ಹಾಲು ಒಕ್ಕೂಟದ ನೂತನ ಆಡಳಿತ ಮಂಡಳಿಯ ಚುನಾವಣೆಗೆ ಅಖಾಡ ಸಜ್ಜು
ಜ.23ರಂದು ನಾಮಪತ್ರಗಳ ಪರಿಶೀಲನೆ ನಡೆದು ಒಂದು ಅರ್ಜಿ ಅಸಿಂಧುವಾಗಿತ್ತು. ಅದರಂತೆ 43 ಅರ್ಜಿಗಳಲ್ಲಿ ಶನಿವಾರ 3 ಗಂಟೆಯ ತನಕ ಉಮೇದುವಾರಿಕೆ ವಾಪಸ್ಸು ಪಡೆಯಲು ಅವಕಾಶವಿತ್ತು. ಇವೆಲ್ಲಾ ಹಂತಗಳ ನಡುವೆ ಕಣದಲ್ಲಿ 28 ಮಂದಿ ಉಳಿದಿದ್ದು ಚುನಾವಣೆ ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚಿನ್ಹೆಯನ್ನು ಕೂಡ ಶನಿವಾರ ನೀಡಲಾ ಗಿದ್ದು ಎಂ.ಎಲ್ಎ, ಎಂ.ಪಿ ಚುನಾವಣೆಯನ್ನು ನಾಚಿಸುವ ರೀತಿಯಲ್ಲಿ ಅಖಾಡ ಸಿದ್ಧವಾಗಿದೆ.