ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ಶುದ್ಧ ಇಂಧನ, ಡಿಜಿಟಲ್ ಮೊಬಿಲಿಟಿ ಮತ್ತು ನಾವೀನ್ಯತೆ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ವೇಗ

ಶುದ್ಧ ಇಂಧನ, ಡಿಜಿಟಲ್ ಮೊಬಿಲಿಟಿ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ವೇಗ

ಭಾರತ ಹಾಗೂ ಜಪಾನ್‌ ನಡುವೆ ಮೊಬಿಲಿಟಿ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಜಪಾನ್-ಇಂಡಿಯಾ ಮೊಬಿಲಿಟಿ ಶೃಂಗಸಭೆ 2026 (Japan-India Mobility Summit) ಯಲ್ಲಿ ಭಾರತ ಮತ್ತು ಜಪಾನ್‌ನ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ನಾವೀನ್ಯಕಾರರನ್ನು ಪಾಲ್ಗೊಂಡಿದ್ದರು.

ಯುವಪೀಳಿಗೆಗಾಗಿ ಕ್ಲಾಸಿಕ್ ಮೋಟಾರ್‌ ಬೈಕ್‌ ಯೆಜ್ಡಿ - ರೋಡ್‌ಸ್ಟರ್ ರೆಡ್ ವುಲ್ಫ್ ಬಿಡುಗಡೆ

ಕ್ಲಾಸಿಕ್ ಮೋಟಾರ್‌ ಬೈಕ್‌ ಯೆಜ್ಡಿ - ರೋಡ್‌ಸ್ಟರ್ ರೆಡ್ ವುಲ್ಫ್ ಬಿಡುಗಡೆ

ಬಂಡಾಯದ ಕೆಂಪು ಬಣ್ಣದಲ್ಲಿ ಮುಳುಗಿರುವ ಮತ್ತು ಕ್ರೋಮ್‌ನಲ್ಲಿ ಹೊಳೆಯುವ ಯೆಜ್ಡಿ ರೋಡ್‌ಸ್ಟರ್‌ನ ಇತ್ತೀಚಿನ ವ್ಯಾಖ್ಯಾನವು ಅದರ ಜನಪ್ರಿಯ ಬೇಡಿಕೆಯನ್ನು ಹೆಚ್ಚಿಸಿರುವ ಎದ್ದುಕಾಣುವ ಕೋರ್ ಕ್ರೂಸರ್ ವಿನ್ಯಾಸ ಮತ್ತು ಸಂಸ್ಕರಿಸಿದ ಕಾರ್ಯಕ್ಷಮತೆಯ ಎಂಜಿನಿಯ ರಿಂಗ್‌ನೊಂದಿಗೆ ಬರುತ್ತದೆ.

Hotels bandh: ರಾಜಧಾನಿಯಲ್ಲಿ ಬೆಳಗ್ಗೆ ತೆರೆದ ಹೋಟೆಲ್‌ಗಳು, ಮಧ್ಯಾಹ್ನದ ಹೊತ್ತಿಗೆ ಗ್ಯಾಸ್‌ ಖಾಲಿ!

ಬೆಳಗ್ಗೆ ತೆರೆದ ಹೋಟೆಲ್‌ಗಳು, ಮಧ್ಯಾಹ್ನದ ಹೊತ್ತಿಗೆ ಗ್ಯಾಸ್‌ ಖಾಲಿ!

ವಾಣಿಜ್ಯ ಸಿಲಿಂಡರ್‌ ಸರಬರಾಜು ಏಕಾಏಕಿ ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೊಟೆಲ್ ಮಾಲೀಕರ ಸಂಘ ನಿನ್ನೆಯೇ ಎಚ್ಚರಿಸಿತ್ತು. ಇಂದು ಬೆಳಗ್ಗಿನಿಂದ ಹೋಟೆಲ್‌ಗಳು ತೆರೆದಿವೆ. ಆದರೆ ಯಾವುದೇ ಕ್ಷಣದಲ್ಲೂ ಗ್ಯಾಸ್‌ ಖಾಲಿಯಾಗುವ ಭಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹುತೇಕ ಹೋಟೆಲ್‌ಗಳು ಮಧ್ಯಾಹ್ನದ ಬಳಿಕ ಮುಚ್ಚಲಿವೆ.

