ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಲು ಸಂಚು ನಡೆಯುತ್ತಿದೆ: ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಲು ಹೊರಟಿದ್ದಾರೆ: ಎಚ್‌ಡಿಕೆ

HD Kumaraswamy: ನನಗೆ ಒಂದು ಮಾಹಿತಿ ಇದೆ, ನೈಸ್ ಯೋಜನೆಯನ್ನು ಆ ಕಂಪನಿಯಿಂದ ಯಾರೋ ಈಗ ಟೇಕ್ ಓವರ್ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿಯನ್ನು ಕೇಳುತ್ತೇನೆ, ಇದರಲ್ಲಿ ಯಾರ ಪಾಲಿದೆ? ಯಾರು ಅದನ್ನು ಟೇಕ್ ಓವರ್ ಮಾಡಲು ಹೊರಟಿದ್ದಾರೆ? ಇವೆಲ್ಲವನ್ನೂ ಅವರೇ ಹೇಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಾಲು ಸಾಲು ಯಡವಟ್ಟಿನ ಬಳಿಕವೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರಿದ ಅವ್ಯವಸ್ಥೆ; ಪ್ರಜ್ವಲ್‌ ರೇವಣ್ಣ ಬಳಿ ಮತ್ತೊಂದು ಫೋನ್‌ ಪತ್ತೆ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್‌ ಬಳಿ ಮತ್ತೊಂದು ಫೋನ್‌ ಪತ್ತೆ

Prajwal Revanna: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್‌ ರೇವಣ್ಣ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೊ ಇತ್ತೀಚೆಗೆ ಹೊರ ಬಂದು ಭಾರಿ ಸಂಚಲನ ಮೂಡಿಸಿತ್ತು. ಇದೀಗ ಮತ್ತೆ ಅವರ ಸೆಲ್‌ನಲ್ಲಿ ಮತ್ತೊಂದು ಫೋನ್‌ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ, ಐಐಎಂ ಬೆಂಗಳೂರು ಸೇರಿ 58 ಸಂಸ್ಥೆಗಳ ಪದವೀಧರರ ನೇಮಕ

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ

Cognizant: ಕಾಗ್ನಿಜೆಂಟ್ ಭಾರತದಲ್ಲಿ ತನ್ನ ಹೊಸ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮಕ್ಕಾಗಿ ದೇಶದ 37 ನಗರಗಳ 58 ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳಿಂದ ಹೊಸದಾಗಿ 489 ಪದವೀಧರರನ್ನು ನೇಮಕ ಮಾಡಿಕೊಂಡಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಹನೂರು ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ

ಹನೂರು ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ

ವೇದಿಕೆಯ ಸಂಚಾಲಕ ಮುನಿವೆಂಕಟಪ್ಪ ಎಂ.ಪಿ., ತೋಮಿಯಾರ್ ಪಾಳ್ಯದ ಮೂವರು ರೈತರ ಸಾವಿನ ಕುರಿತು ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಯಬೇಕು. ಕಾಡಂಚಿನಲ್ಲಿ ವಾಸಿಸುವ ಜನರು ಅರಣ್ಯ ಇಲಾಖೆಯಿಂದ ದಬ್ಬಾಳಿಕೆಗೆ ಒಳಗಾಗುತ್ತಿರುವುದಕ್ಕೆ ಈ ಘಟನೆ ನಿದರ್ಶನವಾಗಿದೆ ಎಂದು ಆರೋಪಿಸಿ ದರು.

24 ಗಂಟೆಗಳ ಚಾರಿಟಿ ರೋಯಿಂಗ್ ಚಾಲೆಂಜ್‌: 100ಕ್ಕೂ ಹೆಚ್ಚು ಮಂದಿ ಭಾಗಿ!

24 ಗಂಟೆಗಳ ಚಾರಿಟಿ ರೋಯಿಂಗ್ ಚಾಲೆಂಜ್‌: 100ಕ್ಕೂ ಹೆಚ್ಚು ಮಂದಿ ಭಾಗಿ!

