ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ಸಣ್ಣ ವ್ಯಾಪಾರಿಗಳಿಗೆ ಸಾಲದ ಲಭ್ಯತೆ ಹಿಂದೆಂದಿಗಿಂತ ಈಗ ಏಕೆ ಮುಖ್ಯವಾಗಿದೆ ?

ಸಣ್ಣ ವ್ಯಾಪಾರಿಗಳಿಗೆ ಸಾಲದ ಲಭ್ಯತೆ ಹಿಂದೆಂದಿಗಿಂತ ಈಗ ಏಕೆ ಮುಖ್ಯವಾಗಿದೆ ?

ಸಣ್ಣ ವ್ಯಾಪಾರಗಳು ಸಾಮಾನ್ಯವಾಗಿ ಬಿಗಿಯಾದ ನಗದು ಆವರ್ತಗಳಲ್ಲಿ ಕೆಲಸ ಮಾಡುತ್ತವೆ. ಪಾವತಿಗಳು ತಡವಾಗಿ ಬರಬಹುದು, ಆದರೆ ಬಾಡಿಗೆ, ವೇತನಗಳು ಮತ್ತು ಇನ್ವೆಂಟರಿ ವೆಚ್ಚಗಳು ಕಾಯುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ ಔಪಚಾರಿಕ ಸಾಲದ ಲಭ್ಯತೆಯು ಉದ್ಯಮ ಮಾಲೀಕ ರಿಗೆ ನಿರಾಳತೆ ಒದಗಿಸುತ್ತದೆ.

Moodubidire Police inspector Case: ಲೈಂಗಿಕ ಕಿರುಕುಳ ಆರೋಪ; ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

ಲೈಂಗಿಕ ಕಿರುಕುಳ ಆರೋಪ; ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೊ ಮತ್ತು ಆಡಿಯೊದಲ್ಲಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಇನ್ಸ್‌ಪೆಕ್ಟರ್ ಸಂದೇಶ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಆದೇಶ ಹೊರಡಿಸಿದ್ದಾರೆ.

Railway Exam: ರೈಲ್ವೆ ಪರೀಕ್ಷೆ ರದ್ದು; ಕನ್ನಡದಲ್ಲೇ ಎಕ್ಸಾಂ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ

ರೈಲ್ವೆ ಪರೀಕ್ಷೆ ರದ್ದು; ಕನ್ನಡದಲ್ಲೇ ಎಕ್ಸಾಂ ನಡೆಸಲು ಸಿಎಂ ಆಗ್ರಹ

Railway recruitment exam: ಪ್ರಾರಂಭದಲ್ಲಿಯೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ತಿದ್ದಿಕೊಂಡು ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದರೆ ಈಗಿನ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಪ್ರತಿಭಟನೆಯ ಕಾವು ಹೆಚ್ಚಾದ ಕೂಡಲೆ ತರಾತುರಿಯಲ್ಲಿ ಪರೀಕ್ಷೆ ರದ್ದುಪಡಿಸುವ ನಿರ್ಧಾರಕ್ಕೆ ಬಂದಿರುವುದು ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

KOMUL Milk Price: ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಗಿಫ್ಟ್‌; ಹಾಲಿನ ಬೆಲೆ 2 ರೂ. ಏರಿಕೆ

ಕೋಮುಲ್‌ ರೈತರಿಗೆ ಯುಗಾದಿ ಗಿಫ್ಟ್‌; ಹಾಲಿನ ಬೆಲೆ 2 ರೂ. ಏರಿಕೆ

Kolar Milk Producers Union Ltd: ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಪ್ರಸ್ತುತ ಲೀಟರ್ ಹಾಲಿಗೆ 35.40 ರೂ. ನೀಡಲಾಗುತ್ತಿದ್ದು, ಬುಧವಾರದಿಂದ ಲೀಟರ್‌ಗೆ 37.40 ರೂ.ಗಳನ್ನು ಹೈನುಗಾರರಿಗೆ ಪಾವತಿ ಮಾಡಲಾಗುವುದು ಎಂದು ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ; ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್ ಸಂದೇಶ್ ಫಸ್ಟ್‌ ರಿಯಾಕ್ಷನ್ ಏನು?

ಲೈಂಗಿಕ ಕಿರುಕುಳ ಆರೋಪ; ಮೂಡುಬಿದಿರೆ ಇನ್ಸ್‌ಪೆಕ್ಟರ್ ಫಸ್ಟ್‌ ರಿಯಾಕ್ಷನ್

Moodbidri Police Inspector Case: ನಾನು ಯಾವ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿಲ್ಲ, ಅವರ ಬಳಿ ಯಾವುದೇ ಹಣವನ್ನೂ ನಾನು ಕೇಳಿಲ್ಲ, ಇದು ಸತ್ಯಕ್ಕೆ ದೂರವಾದ ವಿಷಯ ಅದು. ಆಡಿಯೊ ಬಗ್ಗೆ ಮೇಲಧಿಕಾರಿಗಳು ತನಿಖೆ ಮಾಡ್ತಾರೆ ಎಂದು ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್ ಸಂದೇಶ್ ತಿಳಿಸಿದ್ದಾರೆ.

Ugadi Fashion 2026: ಹೀಗಿರಲಿ ಯುಗಾದಿ ಹಬ್ಬದ ಲಂಗ-ದಾವಣಿ ಫ್ಯಾಷನ್‌

ಹೀಗಿರಲಿ ಯುಗಾದಿ ಹಬ್ಬದ ಲಂಗ-ದಾವಣಿ ಫ್ಯಾಷನ್‌

ಯುಗಾದಿ ಹಬ್ಬಕ್ಕೆ ಲಂಗ-ದಾವಣಿ ಧರಿಸಬೇಕೆಂದುಕೊಂಡಿದ್ದೀರಾ? ಹಾಗಾದಲ್ಲಿ ಈ ಸೀಸನ್‌ನಲ್ಲಿ ಯಾವ ಬಗೆಯವು ಟ್ರೆಂಡಿಯಾಗಿವೆ. ಲಂಗ-ದಾವಣಿ ಧರಿಸುವವರು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ರನ್ನರ್‌ ಅಪ್‌ ನಿಶಾ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಮೌಲ್ಯಗಳನ್ನು ರೂಢಿಸಿಕೊಳ್ಳಿ: ಡಾ. ಬಿ. ಧನಂಜಯ ರಾವ್

ವಿದ್ಯಾಭ್ಯಾಸದ ಜೊತೆಗೆ ಮೌಲ್ಯಗಳನ್ನು ರೂಢಿಸಿಕೊಳ್ಳಿ: ಡಾ. ಬಿ. ಧನಂಜಯ ರಾವ್

ವಿದ್ಯಾರ್ಥಿಗಳು ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ಬದುಕಿಗೆ ಅಗತ್ಯವಿರುವ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಪರೀಕ್ಷೆಗಳಲ್ಲಿ ಅಂಕ ಗಳಿಸುವುದು ಮಾತ್ರವಲ್ಲದೆ, ಸಾಮಾಜಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ" ಎಂದು ವಕೀಲರು ಹಾಗೂ ಎಸ್ ಡಿ ಎಮ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ಬಿ ಧನಂಜಯ ರಾವ್ ಮಾತನಾಡಿದ್ದಾರೆ.

ಮಣಿಪಾಲ್ ಲಾ ಸ್ಕೂಲ್‌ನಲ್ಲಿ ಉಪನ್ಯಾಸ ನೀಡಿದ ನ್ಯಾಯಮೂರ್ತಿ ಅಭಯ್ ಎಸ್. ಓಕಾ

ಮಣಿಪಾಲ್ ಲಾ ಸ್ಕೂಲ್‌ನಲ್ಲಿ ಉಪನ್ಯಾಸ ನೀಡಿದ ನ್ಯಾಯಮೂರ್ತಿ ಅಭಯ್ ಎಸ್.ಓಕಾ

ಯಾವುದೇ ಆರೋಪಿಗೂ ಜಾಮೀನು ಪಡೆಯುವ ಹಕ್ಕಿದೆ. ವಿಚಾರಣೆ ಆರಂಭವಾಗುವ ಮೊದಲು ಯಾರನ್ನಾದರೂ ಜೈಲಿನಲ್ಲಿ ಇರಿಸುವುದು, ಇನ್ನೂ ಸಾಬೀತಾಗದ ಅಪರಾಧಕ್ಕೆ ಶಿಕ್ಷೆ ನೀಡಿದಂತೆʼ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹೇಳಿದ್ದಾರೆ. ‘ಜಾಮೀನು ನ್ಯಾಯಶಾಸ್ತ್ರದಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮಹತ್ವ ಏಕೆ?ʼ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ್ದಾರೆ.

Assault Case: ದಲಿತ ಕಾಂಗ್ರೆಸ್‌ ನಾಯಕಿಗೆ ಕಾಂಗ್ರೆಸ್‌ ನಾಯಕನಿಂದಲೇ ಹಲ್ಲೆ, ಪ್ರಧಾನಿಗೆ ಮೊರೆ

ದಲಿತ ಕಾಂಗ್ರೆಸ್‌ ನಾಯಕಿಗೆ ಪಕ್ಷದ ಮುಖಂಡನಿಂದಲೇ ಹಲ್ಲೆ, ಪ್ರಧಾನಿಗೆ ಮೊರೆ

ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ನಡೆದಿದೆ. ಚೇತನಾ ಅವರ ಮನೆಯನ್ನು ಬಾಡಿಗೆಗೆ ಪಡೆದಿದ್ದ ರಾಹಿಲ್ ಷರೀಫ್ ಮನೆ ಖಾಲಿ ಮಾಡಿಸಿದ್ದಕ್ಕೆ ಕೋಪಗೊಂಡು ರಾತ್ರಿ ಮನೆಗೆ ನುಗ್ಗಿ ಚೇತನಾ ಮತ್ತು ಅವರ ಪತಿಯ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ದಂಪತಿಗಳಿಗೆ ಗಾಯಗಳಾಗಿತ್ತು.

Vishwavani TV: ಎಲ್‌ಪಿಜಿ ಗ್ರಾಹಕರಿಗೆ ಗ್ಯಾಸ್‌ ವಿತರಕನ ಅಭಯ; 1 ಕೋಟಿ ವೀವ್ಸ್‌ ಕಂಡ ವೈರಲ್‌ ವಿಡಿಯೋ ಇಲ್ಲಿದೆ

1 ಕೋಟಿ ವೀಕ್ಷಣೆ ಗಳಿಸಿದ Vishwavani TV ವಿಡಿಯೊ

ದೇಶಾದ್ಯಂತ ಎಲ್‌ಪಿಜಿ ಕೊರತೆಯಾಗಿಲ್ಲವಾದರೂ ಕೂಡ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಕಾರಣ ಬುಕ್ಕಿಂಗ್ ಮತ್ತು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ. ಈ ಕುರಿತು ಪದೇ ಪದೇ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡುತ್ತಿದ್ದರೂ ಜನರು ಅಡುಗೆ ಅನಿಲ ಪಡೆಯಲು ಮುಗಿ ಬೀಳುತ್ತಿದ್ದಾರೆ. ಈ ಕುರಿತು ಈಗ ವಿಶ್ವವನಿಗೆ ಗ್ಯಾಸ್ ವಿತರಕರೊಬ್ಬರು ನೀಡಿರುವ ಹೇಳಿಕೆ ವಿಡಿಯೊ ಇಲ್ಲಿದೆ. ಈ ವಿಡಿಯೊವನ್ನು 1 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿರುವುದು ಈಗ ದಾಖಲೆಯಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ; ಪುತ್ತೂರು ಎಸಿಯಿಂದ ಕ್ರಮ

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ 3ನೇ ಬಾರಿ ಗಡಿಪಾರು ಆದೇಶ

Mahesh Shetty Timarodi: ಧರ್ಮಸ್ಥಳದ ಸೌಜನ್ಯ ಪರ ಹೋರಾಟಗಾರ ಎಂದು ಹೇಳಿಕೊಳ್ಳುವ ಮಹೇಶ್ ಶೆಟ್ಟಿ ತಿಮರೋಡಿಗೆ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಮೂರನೇ ಬಾರಿ ಗಡಿಪಾರು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಮಹೇಶ್ ಶೆಟ್ಟಿ ತಿಮರೋಡಿ ಅವರು 2026ರ ಮಾರ್ಚ್ 16 ರಿಂದ ಸೆಪ್ಟೆಂಬರ್ 19 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸುವಂತಿಲ್ಲ. ಈ ಆರು ತಿಂಗಳ ಅವಧಿಯಲ್ಲಿ ಅವರು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನೆಲೆಸಬೇಕೆಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

‌ಬೆಂಗಳೂರು ಮಹಿಳೆಯರ ಮೇಲೆ ಉದ್ಯೋಗ, ಹಣಕಾಸು ಒತ್ತಡ: ಎಂಪವರ್ ಮಾಹಿತಿ

ಬೆಂಗಳೂರು ಮಹಿಳೆಯರ ಮೇಲೆ ಉದ್ಯೋಗ, ಹಣಕಾಸು ಒತ್ತಡ: ಎಂಪವರ್ ಮಾಹಿತಿ

ನಗರ ಮಟ್ಟದ ಒಣನೋಟವು ದಕ್ಷಿಣ ವಲಯದಾದ್ಯಂತದ ವಿಶಾಲ ಮಾದರಿಯ ಭಾಗವಾಗಿದ್ದು, ಎಂಪವರ್ ಕಾರ್ಯಕ್ರಮಗಳು ಒಟ್ಟಾರೆಯಾಗಿ 12,591 ಮಹಿಳಾ ಫಲಾನುಭವಿಗಳನ್ನು ಕೌನ್ಸೆಲಿಂಗ್ ಸೇವೆಗಳು ಮತ್ತು ಸಹಾಯವಾಣಿಗಳ ಮೂಲಕ ತಲುಪಿವೆ, ಜೊತೆಗೆ ದೊಡ್ಡ ಮಟ್ಟದಲ್ಲಿ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ನೀರಾವರಿ ಯೋಜನೆಗಳಿಗೆ ಅನುಮತಿ ಬಗ್ಗೆ ದೆಹಲಿಯಲ್ಲಿ ಸಂಸದರ ಜತೆ ಚರ್ಚೆ: ಡಿ.ಕೆ. ಶಿವಕುಮಾರ್

ನೀರಾವರಿ ಯೋಜನೆಗಳ ಬಗ್ಗೆ ದೆಹಲಿಯಲ್ಲಿ ಸಂಸದರ ಜತೆ ಚರ್ಚೆ: ಡಿಕೆಶಿ

DK Shivakumar: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ಬಾಕಿ ಉಳಿಸಿಕೊಂಡಿದೆ ಆದ ಕಾರಣ ನಾನು, ಎಚ್.ಕೆ. ಪಾಟೀಲ್ ಹಾಗೂ ಎಂ.ಬಿ. ಪಾಟೀಲ್ ಅವರು ಕರ್ನಾಟಕದ ಎಲ್ಲಾ ಸಂಸದರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Railway Exam: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ, ಕನ್ನಡರಹಿತ ಪರೀಕ್ಷೆ ರದ್ದು

ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ, ಕನ್ನಡರಹಿತ ಪರೀಕ್ಷೆ ರದ್ದು

ರೈಲ್ವೆ ಇಲಾಖೆಯ ಈ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ ಇರಲಿಲ್ಲ. ಕರವೇ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ, ಈ ಮಹತ್ವದ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ತಾತ್ಕಾಲಿಕವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಮುಂಬಡ್ತಿ ಪರೀಕ್ಷೆಗೆ ಸಂಬಂಧಿಸಿದ ಮುಂದಿನ ಕ್ರಮಗಳ ಬಗ್ಗೆ ರೈಲ್ವೆ ಇಲಾಖೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ; ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ

ಈ ನೂತನ ಘಟಕವು ಸಹಯೋಗದ ಆವಿಷ್ಕಾರ ಕೇಂದ್ರವಾಗಿ (ಕೊಲ್ಯಾಬೊರೇಟಿವ್ ಇನ್ನೋ ವೇಷನ್ ಹಬ್) ಕಾರ್ಯನಿರ್ವಹಿಸಲಿದ್ದು, ಇಲ್ಲಿ ಹೆನ್ಕೆಲ್ ತಜ್ಞರು ಮತ್ತು ಗ್ರಾಹಕರು ಸೇರಿ ಮುಂದಿನ ಪೀಳಿಗೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನ ಉತ್ಪಾದನೆಗಾಗಿ ಸುಧಾರಿತ ಅದೆಸಿವ್ ಮತ್ತು ಶಾಖ ನಿರ್ವಹಣಾ ಉತ್ಪನ್ನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಬಹುದು, ಪರೀಕ್ಷಿಸ ಬಹುದು ಮತ್ತು ಮೌಲ್ಯೀಕರಿಸಬಹುದಾಗಿದೆ.

NEET exam: ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಕಾರದಿಂದಲೇ ನೀಟ್‌ ಕೋಚಿಂಗ್‌

ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಕಾರದಿಂದಲೇ ನೀಟ್‌ ಕೋಚಿಂಗ್‌

ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರವು ಹಂತ ಹಂತವಾಗಿ ಪರಿಣಾಮಕಾರಿ ಕೋಚಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭರವಸೆ ನೀಡಿದರು.

ದಾವಣಗೆರೆ ದಕ್ಷಿಣಾಧಿಪತಿ ಸ್ಥಾನಕ್ಕೆ ಭಾರೀ ಪೈಪೋಟಿ

ದಾವಣಗೆರೆ ದಕ್ಷಿಣಾಧಿಪತಿ ಸ್ಥಾನಕ್ಕೆ ಭಾರೀ ಪೈಪೋಟಿ

ಮನೆಯೊಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿ ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಕಗ್ಗಂಟು ಬಗೆಹರಿದಂತಿಲ್ಲ. ಪ್ರಸ್ತುತ ಚುನಾವಣೆ ರಾಜಕೀಯ ಮುಖಂಡ ರಿಗೆ ಅಸ್ತಿತ್ವದ ಪ್ರಶ್ನೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಎಸ್‌ಎಸ್ ಕುಟುಂಬ ಅನುಕಂಪದ ಆಧಾರ, ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಚುನಾವಣೆ ಬಯಸಿದೆ.

Bus Accident: ಬಸ್ ನಿಲ್ದಾಣದಲ್ಲಿ ಕೆಕೆಆರ್‌ಟಿಸಿ ಬಸ್ ಹರಿದು ಮಹಿಳೆ ಸಾವು

ಬಸ್ ನಿಲ್ದಾಣದಲ್ಲಿ ಕೆಕೆಆರ್‌ಟಿಸಿ ಬಸ್ ಹರಿದು ಮಹಿಳೆ ಸಾವು

ಸಿಂಧನೂರು ಬಸ್ ನಿಲ್ದಾಣದಲ್ಲಿ ಸೋಮವಾರ ಅಪಘಾತ ನಡೆದಿದೆ. ಕೆಕೆಆರ್‌ಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಮಹಿಳೆ ಸಾವನ್ನಪ್ಪಿದ್ದು, ಅಪಘಾತದ ದೃಶ್ಯ ಪ್ರಯಾಣಿಕರನ್ನ ಬೆಚ್ಚಿಬೀಳಿಸಿದೆ. ಘಟನೆ ಸಂಬಂಧ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡ ಈರಮ್ಮ (38) ಮೃತ ದುರ್ದೈವಿ.

KSRTC Buses: ಯುಗಾದಿ, ರಂಜಾನ್‌ ಹಬ್ಬಗಳ ಹಿನ್ನೆಲೆ, ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ 2000 ಹೆಚ್ಚುವರಿ ಬಸ್‌

ಯುಗಾದಿ, ರಂಜಾನ್‌ ಹಬ್ಬಕ್ಕಾಗಿ ಕೆಎಸ್‌ಆರ್‌ಟಿಸಿ 2000 ಹೆಚ್ಚುವರಿ ಬಸ್‌

ಯುಗಾದಿ ಮತ್ತು ರಂಜಾನ್ ಹಬ್ಬಗಳ ಪ್ರಯುಕ್ತ ರಾಜ್ಯದ ವಿವಿಧೆಡೆಗೆ ಹಾಗೂ ಹೊರರಾಜ್ಯಗಳಿಗೆ ಒಟ್ಟು 2000 ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಜ್ಜಾಗಿದೆ. ಪ್ರಯಾಣಿಕರನ್ನು ಉತ್ತೇಜಿಸಲು ಕೆಎಸ್ಆರ್ಟಿಸಿ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ:

LPG Crisis: ಮಂಗಳೂರಿಗೆ ಬಂತು 26 ಸಾವಿರ ಟನ್‌ ಎಲ್‌ಪಿಜಿ ತುಂಬಿದ ಹಡಗು

ಮಂಗಳೂರಿಗೆ ಬಂತು 26 ಸಾವಿರ ಟನ್‌ ಎಲ್‌ಪಿಜಿ ತುಂಬಿದ ಹಡಗು

ಪೆಟ್ರೋಲಿಯಂ ಡೀಲರ್‌ಗಳ ಅಂದಾಜಿನ ಪ್ರಕಾರ, ಈ ಎರಡು ಹಡಗುಗಳಿಂದ ಒಟ್ಟು ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಲಭ್ಯವಾಗಲಿದ್ದು, ಇದು ದೇಶದ ಅವಶ್ಯಕತೆಗೆ ಕೇವಲ 2 ದಿನಗಳ ಮಟ್ಟಿಗೆ ಮಾತ್ರ ಸಾಕಾಗಬಹುದು. ಇದನ್ನೆಲ್ಲ ಮೀರಿ, ಇನ್ನೂ 20ಕ್ಕೂ ಹೆಚ್ಚು ಭಾರತೀಯ ಹಡಗುಗಳು ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ.

CM Siddaramaiah: 14 ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್‌ ಮೀಟಿಂಗ್‌

14 ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್‌ ಮೀಟಿಂಗ್‌

ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್‌, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಭೋಸರಾಜು, ಎಂ. ಬಿ. ಪಾಟೀಲ್, ಮಹದೇವಪ್ಪ ಎಚ್.ಸಿ., ಮುನಿಯಪ್ಪ ಕೆ.ಎಚ್. ರಾಮಲಿಂಗ ರೆಡ್ಡಿ, ಎಸ್.ಎಸ್. ಮಲ್ಲಿಕಾರ್ಜುನ್‌, ಸತೀಶ್ ಜಾರಕಿಹೊಳಿ, ಚಲುವರಾಯ ಸ್ವಾಮಿ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಡಿನ್ನರ್‌ನಲ್ಲಿ ಭಾಗಿಯಾಗಿದ್ದರು.

LPG crisis: ಕೆವೈಸಿ ಮಾಡಿಸದಿದ್ರೆ ಎಲ್‌ಪಿಜಿ ಸಿಲಿಂಡರ್‌ ಸಿಗಲ್ಲ!

ಕೆವೈಸಿ ಮಾಡಿಸದಿದ್ರೆ ಎಲ್‌ಪಿಜಿ ಸಿಲಿಂಡರ್‌ ಸಿಗಲ್ಲ!

ಮಾರ್ಚ್ 15ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ ಕೆವೈಸಿ (KYC) ಮಾಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಗ್ರಾಹಕರಿಗೆ ಮಾತ್ರ ಇನ್ನು ಮುಂದೆ ಎಲ್‌ಪಿಜಿ ಸೇವೆಗಳು ಮತ್ತು ಸಬ್ಸಿಡಿ ಸೌಲಭ್ಯಗಳು ದೊರೆಯಲಿವೆ.

UT Khader: ಸ್ಪೀಕರ್‌ ಸಭಾತ್ಯಾಗ ಪ್ರಕರಣ: 8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್, ಸಚಿವರಿಗೂ ಪತ್ರ

8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್, ಸಚಿವರಿಗೂ ಪತ್ರ

ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕಾರಣ ಕೇಳಿ ಬರೋಬ್ಬರಿ ಎಂಟು ಇಲಾಖೆಯ ಹಿರಿಯ ಐಎಎಸ್​ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಬೇಡ್ತಿ-ವರದಾ ನದಿ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಕೈಬಿಡಿ; ಡಿಸಿಎಂ ಡಿಕೆಶಿಗೆ ಮನವಿ ಸಲ್ಲಿಕೆ

ಬೇಡ್ತಿ-ವರದಾ ನದಿ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಕೈಬಿಡಿ

ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಕೈಬಿಡುವಂತೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ್ ಹೆಗಡೆ ಅಶೀಸರ ನೇತೃತ್ವದ ನಿಯೋಗದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

Loading...