ್ಷಕ ಮತದಾರರಿಗೆ ಮಾತ್ರ ರಜೆ

ಭಾರತ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆ ಯನ್ವಯ ಅ.23ರ ಶುಕ್ರವಾರ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಯಾ ಮತಕ್ಷೇತ್ರಗಳ ವ್ಯಾಪ್ತಿಯ ಅರ್ಹ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ರಜೆ ನೀಡಲು ನಿರ್ಧರಿಸಲಾಗಿದೆ.

ಸನಾತನ ಧರ್ಮದ ಮಾನವೀಯತೆ, ಸಮಾನತೆಯ ತತ್ವಗಳನ್ನು ಪಸರಿಸಬೇಕು: ಸಚಿವ ಕೆ.ಎಚ್.ಮುನಿಯಪ್ಪ

ಸನಾತನ ಧರ್ಮದ ಮಾನವೀಯತೆ, ಸಮಾನತೆಯ ತತ್ವಗಳನ್ನು ಪಸರಿಸಬೇಕು

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಶಿವ ಪಂಚಾಕ್ಷರಿ ಹೋಮ ಹಾಗೂ ಸಪ್ತದ್ರವ್ಯ ಮೃತ್ಯುಂಜಯ ಹೋಮದ ಬಳಿಕ ಮಾತನಾಡಿದ ಅವರು, ಸನಾತನ ಧರ್ಮವು ಎಲ್ಲರನ್ನೂ ಸಮಾನವಾಗಿ ಕಾಣುವ ಶ್ರೇಷ್ಠ ಜೀವನ ಪದ್ಧತಿಯಾಗಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಉದಾತ್ತ ಆಶಯಕ್ಕೆ ಸತ್ಯ ಸಾಯಿ ಗ್ರಾಮದಲ್ಲಿ ಪ್ರಾಯೋಗಿಕ ರೂಪ ನೀಡಲಾಗುತ್ತಿದೆ.

ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮೂರನೇ ಮನವಿ ಪತ್ರ ಸಲ್ಲಿಸಲು ಸಿದ್ಧತೆ: ಡಾ.ಜಿ. ಪರಮೇಶ್ವರ್‌

ಬರ ಪರಿಹಾರ; ಕೇಂದ್ರಕ್ಕೆ ಮೂರನೇ ಮನವಿ ಪತ್ರ ಸಲ್ಲಿಸಲು ಸಿದ್ಧತೆ: ಡಿಸಿಎಂ

Dr G Parameshwara: ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ಬೆಳೆ ಹಾಗೂ ಇತರ ನಷ್ಟಗಳ ಅಂದಾಜು ಸಿದ್ಧಪಡಿಸಲಾಗುತ್ತದೆ. ಅದರ ಆಧಾರದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿಗಳ ಅನ್ವಯ ಕೇಂದ್ರ ಸರ್ಕಾರದಿಂದ ಪರಿಹಾರದ ಅನುದಾನ ಕೋರಲಾಗುತ್ತದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.

Sonu Nigam: ಕನ್ನಡಿಗರಿಗೆ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್‌; ಕರ್ನಾಟಕದಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ಅನುಮತಿ?

ಕನ್ನಡಿಗರಿಗೆ ಬೇಷರತ್‌ ಕ್ಷಮೆ ಕೇಳಿದ ಖ್ಯಾತ ಗಾಯಕ ಸೋನು ನಿಗಮ್‌

2025ರ ಮೇನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಬ್ಬರು ಸೋನು ನಿಗಮ್ ಅವರನ್ನು ಕನ್ನಡ ಹಾಡು ಹಾಡುವಂತೆ ಕೋರಿದ್ದರು. ಆಗ ಈ ರೀತಿಯ ವರ್ತನೆಯೇ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಂತಹ ಘಟನೆಗಳಿಗೆ ಕಾರಣವಾಗಿದ್ದು ಎಂದು ಗಾಯಕ ಹೇಳಿದ್ದರು. ಅವರ ಹೇಳಿಕೆಗೆ ರಾಜ್ಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಿ: ಎಸ್.ಪಿ. ಶ್ರೀನಿವಾಸ್

ಸ್ಟಿಂಗ್ ಆಪರೇಷನ್ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಆಗ್ರಹ

ಸಿದ್ದರಾಮಯ್ಯ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಬಡವರು, ರೈತರು, ಹಿಂದು ಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಆದ್ಯತೆ ನೀಡಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಬದುಕಿಗೆ ನೆರವಾಗಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಅ.21 ವಿಜಯದಶಮಿಯಂದು ನವರಾತ್ರಿ ಉತ್ಸವ ಸಮಾಪನ

ಮುದ್ದೇನಹಳ್ಳಿಯಲ್ಲಿ ಅ.21ರಂದು ನವರಾತ್ರಿ ಉತ್ಸವ ಸಮಾಪನ

Sathya Sai Grama: ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ನವರಾತ್ರಿ ಉತ್ಸವವು ಅ.21ರಂದು ವಿಜಯದಶಮಿಯಂದು ಸಮಾಪನಗೊಳ್ಳಲಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಉತ್ಸವದ ಅಂಗವಾಗಿ ದುರ್ಗಾಪೂಜೆ, ವಿವಿಧ ಹೋಮಗಳು, ಮಹಾರುದ್ರಯಾಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ.

Loading...