ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Gauribidanur News: ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ : ಜಿ.ಕೆ.ಹೊನ್ನಯ್ಯ,

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಹಾಗೂ ಹಿಂದುಳಿದ ವರ್ಗಗಳ ಬಾಳಿಗೆ ಬೆಳಕಾಗಿದ್ದರು. ಸಮಾಜದ ಎಲ್ಲಾ ಸಮುದಾಯಗಳು ಯಾವ ರೀತಿಯಾಗಿ ಬದುಕುತ್ತಿದ್ದಾರೆ ಎಂದು ಗುರುತಿಸಿ,  ಅವರಿಗೆ ಹೊಸ ಯೋಜನೆಗಳನ್ನು ರೂಪಿಸಿದ್ದರು.

Chinthamani News: ಎಲ್ಲಿಯೂ ಕಾಣದ ರ‍್ಯಾಂಪ್ ವ್ಯವಸ್ಥೆ ; ಅಸಡ್ಡೆ ಪ್ರಶ್ನಿಸಿ ಮುಖಂಡ ಕಿರಣ್ ನಾಯಕ್ ಆಕ್ರೋಶ

ಎಲ್ಲಿಯೂ ಕಾಣದ ರ‍್ಯಾಂಪ್ ವ್ಯವಸ್ಥೆ

ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರ ಅನುಕೂಲಕ್ಕಾಗಿ ರ‍್ಯಾಂಪ್ ವ್ಯವಸ್ಥೆ ಇರಬೇಕು. ಇದರಿಂದಾಗಿ ದೈಹಿಕ ನ್ಯೂನತೆಯಿಂದ ಕೂಡಿದ ಅಂಗವಿಕಲರು ಸರಾಗವಾಗಿ ಕಚೇರಿಗಳನ್ನು ತಲುಪಲು ಸಾಧ್ಯ ವಾಗುತ್ತದೆ. ಆದರೆ,ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಈ ಸೌಲಭ್ಯವೇ ಇಲ್ಲ.ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರ‍್ಯಾಂಪ್ ವ್ಯವಸ್ಥೆ ಚಾಲ್ತಿಗೆ ಬರುತ್ತದೆ.

Chikkaballapur News: ಆಹಾರ ಉದ್ದಿಮೆದಾರರೆಲ್ಲರೂ  ಸುರಕ್ಷತೆ ಸಲುವಾಗಿ ಪರವಾನಗಿ ಕಡ್ಡಾಯ : ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ಆಹಾರ ಉದ್ದಿಮೆದಾರರೆಲ್ಲರೂ  ಸುರಕ್ಷತೆ ಸಲುವಾಗಿ ಪರವಾನಗಿ ಕಡ್ಡಾಯ

ಜಿಲ್ಲೆಯ ಎಲ್ಲಾ ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಬೇಕರಿಗಳು, ಕೇಟರರ್ಸ್ ಹಾಗೂ ಬೀದಿಬದಿ ಆಹಾರ ಉದ್ದಿಮೆದಾರರು ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ವತಿಯಿಂದ ನೋಂದಣಿ, ವ್ಯಾಪಾರ ಪರವಾನಗಿ ಹಾಗೂ ಟ್ರೇಡ್ ಪಡೆಯುವುದು ಕಡ್ಡಾಯ ವಾಗಿರುತ್ತದೆ ಹಾಗೂ ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕು.

Sudha Murty: ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳ ಚಿತ್ರ ಹಂಚಿಕೊಂಡ ಸುಧಾಮೂರ್ತಿ

ಪುರಾತನ ಕಿಲಾದಲ್ಲಿ ಸುಧಾಮೂರ್ತಿ

ಯಾವುದೇ ಪ್ರದೇಶಕ್ಕೆ ಹೋಗಬೇಕಾದರೂ ಲೇಖಕಿ, ಇನ್ಫೋಸಿಸ್‌ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ಸಾಕಷ್ಟು ಅಧ್ಯಯನ ಮಾಡುತ್ತಾರೆ. ಇತ್ತೀಚೆಗೆ ಇವರು ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ನಗರವಾದ ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳನ್ನು ನೋಡಲು ದೆಹಲಿಯ ಪುರಾತನ ಕಿಲಾಕ್ಕೆ ಭೇಟಿ ನೀಡಿದರು.

ಅಡಕೆ ಬೆಳೆಗಾರರ ಸಂಕಷ್ಟ; ಜೋಶಿ ನೇತೃತ್ವದಲ್ಲಿ ರಾಜ್ಯ ಸಂಸದರ ತಂಡದಿಂದ ಕೇಂದ್ರ ಕೃಷಿ ಸಚಿವರ ಭೇಟಿ

ಅಡಕೆ ಬೆಳೆಗಾರರ ಸಂಕಷ್ಟ; ಜೋಶಿ ನೇತೃತ್ವದಲ್ಲಿ ಕೇಂದ್ರ ಕೃಷಿ ಸಚಿವರ ಭೇಟಿ

Pralhad Joshi: ಅಡಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ನೇತೃತ್ವದಲ್ಲಿ ರಾಜ್ಯ ಸಂಸದರ ತಂಡ ಗುರುವಾರ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದೆ.

ರಕ್ತದಾನ ಮಾಡುವುದು ಸಂಜೀವಿನಿಗೆ ಸಮಾನ: ಪ್ರಾಂಶುಪಾಲ ಇಂತಿಯಾಜ್ ಅಭಿಮತ

ರಕ್ತದಾನ ಮಾಡುವುದು ಸಂಜೀವಿನಿಗೆ ಸಮಾನ

ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರು ತ್ತದೆ. ದೇಶದಲ್ಲಿ ಪ್ರತಿವರ್ಷ ೪೧ ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯ ಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳು ಗಳು ಮೃತಪಡುತ್ತಿದ್ದಾರೆ. ಅಮೂಲ್ಯವದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು

CN Ashwath Narayan: ಹಿಂದೂಗಳ ಹಬ್ಬಕ್ಕೆ ಕಾಂಗ್ರೆಸ್‌ ಸರ್ಕಾರದಿಂದ ಅಡ್ಡಿ: ಅಶ್ವತ್ಥ ನಾರಾಯಣ್‌ ಆಕ್ರೋಶ

ತೆರಿಗೆ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ: ಅಶ್ವತ್ಥ ನಾರಾಯಣ್‌

ಹಿಂದೂ ಸಮಾಜದ ಯಾವುದೇ ಹಬ್ಬಗಳು ಬಂದಾಗ ನಮ್ಮ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವುದು ಇದು ಒಂದೇ ಬಾರಿ ಅಲ್ಲ. ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಿ ಉದ್ಘಾಟನೆಯ ಸಂದರ್ಭದಲ್ಲೂ ಮನಬಂದಂತೆ ಮಾತನಾಡಿದ್ದರು. ಸನಾತನ ಧರ್ಮದ ವಿರುದ್ಧವಾಗಿ ಮಾತನಾಡಿದ್ದರು. ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶನ ವಿಗ್ರಹವನ್ನೇ ಬಂಧಿಸಿರುವುದನ್ನು ನಾವು ನೋಡಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಟೀಕಿಸಿದ್ದಾರೆ.

ʼಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ 50 ರೂ.ʼ ಆಫರ್‌ ನೀಡಿ ವಂಚನೆ; ರ‍್ಯಾಪಿಡೋಗೆ 10 ಲಕ್ಷ ರೂ. ದಂಡ

ಆಫರ್‌ ನೀಡಿ ಗ್ರಾಹಕರಿಗೆ ವಂಚನೆ; ರ‍್ಯಾಪಿಡೋಗೆ 10 ಲಕ್ಷ ರೂ. ದಂಡ

Pralhad Joshi: ರ‍್ಯಾಪಿಡೋ ಖಾಸಗಿ ಸಾರಿಗೆ ಸಂಸ್ಥೆ ದೇಶದ 120ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ʼಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ 50 ರೂ.ʼ ಆಫರ್ ನೀಡಿ ಗ್ರಾಹಕರನ್ನು ಮೋಸಗೊಳಿಸುತ್ತಿತ್ತು. ದೇಶಾದ್ಯಂತ ಆಯಾ ಪ್ರಾದೇಶಿಕ ಭಾಷೆಗಳಲ್ಲಿ 18 ತಿಂಗಳಿಂದ ದಾರಿ ತಪ್ಪಿಸುವ ಜಾಹೀರಾತು ಬಿತ್ತರಿಸುತ್ತಿದೆ. ಆದರೆ ತಕ್ಕಂತೆ ಸೇವೆ ಒದಗಿಸಿಲ್ಲ. ಈ ಬಗ್ಗೆ ಗ್ರಾಹಕ ಇಲಾಖೆಗೆ ಅತ್ಯಧಿಕ ದೂರುಗಳು ಬಂದಿದ್ದವು. ಇದೀಗ 10 ಲಕ್ಷ ರೂ. ದಂಡ ವಿಧಿಸಲಾಗಿದೆ.

Gauribidanur News: ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಸದ್ವಿನಿಯೋಗಪಡಿಸಿಕೊಳ್ಳಿ : ಕಾರ್ಮಿಕ ನಿರೀಕ್ಷಕ ಟಿ.ಬಿ.ಸತೀಶ್

ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಸದ್ವಿನಿಯೋಗಪಡಿಸಿಕೊಳ್ಳಿ

ಅಸಂಘಟಿತ ಕಾರ್ಮಿಕ ಭದ್ರತಾ ಮಂಡಳಿಯಿಂದ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗಾಗಿ ಉಚಿತ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ 91 ವಿವಿಧ ಬಗೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಗುರುತಿಸಿ ಅಂತಹವರಿಗೆ ಈ ಗುರುತಿನ ಚೀಟಿಯನ್ನು ನೀಡಲಾಗುವುದು, ಎಲ್ಲಾ ಅಸಂಘಟಿತ ಕಾರ್ಮಿಕರು ಗುರುತಿನ ಚೀಟಿ ಪಡೆದು, ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು

Chikkaballapur News: ಚೌದರಿ ಗಾರ್ಮೆಂಟ್ಸ್ ನಿರ್ವಾಹಕರ ವಿರುದ್ಧ ಮಹಿಳಾ ಕಾರ್ಮಿಕರು ಜಟಾಪಟಿ

ಚೌದರಿ ಗಾರ್ಮೆಂಟ್ಸ್ ನಿರ್ವಾಹಕರ ವಿರುದ್ಧ ಮಹಿಳಾ ಕಾರ್ಮಿಕರು ಜಟಾಪಟಿ

ಚೌದರಿ ಗಾರ್ಮೆಂಟ್ಸ್ ಕನ್ನಡ ಚಿತ್ರರಂಗದ ಖ್ಯಾತಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಸೇರಿದ ಗಾರ್ಮೆಂಟ್ಸ್ ಆಗಿದೆ ಎನ್ನಲಾಗಿದ್ದು ಹೊಸದಾಗಿ ಬಂದಿರುವ ಕೆಲ ಗಾರ್ಮೆಂಟ್ಸ್ನ ಗ್ರೂಪ್ ಮುಖ್ಯಸ್ಥ ಹರಿ ಪ್ರಸಾದ್ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕಾರ್ಮಿಕರು ತಿರುಗಿ ಬಿದ್ದು ತಮ್ಮ ಶಕ್ತಿಯ ಬಿಸಿ ಮುಟ್ಟಿಸಿದರು.

DK Shivakumar: ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ: ಡಿ.ಕೆ. ಶಿವಕುಮಾರ್

ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ: ಡಿಕೆಶಿ

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಜಾರಿ ವಿಚಾರವಾಗಿ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಟಿ.ಎನ್. ಜವರಾಯಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಪಾಲಿಕೆ ಚುನಾವಣೆಗೆ ಸಿದ್ಧತೆ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Bagepally News: ಕಾರಣವಿಲ್ಲದೆ ನೌಕರರ ವಜಾ : ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ

ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ

ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಏಕಾಏಕಿ ಯಾವುದೇ ಸ್ಪಷ್ಟ ಕಾರಣ ವಿಲ್ಲದೆ ಮತ್ತು ನೋಟೀಸ್ ನೀಡದೇ ಕೆಲಸದಿಂದ ತೆಗೆದು ಹಾಕಲಾಗಿದೆ. ಯಾವುದೇ ಕಾರ್ಮಿಕನನ್ನು ಕೆಲಸದಿಂದ ತೆಗೆಯಬೇಕಾದರೆ ಹಲವಾರು ನಿಯಮ ನಿಬಂಧನೆಗಳಿರುತ್ತವೆ. ಆದರೆ ಇ-ಫ್ಯಾಕ್ಟರಿಯಲ್ಲಿ ನಿಯಮ ಗಳನ್ನು ಗಾಳಿಗೆ ತೂರಲಾಗಿದೆ.

DK Shivakumar: ಬೆಂಗಳೂರು ಕಸ ವಿಲೇವಾರಿಗೆ 33 ಪ್ಯಾಕೇಜ್‌ಗಳಾಗಿ ಟೆಂಡರ್: ಡಿ.ಕೆ. ಶಿವಕುಮಾರ್

ಬೆಂಗಳೂರು ಕಸ ವಿಲೇವಾರಿಗೆ 33 ಪ್ಯಾಕೇಜ್‌ಗಳಾಗಿ ಟೆಂಡರ್: ಡಿಕೆಶಿ

ಬೆಂಗಳೂರು ನಗರದ ಕಸ ವಿಲೇವಾರಿಗೆ 28 ವಿಧಾನಸಭಾ ಕ್ಷೇತ್ರಗಳಲ್ಲಿ 33 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಟೆಂಡರ್ ಕರೆಯಲಾಗಿದೆ. ನಾಲ್ಕು ಜಾಗಗಳಲ್ಲಿ ತ್ಯಾಜ್ಯದಿಂದ ಗ್ಯಾಸ್, ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

DK Suresh: ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ನಮ್ಮ ಗುರಿ: ಡಿ.ಕೆ. ಸುರೇಶ್

ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಕ್ರಮ: ಡಿ.ಕೆ. ಸುರೇಶ್

Nandini Products: ಮಹಾರಾಷ್ಟ್ರದ ವಿರಾರ್‌ನಲ್ಲಿರುವ ಅಮುಲ್ ಡೈರಿ ಘಟಕಕ್ಕೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿತು. ಈ ವೇಳೆ ಮಾತನಾಡಿದ ಡಿ.ಕೆ. ಸುರೇಶ್, ದೇಶ ಹಾಗೂ ವಿದೇಶಗಳಲ್ಲಿ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ ನಮ್ಮ ಗುರಿ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ.

Mahesh Shetty Thimarodi: ಮಹೇಶ್‌ ಶೆಟ್ಟಿ ತಿಮರೋಡಿಗೆ 14 ದಿನ ನ್ಯಾಯಾಂಗ ಬಂಧನ; ನಿಷೇಧಾಜ್ಞೆ ಜಾರಿ

ಮಹೇಶ ಶೆಟ್ಟಿ ತಿಮರೋಡಿಗೆ 14 ದಿನ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಗೆ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕಾನೂನು ಸುವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್‌ ಠಾಣೆಯ ಸುತ್ತಲಿನ 500 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ

ಪಾಹಲ್ಗಾಮ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಐಸಿಎಐ (ICAI)

ಪಾಹಲ್ಗಾಮ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಐಸಿಎಐ (ICAI)

ಐತಿಹಾಸಿಕ ನಡೆಯಾಗಿ ಐಸಿಎಐ ತನ್ನ 445 ನೇ ಕೌನ್ಸಿಲ್‌ ಸಭೆಯನ್ನು ಆಗಸ್ಟ್‌ 12-14ರವರೆಗೆ ಪಹಾ ಲ್ಗಾಮ್‌ನಲ್ಲಿ ನಡೆಸಿದೆ. ಈ ಮೂಲಕ ಕಾಶ್ಮೀರದ ವ್ಯಾಲಿಯಲ್ಲಿ ಏಪ್ರಿಲ್‌ 22ರ ಭಯೋತ್ಪಾದಕ ಘಟನೆ ಬಳಿಕ ಉನ್ನತ ಮಟ್ಟದ ಸಭೆ ನಡೆಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಐಸಿಎಐ ಪಡೆದು ಕೊಂಡಿದೆ.

ಸ್ವಿಗ್ಗಿ ಹಾಗೂ ಬೌನ್ಸ್‌ ಇವಿ ಸಹಯೋಗ ಘೋಷಣೆ: ಹೆಚ್ಚು ಬೌನ್ಸ್‌ ಬಳಸಿ ಡೆಲಿವರಿ ಮಾಡುವ ಆಯ್ದ ಸ್ವಿಗ್ಗಿ ಡೆಲಿವರಿ ಬಾಯ್ಸ್‌ಗೆ ಸಿಗಲಿದೆ ಉಚಿತ ಇವಿ ಸ್ಕೂಟರ್‌

ಸ್ವಿಗ್ಗಿ ಹಾಗೂ ಬೌನ್ಸ್‌ ಇವಿ ಸಹಯೋಗ ಘೋಷಣೆ

ಸ್ವಿಗ್ಗಿ ಹಾಗೂ ಇನ್‌ಸ್ಟಾಮಾರ್ಟ್‌ ಡೆಲಿವರಿ ಮಾಡಲು ಸಹಕಾರಿಯಾಗಲು ಬೌನ್ಸ್‌ ಇವಿಯೊಂದಿಗೆ ಪಾಲುದಾರಿಗೆ ಹೊಂದಿದ್ದೇವೆ, ಮೊದಲನೇ ಹಂತದಲ್ಲಿ ಬೌನ್ಸ್‌ ಮುಂದಿನ ಮೂರು ತಿಂಗಳಲ್ಲಿ ಬೆಂಗಳೂರು ಹಾಗೂ ದೆಹಲಿನಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ನಿಯೋಜಿಸಲಿದೆ. ಈ ವಾಹನಗಳು ಬೌನ್ಸ್‌ ಡೈಲಿ ಅಪ್ಲಿಕೇಶನ್‌ ಹಾಗೂ ಸ್ವಿಗ್ಗಿ ಡೆಲಿವರಿ ಪಾರ್ಟನರ್‌ ಅಪ್ಲಿಕೇಶನ್‌ ಗಳಲ್ಲಿ ಸ್ವಿಗ್ಗಿ ಹಾಗೂ ಇನ್‌ಸ್ಟಾಮಾರ್ಟ್‌ ಡೆಲಿವರಿ ಬಾಯ್ಸ್‌ಗಳಿಗೆ ವಿಶೇಷ ದರದಲ್ಲಿ ಲಭ್ಯವಾಗಲಿದೆ.

ಅತ್ಯಂತ ನಿರೀಕ್ಷಿತ ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ರಿಯಲ್‌ ಮಿ

ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ರಿಯಲ್‌ ಮಿ

ಫ್ಲ್ಯಾಗ್‌ಶಿಪ್ ಮಟ್ಟದ ನವೀನತೆಗಳೊಂದಿಗೆ ರೂಪುಗೊಳಿಸಲಾದ ಈ ಸರಣಿಯನ್ನು ಯಾವುದೇ ರಾಜಿ ಯಿಲ್ಲದ ಆಲ್‌ರೌಂಡರ್ ಆಗಿ ಸ್ಥಾಪಿಸಲಾಗಿದೆ.ಇದು ಡುಯಲ್-ಚಿಪ್ ಶಕ್ತಿಯ ಪ್ರದರ್ಶನ, ಪ್ರೊ ಮಟ್ಟದ ಇಮೇಜಿಂಗ್, ಸಿನಿಮ್ಯಾಟಿಕ್ ಡಿಸ್ಪ್ಲೇಗಳು ಮತ್ತು ದಿನಪೂರ್ತಿ ಬರುವ ಬ್ಯಾಟರಿ ಸಾಮರ್ಥ್ಯವನ್ನು ಲಕ್ಷಾಂತರ ಯುವ ಬಳಕೆದಾರರ ಕೈಗೆ ತರುತ್ತಿದೆ.

Reliance Foundation: ರಿಲಯನ್ಸ್ ಫೌಂಡೇಷನ್‌ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 5100 ವಿದ್ಯಾರ್ಥಿಗಳಿಗೆ ಅವಕಾಶ

ರಿಲಯನ್ಸ್ ಫೌಂಡೇಷನ್‌ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Reliance Foundation: ರಿಲಯನ್ಸ್ ಫೌಂಡೇಷನ್‌ನ ವಾರ್ಷಿಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2025-26ರ ಶೈಕ್ಷಣಿಕ ವರ್ಷಕ್ಕೆ ರಿಲಯನ್ಸ್ ಫೌಂಡೇಷನ್ 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಪ್ರಥಮ ವರ್ಷದ ಪೂರ್ಣಾವಧಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಈ ಕುರಿತ ವಿವರ ಇಲ್ಲಿದೆ.

Youtuber Sameer: ಯೂಟ್ಯೂಬರ್‌ ಸಮೀರ್‌ಗೆ ಬಿಗ್‌ ರಿಲೀಫ್‌; ನಿರೀಕ್ಷಣಾ ಜಾಮೀನು ಮಂಜೂರು

ಯೂಟ್ಯೂಬರ್‌ ಸಮೀರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

Dharmasthala Case: ಧರ್ಮಸ್ಥಳ ಪ್ರಕರಣದ ಬಗ್ಗೆ ಎಐ ವಿಡಿಯೊ ಮಾಡಿ ಜನರಲ್ಲಿ ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿದ ಯೂಟ್ಯೂಬರ್‌ ಸಮೀರ್‌ ಎಂ.ಡಿ.ಗೆ ಸದ್ಯ ಬಂಧನದ ಭೀತಿ ದೂರವಾಗಿದೆ. ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಆತನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಧರ್ಮಸ್ಥಳ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌: ಎಐ ವಿಡಿಯೊ ಮೂಲಕ ಕಥೆ ಕಟ್ಟಿದ್ದ ಯೂಟ್ಯೂಬರ್‌ ಸಮೀರ್‌ಗೆ ಬಂಧನದ ಭೀತಿ: ನಿರೀಕ್ಷಣಾ ಜಾಮೀನಿಗೆ ಅರ್ಜಿ

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಯೂಟ್ಯೂಬರ್‌ ಸಮೀರ್‌

Youtuber Sameer: ದೂತ ಎನ್ನುವ ತನ್ನ ಯೂಟ್ಯೂಬ್‌ ಚಾನಲ್‌ ಮೂಲಕ ಎಐ ವಿಡಿಯೊ ಪೋಸ್ಟ್‌ ಮಾಡಿ ಭಾರಿ ವಿವಾದ ಸೃಷ್ಟಿಸಿದ ಯೂಟ್ಯೂಬರ್‌ ಸಮೀರ್‌ ಎಂ.ಡಿ.ಗೆ ಇದೀಗ ಬಂಧನದ ಭೀತಿ ಎದುರಾಗಿದೆ. ಆತನ ವಿರುದ್ಧ ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿ ವಿಡಿಯೊ ಮಾಡಿರುವುದು, ಜನರಲ್ಲಿ ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿರುವುದು ಮುಂತಾದ ಪ್ರಕರಣಗಳಿವೆ. ಸದ್ಯ ತಲೆಮರೆಸಿಕೊಂಡಿರುವ ಆತ ಬೆಳ್ತಂಗಡಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.

Chakravarti Sulibele: ನಮ್ಮ ಶ್ರದ್ದಾ ಕೇಂದ್ರಗಳ ಮೇಲೆ ನಾವೇ ಅನುಮಾನ ಪಡುವುದು ಸರಿಯೇ? ಚಕ್ರವರ್ತಿ ಸೂಲಿಬೆಲೆ ಪ್ರಶ್ನೆ

AI ವಿಡಿಯೊ ನಂಬಿ ಧರ್ಮಸ್ಥಳವನ್ನು ಕಟಕಟೆಯಲ್ಲಿ ನಿಲ್ಲಿಸಿದೆವು!

ಮಾಸ್ಕ್ ವ್ಯಕ್ತಿ ಹೇಳಿರುವ ಸ್ಥಳಗಳಲ್ಲಿ ಏನೂ ಸಿಗದೇ ಇದ್ದಾಗ ಎಸ್‌ಐಟಿ ಶೋಧ ಕಾರ್ಯವನ್ನು ನಿಲ್ಲಿಸಬಹುದಿತ್ತು. ಆದರೆ ಅವರು ಶೋಧವನ್ನು ಮುಂದುವರಿಸಿದ್ದರು. ಯಾಕೆಂದರೆ ಈ ಪ್ರಕರಣವನ್ನು ಎಡಪಂತೀಯರು ಮುಚ್ಚಲು ಬಯಸುತ್ತಿಲ್ಲ. ಅದನ್ನು ಜೀವಂತವಾಗಿ ಇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಲ್ಪೆಯಲ್ಲಿ ಮಾತಾನಾಡಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದು, ಹಿಂದುತ್ವದ ವಿರುದ್ಧ ಏನೇ ನಡೆದರೂ ಅದರ ಹಿಂದೆ ಮುಸ್ಲಿಂ, ಕ್ರಿಶ್ಚಿಯನ್, ಕಾಂಗ್ರೆಸ್ ನ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದರು.

Dharmasthala Case: ಯೂಟ್ಯೂಬರ್‌ ಸಮೀರ್‌ ಮನೆ ಸುತ್ತುವರಿದ ಪೊಲೀಸರು, ಸಮೀರ್‌ ಪರಾರಿ

ಯೂಟ್ಯೂಬರ್‌ ಸಮೀರ್‌ ಮನೆ ಸುತ್ತುವರಿದ ಪೊಲೀಸರು, ಸಮೀರ್‌ ಪರಾರಿ

Youtuber Sameer: ಸಮೀರ್‌ನನ್ನು ವಶಕ್ಕೆ ಪಡೆದು ಬೆಳ್ತಂಗಡಿಗೆ ವಿಚಾರಣೆಗೆ ಕರೆತರಲು ಪೊಲೀಸರು ನಿರ್ಧರಿಸಿದ್ದರು. ಆದರೆ ಪೊಲೀಸರ ಆಗಮನದ ಸುಳಿವು ಸಿಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದಾನೆ. ಆತ ಮನೆಯಲ್ಲಿ ಇಲ್ಲ ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಿಮರೋಡಿ, ಗಿರೀಶ್‌, ಸಮೀರ್‌, ಸುಜಾತ ಭಟ್ ಮೇಲೆ ಸ್ನೇಹಮಯಿ ಕೃಷ್ಣ ದೂರು

ತಿಮರೋಡಿ, ಗಿರೀಶ್‌, ಸಮೀರ್‌, ಸುಜಾತ ಭಟ್ ಮೇಲೆ ಸ್ನೇಹಮಯಿ ಕೃಷ್ಣ ದೂರು

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಯೂಟ್ಯೂಬರ್ ಸಮೀರ್, ಸುಜಾತ್ ಭಟ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದಾರೆ.

Loading...