Couple death: ಕನಸಿನ ಮನೆಯ ಮೆಟ್ಟಿಲು ಕುಸಿದು ದುರಂತ ಕಂಡ ದಂಪತಿ

ಕನಸಿನ ಮನೆಯ ಮೆಟ್ಟಿಲು ಕುಸಿದು ದುರಂತ ಕಂಡ ದಂಪತಿ

ದ್ಯಾವಪ್ಪ ಹಾಗೂ ಶಿವಮ್ಮ ದಂಪತಿ ಮನೆ ಕಟ್ಟುವ ಕನಸು ಕಂಡಿದ್ದು, ಅದರಂತೆ ಹಣ ಹೊಂದಿಸಿ ಮನೆ ನಿರ್ಮಾಣ ಮಾಡಲು ಶುರು ಮಾಡಿದ್ದರು. ಸ್ವತಃ ತಾವೇ ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅರ್ಧ ಮನೆ ಸಹ ಕಟ್ಟಲಾಗಿತ್ತು. ನಿನ್ನೆ ಮನೆ ಗೋಡೆ ಪ್ಲಾಸ್ಟರಿಂಗ್ ಮಾಡುತ್ತಿದ್ದ ವೇಳೆ ದಂಪತಿ ಮೇಲೆ ಏಕಾಏಕಿ ಮೆಟ್ಟಿಲುಗಳ ಪಿಲ್ಲರ್ ಕುಸಿದು ಬಿದ್ದಿದೆ.

ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ಸ್ಥಗಿತ; ಬೆಂಗಳೂರಿನಲ್ಲಿ ನಾಳೆಯಿಂದ ಹೋಟೆಲ್‌ ಬಂದ್‌

ಬೆಂಗಳೂರಿನಲ್ಲಿ ನಾಳೆಯಿಂದ ಹೋಟೆಲ್‌ ಬಂದ್‌

Bangalore Hotels Association: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಬಿಸಿ ನಮ್ಮ ರಾಜ್ಯಕ್ಕೂ ತಟ್ಟತೊಡಗಿದೆ. ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಸರಬರಾಜು ನಿಂತಿರುವುದರಿಂದ ಮಾರ್ಚ್‌ 10ರಿಂದ ಬೆಂಗಳೂರಿನಲ್ಲಿ ಹೋಟೆಲ್‌ಗಳು ಬಂದ್‌ ಆಗಲಿವೆ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.

ರೈಸಿಂಗ್ ಸ್ಟಾರ್ ತಂಡಕ್ಕೆ ರಾಜೀವ್ ಗೌಡ ರಂಜಾನ್ ಕಪ್ ಚಾಂಪಿಯನ್ ಪಟ್ಟ

ರೈಸಿಂಗ್ ಸ್ಟಾರ್ ತಂಡಕ್ಕೆ ಚಾಂಪಿಯನ್ ಪಟ್ಟ

ಯುವಕರು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳ ಬೇಕು. ಸ್ಥಳೀಯ ಮಟ್ಟದಲ್ಲಿ ಪ್ರತಿಭೆ ತೋರಿಸುತ್ತಿರುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿ ದರು.

Health Sector: ವೈದ್ಯಕೀಯ ಶಿಕ್ಷಣ ಮತ್ತು ಫಾರ್ಮಸಿ ಶಿಕ್ಷಣದ ಸಮನ್ವಯದಿಂದ ಆರೋಗ್ಯ ಕ್ಷೇತ್ರ ಉನ್ನತಿಯತ್ತ ಸಾಗುತ್ತಿದೆ : ಡಾ. ಕೋಡಿರಂಗಪ್ಪ

ವೈದ್ಯಕೀಯ, ಫಾರ್ಮಸಿ ಶಿಕ್ಷಣದ ಸಮನ್ವಯ, ಆರೋಗ್ಯ ಕ್ಷೇತ್ರ ಉನ್ನತಿಯತ್ತ

ಭಾರತದಲ್ಲಿ ರಾಷ್ಟ್ರೀಯ ಫಾರ್ಮಸಿ ಶಿಕ್ಷಣಕ್ಕೆ ಒಂದು ಸ್ಪಷ್ಟ ಚೌಕಟ್ಟು ರೂಪರೇಷೆಗಳನ್ನು ಕಟ್ಟಿಕೊಟ್ಟಿರುವ ಫಾರ್ಮಸಿ ವಿಜ್ಞಾನ ಶಿಕ್ಷಣದ ಪಿತಾಮಹರೆನಿಸಿರುವ ಪ್ರೊ. ಮಹಾದೇವ ಲಾಲ್ ಶರ್ಸ್ ರವರು ಔಷದ ವಿಜ್ಞಾನ ಮತ್ತು ಫಾರ್ಮಸಿ ಕ್ಷೇತ್ರದ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ  ಫಾರ್ಮಸಿ ಶಿಕ್ಷಣವು ಕಲಿಕಾರ್ಥಿಗಳಲ್ಲಿ ಗುಣಾತ್ಮಕವಾಗಿ ಹಲವು ಬದಲಾವಣೆ ಗಳನ್ನು ಹಾಗೂ ಕಲಿಕೆಯನ್ನು ಅಪೇಕ್ಷಿಸುತ್ತದೆ.

International Women's Day: ಸುಪ್ರಿಯಾ ಅವರಿಗೆ ‘ನೇತಾಜಿ ಮಹಿಳಾ ಪ್ರಶಸ್ತಿ'

ಸುಪ್ರಿಯಾ ಅವರಿಗೆ ‘ನೇತಾಜಿ ಮಹಿಳಾ ಪ್ರಶಸ್ತಿ

ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕಿ ಕುಮಾರಿ ಸುಪ್ರಿಯಾ ನಾಯಕ್ ಅವರ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಸನ್ಮಾನಿಸಿ, ‘ನೇತಾಜಿ ಮಹಿಳಾ ಪ್ರಶಸ್ತಿ’ ನೀಡಿ ಗೌರವಿಸ ಲಾಯಿತು

National level relay competition: ರಾಜ್ಯಮಟ್ಟದ ಕ್ರೀಡಾಕೂಟ: ಜಿಲ್ಲೆಗೆ 4*400 ಮೀ ರಿಲೆಯಲ್ಲಿ ಚಿನ್ನದ ಪದಕ, 4*100 ಮೀ ರಿಲೆಯಲ್ಲಿ ಬೆಳ್ಳಿ ಪದಕ

ಜಿಲ್ಲೆಗೆ 4*400 ಮೀ ರಿಲೆಯಲ್ಲಿ ಚಿನ್ನ, 4*100 ಮೀ ರಿಲೆಯಲ್ಲಿ ಬೆಳ್ಳಿ ಪದಕ

ಇದೇ ತಿಂಗಳು 18 ರಿಂದ 20ರ ತನಕ ಚಂಡೀಗಢದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ರಿಲೇ ಸ್ಪರ್ಧೆಗೆ ಶಿಡ್ಲಘಟ್ಟ ತಾಲ್ಲೂಕಿನ ಕು|| ಸಿರಿನಾಗರಾಜ್, ಅಕ್ಷಯಶೇಖರ್, ಹಾತ್ಮೀನಾ, ನೂಪ್ರಾಹೊಳ್ಳಾ ಕ್ರೀಡಾಪಟುಗಳು ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

Chikkaballapur News: ಭಾನುವಾರ ಬಂದ್ ಕರೆ ಸಮಂಜಸವಲ್ಲ, ವ್ಯಾಪಾರಕ್ಕೆ ತೊಂದರೆ, ಬೇರೆ ದಿನದಲ್ಲಿ ಬಂದ್‌ ಮಾಡಿ: ಮಂಜುನಾಥ್ ಆಗ್ರಹ

