ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Farmers Protest: ದೇವನಹಳ್ಳಿ ರೈತ ಹೋರಾಟ; ಸರ್ಕಾರದ ಅಂತಿಮ ನಿರ್ಧಾರ ಪ್ರಕಟಕ್ಕೆ 10 ದಿನ ಕಾಲಾವಕಾಶ ಕೋರಿದ ಸಿಎಂ

ಭೂಸ್ವಾಧೀನ; ಅಂತಿಮ ನಿರ್ಧಾರ ಪ್ರಕಟಕ್ಕೆ 10 ದಿನ ಕಾಲಾವಕಾಶ ಕೋರಿದ ಸಿಎಂ

Farmers Protest: ಕಾನೂನು ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಿಯಮಾನುಸಾರ ಅಂತಿಮ ನೋಟಿಫಿಕೇಶ್ ಆಗಿರುವ ಕಾರಣ, ಅದರ ಕಾನೂನು ಅಂಶಗಳನ್ನು ಪರಿಶೀಲಿಸುವ ಅಗತ್ಯವಿದೆ. 10 ದಿನಗಳ ಬಳಿಕ ಮತ್ತೆ ಸಭೆ ನಡೆಸಿ ಸರ್ಕಾರದ ನಿಲುವು ಸ್ಪಷ್ಟಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Laxmi Hebbalkar: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನಗಳು ದೂರವಿಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನಗಳು ದೂರವಿಲ್ಲ

Laxmi Hebbalkar: ಕೇಂದ್ರ ಸರ್ಕಾರ ಬರೀ ಪೊಳ್ಳು ಭರವಸೆಯನ್ನು ಕೊಡುತ್ತಾ, ಜನ ಸಾಮಾನ್ಯರನ್ನು ವಂಚಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.

Heart attack: ಭೂ ಸ್ವಾಧೀನ ವಿರೋಧಿ ಪ್ರತಿಭಟನೆಗಾಗಿ ಬೆಂಗಳೂರಿಗೆ ಬಂದಿದ್ದ ರೈತ ಹೃದಯಾಘಾತದಿಂದ ಸಾವು

ಪ್ರತಿಭಟನೆಗಾಗಿ ಬೆಂಗಳೂರಿಗೆ ಬಂದಿದ್ದ ರೈತ ಹೃದಯಾಘಾತದಿಂದ ಸಾವು

Heart attack: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಕುರಬರಹುಂಡಿ ಮೂಲದ ರೈತ ಮುಖಂಡರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭೂಸ್ವಾಧೀನ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ಈ ಹೋರಾಟಕ್ಕೆ ಆಗಮಿಸುತ್ತಿದ್ದಾಗ ರೈತ ಮೃತಪಟ್ಟಿದ್ದಾರೆ.

KS Eshwarappa: ಅಕ್ರಮ ಆಸ್ತಿ ಗಳಿಕೆ ಆರೋಪ; ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ ಎಫ್‌ಐಆರ್ ದಾಖಲು

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ ಎಫ್‌ಐಆರ್ ದಾಖಲು

KS Eshwarappa: ಕೆ.ಎಸ್‌. ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈಶ್ವರಪ್ಪ ಹಾಗೂ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ವಿನೋದ್ ಎಂಬವರು ಖಾಸಗಿ ದೂರು ದಾಖಲಿಸಿದ್ದರು.

Customs consultative group: ಬೆಂಗಳೂರಿನಲ್ಲಿ ಕಸ್ಟಮ್ಸ್ ಸಮಾಲೋಚನಾ ಗುಂಪಿನ 19ನೇ ಸಭೆ; 181 ಕಾರ್ಯಸೂಚಿ ಅಂಶಗಳ ಬಗ್ಗೆ ಚರ್ಚೆ

ಬೆಂಗಳೂರಿನಲ್ಲಿ ಕಸ್ಟಮ್ಸ್ ಸಮಾಲೋಚನಾ ಗುಂಪಿನ 19ನೇ ಸಭೆ

Customs consultative group: ಸುರ್ಜಿತ್ ಭುಜಬಲ್ ಅವರ ಅಧ್ಯಕ್ಷತೆಯಲ್ಲಿ 19ನೇ ಸಿಸಿಜಿ ಸಭೆ ನಡೆಯಿತು. ಪಾಲುದಾರರ ನಿರಂತರ ತೊಡಗಿಸಿಕೊಳ್ಳುವಿಕೆ, ನೀತಿ ಹೊಣೆಗಾರಿಕೆ ಮತ್ತು ಭಾರತದ ಅಂತರರಾಷ್ಟ್ರೀಯ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸುವ ಸಿಬಿಐಸಿಯ ಬದ್ಧತೆಯನ್ನು ಪುನರುಚ್ಚರಿಸಿತು.

English Medium classes: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; 4134 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆ ಸರ್ಕಾರ ಆದೇಶ

4134 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆ ಸರ್ಕಾರ ಆದೇಶ

government schools: 2025-26ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಪ್ರಸ್ತುತ ಇರುವ ಕನ್ನಡ/ಇತರೆ ಮಾಧ್ಯಮದ ಜತೆ ಆಂಗ್ಲ ಮಾಧ್ಯಮ (ದ್ವಿಭಾಷಾ) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸೂಚಿಸಲಾಗಿದೆ.

Bengaluru News: ಸಾಲ ವಾಪಸ್‌ ಕೇಳಿದ್ದಕ್ಕೆ ಪೆಟ್ರೋಲ್‌ ಸುರಿದು ಮನೆಗೆ ಬೆಂಕಿ ಹಚ್ಚಿದ ಕಿರಾತಕ!

ಸಾಲ ವಾಪಸ್‌ ಕೇಳಿದ್ದಕ್ಕೆ ಪೆಟ್ರೋಲ್‌ ಸುರಿದು ಮನೆಗೆ ಬೆಂಕಿ ಹಚ್ಚಿದ!

Bengaluru News: ಬೆಂಗಳೂರಿನ ವಿವೇಕ್ ನಗರದಲ್ಲಿ ಘಟನೆ ನಡೆದಿದೆ. ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಯ ಸಹೋದರಿ ಹಲವು ವರ್ಷಗಳಾದರೂ ಸಾಲ ವಾಪಸ್‌ ನೀಡಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿ ವ್ಯಕ್ತಿಯ ಮನೆಗೆ ಆರೋಪಿ ಬೆಂಕಿ ಇಟ್ಟಿದ್ದಾನೆ.

MLC N Ravikumar: ಶಾಲಿನಿ ರಜನೀಶ್‌ ವಿರುದ್ಧ ಅವಹೇಳನಕಾರಿ ಹೇಳಿಕೆ; ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ್‌ ವಿರುದ್ಧ ಎಫ್‌ಐಆರ್‌

ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ್‌ ವಿರುದ್ಧ ಎಫ್‌ಐಆರ್‌

MLC N Ravikumar: ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ. ಇತ್ತೀಚೆಗೆ ಕಲಬುರಗಿಯ ಜಿಲ್ಲಾಧಿಕಾರಿ ಫೌಜಿಯಾ ತರನ್ನುಂ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈಗ ಸರ್ಕಾರದ ಸಿಎಸ್ ಶಾಲಿನಿ ರಜನಿಶ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ತೀವ್ರ ಅಕ್ರೋಶ ವ್ಯಕ್ತಪಡಿಸಿದೆ.

Heart attack: ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ನಿಂದ ಮತ್ತೊರ್ವ ಯುವಕ ಸಾವು; ಸಾವಿನ ಸಂಖ್ಯೆ 34ಕ್ಕೆ ಏರಿಕೆ

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ನಿಂದ ಮತ್ತೊರ್ವ ಯುವಕ ಸಾವು

Hassan Heart attack cases: ಹಾಸನ ಹೊರವಲಯದ ಚಿಕ್ಕಕೊಂಡಗುಳ ಗ್ರಾಮದಲ್ಲಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪಿದ್ದಾನೆ. 21 ವರ್ಷದ ಮದನ್ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹಾಸನ ತಾಲೂಕಿನ ಚಿಟ್ನಳ್ಳಿ ಗ್ರಾಮದ ನಿವಾಸಿಯಾಗಿರುವ ಮದನ್‌, ತಾಯಿ ಜೊತೆ ಚನ್ನಪಟ್ಟಣದಲ್ಲಿ ವಾಸವಾಗಿದ್ದರು.

Actor Darshan: ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಯ ಆಶೀರ್ವಾದ ಪಡೆದ ನಟ ದರ್ಶನ್‌

ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಯ ಆಶೀರ್ವಾದ ಪಡೆದ ನಟ ದರ್ಶನ್‌

ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಸ್ನೇಹಿತರ ಜೊತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ದರ್ಶನ್ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆಷ್ಟೇ ಕೇರಳದ ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದ ದರ್ಶನ್‌ ಇದೀಗ ಹುಟ್ಟುರಾದ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ಆಷಾಡ ಮಾಸ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ತಮ್ಮ ಪತ್ನಿ ಜೊತೆಗೆ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

Karnataka Weather: ಕರಾವಳಿ ಜತೆಗೆ ಈ ಜಿಲ್ಲೆಗಳಲ್ಲಿಯೂ ಇಂದು ಭಾರಿ ಮಳೆ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು?

ಕರಾವಳಿ ಜತೆಗೆ ಈ ಜಿಲ್ಲೆಗಳಲ್ಲಿಯೂ ಇಂದು ಭಾರಿ ಮಳೆ

Weather Report: ರಾಜ್ಯದಲ್ಲಿ ಇಂದೂ ಮಳೆ ಮುಂದುವರಿಯಲಿದೆ. ಜು. 6ರವರೆಗೆ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಈಗಾಗಲೇ ಯೆಲ್ಲೋ ಅಲರ್ಟ್‌ ನೀಡಿದೆ. ಅದರಲ್ಲಿಯೂ ಕರಾವಳಿ ಭಾಗಗಳಲ್ಲಿ ಭಾರಿ ಗಾಳಿಯೊಂದಿಗೆ ಉತ್ತಮ ಮಳೆ ಸುರಿಯಲಿದೆ.

Heart Attack Deaths: ಹೃದಯಾಘಾತದಿಂದ ಹೆಚ್ಚಾದ ಸಾವು; ನಮ್ಮ ಲಸಿಕೆ ಸೇಫ್ ಎಂದ ಕೋವಿಶೀಲ್ಡ್ ತಯಾರಕರು

ಹೃದಯಾಘಾತ ಹೆಚ್ಚಳಕ್ಕೆ ಕೊರೊನಾ ಲಸಿಕೆ ಕಾರಣವೇ? ಇಲ್ಲಿದೆ ಉತ್ತರ

ಇತ್ತೀಚೆಗೆ ಹೃದಯಾಘಾತದಿಂದ ಸಾವುಗಳು ಹೆಚ್ಚಾಗುತ್ತಿದ್ದು, ಕೋವಿಡ್ ಲಸಿಕೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಕೋವಿಡ್-19 ವೇಳೆ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸಿ ವಿತರಿಸಿದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೃದಯಾಘಾತದಿಂದ ಉಂಟಾಗುವ ಮರಣಗಳಿಗೂ, ನಮ್ಮ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

Self Harming: ಪ್ರೀತಿಸುತ್ತಿದ್ದಾಕೆಯೊಂದಿಗೆ ಮದುವೆಯಾದ ದಿನವೇ ಆತ್ಮಹತ್ಯೆಗೆ ಶರಣಾದ ನವವಿವಾಹಿತ; ಈ ದುರಂತ ಸಾವಿಗೆ ಕಾರಣವಾಗಿದ್ದೇನು?

ಪ್ರೀತಿಸುತ್ತಿದ್ದಾಕೆಯೊಂದಿಗೆ ಮದುವೆಯಾದ ದಿನವೇ ಆತ್ಮಹತ್ಯೆಗೆ ಶರಣಾದ ಯುವಕ

Kolar News: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾದ ಯುವಕ ಅದೇ ದಿನ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ. ಮದುವೆಯಾಗಲು ಸ್ವಲ್ಪ ದಿನಗಳ ಕಾಲಾವಕಾಶ ಕೋರಿದ್ದ ಆತನ್ನು ಬಲವಂತವಾಗಿ ಮದುವೆ ಮಾಡಿಸಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

PM Narendra Modi: ಪ್ರಧಾನಿ ಮೋದಿಯಿಂದ ಘಾನಾ ಅಧ್ಯಕ್ಷರಿಗೆ ಬೀದರ್‌ನ ಬಿದ್ರಿವೇರ್‌ ಹೂದಾನಿ ಉಡುಗೊರೆ

ಪ್ರಧಾನಿ ಮೋದಿಯಿಂದ ಘಾನಾ ಅಧ್ಯಕ್ಷರಿಗೆ ಬಿದ್ರಿವೇರ್‌ ಹೂದಾನಿ ಉಡುಗೊರೆ

PM Narendra Modi: ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಘಾನಾ ಅಧ್ಯಕ್ಷರಿಗೆ ಬೀದರ್‌ನಲ್ಲಿ ಸಿದ್ಧವಾದ ʼಬಿದ್ರಿವೇರ್‌ ಹೂದಾನಿʼಯನ್ನೇ ಉಡುಗೊರೆಯಾಗಿ ನೀಡಿದ್ದು ವಿಶೇಷ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬೀದರ್‌ನಿಂದ ತರಿಸಿಕೊಂಡಿದ್ದ ಈ 'ಬಿದ್ರಿವೇರ್ ಹೂದಾನಿ' ಕಪ್ಪು ವರ್ಣರಂಜಿತವಾಗಿದ್ದು, ಬೆಳ್ಳಿಯ ಕುಸುರಿ ಕೂಡ ಹೊಂದಿದ್ದು, ಭಾರತದ ಪ್ರಸಿದ್ಧ ಲೋಹದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ.

S\O Muthanna Movie: ಪ್ರಣಂ ದೇವರಾಜ್ ಈಗ ಮುತ್ತಣ್ಣನ ಮಗ; ʼS\O ಮುತ್ತಣ್ಣʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ಪ್ರಣಂ ದೇವರಾಜ್ ನಟನೆಯ ʼS\O ಮುತ್ತಣ್ಣʼ ಚಿತ್ರ ಆ. 22ಕ್ಕೆ ರಿಲೀಸ್‌

Pranam Devaraj: ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ʼS\O ಮುತ್ತಣ್ಣʼ ಚಿತ್ರ ಆಗಸ್ಟ್ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅಪ್ಪ-ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ತಂದೆ - ಮಗನಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ʼದಿಯಾʼ ಖ್ಯಾತಿಯ ಖುಷಿ ರವಿ ನಟಿಸಿದ್ದಾರೆ.

People’s Education Society: ಬರೋಬ್ಬರಿ 110 ಕೋಟಿ ರೂ.ಗೆ ಬೆಂಗಳೂರಿನಲ್ಲಿ 2 ಮನೆ ಖರೀದಿಸಿದ ಪಿಇಎಸ್‌

110 ಕೋಟಿ ರೂ.ಗೆ ಬೆಂಗಳೂರಿನಲ್ಲಿ 2 ಮನೆ ಖರೀದಿಸಿದ ಪಿಇಎಸ್‌

Bengaluru Real Estate: ಪ್ರತಿಷ್ಠಿತ ವಿದ್ಯಾಸಂಸ್ಥೆ ಪೀಪಲ್ಸ್‌ ಎಜ್ಯುಕೇಷನ್‌ ಸೊಸೈಟಿ ಬೆಂಗಳೂರಿನ ಸದಾಶಿವ ನಗರದಲ್ಲಿ ಬರೋಬ್ಬರಿ 110 ಕೋಟಿ ರೂ.ಗೆ 2 ಸ್ವತಂತ್ರ ಮನೆಗಳನ್ನು ಖರೀದಿಸಿದೆ. ಪಿಇಎಸ್‌ ವಿಶ್ವವಿದ್ಯಾಲಯವನ್ನು ನಡೆಸುತ್ತಿರುವ ಪೀಪಲ್ಸ್ ಎಜುಕೇಶನ್ ಸೊಸೈಟಿ ಸದಾಶಿವ ನಗರ ಪ್ರದೇಶದಲ್ಲಿ ಈ ಮನೆಗಳನ್ನು 2025ರ ಜ. 22 ಮತ್ತು ಏ. 1ರಂದು ಖರೀದಿಸಿದೆ.

Gubbi (Tumkur) News: ಗುಬ್ಬಿಯಲ್ಲಿ ಜು.7ರಂದು ಶ್ರೀ ಪಾಂಡುರಂಗಸ್ವಾಮಿ ದಿಂಡಿ ಉತ್ಸವ: ಭಾವಸಾರ ಕ್ಷತ್ರಿಯರಿಂದ ಅದ್ದೂರಿ ಮೆರವಣಿಗೆ

ಗುಬ್ಬಿಯಲ್ಲಿ ಜು.7ರಂದು ಶ್ರೀ ಪಾಂಡುರಂಗಸ್ವಾಮಿ ದಿಂಡಿ ಉತ್ಸವ

ಜು.6 ರ ಸಂಜೆ 5 ಗಂಟೆಗೆ ಶ್ರೀ ಜ್ಞಾನೇಶ್ವರಿ ಪಾರಾಯಣ ಮತ್ತು ಭಜನೆ ಕೀರ್ತನೆ ನಡೆದು ಮಹಾ ಮಂಗಳಾರತಿ ನಡೆಯಲಿದೆ. ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯ ಘಟಕದ ಡಾ.ಸೂರ್ಯ ನಾರಾ ಯಣರಾವ್, ಗುರುಪ್ರಸಾದ್ ಪಿಸ್ಸೆ ಹಾಗೂ ಸತ್ಯನಾರಾಯಣ್ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸ ಲಾಗಿದೆ

Temple Robbery: ಮೈಸೂರು ಚಾಮುಂಡೇಶ್ವರಿ ದೇವಾಲಯದಿಂದ ತಾಳಿ ಕಳವು; ಖದೀಮನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಮೈಸೂರು ಚಾಮುಂಡೇಶ್ವರಿ ದೇವಾಲಯದಿಂದ ತಾಳಿ ಕಳವು

Mysore News: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇತ್ತೀಚೆಗೆ ಕಳವು ಪ್ರಕರಣ ಹೆಚ್ಚಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಗಾಯತ್ರಿಪುರಂನಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ವ್ಯಕ್ತಿಯೊಬ್ಬ ಗರ್ಭಗುಡಿಗೆ ನುಗ್ಗಿ ಮಾಂಗಲ್ಯ ಸರ ಕಳವು ಮಾಡಿದ್ದಾನೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Chikkaballapur News: ನವ ಓದುವಿನಂತೆ ಸಿಂಗಾರಗೊಂಡ ನಂದಿ ಗ್ರಾಮ, ಬೆಟ್ಟದ ಮೇಲೆ ಅಧಿಕಾರಿಗಳ ಕಲರವ

ಭರ್ಜರಿ ಬಾಡೂಟಕ್ಕೆ ಮನಸೋತ ಸಚಿವ ಸಂಪುಟ ಸಭೆ

ಮುಖ್ಯಮಂತ್ರಿಯ ಭೇಟಿಯ ಹಿನ್ನೆಲೆಯಲ್ಲಿ ಪೋಲಿಸ್ ಬಿಗಿ ಬಂದೋಬಸ್ ಏರ್ಪಡಿಸಲಾಗಿತ್ತು. ದೇವಾ ಲಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಗೌರವ ವಂದನೆ  ಸಲ್ಲಿಸಿ ಸ್ವಾಗತ ಕೋರಲಾಯಿತು. ಭೋಗ ನಂದೀಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು ಮುಖ್ಯಮಂತ್ರಿಗಳು ದೇವರ ದರ್ಶನ ಪಡೆದು ಪುನೀತರಾದರು.

‌Viral Video: ಕೆಫೆಯಲ್ಲಿ ಪುಂಡ ದಾಂಧಲೆ; ಸಿಬ್ಬಂದಿ ಮೇಲೆ ಡೆಡ್ಲಿ ಅಟ್ಯಾಕ್‌; ರಾಜ್ಯ ರಾಜಧಾನಿಯಲ್ಲೊಂದು ಬೆಚ್ಚಿ ಬೀಳಿಸೋ ಘಟನೆ!

ಕಾಫಿ ಶಾಪ್‌ನಲ್ಲಿ ಭೀಕರ ಹೊಡೆದಾಟ; ಶಾಕಿಂಗ್‌ ವಿಡಿಯೊ ವೈರಲ್‌!

ಕಾಫಿ ನೀಡಲು ನಿರಾಕರಿಸಿದ ಕಾರಣ ಇತ್ತೀಚೆಗೆ ಪುರುಷರ ಗುಂಪೊಂದು ʼನಮ್ಮ ಫಿಲ್ಟರ್ ಕಾಫಿʼ ಔಟ್ಲೆಟ್‍ನ ಸಿಬ್ಬಂದಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದೆ. ಕೆಫೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

D.K.Suresh: ಮುಂದೊಂದು ದಿನ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಡಿ.ಕೆ.ಸುರೇಶ್

ಡಿ.ಕೆ.ಶಿವಕುಮಾರ್ ಸಿಎಂ ಆಗುವ ಭರವಸೆ ಇದೆ: ಡಿ.ಕೆ.ಸುರೇಶ್

D.K.Shivakumar: ʼʼಡಿ.ಕೆ.ಶಿವಕುಮಾರ್ ಮುಂದೊಂದು ದಿನ ಸಿಎಂ ಆಗುತ್ತಾರೆ ಎನ್ನುವ ಭರವಸೆ ಇದೆ. ಅವರು ಪಕ್ಷಕ್ಕೆ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಕೆಲವು ಭಾಗದ ಜನರು ವಿಶ್ವಾಸ ಇಟ್ಟು ಶಿವಕುಮಾರ್ ಅವರಿಗೆ ಒಂದು ಬಾರಿ ಅವಕಾಶ ಸಿಗಲಿ ಎಂದು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಆದರೆ ಈಗ ಸಿಎಂ ಸೀಟು ಖಾಲಿ ಇಲ್ಲ” ಎಂದು ಡಿ.ಕೆ.ಸುರೇಶ್‌ ತಿಳಿಸಿದರು.

DK Shivakumar: ಕಾಂಗ್ರೆಸ್ ಸರ್ಕಾರದಿಂದ ಆಶಾಕಿರಣ ಯೋಜನೆ ಮೂಲಕ ʼದೃಷ್ಟಿ ಗ್ಯಾರಂಟಿʼ: ಡಿ.ಕೆ.ಶಿವಕುಮಾರ್‌

ಕಾಂಗ್ರೆಸ್ ಸರ್ಕಾರದಿಂದ ಆಶಾಕಿರಣ ಯೋಜನೆ ಮೂಲಕ ʼದೃಷ್ಟಿ ಗ್ಯಾರಂಟಿʼ: ಡಿಕೆಶಿ

DK Shivakumar: ಹಿಂದಿನಿಂದಲೂ ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ ಬುನಾದಿ ಹಾಕಿದ್ದು ಕಾಂಗ್ರೆಸ್ ಸರ್ಕಾರ. ಕರ್ನಾಟಕದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ಅತ್ಯಂತ ಹೆಚ್ಚು ವೈದ್ಯರನ್ನು ತಯಾರು ಮಾಡುತ್ತಿರುವ ಪಟ್ಟಿಯಲ್ಲಿ ಕರ್ನಾಟಕವಿದ್ದು. ಇಲ್ಲಿ ಕಲಿತವರು ಹೊರ ದೇಶಗಳಿಗೆ ತೆರಳಿ ದೇಶಕ್ಕೆ ಉತ್ತಮ ಹೆಸರು ತರುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Chikkaballapur News: ಮುಖ್ಯಮಂತ್ರಿಗಳಿಗೆ ಗಂಟೆಗಟ್ಟಲೆ ಕಾದ ಮಾಧ್ಯಮ ಮಿತ್ರರು

ಮುಖ್ಯಮಂತ್ರಿಗಳಿಗೆ ಗಂಟೆಗಟ್ಟಲೆ ಕಾದ ಮಾಧ್ಯಮ ಮಿತ್ರರು

ಎರಡು ಮೂರು ಬಾರಿ ಪೊಲೀಸ್ ಅಧಿಕಾರಿಗಳು ಬಂದು ಈಗ ಬರುತ್ತಾರೆ ಆಗ ಬರುತ್ತಾರೆ ಎಂದಿದ್ದೆ ಬಂತು. ಆದರೆ ಮುಖ್ಯಮಂತ್ರಿಗಳು ಬರಲೇ ಇಲ್ಲ. ನಂದಿ ಬೆಟ್ಟದ ಸಂಪುಟ ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು ಎಂಬ ಸಂಗತಿಗಳನ್ನು ತಿಳಿಯಲು ಜಾತಕ ಪಕ್ಷಿಗಳಂತೆ ಸುದ್ದಿ ಮಾಧ್ಯಮದ ಮಿತ್ರರು ಮುಖ್ಯಮಂತ್ರಿಗಳಿಗೆ ಕಾದಂತೆ ಮೊಬೈಲ್ ಕ್ಯಾಮೆರಾಗಳು ಸಹ ಕಾದವು

ರಸ್ತೆ ಅಪಘಾತಕ್ಕೆ ಮಗ ಬಲಿ; ಸುದ್ದಿ ತಿಳಿದು ಹೃದಯಾಘಾತದಿಂದ ತಾಯಿ ಸಾವು

ರಸ್ತೆ ಅಪಘಾತಕ್ಕೆ ಮಗ ಬಲಿ; ಸುದ್ದಿ ತಿಳಿದು ಹೃದಯಾಘಾತದಿಂದ ತಾಯಿ ಸಾವು

Road Accident: ಅಪಘಾತದಲ್ಲಿ ಮೃತಪಟ್ಟ ಮಗನ ಸಾವಿನ ಸುದ್ದಿ ತಿಳಿದು ತಾಯಿ ಕೂಡ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀಕಾಂತ್ ಜೋಶಿ ಅಲಿಯಾಸ್​​ ಕಾಂತರಾಜು (45) ಮತ್ತು ತಾಯಿ ಶಾರದಾಬಾಯಿ (86) ಮೃತರು.