ನಿರ್ದೇಶಕ ಸ್ಥಾನಕ್ಕೆ 44 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ
ಒಕ್ಕೂಟದ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಮುಂಬರುವ ಐದು ವರ್ಷಗಳ ಆಡಳಿತ ಸಮಿತಿಗೆ ಆಯ್ಕೆಗೆ ಜ.22 ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆ ದಿನವಾಗಿದ್ದು ಅಪಾರ ಬೆಂಬಲಿಗರೊಂದಿಗೆ ಪೈಪೋಟಿಯಲ್ಲಿ ಗುರುವಾರ ಮೆರವಣಿಗೆ ಬಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಿಯಮಾನುಸಾರ ಶುಕ್ರವಾರ ಉಮೇದುವಾರಿಕೆಯ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