ಭಾನುವಾರ ಬಂದ್ ಕರೆ ಸಮಂಜಸವಲ್ಲ, ಬೇರೆ ದಿನ ಬಂದ್‌ ಮಾಡಿ

ಮಾ.19ರಂದು ಯುಗಾದಿ ಹಬ್ಬವಿದೆ. ಅದರ ಮರುದಿನ ವರುಷ ತೊಡಕು, ಆನಂತರ ಒಂದೆರಡು ದಿನಗಳಲ್ಲಿ ರಂಜಾನ್ ಹಬ್ಬ ಬರುತ್ತದೆ. ಇವರು ಮಾ.15ರಂದು ಬಂದ್ ಕರೆದಿರುವು ದರಿಂದ ಯುಗಾದಿ ಹಬ್ಬ, ವರ್ಷ ತೊಡಕು ಮತ್ತು ರಂಜಾನ್ ಹಬ್ಬ ಆಚರಣೆ ಮಾಡುವವರಿಗೆ, ಹಬ್ಬದ ಸಾಮಗ್ರಿ ಖರೀದಿಸುವವರಿಗೆ, ಹೊಸಬಟ್ಟೆ ಮತ್ತು ಹಬ್ಬದ ಆಚರಣೆಗೆ ಸಿದ್ಧತೆ ಮಾಡಿ ಕೊಳ್ಳಲು, ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲಿ ಭಾಗಿ ಯಾಗುವವರಿಗೆ, ಭಾನುವಾರದ ವ್ಯಾಪಾರ ನಂಬಿ ಬದುಕುವವರಿಗೆ ತುಂಬಾ ತೊಂದರೆ ಆಗಲಿದೆ

Vande Bharat Express: ರಾಜ್ಯದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ; ಮಾ.15ರಿಂದ ಜಾರಿ

ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ; ಮಾ.15ರಿಂದ ಜಾರಿ

Indian Railways: ಹುಬ್ಬಳ್ಳಿ-ಪುಣೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಬೆಂಗಳೂರು-ಧಾರವಾಡ, ಬೆಳಗಾವಿ-ಬೆಂಗಳೂರು ಸೇರಿ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನೈರುತ್ಯ ರೈಲ್ವೆಯು ಪ್ರಕಟಿಸಿರುವ ಹೊಸ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ.

International Women's Day: ಮಹಿಳೆಯರು ಕನಸು ಕಟ್ಟಿಕೊಂಡು ಧೈರ್ಯದಿಂದ ಮುನ್ನುಗ್ಗಿದರೆ ಜಯ ನಿಮ್ಮದೇ : ಪ್ರೊ.ಕೋಡಿರಂಗಪ್ಪ ಸಲಹೆ

ಮಹಿಳೆಯರು ಕನಸು ಕಟ್ಟಿಕೊಂಡು ಧೈರ್ಯದಿಂದ ಮುನ್ನುಗ್ಗಿದರೆ ಜಯ ನಿಮ್ಮದೇ

ಮಹಿಳೆಗೆ ಈ ಮೊದಲು ಶಿಕ್ಷಣ ಮರೀಚಿಕೆಯಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ದೊರೆತ ಶಿಕ್ಷಣ ದ ಫಲವಾಗಿ ಸ್ವಾತಂತ್ರ್ಯ ಮತ್ತು ಹಕ್ಕುಗಳು ದೊರೆತ ಪರಿಣಾಮ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಸಾಧ್ಯವಾಗಿದೆ. ಮಹಿಳೆಯನ್ನು ಇಂದು ಕೇವಲ ಗೃಹಿಣಿ ಯಾಗಿ ಮಾತ್ರ ಕಾಣಲಾಗದು. ಸಿಕ್ಕಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ

ರಾಜ್ಯದ ಆದಾಯ, ಖರ್ಚುಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಬೇಕು: ಬಜೆಟ್‌ ಲೆಕ್ಕಾಚಾರದ ಕುರಿತು ಶಾಸಕರಿಗೆ ಸಿಎಂ ಪಾಠ

ಬಜೆಟ್‌ ಲೆಕ್ಕಾಚಾರದ ಕುರಿತು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಪಾಠ

ಬಜೆಟ್‌ ಅನ್ನು ಅರ್ಥ ಮಾಡಿಕೊಳ್ಳುವ ಶಾಸಕರ ಸಂಖ್ಯೆಯೇ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಬಹುದೆಂದು ನಾನು ಭಾವಿಸಿದ್ದೇನೆ. ಬಜೆಟ್ ಎಷ್ಟೆ ಒಳ್ಳೆಯದಾಗಿದ್ದರೂ ಅದನ್ನು ಅರ್ಥಪೂರ್ಣವಾಗಿ ಖರ್ಚು ಮಾಡುವುದರಲ್ಲಿ ಶಾಸಕರ ಪಾತ್ರ ದೊಡ್ಡದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Chikkaballapur News: ಆಶ್ರಯ ಯೋಜನೆಯಡಿ ಅರ್ಹ ನಿವೇಶನ ರಹಿತರೆ ಆಯ್ಕೆ ಆಗಬೇಕು: ಜಿ.ಪ್ರಭು ಸೂಚನೆ

ಆಶ್ರಯ ಯೋಜನೆಯಡಿ ಅರ್ಹ ನಿವೇಶನ ರಹಿತರೇ ಆಯ್ಕೆ ಆಗಬೇಕು

ರಾಜ್ಯ ಸರಕಾರವು ಮುಖ್ಯಮಂತ್ರಿಗಳ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ 959.11 ಎಕರೆ ಮಂಜೂರಾಗಿ ರುವ ಜಮೀನು ಪ್ರಸ್ತುತ ಲಭ್ಯವಿದೆ. ಜಿಲ್ಲೆಯ 358 ಸ್ಥಳಗಳಲ್ಲಿ ಈ ಜಮೀನಿನಿಂದ ನಿವೇಶನ ನೀಡಬಹುದಾಗಿದೆ.

MLA B.N.Ravikumar: ಕ್ಷೇತ್ರದಲ್ಲಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ : ಶಾಸಕ ಬಿ.ಎನ್.ರವಿಕುಮಾರ್

ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಕೆರೆಗಳಿಗೆ ಎಚ್‌ಎನ್ ವ್ಯಾಲಿ(HN Valley)ಯ ನೀರು ಹರಿಸುವ 3ನೇ ಹಂತದ ಕಾಮಗಾರಿಗೆ 250 ಕೋಟಿ ರೂ.ಗಳನ್ನು ಬಜೆಟ್‌ʼ ನಲ್ಲಿ ಘೋಷಿಸಿರು ವುದು ಸಂತೋಷ ತಂದಿದ್ದು, ಕ್ಷೇತ್ರದ ಮತದಾರರ ಪರವಾಗಿ ಸಿಎಂ ಸಿದ್ದರಾಮಯ್ಯ(CM Siddaramaiah) ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ

Edible Oil Price Rise: ಇರಾನ್ ಇಸ್ರೇಲ್ ಯುದ್ಧ ಎಫೆಕ್ಟ್: ಅಡುಗೆ ಎಣ್ಣೆ ಬೆಲೆ ತೀವ್ರ ಏರಿಕೆ, ಗ್ರಾಹಕರಿಗೆ ಬರೆ

ಅಡುಗೆ ಎಣ್ಣೆ ಬೆಲೆ ತೀವ್ರ ಏರಿಕೆ, ಗ್ರಾಹಕರಿಗೆ ಬರೆ

ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ, ಸಗಟು 10 ರಿಂದ 12 ರು. ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 15 ಏರಿಕೆಯಾಗಿತ್ತು. ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆಯಾ ದಂತಾಯಿತು. ಮಾರುಕಟ್ಟೆಯಲ್ಲಿ ಸದ್ಯ ಕಂಡು ಬರುತ್ತಿರುವ ಪ್ರಕರಣ ಮುಂದಿನ ದಿನ ಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅಡುಗೆ ಎಣ್ಣೆ ವ್ಯಾಪಾರಿಗಳು.

