ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Artificial Intelligence: ಇಂದಿನಿಂದ ನಾಗಾರ್ಜುನ ಕಾಲೇಜಿನಲ್ಲಿ ಎಐ ಶೃಂಗಸಭೆ : ಎಸ್.ಎಸ್. ಅಯ್ಯಂಗಾರ್‌ರಿAದ ಉದ್ಘಾಟನೆ

ಇಂದಿನಿಂದ ನಾಗಾರ್ಜುನ ಕಾಲೇಜಿನಲ್ಲಿ ಎಐ ಶೃಂಗಸಭೆ

ದೆಹಲಿಯಲ್ಲಿ ನಡೆಯ ಲಿರುವ ರಾಷ್ಟ್ರೀಯ ಮಟ್ಟದ ಎಐ ಶೃಂಗ ಸಭೆ ಭಾಗವಾಗಿ ನಾಗಾರ್ಜುನ ಇಂಜನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಒಂದು ದಿನದ  ಪ್ರಾದೇ ಶಿಕ ಎ.ಐ ಪೂರ್ವ ಶೃಂಗಸಭೆ ಆಯೋಜಿಸಲಾಗಿದ್ದು ಮಿಯಾಮಿ ಸಂಸ್ಥೆಯ ಪ್ರಾಧ್ಯಾಪಕ ಎಸ್.ಎಸ್. ಅಯ್ಯಂಗಾರ್ ಉದ್ಘಾಟಿಸಲಿದ್ದಾರೆ

JDS: ಪ್ರತಿ ವಿಧಾಸಭಾ ಕ್ಷೇತ್ರದಲ್ಲಿ 15 ಸಾವಿರ ಡಿಜಿಟಲ್ ಮೆಂಬರ್‌ಶಿಪ್ ಜೆಡಿಎಸ್ ಗುರಿ : ಚಂದನ್ ಗೌಡ

ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷ ಬಲವರ್ಧನೆಗೆ ಮುಂದಾದ JDS

2026ಕ್ಕೆ ಕಾರ್ಯಕರ್ತರ ಚುನಾವಣೆ ನಡೆಯಲಿದ್ದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಅಧಿಕಾರ ಸ್ಥಾನದಲ್ಲಿ ಕೂರಿಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ನಮಗೆ ನೀಡಿದ್ದಾರೆ. ಈ ದೆಸೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಡಿಜಿಟಲ್ ಮೆಂಬರ್ಶಿಪ್ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಪಕ್ಷ ಸಂಘಟನೆಯನ್ನು ಮಾಡ ಲಾಗುತ್ತಿದೆ

ದುರುದ್ದೇಶದಿಂದ ಮೂಲ ನಿವಾಸಿಗಳಿಗೆ ಸೌಲಭ್ಯಗಳಿಂದ ವಂಚನೆ : ಅಂಕಾಲಮೊಡಗು ಭಾಸ್ಕರ್

ಅಂಕಾಲಮೊಡಗು ಪಂಚಾಯಿತಿಯಲ್ಲಿ ಬೇನಾಮಿ ಹೆಸರಿಗೆ ಸರಕಾರಿ ಸೌಲತ್ತು

ನಮ್ಮ ಪಂಚಾಯಿತಿಯಲ್ಲಿ ಜಲಜೀವನ ಮಿಷನ್ ಮತ್ತು ಎಂ.ಜಿ.ನರೇಗಾ , ಪಂಚಾಯತ್‌ ರಾಜ್, ಗ್ರಾಮೀಣ ಅನುದಾನಗಳ ಅಕ್ರಮ ದುರುಪಯೋಗವಾಗಿದೆ. ಈ ಬಗ್ಗೆ ಮಾಹಿತಿ ಕೋರಿ RTI ಮೂಲಕ ಅರ್ಜಿ ಸಲ್ಲಿಸಿದರೆ ನಾವು ಕೇಳಿರುವ ಮಾಹಿತಿ ಬಿಟ್ಟು ಬೇರೆಯದೇ ಮಾಹಿತಿ ನೀಡುವ ಮೂಲಕ ಅಧಿಕಾರಿಗಳು ಅಕ್ರಮ ನಡೆಸುವವರ ಪರ ವಹಿಸಿರುವುದು ಸ್ಪಷ್ಟವಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರ ಸ್ಪರ್ಧೆ, ಬಿಜೆಪಿ ಜತೆ ಮೈತ್ರಿ ಇಲ್ಲ: ಎಚ್‌.ಡಿ ದೇವೇಗೌಡ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರ ಸ್ಪರ್ಧೆ: ದೇವೇಗೌಡ

Karnataka local body elections: ಲೋಕಸಭೆ ಚುನಾವಣೆಯಲ್ಲಿ ಉತ್ತಮ ಮೈತ್ರಿ ಆಗಿದೆ. ಅದು ವಿಧಾನಸಭೆ ಚುನಾವಣೆಯಲ್ಲಿ ಕೂಡ ಮುಂದುವರಿಯುತ್ತದೆ. ಆದರೆ ಪಕ್ಷ ಕಟ್ಟುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಳ ಮುಖ್ಯ. ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರಿನಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

Mysuru Helium cylinder blast: ಗುರುವಾರ ರಾತ್ರಿ ಮೈಸೂರು ಅರಮನೆ ಮುಂದೆ ಬಲೂನ್‌ಗೆ ಗಾಳಿ ತುಂಬುವ ಹೀಲಿಯಂ ಗ್ಯಾಸ್​​ ಸಿಲಿಂಡರ್​ ಸ್ಫೋಟವಾಗಿ ವ್ಯಾಪಾರಿ ಮೃತಪಟ್ಟಿದ್ದ. ಈ ವೇಳೆ ಗಾಯಗೊಂಡಿದ್ದ ಐವರಲ್ಲಿ ಇಬ್ಬರು ಶುಕ್ರವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Pralhad Joshi: ರಾಹುಲ್, ಸಿಎಂಗೆ ವಾಸ್ತವ ಒಪ್ಪಿಕೊಳ್ಳುವ ನೈಜತೆಯಿಲ್ಲ: ಪ್ರಲ್ಹಾದ್‌ ಜೋಶಿ ತಿರುಗೇಟು

ರಾಹುಲ್, ಸಿಎಂಗೆ ವಾಸ್ತವ ಒಪ್ಪಿಕೊಳ್ಳುವ ನೈಜತೆಯಿಲ್ಲ: ಜೋಶಿ

ಕಾಂಗ್ರೆಸ್ ನಟಿಸುವುದನ್ನು ನಿಲ್ಲಿಸಿ, ವಾಸ್ತವವನ್ನು ಒಪ್ಪಿಕೊಳ್ಳಬೇಕು. ಭಾರತದ ಉತ್ಪಾದನಾ ಬೆಳವಣಿಗೆ ಪ್ರಧಾನಿ ಮೋದಿಯವರ ಕಲ್ಪನೆಯಂತೆ ʼಮೇಕ್ ಇನ್ ಇಂಡಿಯಾ' ದ ಫಲಿತಾಂಶವೇ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಶಾಸಕ ಬೈರತಿ ಬಸವರಾಜ್‌ಗೆ ತಾತ್ಕಾಲಿಕ ರಿಲೀಫ್‌; ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು

ಶಾಸಕ ಬೈರತಿ ಬಸವರಾಜ್‌ಗೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು

Byrathi Basavaraj Case: ಶಾಸಕ ಬೈರತಿ ಬಸವರಾಜ್‌ ವಿಚಾರಣಾಧೀನ ನ್ಯಾಯಾಲಯದಲ್ಲಿ ಮೊದಲಿಗೆ ನಿರೀಕ್ಷಣಾ ಜಾಮೀನು ಕೋರಿದ್ದರು. ಅಲ್ಲಿಯೂ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಇದೀಗ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಲಭಿಸಿದೆ.

Kalaburagi News: ಜನರ ಸಹಕಾರದಿಂದ ಆಳಂದ ಸೌಂದರ್ಯೀಕರಣಕ್ಕೆ ಹೊಸ ಮೆರುಗು: ಎಸಿ ಸಾಹಿತ್ಯ ಆಲದಕಟ್ಟಿ

ಆಳಂದ ಪಟ್ಟಣದ ಜನತೆ ತೋರುತ್ತಿರುವ ಸಹಕಾರ ಶ್ಲಾಘನೀಯ: ಸಾಹಿತ್ಯ ಆಲದಕಟ್ಟಿ

ಪುರಸಭೆ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಆಳಂದ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾರ್ಯವನ್ನು ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿ ಸ್