ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

V N Reddy: ಸರ್ಕಾರಿ ಗೌರವಗಳೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್.ರೆಡ್ಡಿ ಅಂತ್ಯಸಂಸ್ಕಾರ

ಸರ್ಕಾರಿ ಗೌರವಗಳೊಂದಿಗೆ ವಿ.ಎನ್.ರೆಡ್ಡಿ ಅಂತ್ಯಸಂಸ್ಕಾರ

Pavagada News: ಗಡಿನಾಡು ಪಾವಗಡ ತಾಲೂಕಿನ ವೆಂಕಟಾಪುರದ ವಿ.ಎನ್.ರೆಡ್ಠಿ ಅವರಿಗೆ ಸುಮಾರು 103 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಸೋಮವಾರ ಕೊನೆಯುಸಿರೆಳೆದಿದ್ದರು. ಇವರು ಚಿಕ್ಕ ವಯಸ್ಸಿಗೆ ಮಹಾತ್ಮ ಗಾಂಧಿ, ಲೋಕನಾಯಕ ಜಯಪ್ರಕಾಶ್ ನಾರಾಯಣ, ಡಾ.ರಾಮ್ ಮನೋಹರ್ ಲೋಹಿಯಾ ಮತ್ತಿತರರಿಂದ ಪ್ರಭಾವಿತರಾಗಿದ್ದರು.

Bengaluru Tunnel Road: ತೇಜಸ್ವಿ ಸೂರ್ಯ ತಮ್ಮ ಕ್ಷೇತ್ರದ ಜನಕ್ಕೆ ಸಾರ್ವಜನಿಕ ಸಾರಿಗೆ ಬಳಸುವಂತೆ ಹೇಳಲಿ: ಡಿಕೆಶಿ

ಕ್ಷೇತ್ರದ ಜನಕ್ಕೆ ಸಾರ್ವಜನಿಕ ಸಾರಿಗೆ ಬಳಸುವಂತೆ ತೇಜಸ್ವಿ ಸೂರ್ಯ ಹೇಳಲಿ

DK Shivakumar: ತೇಜಸ್ವಿ ಸೂರ್ಯ ಅವರು ಕೆಲವು ಸಲಹೆ ನೀಡಿದ್ದಾರೆ. ಟನಲ್ ರಸ್ತೆಯಲ್ಲಿ ಕೇವಲ ಕಾರುಗಳಿಗೆ ಅನುಕೂಲವಾಗುತ್ತದೆ. ಮೆಟ್ರೋ ಮಾರ್ಗ ಕೂಡ ವಿಸ್ತರಿಸಬೇಕು ಎಂದು ಹೇಳುತ್ತಿದ್ದಾರೆ. ಇಲ್ಲಿ ಮೆಟ್ರೋ ಸೇರಿಸಲು ನಮ್ಮ ತಕರಾರು ಇಲ್ಲ. ಇದರ ಜತೆಗೆ ಅವರು ನೀಡಿರುವ ಇತರೆ ಸಲಹೆಗಳನ್ನು ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Bengaluru Power Cut: ಅ.30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಅ.30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Bengaluru News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆವಿ ಪಾಟರಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಅ.30ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Karnataka Weather: ನಾಳೆ ಬೆಳಗಾವಿ, ಕಲಬುರಗಿ ಸೇರಿ 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌; ಗುಡುಗು ಸಹಿತ ಮಳೆ ಸಾಧ್ಯತೆ

ನಾಳೆ ಬೆಳಗಾವಿ, ಕಲಬುರಗಿ ಸೇರಿ 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ (Weather Forecast) ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 26°C ಮತ್ತು 20°C ಇರುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

BY Vijayendra: ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಸಿಎಂ ಮಾಡುತ್ತಿದ್ದಾರೆ: ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ: ಬಿ.ವೈ. ವಿಜಯೇಂದ್ರ

State Congress Government: ರೈತರ ಸಮಸ್ಯೆಗೆ ಪರಿಹಾರ ಕೊಡಿ ಎಂದರೆ ಇವತ್ತು ಸಿಎಂ ಬದಲಾವಣೆ ಚರ್ಚೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಕಚ್ಚಾಟದಿಂದ ರಾಜ್ಯದ ಜನತೆ ಸರ್ಕಾರದ ಮೇಲಿನ ವಿಶ್ವಾಸ ಕಳಕೊಂಡಿದ್ದಾರೆ. ನಾನೇ 5 ವರ್ಷ ಸಿಎಂ ಎಂದು ಮುಖ್ಯಮಂತ್ರಿಗಳು ಹೇಳುವ ಪರಿಸ್ಥಿತಿ ಬಂದು ತಲುಪಿದೆ ಎಂದರೆ, ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸ ಹೊರಟುಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.

BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ಬಹುನಿರೀಕ್ಷಿತ ʼಬ್ರ್ಯಾಟ್ʼ ಚಿತ್ರ ಅ.31ಕ್ಕೆ ರಿಲೀಸ್‌

ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರ ಅ.31ಕ್ಕೆ ರಿಲೀಸ್‌

Sandalwood News: ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ʼಬ್ರ್ಯಾಟ್ʼ ಚಿತ್ರ ಈ ವಾರ ಅಕ್ಟೋಬರ್ 31 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ʼಫಸ್ಟ್ Rank ರಾಜುʼ ಚಿತ್ರದ ನಂತರ ಮಂಜುನಾಥ್ ವಿ. ಕಂದಕೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಮನಿಶಾ ಕಂದಕೂರ್ ನಟಿಸಿದ್ದಾರೆ.

Karnataka Police: ಹೊಸ ಲುಕ್‌ನಲ್ಲಿ ರಾಜ್ಯ ಪೊಲೀಸ್‌ ಸಿಬ್ಬಂದಿ; ಸ್ಲೋಚ್‌ ಟೋಪಿ ಬದಲಿಗೆ ಪೀಕ್‌ ಕ್ಯಾಪ್‌ ವಿತರಣೆ

ರಾಜ್ಯ ಪೊಲೀಸ್‌ ಸಿಬ್ಬಂದಿಗೆ ಪೀಕ್‌ ಕ್ಯಾಪ್‌ ವಿತರಣೆ

Peak caps: ಪ್ರಸ್ತುತ ಬಳಸುತ್ತಿದ್ದ ಸ್ಲೋಚ್‌ ಕ್ಯಾಪ್‌ನಿಂದ ಪೊಲೀಸ್‌ ಸಿಬ್ಬಂದಿಗೆ ಉಪಯೋಗಕ್ಕಿಂತ ಸಮಸ್ಯೆ ಜಾಸ್ತಿ ಆಗಿತ್ತು. ಪ್ರತಿಭಟನೆ ಅಥವಾ ಲಾಠಿ ಚಾರ್ಜ್​ ಸಂದರ್ಭಗಳಲ್ಲಿ ಸ್ವಲ್ಪ ಜೋರಾಗಿ ಓಡಿದರೂ ಈ ಟೋಪಿಗಳು ತಲೆಯ ಮೇಲೆ ನಿಲ್ಲಲ್ಲ. ಅಪರಾಧಿಗಳನ್ನು ಬೆನ್ನಟ್ಟುವ ಸಮಯದಲ್ಲಿ ಈ ಟೋಪಿಗಳನ್ನು ಹಾಕಿಕೊಂಡು ಸಾಗುವುದು ಕಷ್ಟ. ಹೀಗಾಗಿ ಸ್ಲೋಚ್‌ ಕ್ಯಾಪ್‌ಗಳ ಬದಲಿಗೆ ನೀಲಿ ಬಣ್ಣದ ಪಿ ಕ್ಯಾಪ್‌ ವಿತರಣೆ ಮಾಡಲಾಗಿದೆ.

Vishweshwar Hegde Kageri: ಸ್ಪೀಕರ್ ಯು.ಟಿ. ಖಾದರ್ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪ: ತನಿಖೆಗೆ ಆಗ್ರಹಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಸ್ಪೀಕರ್ ವಿರುದ್ಧ ಭ್ರಷ್ಟಾಚಾರದ ಆರೋಪ: ತನಿಖೆಗೆ ಆಗ್ರಹಿಸಿದ ಕಾಗೇರಿ

Corruption Case: ಸ್ಪೀಕರ್ ಯು.ಟಿ. ಖಾದರ್ ಅವರ ಅವಧಿಯಲ್ಲಿ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಎಂದು ಆರೋಪಿಸಿರುವ ಸಂಸದ ಮತ್ತು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಇದಕ್ಕಾಗಿ ಕಾರ್ಯನಿರತ ನ್ಯಾಯಮೂರ್ತಿಗಳಿಂದ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tipu Sultan's Palace: ನಂದಿಬೆಟ್ಟದ ಟಿಪ್ಪು ಅರಮನೆ ಮೇಲೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಹೆಸರು ಕೆತ್ತನೆ!

ನಂದಿಬೆಟ್ಟದ ಟಿಪ್ಪು ಅರಮನೆ ಮೇಲೆ ಲಾರೆನ್ಸ್‌ ಬಿಷ್ಣೋಯ್ ಹೆಸರು ಕೆತ್ತನೆ!

Nandi Hills: ಅರಮನೆ ಮೇಲೆ ಇಂಗ್ಲಿಷ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದಿದ್ದು, ಹೆಸರಿನ ನಡುವೆ ಪ್ರೀತಿಯ ಸಂಕೇತವನ್ನೂ ಬರೆಯಲಾಗಿದೆ. ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಬರಹದ ಮೇಲೆ ಬಣ್ಣ ಬಳಿದಿದ್ದಾರೆ. ಈ ಕೃತ್ಯದ ಬಗ್ಗೆ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದು, ಪಾರಂಪರಿಕ ಸ್ಮಾರಕದ ಮೇಲೆ ಗ್ಯಾಂಗ್‌ಸ್ಟರ್‌ ಹೆಸರು ಬರೆದು ವಿಕೃತಿ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Eco Friendly Bus: ಸ್ಮಾರ್ಟ್ ಸಿಟಿ ಉಪಕ್ರಮ- ಪುದುಚೇರಿಯಲ್ಲಿ 25 ಪರಿಸರ ಸ್ನೇಹಿ ಬಸ್‌ಗಳ ಸೇವೆ ಆರಂಭ

ಪುದುಚೇರಿಯಲ್ಲಿ 25 ಪರಿಸರ ಸ್ನೇಹಿ ಬಸ್‌ಗಳ ಸೇವೆ ಆರಂಭ

ಪುದುಚೇರಿ ರಸ್ತೆ ಸಾರಿಗೆ ನಿಗಮ (ಪಿಆರ್‌ಟಿಸಿ) ಒಲೆಕ್ಟ್ರಾ ತಯಾರಿಸಿದ 25 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶನಾಥನ್, ಮುಖ್ಯಮಂತ್ರಿ ಎನ್. ರಂಗಸಾಮಿ ಮತ್ತು ಸ್ಪೀಕರ್ ಆರ್. ಸೆಲ್ವಂ ಅವರು ಹಿರಿಯ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಈ ನೂತನ ಪರಿಸರ ಸ್ನೇಹಿ ಬಸ್‌ಗಳಿಗೆ ಔಪಚಾರಿಕವಾಗಿ ಹಸಿರು ನಿಶಾನೆ ತೋರಿದರು.

Karnataka high court: ಆರ್‌ಎಸ್‌ಎಸ್‌ ಪಥಸಂಚಲನ ನಿರಾತಂಕ; ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ

ಆರ್‌ಎಸ್‌ಎಸ್‌ಗೆ ರಿಲೀಫ್‌; ಸರಕಾರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

RSS: ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಇದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದರು.

Hit and Run: ಬೆಂಗಳೂರಿನಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ಬೈಕ್‌ ಸವಾರರು ಬಲಿ

ಬೆಂಗಳೂರಿನಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ಬೈಕ್‌ ಸವಾರರು ಬಲಿ

Doddaballapuara: ಬೈಕ್‌ಗೆ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ನೆಲಕ್ಕಪ್ಪಳಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಅಪರಿಚಿತ ವಾಹನ ಸಮೇತ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Gold price today on 28th Oct 2025: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಸ್ವರ್ಣಪ್ರಿಯರಿಗೆ ಕೊಂಚ ನಿರಾಳ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and silver rate in bengaluru: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 95 ರೂ. ಇಳಿಕೆ ಕಂಡು ಬಂದಿದ್ದು, 11,225 ರೂ. ಗೆ ತಲುಪಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 82 ರೂ. ಇಳಿಕೆಯಾಗಿ, 12,246 ರೂ ಆಗಿದೆ.

Karnataka high court: ಸಮ್ಮತಿಯ ಲೈಂಗಿಕ ಕ್ರಿಯೆ ಅತ್ಯಾಚಾರ ಆಗೊಲ್ಲ: ಕರ್ನಾಟಕ ಹೈಕೋರ್ಟ್

ಸಮ್ಮತಿಯ ಲೈಂಗಿಕ ಕ್ರಿಯೆ ಅತ್ಯಾಚಾರ ಆಗೊಲ್ಲ: ಕರ್ನಾಟಕ ಹೈಕೋರ್ಟ್

Physical Abuse: ಮಹಿಳೆ, ಆಂಥೋಣಿ ಜತೆ ಒಂದು ವರ್ಷದವರೆಗೂ ಪರಸ್ಪರ ಚಾಟಿಂಗ್, ಕಾಲ್​​ನಲ್ಲಿ ಮಾತನಾಡಿದ್ದು, ಇಬ್ಬರೂ ಆತ್ಮಿಯರಾಗಿದ್ದರು. ನಂತರ ಯುವಕ ಮಹಿಳೆಯನ್ನು ಓಯೋ ರೂಮ್​ಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಬಳಿಕ ಮಹಿಳೆ ಅದೇ ದಿನ ವೈದ್ಯಕೀಯ ತಪಾಸಣೆ ಮಾಡಿಸಿ ಸಾಂಪ್ರಸ್ ಆಂಥೋಣಿ ವಿರುದ್ಧ ಅತ್ಯಾಚಾರ ದೂರು ನೀಡಿದ್ದಳು.

Murder Case: ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದಕ್ಕೆ ಸಂಬಂಧಿಕನ ಥಳಿಸಿ ಕೊಲೆ

ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದಕ್ಕೆ ಸಂಬಂಧಿಕನ ಥಳಿಸಿ ಕೊಲೆ

Bengaluru Crime News: ಉಳ್ಳಾಲ ಉಪನಗರದ ಬಳಿ ಹೆಣವಾಗಿ ಬಿದ್ದಿರುವ ಯುವಕನನ್ನು 36 ವರ್ಷದ ಅವಿನಾಶ್​ ಎಂದು ಪೊಲೀಸರು ಗುರುತಿಸಿದ್ದಾರೆ. ಸಂಬಂಧಿಕನಾದ ಕಾರ್ತಿಕ್​ ಮನೆಗೆ ಹೋಗಿದ್ದ ಅವಿನಾಶ್​ ಕುಡಿದು ಗಲಾಟೆ ಮಾಡಿದ್ದ. ಕಾರ್ತಿಕ್ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ.

KSCA elections: ಕೆಎಸ್‌ಸಿಎ ಚುನಾವಣೆ ವಿಳಂಬಕ್ಕೆ ವೆಂಕಟೇಶ್ ಪ್ರಸಾದ್ ಗರಂ

ಶೀಘ್ರದಲ್ಲೇ ಕೆಎಸ್‌ಸಿಎ ಚುನಾವಣೆ ನಡೆಸಿ; ವೆಂಕಿ ತಂಡ ಒತ್ತಾಯ

ಜೂನ್‌ನಲ್ಲಿ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ನೈತಿಕ ಹೊಣೆ ಹೊತ್ತು ಎ.ಶಂಕರ್ ಮತ್ತು ಇ.ಎಸ್. ಜೈರಾಮ್ ರಾಜೀನಾಮೆ ನೀಡಿದ ನಂತರ ಕೆಎಸ್‌ಸಿಎಗೆ ಚುನಾಯಿತ ಕಾರ್ಯದರ್ಶಿ ಮತ್ತು ಖಜಾಂಚಿ ಇಲ್ಲದಂತಾಗಿದೆ.

RSS: ʼಯಶಸ್ವಿನಿʼಗೆ ಆರ್‌ಎಸ್‌ಎಸ್‌ ಸದಸ್ಯನ ನೇಮಕ ಹಿಂತೆಗೆದುಕೊಂಡ ರಾಜ್ಯ ಸರಕಾರ

ʼಯಶಸ್ವಿನಿʼಗೆ ಆರ್‌ಎಸ್‌ಎಸ್‌ ಸದಸ್ಯನ ನೇಮಕ ಹಿಂತೆಗೆದುಕೊಂಡ ರಾಜ್ಯ ಸರಕಾರ

Yashaswini: ಶ್ರೀಧರ್ ನೇಮಕ ಕಾಂಗ್ರೆಸ್‌ ಪಕ್ಷದ ಕೋಮುವಾದಿ ವಿರೋಧಿ ಮತ್ತು ಸಾಮರಸ್ಯ ನೀತಿಗೆ ವಿರುದ್ಧವಾಗಿದ್ದು ಅವರನ್ನು ತಕ್ಷಣವೇ ಟ್ರಸ್ಟಿ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ ಶಶಿಧರ್ ಒತ್ತಾಯಿಸಿದ್ದರು. ತೀವ್ರ ವಿರೋಧಗಳ ಬೆನ್ನಲ್ಲೇ ಶ್ರೀಧರ್ ಅವರ ಹೆಸರನ್ನು ಟ್ರಸ್ಟಿ ಸ್ಥಾನದಿಂದ ಕೈಬಿಡಲಾಗಿದೆ.

Harassment: ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ಕಿರುಕುಳ, ಡೆಲಿವರಿ ಏಜೆಂಟ್‌ ಬಂಧನ

ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ಕಿರುಕುಳ, ಡೆಲಿವರಿ ಏಜೆಂಟ್‌ ಬಂಧನ

Bengaluru: ದಿನಸಿ ತಂದ ಡೆಲಿವರಿ ಏಜೆಂಟ್, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೀಡಾದ ಬ್ರೆಜಿಲ್ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ.

Karnataka Police: ಇಂದಿನಿಂದ ರಾಜ್ಯ ಪೊಲೀಸರಿಗೆ ತೆಲಂಗಾಣ ಮಾದರಿಯ ಪಿ- ಕ್ಯಾಪ್‌ ವಿತರಣೆ

ಇಂದಿನಿಂದ ರಾಜ್ಯ ಪೊಲೀಸರಿಗೆ ತೆಲಂಗಾಣ ಮಾದರಿಯ ಪಿ- ಕ್ಯಾಪ್‌ ವಿತರಣೆ

P Cap: ತೆಲಂಗಾಣ ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ಪಿ ಕ್ಯಾಪ್ ವಿನ್ಯಾಸಗೊಳಿಸಲಾಗಿದೆ. ಆದರೆ ರಾಜ್ಯ ಪೊಲೀಸ್ ಲಾಂಛನ ಆ ಕ್ಯಾಪ್‌ನ ಮಧ್ಯೆಯಲ್ಲಿ ಅಚ್ಚೊತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಎಎಸ್‌ಐ, ಪಿಎಸ್‌ಐ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಮೇಲಧಿಕಾರಿಗಳು ಈ ಹಿಂದಿನಂತೆಯೇ ಖಾಕಿ ಬಣ್ಣದ ಕ್ಯಾಪ್‌ ಧರಿಸಲಿದ್ದಾರೆ.

Karnataka Weather: ಮೊಂತ ಸೈಕ್ಲೋನ್‌ ಅಬ್ಬರ; ಇಂದು ರಾಜ್ಯಾದ್ಯಂತ ಭಾರಿ ಮಳೆ ನಿರೀಕ್ಷೆ

ಮೊಂತ ಸೈಕ್ಲೋನ್‌ ಅಬ್ಬರ; ಇಂದು ರಾಜ್ಯಾದ್ಯಂತ ಭಾರಿ ಮಳೆ ನಿರೀಕ್ಷೆ

Karnataka Weather Report: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 25°C ಮತ್ತು 20°C ಇರುವ ಸಾಧ್ಯತೆ ಇದೆ.

Cyclone Montha: ಮೋಂತಾ ಚಂಡಮಾರುತ ಪರಿಣಾಮ, ಬೆಂಗಳೂರಿನ ಕೆಲ ವಿಮಾನ ರದ್ದು, ರೈಲುಗಳು ವಿಳಂಬ

ಮೋಂತಾ ಚಂಡಮಾರುತ ಪರಿಣಾಮ, ಬೆಂಗಳೂರಿನ ಕೆಲ ವಿಮಾನ ರದ್ದು, ರೈಲುಗಳು ವಿಳಂಬ

Bengaluru: ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ದಕ್ಷಿಣ ಮಧ್ಯ ರೈಲ್ವೆಯಿಂದ ಹಲವು ರೈಲುಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Gauribidanur News: ಪ್ರಗತಿಪರ ರೈತ ಅಬ್ದುಲ್ಲಾ ಹೊಲದಲ್ಲಿ ಮೆಕ್ಕೆಜೋಳ ಬೆಳೆಯ ಪ್ರಾತ್ಯಕ್ಷಿಕೆ

ಪ್ರಗತಿಪರ ರೈತ ಅಬ್ದುಲ್ಲಾ ಹೊಲದಲ್ಲಿ ಮೆಕ್ಕೆಜೋಳ ಬೆಳೆಯ ಪ್ರಾತ್ಯಕ್ಷಿಕೆ

ಮಣ್ಣಿನ ಆಧಾರದ ಮೇಲೆ ಯಾವ ಪ್ರದೇಶದಲ್ಲಿ ಯಾವ ತಳಿ ಮೆಕ್ಕೆ ಜೋಳ ಬೆಳೆಯಬೇಕೆಂದು ರೈತರಲ್ಲಿ ಅರಿವು ಮೂಡಿಸುತ್ತದೆ.  ಈ ಭಾಗದಲ್ಲಿ ೮೦೧೧ ಹೈಬ್ರಿಡ್ ನಾಮ್ ಧಾರಿ ತಳಿಯನ್ನು ಆಯ್ಕೆ ಮಾಡಿ  ರೈತರಿಗೆ  ನೀಡಲಾಗಿದೆ. ಈ ತಳಿಯಲ್ಲಿ ರೋಗ ವಿರೋಧಕ ಶಕ್ತಿ ಹೆಚ್ಚಿದೆ. ದಂಟು ಸಣ್ಣದಾಗಿದ್ದು, ಬೀಜ ದಪ್ಪದಾಗಿದೆ.ದಂಟಿನ ತುದಿಯತನಕ ಬೀಜ ಬೆಳೆದಿದೆ.

Sadhguru Shri Madhusudan Sai: ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ

ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಲಿ

ಆರೋಗ್ಯ ಕ್ಷೇತ್ರವು ಇಂದು ವ್ಯವಹಾರವಾಗಿದೆ. ಇದು ತಪ್ಪು. ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ದಂಥ ಪ್ರಮುಖ ಸೇವೆಗಳ ಮೂಲಕ ಎಲ್ಲರಿಗೂ ನಾವು ಸಮಾನ ಅವಕಾಶಗಳನ್ನು ಕಲ್ಪಿಸುತ್ತಿದ್ದೇವೆ. ಹಣಕಾಸು, ಶಿಕ್ಷಣ, ಸಮಾಜಿಕ ಹಾಗೂ ಆಧ್ಯಾತ್ಮಿಕ ಹೀಗೆ ಯಾವುದೇ ಕ್ಷೇತ್ರವಿರಿಲಿ. ಹುಡುಗರಾಗಲಿ, ಹುಡುಗಿಯ ರಾಗಿರಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದರು.

Vinay Kumar Sorake: ಚುನಾವಣೆಗೆ ಸೀಮಿತವಾಗದೆ ವರ್ಷವಿಡೀ ಪ್ರಚಾರ ಸಮಿತಿ ಸಕ್ರಿಯವಾಗಿ ಕೆಲಸ ಮಾಡಲಿದೆ : ವಿನಯ್‌ಕುಮಾರ್ ಸೊರಕೆ

ವರ್ಷವಿಡೀ ಪ್ರಚಾರ ಸಮಿತಿ ಸಕ್ರಿಯವಾಗಿ ಕೆಲಸ ಮಾಡಲಿದೆ

ಎಐಸಿಸಿ ಪ್ರಥಮ ಬಾರಿಗೆ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ವರ್ಷ ಪೂರ್ತಿ ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ವಹಿಸುವ ಮೂಲಕ ಪಕ್ಷ ಸಂಘಟನೆಗೆ ಬಳಸಿ ಕೊಳ್ಳಲಾಗುತ್ತಿದೆ’. ರಾಜ್ಯದ ಎಲ್ಲಾ ೩೦ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಚಿಕ್ಕಬಳ್ಳಾಪುರವು ೩೧ ನೇ ಜಿಲ್ಲೆಯಾಗಿದೆ ಎಂದರು.

Loading...