ನಟ ದ್ವಾರಕೀಶ್‌ ಸೊಸೆ ವಿರುದ್ಧ ಹಲವರಿಗೆ ವಂಚನೆ; ಹಣ ವಾಪಸ್‌ ಕೇಳಿದ್ದಕ್ಕೆ ಪೊರಕೆಯಿಂದ ಹಲ್ಲೆ!

ನಟ ದ್ವಾರಕೀಶ್‌ ಸೊಸೆ ವಿರುದ್ಧ ಹಲವರಿಗೆ ವಂಚನೆ ಆರೋಪ

Varsha Rai: ದ್ವಾರಕೀಶ್ ಅವರ ಎರಡನೇ ಪತ್ನಿ ಶೈಲಜಾ ಕುಮಾರಿ ಅವರ ಪುತ್ರ ಸಮರ್ಥ್ ಅವರ ಪತ್ನಿ ವರ್ಷಾ ರೈ ವಿರುದ್ಧ ಹತ್ತಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಪೊರಕೆಯಿಂದ ವರ್ಷಾ ರೈ ಹಲ್ಲೆ ನಡೆಸಿದ್ದಾರೆ.

ಕಾರವಾರದಲ್ಲಿ ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಬಾಲಕ ಸಾವು, ಮೂವರಿಗೆ ಗಂಭೀರ ಗಾಯ

ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಬಾಲಕ ಸಾವು, 3 ಮಂದಿಗೆ ಗಾಯ

Karwar Accident: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪ ಭೀಕರ ಅಪಘಾತ ನಡೆದಿದೆ. ಕಂಟೇನರ್ ಚಾಲಕ ಕುಡಿದ ಮತ್ತಿನಲ್ಲಿ ಕಾರಿಗೆ ಗುದ್ದಿದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದಲ್ಲಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಅಲ್ಲದೇ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದೆಹಲಿಯಲ್ಲಿ ಯಾರನ್ನು ಭೇಟಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದ ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ ಯಾರನ್ನು ಭೇಟಿ ಮಾಡುತ್ತೇನೆಂದು ಹೇಳಲು ಆಗುವುದಿಲ್ಲ: ಡಿಕೆಶಿ

DK Shivakumar: ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ‘ದೆಹಲಿಗೆ ಬಂದ ಮೇಲೆ ನಾನು ಎಲ್ಲರನ್ನು ಭೇಟಿ ಮಾಡುತ್ತೇನೆ. ನೀವುಗಳು (ಮಾಧ್ಯಮಗಳು), ಡಿ.ಕೆ. ದೆಹಲಿಗೆ ಹೋದರೂ ನಾಯಕರು ಸಮಯ ನೀಡಿಲ್ಲ, ಕಾಯುತ್ತಾ ಕೂತಿದ್ದಾರೆ ಎಂದು ವರದಿ ಮಾಡುತ್ತೀರಲ್ಲಾ, ಹಾಗೇ ಕಾಯುತ್ತಾ ಕೂತಿರುವೆ’ ಎಂದು ಹೇಳಿದ್ದಾರೆ.

ಪೋಕ್ಸೊ ಕೇಸ್‌; ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಪೋಕ್ಸೊ ಕೇಸ್‌; ಮಲ್ಲಿಕಾರ್ಜುನ ಮುತ್ಯಾ ಜಾಮೀನು ಅರ್ಜಿ ವಜಾ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪ ಎದುರಿಸುತ್ತಿರುವ ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ ಯಾದಗಿರಿಯ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮಲ್ಲಿಕಾರ್ಜುನ ಮುತ್ಯಾ ಅರ್ಜಿ ಸಲ್ಲಿಸಿದ್ದರು.

