ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Forest Watcher Recruitment: 750 ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

750 ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 'ಅರಣ್ಯ ವೀಕ್ಷಕ' ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆದಿದೆ. ಇಲಾಖೆಯು ನೇರ ನೇಮಕಾತಿಗೆ ಕರಡು ಅಧಿಸೂಚನೆಯನ್ನು ಸಿದ್ಧಪಡಿಸಿದ್ದು, ಆರ್ಥಿಕ ಇಲಾಖೆಯ ಸಹಮತಿಯೂ ದೊರೆತಿದೆ. ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.

Gudibande News: ಬಿಜೆಪಿ ಮುಖಂಡ ಸಿ.ಮುನಿರಾಜು ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ

ಬಿಜೆಪಿ ಮುಖಂಡರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ

ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿ. ಮುನಿರಾಜು ರವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ತಾಲೂಕು ಘಟಕ ಹಾಗೂ ಮಹಿಳಾ ಮೋರ್ಚಾ ಘಟಕದ ವತಿಯಿಂದ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಅನ್ನ ಸಂತರ್ಪಣೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

Gold Price Today On 16th July 2026: ಮತ್ತೆ ಇಳಿದ ಚಿನ್ನದ ಬೆಲೆ; ಬೆಂಗಳೂರಿನ ಇಂದಿನ ದರ ಚೆಕ್‌ ಮಾಡಿ

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಬೆಲೆ ಚೆಕ್‌ ಮಾಡಿ

Gold Silver Price Today: ಬುಧವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು ಇಳಿಕೆಯ ಹಾದಿಯಲ್ಲಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 25 ರುಪಾಯಿ ಕಡಿಮೆಯಾಗಿ 13,135 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 28 ರುಪಾಯಿ ಅಗ್ಗವಾಗಿ, 14,329 ರುಪಾಯಿಗೆ ಬಂದಿದೆ.

ಶಾಸಕರ ಬಗ್ಗೆ ಅಪಪ್ರಚಾರ ಹಾಗೂ ತೇಜೋವಧೆ ಮಾಡುವುದು ಸರಿಯಲ್ಲ: ಕಾಂಗ್ರೆಸ್ ಮುಖಂಡರ ಎಚ್ಚರಿಕೆ

ಶಾಸಕರ ಬಗ್ಗೆ ಅಪಪ್ರಚಾರ ಹಾಗೂ ತೇಜೋವಧೆ ಮಾಡುವುದು ಸರಿಯಲ್ಲ

ಈ ಭೂಮಿ ಈ ಹಿಂದೆ ಶ್ಯಾನುಭೋಗರು ಹಾಗೂ ಪಟೇಲರ ಹೆಸರಲ್ಲಿತ್ತು. ಈ ಭಾಗದಲ್ಲಿ ಕೆಲ ಪರಿಶಿಷ್ಟರು ಉಳುಮೆ ಮಾಡುತ್ತಿದ್ದರು. ಅದನ್ನು ಬೇರೆಯವರು ಖರೀದಿಸಿದ್ದಾರೆ. ಆದರೆ ಅದನ್ನು ಶಾಸಕ ಸುಬ್ಬಾ ರೆಡ್ಡಿಯವರೇ ಖರೀದಿ ಮಾಡಿದಂತೆ, ಅಲ್ಲಿನ ಸರ್ಕಾರಿ ಜಮೀನು ಒತ್ತುವರಿ ಮಾಡಿ ಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಇಂತಹ ಆಧಾರ ರಹಿತ ಆರೋಪಗಳನ್ನು ಕೂಡಲೇ ನಿಲ್ಲಿಸಬೇಕು

ಏಟ್ರಿಯಾ ರಿನ್ಯೂಎಬಲ್ ಮೈಸೂರಿಗೆ ವಿಸ್ತರಣೆ; ಕರ್ನಾಟಕದಲ್ಲಿ ರೂಫ್‌ಟಾಪ್ ಸೌರಶಕ್ತಿ ಸೇವೆ ಮತ್ತಷ್ಟು ಬಲ

ಕರ್ನಾಟಕದಲ್ಲಿ ರೂಫ್‌ಟಾಪ್ ಸೌರಶಕ್ತಿ ಸೇವೆ ಮತ್ತಷ್ಟು ಬಲ

ವಸತಿ ಹಾಗೂ ವಾಣಿಜ್ಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ತೊಂದರೆಯಿಲ್ಲದ ರೂಫ್‌ ಟಾಪ್ ಸೌರಶಕ್ತಿ ಪರಿಹಾರಗಳನ್ನು ಒದಗಿಸುತ್ತಿರುವ ಏಟ್ರಿಯಾ ರಿನ್ಯೂಎಬಲ್, ಹೆಚ್ಚಿನ ಸೌರ ವ್ಯವಸ್ಥೆಗಳ ಅಳವಡಿಕೆಯನ್ನು ಕೇವಲ 5 ರಿಂದ 6 ಗಂಟೆಗಳೊಳಗೆ ಪೂರ್ಣಗೊಳಿಸುತ್ತದೆ. ಪ್ರತಿಯೊಂದು ಸೌರಶಕ್ತಿ ವ್ಯವಸ್ಥೆಗೆ 30 ವರ್ಷಗಳ ವಾರಂಟಿ ಹಾಗೂ 5 ವರ್ಷಗಳ ಉಚಿತ ನಿರ್ವಹಣಾ ಸೇವೆ ಒದಗಿಸಲಾಗುತ್ತಿದ್ದು, ಗ್ರಾಹಕರು ವಿಶ್ವಾಸದಿಂದ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಇದು ನೆರವಾಗಲಿದೆ.

Gauribidanur News: ಛಾಯಾಗ್ರಾಹಕರು ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ಸಂಘಟನೆಯ ಬಲ ಹೆಚ್ಚಿಸಬೇಕು: ಎನ್.ಎ. ರಾಮಚಂದ್ರ

ಛಾಯಾಗ್ರಾಹಕರು ತಂತ್ರಜ್ಞಾನ ಜತೆಗೆ ಸಂಘಟನೆಯ ಬಲ ಹೆಚ್ಚಿಸಬೇಕು

ಸಂಘಟನೆಯ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ವೃತ್ತಿ ಅಭಿವೃದ್ಧಿಗೆ ಅಗತ್ಯವಾದ ಅವಕಾಶಗಳನ್ನು ಪರಿಣಾಮಕಾರಿಯಾಗಿ ಪಡೆಯಬಹುದು. ಛಾಯಾ ಗ್ರಾಹಕರ ಸಮಸ್ಯೆಗಳ ಪರಿಹಾರ, ಕಲ್ಯಾಣ ಮತ್ತು ವೃತ್ತಿ ಅಭಿವೃದ್ಧಿಗಾಗಿ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದ್ದು, ಎಲ್ಲ ಛಾಯಾಗ್ರಾಹಕರೂ ಸದಸ್ಯತ್ವ ಪಡೆದು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು

Gauribidanur News: ಜು.18ರೊಳಗೆ ಹಂದಿಗಳನ್ನು ನಗರದಿಂದ ಸ್ಥಳಾಂತರಿಸಿ: ಸಾಕಾಣೆದಾರರಿಗೆ ನಗರಸಭೆ ಕಟ್ಟುನಿಟ್ಟಿನ ಸೂಚನೆ

ಜು.18ರೊಳಗೆ ಹಂದಿಗಳನ್ನು ನಗರದಿಂದ ಸ್ಥಳಾಂತರಿಸಿ

ಹಂದಿಗಳನ್ನು ನಗರದಿಂದ ಕನಿಷ್ಠ ಒಂದು ಕಿಲೋಮೀಟರ್ ದೂರಕ್ಕೆ ಸ್ಥಳಾಂತರಿಸಿ, ಅವುಗಳನ್ನು ಮುಕ್ತವಾಗಿ ಬಿಡದೆ ಸೂಕ್ತ ಗೂಡುಗಳಲ್ಲಿ ಸಾಕಬೇಕು. ನಗರ ವ್ಯಾಪ್ತಿಯಲ್ಲಿ ಹಂದಿಗಳು ಸಂಚರಿಸು ತ್ತಿರುವುದು ಕಂಡುಬಂದರೆ ಕಾನೂನಿನ ಪ್ರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

100ಕ್ಕೂ ಹೆಚ್ಚು ದೇಶಗಳಿಗೆ 'ಬಿಎಲ್‌ಎಸ್ ಇಂಟರ್‌ನ್ಯಾಷನಲ್' ಸೇವೆ ವಿಸ್ತರಣೆ, ₹2,998 ಕೋಟಿ ಆದಾಯದೊಂದಿಗೆ ಹೊಸ ಮೈಲಿಗಲ್ಲು

100ಕ್ಕೂ ಹೆಚ್ಚು ದೇಶಗಳಿಗೆ 'ಬಿಎಲ್‌ಎಸ್ ಇಂಟರ್‌ನ್ಯಾಷನಲ್' ಸೇವೆ ವಿಸ್ತರಣೆ

ಕಳೆದ ಎರಡು ದಶಕಗಳಿಂದ ಈ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು 100 ದೇಶಗಳ ಗಡಿ ದಾಟಿರುವುದು ಮಹತ್ವದ ಮೈಲಿಗಲ್ಲಾಗಿದೆ. ಹೊಸ ಮಾರುಕಟ್ಟೆಗಳ ಪ್ರವೇಶ, ವಿವಿಧ ಸರ್ಕಾರ ಗಳೊಂದಿಗಿನ ದೃಢವಾದ ಪಾಲುದಾರಿಕೆ, ಕಾರ್ಯತಂತ್ರದ ಸ್ವಾಧೀನಗಳು ಹಾಗೂ ತಂತ್ರಜ್ಞಾನ ಆಧಾರಿತ ನಾವೀನ್ಯತೆಯೇ ಈ ಬೃಹತ್ ಬೆಳವಣಿಗೆಗೆ ಕಾರಣವಾಗಿದೆ.

‌ಸರ್ವರ್ ಸಮಸ್ಯೆ: ನೋಂದಣಿ ಸ್ಥಗಿತ

ಸರ್ವರ್ ಸಮಸ್ಯೆ: ನೋಂದಣಿ ಸ್ಥಗಿತ

ಸರ್ವರ್ ಸಮಸ್ಯೆಯಿಂದ ಇ- ಖಾತೆಯೂ ಸಿಗುತ್ತಿಲ್ಲ. ಇದ ರೊಂದಿಗೆ ತಮ್ಮದೇ ಖಾತೆಯಲ್ಲಿ ಆಗಿರುವ ಲೋಪದೋಷವನ್ನು ಸರಿಪಡಿಸಿಕೊಳ್ಳಲು ಆಗದೇ ತೀವ್ರ ಸಮಸ್ಯೆಯನ್ನು ಸಾರ್ವಜನಿಕರು ಅನುಭವಿಸು ತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ವರ್ ಸಮಸ್ಯೆ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ ಹೊರತು, ತಾಂತ್ರಿಕವಾಗಿ ಆಗುತ್ತಿರುವ ಸಮಸ್ಯೆಗಳೇನು ಎನ್ನುವ ಸ್ಪಷ್ಟನೆಯನ್ನು ನೀಡುತ್ತಿಲ್ಲ

Kalaburagi Jail Incident: 40 ಗಂಟೆ ಕಳೆದರೂ ಸಿಗದ ಇಬ್ಬರು ಕೈದಿಗಳು; ತೀವ್ರಗೊಂಡ ಶೋಧ

40 ಗಂಟೆ ಕಳೆದರೂ ಸಿಗದ ಇಬ್ಬರು ಕೈದಿಗಳು; ತೀವ್ರಗೊಂಡ ಶೋಧ

ಮಂಗಳವಾರ ನಸುಕಿನ ಜಾವ ಜೈಲಿನ ಕಬ್ಬಿಣದ ಕಂಬಿ ಕತ್ತರಿಸಿ, 20 ಅಡಿ ಎತ್ತರದ ಗೋಡೆ ಹಾರಿ ಎಸ್ಕೇಪ್ ಆಗಿದ್ದ ಮೂವರ ಪೈಕಿ ಸಂತೋಷ್ ಎಂಬಾತನನ್ನು ಪೊಲೀಸರು ಶೂಟೌಟ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪೋಕ್ಸೋ ಮತ್ತು ಕೊಲೆ ಪ್ರಕರಣದಂತಹ ಗಂಭೀರ ಅಪರಾಧ ಹಿನ್ನೆಲೆಯುಳ್ಳ ಮಸ್ತಾನ್ ಮತ್ತು ಸಾಗರ್ ಎಂಬ ಇಬ್ಬರು ಕೈದಿಗಳು ಇನ್ನೂ ಮುಕ್ತವಾಗಿ ತಿರುಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

ಡಿಕೆ, ಸಿದ್ದು, ಹರಿ ದಿಲ್ಲಿಗೆ: ಸಂಪುಟ ವಿಸ್ತರಣೆ ಫಿಕ್ಸ್‌

ಡಿಕೆ, ಸಿದ್ದು, ಹರಿ ದಿಲ್ಲಿಗೆ: ಸಂಪುಟ ವಿಸ್ತರಣೆ ಫಿಕ್ಸ್‌

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿದೇಶದಿಂದ ವಾಪಸಾಗುತ್ತಿದ್ದಂತೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ರಚನೆಯ ಪ್ರಕ್ರಿ ಯೆಗೆ ವೇಗ ಸಿಕ್ಕಿದೆ. ಇದಕ್ಕೆ ಪೂರಕ ಎನ್ನುವಂತೆ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿ ಪ್ರಸಾದ್ ದೆಹಲಿ ಪ್ರವಾಸ ಕೈಗೊಂಡಿರುವುದು ಸಂಪುಟ ವಿಸ್ತರಣೆಗೆ ಕಾಲಕೂಡಿ ಬಂದಿದೆ ಎನ್ನುವ ಮಾತು ಗಳಿಗೆ ಪುಷ್ಟಿ ನೀಡಿದೆ.

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ...; ಮತ್ತೆ ಮಂಕಾದ ಮುಂಗಾರು: ತಲೆ ಮೇಲೆ ಕೈ ಹೊತ್ತು ಕುಳಿತ ರೈತ

ಮತ್ತೆ ಮಂಕಾದ ಮುಂಗಾರು; 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Karnataka Weather: ಗುರುವಾರ (ಜುಲೈ 16) ಕೂಡ ರಾಜ್ಯದ ಬಹುತೇಕ ಕಡೆ ಒಣ ಹವೆ ಮುಂದುವರಿಯಲಿದ್ದು, 3 ಜಿಲ್ಲೆಗಳಲ್ಲಿ ಮಾತ್ರ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವೈದ್ಯನನ್ನು ಕೊಲೆ ಮಾಡಿದ ಪತ್ನಿ; 10 ವರ್ಷದ ಮಗನ ಮೇಲೆ ಹಲ್ಲೆ ನಡೆಸಿ ಮೊಬೈಲ್‌ ನೋಡುತ್ತ ಕುಳಿತ ಪಾಪಿ

ವೈದ್ಯನನ್ನು ಕೊಲೆ ಮಾಡಿದ ಪತ್ನಿ; ಕಾರಣ ನಿಗೂಢ

Dharwad News: ಧಾರವಾಡದ ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣವರ್ (45) ಅವರನ್ನು ಪತ್ನಿ ಡಾ. ಪ್ರಿಯಾಂಕಾ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ಪ್ರಿಯಾ ಮಗನ ಮೇಲೂ ಹಲ್ಲೆ ನಡೆಸಿದ್ದಾಳೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

ಜೀತ ವಿಮುಕ್ತರಿಗೆ ನಿವೇಶನ, ವಸತಿ ವ್ಯವಸ್ಥೆ ಕಲ್ಪಿಸಲು ಆದ್ಯತೆ: ಜಿಲ್ಲಾಧಿಕಾರಿ ಜಿ. ಪ್ರಭು

ಜೀತ ವಿಮುಕ್ತರಿಗೆ ನಿವೇಶನ, ವಸತಿ ವ್ಯವಸ್ಥೆ ಕಲ್ಪಿಸಲು ಆದ್ಯತೆ

ಸಮಾಜದ ದುರ್ಬಲ ವರ್ಗಗಳ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿವೇಶನ ರಹಿತ ಮತ್ತು ವಸತಿ ರಹಿತ ಕುಟುಂಬಗಳ ನಿಖರ ಮಾಹಿತಿಯನ್ನು ತಾಲೂಕು ವಾರು ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಒಂದು ವಾರದ ಒಳಗೆ ಸಲ್ಲಿಸಬೇಕು.

ಕರ್ನಾಟಕ ಸೇರಿ ವಿವಿಧೆಡೆಗಳ ಎಸ್‌ಐಆರ್‌ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ; ರಾಜ್ಯದಲ್ಲಿ ಆಗಸ್ಟ್ 8ರವರೆಗೆ  ಮನೆ-ಮನೆ ಭೇಟಿ

ಕರ್ನಾಟಕ ಸೇರಿ ವಿವಿಧೆಡೆ ರಾಜ್ಯಗಳ ಎಸ್‌ಐಆರ್‌ ಅವಧಿ ವಿಸ್ತರಣೆ

SIR: ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ಸೇರಿ ದೆಹಲಿ, ಪಂಜಾಬ್ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಜುಲೈ 14ರಂದು ಆಂಧ್ರ ಪ್ರದೇಶ ಮತ್ತು ಹರಿಯಾಣದ ಎಸ್‌ಐಆರ್‌ ಅವಧಿಯನ್ನು ವಿಸ್ತರಿಸಲಾಗಿತ್ತು.

Chikkaballapur News: ರಾಮಮಂದಿರದಲ್ಲಿ ನೂರಾರು ಕೋಟಿ ಅವ್ಯವಹಾರದ ಆರೋಪ: ಸುಪ್ರೀಂ ಕೋರ್ಟ್ ತನಿಖೆಗೆ ಮುಂದಾಗಿದ್ದು, ಪ್ರಧಾನಿಗಳು ಮೌನ ಮುರಿದು ಸತ್ಯ ಹೇಳಲಿ: ಲಾಯರ್ ನಾರಾಯಣಸ್ವಾಮಿ ಆಗ್ರಹ

ರಾಮಮಂದಿರದಲ್ಲಿ ನೂರಾರು ಕೋಟಿ ಅವ್ಯವಹಾರದ ಆರೋಪ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕೊಡುಗೆಯೂ ಇದೆ ಎಂಬುದನ್ನು ಬಿಜೆಪಿ ಮತ್ತದರ ಅಂಗಸಂಸ್ಥೆಗಳು ಮನಗಾಣ ಬೇಕು. ಕೋಟ್ಯಂತರ ಭಕ್ತರ ದೇಣಿಗೆಯಿಂದ ನಿರ್ಮಾಣಗೊಂಡಿರುವ ಇದು ಸಾರ್ವಜನಿಕ ದೇವಾಲಯ ವಾಗಿದ್ದು, ಅದರ ಹಣಕಾಸಿನ ವ್ಯವಹಾರಗಳ ಲೆಕ್ಕವನ್ನು ಸಾರ್ವಜನಿಕರಿಗೆ ಮುಕ್ತವಾಗಿ ನೀಡಬೇಕಾದ್ದು ಧರ್ಮ

Gubbi News: ನಮ್ಮ ಸರ್ಕಾರ ಪತ್ರಕರ್ತರ ಪರವಾಗಿದೆ: ಶಾಸಕ‌ ಎಸ್.ಆರ್.ಶ್ರೀನಿವಾಸ್

ನಮ್ಮ ಸರ್ಕಾರ ಪತ್ರಕರ್ತರ ಪರವಾಗಿದೆ: ಶಾಸಕ‌ ಎಸ್.ಆರ್.ಶ್ರೀನಿವಾಸ್

ಜ್ಞಾನ ಜಗತ್ತನ್ನು ಆಳುತ್ತದೆ ನೀವು ಓದಿದ ವಿದ್ಯೆ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ, ಈ ನಿಟ್ಟಿ ನಲ್ಲಿ ಯುವ ಸಮುದಾಯ ಮುನ್ನಡೆಯಬೇಕು. ಪತ್ರಿಕೆಗಳು ಹಾಗೂ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಪಾರದರ್ಶಕವಾಗಿ ಕೆಲಸ ಮಾಡಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಯುವ ಸಮುದಾಯ ಪತ್ರಿಕೆಗಳಲ್ಲಿ ಬರುವ ಸಂಪ್ರದಾಯಿಕ ಗಳನ್ನು ಓದುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿ ಕೊಳ್ಳಲು ಸಾಧ್ಯವಾಗುತ್ತದೆ

30ನೇ ದತ್ತಿ ದಿನಾಚರಣೆ, ಸಿವಿವಿ 111ನೇ ಜಯಂತಿ ಅಂಗವಾಗಿ ಸೇವಾ ಕಾರ್ಯಕ್ರಮಗಳಿಗೆ ಚಾಲನೆ

ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಯಿಂದ ಉಚಿತ ಅನ್ನದಾನ

ಮೂರು ಬಾರಿ ಶಾಸಕರಾಗಿ ಜನಪರ ಸೇವೆ ಸಲ್ಲಿಸಿದ ಸಿ.ವಿ. ವೆಂಕಟರಾಯಪ್ಪ ಅವರ 111ನೇ ಜಯಂತಿ ಅಂಗವಾಗಿ ಜು.23ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಸಾವಿರಾರು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

Red Globe grapes: ಕಟಾವಿಗೆ ಸಿದ್ಧವಾಗಿದ್ದ ರೆಡ್ ಗ್ಲೋಬ್ ದ್ರಾಕ್ಷಿ ಕಳ್ಳತನ; ರೈತನ ಬೆವರು, ಕುಟುಂಬದ ಭವಿಷ್ಯ ಮಣ್ಣುಪಾಲು

ಕಟಾವಿಗೆ ಸಿದ್ಧವಾಗಿದ್ದ ರೆಡ್ ಗ್ಲೋಬ್ ದ್ರಾಕ್ಷಿ ಕಳ್ಳತನ

ಈ ಬಾರಿ ರೆಡ್ ಗ್ಲೋಬ್ ದ್ರಾಕ್ಷಿಗೆ ಕೆಜಿಗೆ 200ರಿಂದ 250ರವರೆಗೆ ಉತ್ತಮ ಬೆಲೆ ಇತ್ತು. ಒಂದೊಂದು ಗೊಂಚಲು ಎರಡೂವರೆ ಕೆಜಿಯಷ್ಟು ತೂಕವಿತ್ತು. ಇದನ್ನು ಅರಿತ ಕಳ್ಳರು ಯೋಜಿತವಾಗಿ ಕಟಾವಿಗೆ ಸಿದ್ಧವಾಗಿದ್ದ 5ಗುಂಟೆ ಪ್ರದೇಶದ ಸುಮಾರು ಎರಡುವರೆ ಟನ್ ನಷ್ಟು ದ್ರಾಕ್ಷಿ ಕದ್ದೊಯ್ದಿದ್ದಾರೆ. ಆ ಮೂಲಕ ರೈತನ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ.

ಇನ್‌ಸ್ಟಾಮಾರ್ಟ್‌ನಿಂದ ಮತ್ತೊಂದು ಅಡುಗೆ ಕ್ರಾಂತಿ: ಇನ್ಮುಂದೆ ಚಿಟಿಕೆ ಹೊಡೆಯುವಷ್ಟರಲ್ಲಿ ಮನೆ ಬಾಗಿಲಿಗೆ ಬರಲಿದೆ LPG ಸಿಲಿಂಡರ್!

ಗ್ರಾಹಕರಿಗೆ ಗುಡ್‌ನ್ಯೂಸ್; ಇನ್‌ಸ್ಟಾಮಾರ್ಟ್‌ನಲ್ಲೂ ಸಿಲಿಂಡರ್ ಲಭ್ಯ

Swiggy Instamart: ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಇದೀಗ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ತಕ್ಷಣಕ್ಕೆ ನಿಮ್ಮ ಬಾಗಿಲಿಗೆ ತಲುಪಿಸಲು ಹೊಸ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ ಸ್ವಿಗ್ಗಿ ಸಂಸ್ಥೆಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಜೊತೆಗೆ ಕೈ ಜೋಡಿಸಿದೆ. ಜುಲೈ 15ರಂದು ಬೆಂಗಳೂರಿನಲ್ಲಿ ಯೋಜನೆ ಆರಂಭಿಸಲಾಗಿದೆ.

Chikkaballapur News: ಡಾ.ಎನ್.ರಾಜಮ್, ಪಂಡಿತ್ ಉಲ್ಲಾಸ್ ಕಾಶಲ್ಕರ್ ಅವರಿಗೆ ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ ಪುರಸ್ಕಾರ

ಭಾರತ ಸಂಗೀತ ಸಮ್ಮೇಳನಕ್ಕೆ ವೈಭವದ ತೆರೆ

ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಕಳೆದ ಮೂರು ದಿನಗ ಳಿಂದ ನಡೆದ "ಭಾರತ ಸಂಗೀತ ಸಮ್ಮೇಳನ-2026"ರ ಸಮಾರೋಪ ಸಮಾರಂಭ ಬುಧವಾರ ನಡೆಯಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ಡಾ.ಎನ್.ರಾಜಮ್ ಮತ್ತು ಪಂಡಿತ್ ಉಲ್ಲಾಸ್ ಕಾಶಲ್ಕರ್ ಅವರಿಗೆ "ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ" ಪುರಸ್ಕಾರ ನೀಡಿ ನೀಡಿ ಗೌರವಿಸ ಲಾಯಿತು.

Chikkaballapur News: ಪೆರೇಸಂದ್ರ ಕ್ಷೇತ್ರದ 50 ಹಾಲು ಉತ್ಪಾದಕರಿಗೆ ಎನ್‌ಡಿಡಿಬಿ ಆನಂದ್ ಡೈರಿಗೆ ಉಚಿತ ಅಧ್ಯಯನ ಪ್ರವಾಸಕ್ಕೆ ಚಾಲನೆ

ಪೆರೇಸಂದ್ರ ಕ್ಷೇತ್ರದ 50 ಹಾಲು ಉತ್ಪಾದಕರಿಗೆ ಉಚಿತ ಅಧ್ಯಯನ ಪ್ರವಾಸ

ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಅಮುಲ್ ಮಾದರಿಯ ಸಂಸ್ಥೆಯಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಅಧ್ಯಯನ ಪ್ರವಾಸವನ್ನು ಆಯೋಜಿಸಲಾಗಿದೆ. ಹಾಲು ಉತ್ಪಾದಕರು ಅಮುಲ್ ಡೈರಿ ಹಾಗೂ ಅದರ ಸಹಕಾರ ಸಂಘಗಳ ಕಾರ್ಯವೈಖರಿ, ಹಾಲು ಸಂಗ್ರಹಣೆ, ಮೌಲ್ಯ ವರ್ಧಿತ ಹಾಲು ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸಹಕಾರ ಆಡಳಿತದ ಕುರಿತು ಪ್ರಾಯೋಗಿಕ ಜ್ಞಾನ ಪಡೆದು ತಮ್ಮ ಗ್ರಾಮಗಳಲ್ಲಿಯೂ ಅಳವಡಿಸಿಕೊಳ್ಳಬೇಕು

Raghavendra Swamy Mutt: ಮಂತ್ರಾಲಯ ಹುಂಡಿಯಲ್ಲಿ 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ!

ಮಂತ್ರಾಲಯ ಹುಂಡಿಯಲ್ಲಿ 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ!

Mantralayam Mutt: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೂನ್-ಜುಲೈಯ 22 ದಿನಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಒಟ್ಟು 3 ಕೋಟಿ 71 ಲಕ್ಷ ರುಪಾಯಿ ದಾಖಲೆಯ ನಗದು ಸಂಗ್ರಹವಾಗಿದೆ. ನಗದಿನ ಪೈಕಿ ಸುಮಾರು 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ ಕಂಡು ಬಂದಿದೆ.

ಬಿಡದಿ ಟೌನ್‌ಶಿಪ್‌ ಯೋಜನೆ ರೂಪು ತಳೆದಿದ್ದು ಹೇಗೆ? 2006ರ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಿಂದ ಇಲ್ಲಿಯವರೆಗಿನ ಬೆಳವಣಿಗೆಯ ಸಮಗ್ರ ಚಿತ್ರಣ

ಬಿಡದಿ ಟೌನ್‌ಶಿಪ್‌ ಯೋಜನೆ ರೂಪು ತಳೆದಿದ್ದು ಹೇಗೆ?

Bidadi Township Row: ಬಿಡದಿ ಟೌನ್‌ಶಿಪ್‌ ವಿವಾದ ತಾರಕಕ್ಕೇರಿದೆ. ಕಾಂಗ್ರೆಸ್‌ ನೇತೃತ್ವದ ಸರಾರ ಈ ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಘೋಷಿಸಿದರೆ ಜೆಡಿಎಸ್‌ ವಿರೋಧ ವ್ಯಕ್ತಪಡಿಸುತ್ತಿದೆ. ಈ ಯೋಜನೆಗೆ ತೀವ್ರ ವ್ಯಕ್ತಪಡಿಸುವ ಎಚ್‌.ಡಿ. ಕುಮಾರಸ್ವಾಮಿಯೇ ಇದನ್ನು ಆರಂಭಿಸಿದ್ದು ಎಂದಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆ ನಡೆದು ಬಂದ ಹಾದಿಯ ಪರಿಚಯ ಇಲ್ಲಿದೆ.

Loading...