ಒಲಿಂಪಿಯನ್ ನಿಶಾ ಮಿಲ್ಲೆಟ್, ಐರನ್‌ಮ್ಯಾನ್ ವರ್ಲ್ಡ್ ಚಾಂಪಿ ಯನ್‌ಶಿಪ್ ಕ್ವಾಲಿಫೈಯರ್ ಸಾಗರ್, HYROX ಬ್ರಾಂಡ್ ಅಂಬಾಸಿಡರ್ ಹಾಗೂ ಅಥ್ಲೀಟ್ ಮಿತಾ ಪಟ್ನಾಯಕ್ ಮತ್ತು HYROX ವರ್ಲ್ಡ್ ಚಾಂಪಿಯನ್‌ಶಿಪ್ ಕ್ವಾಲಿಫೈಯರ್ ಅಂಕಿತ್ ಕಟಾರಿ ಯಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ದ್ದರು. ಇವರೊಂದಿಗೆ ವಿವಿಧ ಕಂಪನಿಗಳ ಸಿಇಒಗಳು, ಸಿಎಫ್‌ಒಗಳು, ಉದ್ಯಮಿಗಳು, ವೃತ್ತಿಪರರು, ಕೋಚ್‌ಗಳು ಹಾಗೂ ‘ಕ್ರಾಸ್‌ಫಿಟ್ 9ಒನ್’ ಸಮುದಾಯದ ಸದಸ್ಯರು ಕೈಜೋಡಿಸಿದರು.

ಕನ್ನಡಿಗನಿಗೆ ಒಲಿದ ಪಟ್ಟ: ಬಿಜೆಪಿಯ ಹೊಸ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರೊ. ಎಂ. ನಾಗರಾಜ್ ನೇಮಕ

ಬಿಜೆಪಿಯ ಹೊಸ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರೊ. ಎಂ. ನಾಗರಾಜ್ ನೇಮಕ

ಕೇಂದ್ರ ಬಿಜೆಪಿಯಲ್ಲಿ ಮೇಜರ್‌ ಸರ್ಜರಿ ನಡೆದಿದ್ದು, ಅಧ್ಯಕ್ಷ ನಿತಿನ್‌ ನಬಿನ್‌ ನೇತೃತ್ವದ ಬಿಜೆಪಿ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳಿಗೆ ಹಲವು ಪ್ರಮುಖ ನಾಯಕರನ್ನು ನೇಮಕ ಮಾಡಲಾಗಿದೆ. ರಾಷ್ಟ್ರೀಯ ಉಪಾಧ್ಯಕ್ಷರ ಪಟ್ಟಿಯಲ್ಲಿ ಶಿಕ್ಷಣ ತಜ್ಞ, ಒಬಿಸಿ ನಾಯಕ ಮತ್ತು ಬಿಜೆಪಿ ಹಿರಿಯ ಮುಖಂಡರಾದ ಕರ್ನಾಟಕದ ಪ್ರೊ. ಎಂ. ನಾಗರಾಜ ಅವರಿಗೆ ಸ್ಥಾನ ನೀಡಲಾಗಿದೆ.

ಬೀದರ್-‌ನಾಂದೇಡ್‌ ರೈಲ್ವೆ ಮಾರ್ಗ ವಿಳಂಬ

ಬೀದರ್-‌ನಾಂದೇಡ್‌ ರೈಲ್ವೆ ಮಾರ್ಗ ವಿಳಂಬ

ಮಾರ್ಗ ನಿರ್ಮಾಣಕ್ಕೆ ಉಚಿತವಾಗಿ ಜಮೀನು ಕೊಡುವುದರ ಜತೆಗೆ ಒಟ್ಟು ವೆಚ್ಚದಲ್ಲಿ ಅರ್ಧದಷ್ಟು ಶೇ 50 ರಷ್ಟು ಪಾಲು ಭರಿಸುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳನ್ನು ಕೋರಿತ್ತು. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹಲವು ಬಾರಿ ಈ ಕುರಿತು ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ರಾಜ್ಯ ಸರಕಾರ ಆರ್ಥಿಕ ಪಾಲು ನೀಡಲು ಹಿಂದೇಟು ಹಾಕಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಒಟ್ಟು 157 ಕಿಮೀ ಮಾರ್ಗದಲ್ಲಿ 101 ಕಿಮೀ ಮಹಾರಾಷ್ಟ್ರದಲ್ಲಿ ಮತ್ತು 56 ಕಿಮೀ ಕರ್ನಾಟಕದಲ್ಲಿ ಬರುತ್ತದೆ.

ಚಾಮರಾಜನಗರ ಶೂಟೌಟ್‌: ಮೃತಪಟ್ಟವರು ಅರಣ್ಯದೊಳಗೆ 5ರಿಂದ 8 ಕಿಲೋ ಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದ ಸಚಿವ ರಾಮಲಿಂಗಾ ರೆಡ್ಡಿ

ಚಾಮರಾಜನಗರ ಶೂಟೌಟ್‌ ಪ್ರಕರಣಕ್ಕೆ ಟ್ವಿಸ್ಟ್‌; ಸರ್ಕಾರ ಹೇಳಿದ್ದೇನು?

Chamarajanagara Shootout Case: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ವಿಧಾನಸಭೆಯಲ್ಲೂ ಸದ್ದು ಮಾಡಿದೆ. ಈ ಕುರಿತು ಮಾಹಿತಿ ನೀಡಿದ ಸಚಿವ ರಾಮಲಿಂಗಾರೆಡ್ಡಿ, ಮೃತಪಟ್ಟವರು ತಮ್ಮ ಜಮೀನಿಗೆ ಹೋಗಿರಲಿಲ್ಲ. ಬದಲಾಗಿ ಅರಣ್ಯದೊಳಗೆ 5ರಿಂದ 8 ಕಿಲೋ ಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕಕ್ಕೆ ಮತ್ತೆ ಆಘಾತ; ಕಾವೇರಿ ಪ್ರಾಧಿಕಾರದ ನಿರ್ದೇಶನದಂತೆ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಕೋರ್ಟ್‌ ಸೂಚನೆ

ರಾಜ್ಯಕ್ಕೆ ಆಘಾತ; ಕಾವೇರಿ ಪ್ರಾಧಿಕಾರದ ನಿರ್ದೇಶನ ಎತ್ತಿ ಹಿಡಿದ ಸುಪ್ರೀಂ

Cauvery Water Dispute: ಮಳೆ ಕೊರತೆ ಎದುರಿಸುತ್ತಿರುವ ಕರ್ನಾಟಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಆ ಮೂಲಕ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ಎತ್ತಿಹಿಡಿಯಲಾಗಿದೆ.

ಹನೂರು ಎನ್‌ಕೌಂಟರ್‌ ಪ್ರಕರಣ; ಜಿಂಕೆ ಮಾಂಸ ಸೇರಿ ಹಲವು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ!

ಹನೂರು ಎನ್‌ಕೌಂಟರ್‌ ಪ್ರಕರಣ; ಸಾಕ್ಷ್ಯ ಬಿಡುಗಡೆ ಅರಣ್ಯ ಇಲಾಖೆ

Hanur Encounter Case: ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದರು. ಇದೀಗ ಈ ಕುರಿತು ತನಿಖೆ ಆರಂಭವಾಗಿದ್ದು, ತನಿಖೆಗೆ ಬಂಧ ಅಧಿಕಾರಿಯ ಮುಂದೆ ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಜರು ಪಡಿಸಿದ್ದಾರೆ.

ಬೆಂಗಳೂರಿನಲ್ಲಿ 800 ಕೆಜಿ ಜಿಲೆಟಿನ್ ಸೀಜ್; ಕಲ್ಲು ಸ್ಫೋಟಕ್ಕೆ ಅಕ್ರಮವಾಗಿ ಬಳಕೆ ಆರೋಪ

ಬೆಂಗಳೂರಿನಲ್ಲಿ 800 ಕೆಜಿ ಜಿಲೆಟಿನ್ ಸೀಜ್

Bengaluru News: ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 800 ಕೆಜಿ ಜಿಲೆಟಿನ್​​ನನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಳ್ಳಂದೂರು ಠಾಣೆ ಪೊಲೀಸರು 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.

ವಾಯುಮಾಲಿನ್ಯ ತಪಾಸಣೆ ದರ ಹೆಚ್ಚಳ!

ವಾಯುಮಾಲಿನ್ಯ ತಪಾಸಣೆ ದರ ಹೆಚ್ಚಳ!

ಕರ್ನಾಟಕದಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿಸಿ) ಪಡೆಯಲು ಇನ್ನು ಮುಂದೆ ವಾಹನ ಮಾಲೀಕರು ಹೆಚ್ಚಿನ ಶುಲ್ಕ ತೆರಬೇಕಾಗಿದೆ. ಕಾರ್ಯಾಚರಣೆಯ ವೆಚ್ಚ ಹೆಚ್ಚಿರುವು ದನ್ನು ಉಲ್ಲೇಖಿಸಿ ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರ ಸಂಘ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಸಾರಿಗೆ ಇಲಾಖೆ, ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ.

ಡಿಸೆಂನರ್‌ʼನೊಳಗೆ ತಾಪಂ, ಜಿಪಂ ಚುನಾವಣೆ: ಡಿಕೆಶಿ

ಡಿಸೆಂನರ್‌ʼನೊಳಗೆ ತಾಪಂ, ಜಿಪಂ ಚುನಾವಣೆ: ಡಿಕೆಶಿ

ನೀವೆಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಿಮ್ಮ ಶ್ರಮಕ್ಕೆ ತಕ್ಕಂತೆ ನಿಮಗೆ ಅಧಿಕಾರ ನೀಡಬೇಕು ಎನ್ನುವುದು ನಮ್ಮ ಆಸೆ. ಅಧಿಕಾರ ಹಂಚಿಕೆ ಯಾದಾಗ ಮಾತ್ರ ಎಲ್ಲ ಸರಕಾರಿ ಕೆಲಸ ಕಾರ್ಯಗಳಿಗೆ ವೇಗ ಸಿಗಲು ಸಾಧ್ಯ ಎಂದು ಕಾರ್ಯಕರ್ತ ರಲ್ಲಿ ಹುರುಪು ತುಂಬಿದರು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ‘ಭಾರತ್ ಜೋಡೋ ಯುವ ಘಟಕ’ಗಳನ್ನು ನಿರ್ಮಾಣ ಮಾಡಲಾಗು ವುದು. ಆ ಮೂಲಕ ಯುವಕರನ್ನು ಸಂಘಟಿಸಿ ಪಕ್ಷದ ಸಿದ್ಧಾಂತಗಳನ್ನು ತಲುಪಿಸಲಾಗುವುದು ಎಂದರು

ನೈಸ್‌ ರಸ್ತೆಯಲ್ಲಿನ ಟೋಲ್‌ ಮುಚ್ಚಿಸಿ: ಸಿಎಂ ಡಿಕೆಶಿಗೆ ಪತ್ರ ಬರೆದ ಕುಮಾರಸ್ವಾಮಿ

ನೈಸ್‌ ರಸ್ತೆಯಲ್ಲಿನ ಟೋಲ್‌ ಮುಚ್ಚಿಸಿ

ಸರಕಾರ ನ್ಯಾಯಾಲಯದ ಆದೇಶದ ಕಡೆ ಗಮನ ಹರಿಸುತ್ತಿಲ್ಲ. ನ್ಯಾಯಾಲಯದ ಆದೇಶ ಹಾಗೂ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟು ಕೊಂಡು ನೈಸ್ ಯೋಜನೆ ಯನ್ನು ಸರಕಾರ ವಶಕ್ಕೆ ಪಡೆದು ಟೋಲ್ ಸಂಗ್ರಹವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.

ಕಾವೇರಲಿದೆಯೇ ಸದನ ?

ಕಾವೇರಲಿದೆಯೇ ಸದನ ?

ಸೋಮವಾರದಿಂದ ಪುನರಾರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿ ನಾಯಕರು ಈಗಾಗಲೇ ಘೋಷಿಸಿರುವಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಗದ್ದಲ ಎಬ್ಬಿಸುವ ಸಾಧ್ಯತೆ ಯಿದೆ. ಇದರೊಂದಿಗೆ ಎರಡು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿರುವ ಎನ್‌ಕೌಂಟರ್ ವಿಷಯವನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಆಲೋಚನೆಯಲ್ಲಿ ಬಿಜೆಪಿ ನಾಯಕರು ಇದ್ದಾರೆ.

ಹನೂರು ʼಶೂಟ್‌ʼಔಟ್‌ʼ ಹಿಂದೆ ರಾಜಕಾರಣದ ಡೌಟ್‌

ಹನೂರು ʼಶೂಟ್‌ʼಔಟ್‌ʼ ಹಿಂದೆ ರಾಜಕಾರಣದ ಡೌಟ್‌

ಚಾಮರಾಜನಗರ ಜಿಲ್ಲೆಯ ಹನೂರು ವಲಯದ ಶ್ಯಾಗ್ಯ ಸೆಕ್ಷನ್‌ನಲ್ಲಿ ಶನಿವಾರ ರಾತ್ರಿ ಶಂಕಿತ ಬೇಟೆ ಗಾರರನ್ನು ಶೂಟ್‌ಔಟ್ ಮಾಡಲಾಗಿದ್ದು, ಇದು ಭಾರೀ ಪ್ರತಿಭಟನೆಗೆ ಕಾರಣವಾಗಿ ಸರಕಾರ ಮೃತರಿಗೆ ಪರಿಹಾರವನ್ನೂ ಘೋಷಣೆ ಮಾಡಿದೆ. ಆದರೆ ಘಟನೆ ಹಿಂದಿನ ಸತ್ಯಾಸತ್ಯತೆಗಳು ಮರೆಯಾದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಇದರಿಂದ ಅಧಿಕಾರಿಗಳು ಮತ್ತು ಸರಕಾರದ ವರ್ಗಾವಣೆ ಉದ್ದೇಶಗಳ ಬಗ್ಗೆ ಹತ್ತುಹಲವು ಶಂಕೆಗಳು ಉಂಟಾಗಿವೆ.

Annabrahma Chaturmasya: ʼʼರೋಗ ಬರದಂತೆ ಜೀವಿಸುವುದನ್ನು ಹಿರಿಯರು ಹೇಳಿ ಕೊಟ್ಟಿದ್ದಾರೆʼʼ: ರಾಘವೇಶ್ವರ ಶ್ರೀ

''ಆಹಾರಕ್ಕೂ ಅಧ್ಯಾತ್ಮಕ್ಕೂ ನೇರ ಸಂಬಂಧ'': ರಾಘವೇಶ್ವರ ಶ್ರೀ

Sri Raghaveshwara Bharathi Swamiji: ʼʼಪಾಶ್ಚಿಮಾತ್ಯ ಪದ್ಧತಿಗಳು ರೋಗ ಬಂದ ಮೇಲೆ ಅದನ್ನು ಹೇಗೆ ಸರಿಪಡಿಸಬೇಕು ಎಂದು ಚಿಂತಿಸುತ್ತವೆ. ಆದರೆ ನಮ್ಮ ಪ್ರಾಚೀನರು ಆಯುರ್ವೇದಾದಿಗಳ ಮೂಲಕ ರೋಗ ಬರದಂತೆ ಸ್ವಸ್ಥವಾಗಿ ಬದುಕುವ ಜತೆಗೆ ಪಾಪವನ್ನೂ ಕಳೆದುಕೊಳ್ಳುವ ದಾರಿಯನ್ನು ಎಂದೋ ಕಂಡುಕೊಂಡಿದ್ದಾರೆʼʼ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೇಳಿದ್ದಾರೆ.

ಹುಂಡಿ ಒಡೆದು 50 ಸಾವಿರಕ್ಕೂ ಅಧಿಕ ಹಣ ಕಳವು

ಹುಂಡಿ ಒಡೆದು 50 ಸಾವಿರಕ್ಕೂ ಅಧಿಕ ಹಣ ಕಳವು

ರಾತ್ರಿ ವೇಳೆ ದೇವಾಲಯದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ಕದ್ದಿದ್ದಾರೆ. ಬೆಳಗ್ಗೆ ದೇವಾಲಯಕ್ಕೆ ಬಂದ ಸ್ಥಳೀಯರು ಕಳ್ಳತನ ನಡೆದಿರುವು ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಿಎಸ್ಐ ಸುನೀಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಗಗನಸಿಂಧು ಕೂಡ ಸ್ಥಳಕ್ಕೆ ಭೇಟಿ ನೀಡಿ ದೇವಾಲಯದ ಪರಿಸ್ಥಿತಿಯನ್ನು ಪರಿಶೀಲಿಸಿದರು.

K H Puttaswamy Gowda: ಕೆಪಿಎಸ್‌ ಶಾಲೆಗೆ ಶಾಸಕರಿಂದ ಎರಡು ಬಸ್‌ಗಳ ಕೊಡುಗೆ

ಕೆಪಿಎಸ್‌ ಶಾಲೆಗೆ ಶಾಸಕರಿಂದ ಎರಡು ಬಸ್‌ಗಳ ಕೊಡುಗೆ

ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆಯಲ್ಲಿ ಪ್ರಸ್ತುತ 693ಕ್ಕೂ ಅಧಿಕ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದಾರೆ. ದೂರದ ಊರುಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಹೊಸ ಬಸ್‌ಗಳನ್ನು ಖರೀದಿಸಿ ಶಾಲೆಗೆ ಕೊಡುಗೆಯಾಗಿ ನೀಡಲಾಗಿದೆ. ಅಲ್ಲದೆ, ನಾಲ್ಕು ಕೊಠಡಿಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ.

Accident: ಆದಿಯೋಗಿ ದರ್ಶನದ ಬಳಿಕ ದುರಂತ: ಕ್ಯಾಂಟರ್‌ಗೆ ಸಿಲುಕಿ ಬೈಕ್ ಸವಾರಿಬ್ಬರು ಸಾವು

ಕ್ಯಾಂಟರ್‌ಗೆ ಸಿಲುಕಿ ಬೈಕ್ ಸವಾರಿಬ್ಬರು ಸಾವು

ಆದಿಯೋಗಿ ದರ್ಶನ ಮುಗಿಸಿ ಬೈಕ್‌ನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಲಿಂಗಶೆಟ್ಟಿಪುರ ಗೇಟ್ ಬಳಿ ಹೆದ್ದಾರಿ ದಾಟುವಾಗ ಬಾಗೇಪಲ್ಲಿ ಕಡೆಯಿಂದ ಬಂದ ಕ್ಯಾಂಟರ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಕ್ಯಾಂಟರ್‌ನ ಚಕ್ರಗಳಡಿ ಸಿಲುಕಿದ್ದು, ಸುಮಾರು 100 ಮೀಟರ್‌ ವರೆಗೆ ಎಳೆದುಕೊಂಡು ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Chikkaballapur News: ಸ್ವಾತಂತ್ರ್ಯ ಹೋರಾಟಗಾರರಿಗೆ ಋಣಿಯಾಗಿರೋಣ: ಪಿ.ಎನ್.ಕೇಶವ ರೆಡ್ಡಿ

ಸ್ವಾತಂತ್ರ್ಯ ಹೋರಾಟಗಾರರಿಗೆ ಋಣಿಯಾಗಿರೋಣ: ಪಿ.ಎನ್.ಕೇಶವ ರೆಡ್ಡಿ

ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಲಾಲಾ ಲಜಪತ್ ರಾಯ್, ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ ಹಾಗೂ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕರು ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿ ದ್ದಾರೆ. ಅವರ ತ್ಯಾಗ ಮತ್ತು ಬಲಿದಾನದಿಂದ ದೊರೆತ ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಹೋರಾಟ ಗಾರರ ಆಶಯಗಳನ್ನು ಅರ್ಥಮಾಡಿಕೊಂಡು ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ

Mallikarjuna Kharge: ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’: ಮುನೀಂದ್ರ ಆಕ್ರೋಶ

ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’: ಮುನೀಂದ್ರ ಆಕ್ರೋಶ

ದಲಿತ ಸಮುದಾಯದ ಹಿರಿಯ ನಾಯಕನಿಗೆ ಜಾತಿಯ ಕಾರಣಕ್ಕೆ ಅವಮಾನ ಮಾಡಿದಂತಾಗಿರುವ ಈ ನಡೆ, ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯದ ಮನಸ್ಥಿತಿಯನ್ನು ಬಯಲಿ ಗೆಳೆಯುತ್ತದೆ ಎಂದು ಹೇಳಿದ್ದಾರೆ. ಇದು ಖರ್ಗೆ ಅವರಿಗೆ ಮಾತ್ರವಲ್ಲ, ಸಮಾನತೆ, ಸ್ವಾಭಿಮಾನ ಹಾಗೂ ಮಾನವ ಘನತೆಯ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ

Vande Mataram Row: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು; ಎಫ್‌ಐಆರ್‌ ದಾಖಲಿಸದಿದ್ದರೆ ಹೈಕೋರ್ಟ್‌ ಮೊರೆ ಹೋಗುವುದಾಗಿ ಬಿಜೆಪಿ ಮುಖಂಡ ವಿಕಾಸ್ ಎಚ್ಚರಿಕೆ

ʼವಂದೇ ಮಾತರಂʼ ವಿವಾದ: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು

BJP Leader Vikas Puttur: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ರಾಷ್ಟ್ರೀಯ ಗೀತೆ ʼವಂದೇ ಮಾತರಂʼಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಕಾಸ್‌ ಪುತ್ತೂರು ದೂರು ದಾಖಲಿಸಿದ್ದಾರೆ.

ʼವಂದೇ ಮಾತರಂʼ ಗೀತೆಗೆ ಅಗೌರವ; ಸಿಡಿದೆದ್ದ ಬಿಜೆಪಿ ಯುವ ಮೋರ್ಚಾ: ಸೋನಿಯಾ, ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಪಟ್ಟು

ʼವಂದೇ ಮಾತರಂʼಗೆ ಅಗೌರವ; ಸೋನಿಯಾ, ರಾಹುಲ್ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

Vande Mataram Row: ʼವಂದೇ ಮಾತರಂʼ ಗೀತೆಗೆ ಅಗೌರವ ತೋರಿದ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಭಾನುವಾರ (ಆಗಸ್ಟ್‌ 16) ಸಂಜೆ ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು.

Loading...