ನೀರಿನ ಸಮಸ್ಯೆ ಕುರಿತು ಮಕ್ಕಳ ಪತ್ರಕ್ಕೆ ಸ್ಪಂದಿಸಿದ ಸಿಎಂ; ಬಜೆಟ್‌ನಲ್ಲಿ ನೀರಾವರಿ ಯೋಜನೆ ಘೋಷಣೆ

ಮಕ್ಕಳ ಪತ್ರ; ಬಜೆಟ್‌ನಲ್ಲಿ ನೀರಾವರಿ ಯೋಜನೆ ಘೋಷಿಸಿದ ಸಿಎಂ

Karnataka Budget 2026: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ‌ ಸಮಸ್ಯೆ ಕುರಿತು ಮಕ್ಕಳು ಪತ್ರ ಬರೆದು, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ʼಉಡುತೊರೆಹಳ್ಳ ನೀರಾವರಿ ಯೋಜನೆʼಯನ್ನು ಘೋಷಿಸಿ, 490 ಕೋಟಿ ರೂ. ಅನುದಾನವನ್ನು ಸಹ ಮೀಸಲಿಟ್ಟಿದ್ದಾರೆ.

ಫ್ಯಾಬ್ಇಂಡಿಯಾದಿಂದ `ದಿ ಸಾಂಗ್ ಆಫ್ ಸ್ಪ್ರಿಂಗ್’ನ ಎರಡನೇ ಆವೃತ್ತಿ ಮೂಲಕ ಚಿಕನ್ʼಕಾರಿ ಸಂಭ್ರಮಾಚರಣೆ

ಫ್ಯಾಬ್ಇಂಡಿಯಾದಿಂದ `ದಿ ಸಾಂಗ್ ಆಫ್ ಸ್ಪ್ರಿಂಗ್’

ಆಧುನಿಕ ವಾರ್ಡ್ ರೋಬ್ ಗೆ ಶತಮಾನಗಳ ಹಳೆಯ ಎಂಬ್ರಾಯಿಡರಿ ತಂದಿರುವ ಈ ಸಂಗ್ರಹ ವು ಸಾಂಪ್ರದಾಯಿಕ ಕರಕುಶಲತೆಯನ್ನು ದಿಟ್ಟ ವಸ್ತ್ರದ ಆವಿಷ್ಕಾರದೊಂದಿಗೆ ಸಂಯೋಜಿಸು ತ್ತದೆ. ಕ್ಲಾಸಿಕ್ ಪೇಸ್ಟೆಲ್ ಗಳ ಆಚೆಗೂ ಈ ಶ್ರೇಣಿಯು ಉಜ್ವಲವಾದ ಪ್ಲಮ್, ಬೆರ್ರಿ ಮತ್ತು ಫುಷಿಯಾಗಳನ್ನು ಹತ್ತಿ, ಕ್ರೇಪ್ ಮತ್ತು ಯಾರ್ನ್-ಡೈಯ್ಡ್ ಟೆಕ್ಸ್ ಚರ್ ಗಳಲ್ಲಿ ತಂದಿದೆ.

International Women's Day: ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ

ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ

ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಮತ್ತು ಹಣಕಾಸು ಸಾಕ್ಷರತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ-1,2 ಮತ್ತು ಗ್ರೀನ್ಸ್ ಇನೋವೇಟರ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆವಲಹಳ್ಳಿ ಯ ಕುವೆಂಪು ರಂಗ ಮಂದಿರದಲ್ಲಿ ದಕ್ಷಿಣ ವಲಯ-2ರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉದ್ಘಾಟಿಸಿದರು.

ಶಾಸಕ ಬಸವರಾಜ್ ಶಿವಗಂಗಾ ಪಿಎ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣು

ಶಾಸಕ ಬಸವರಾಜ್ ಶಿವಗಂಗಾ ಪಿಎ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣು

ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರ ಆಪ್ತ ಸಹಾಯಕ ಶಿವಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಸಾಲದ ಬಾಧೆ ತಾಳಲಾರದೆ ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading...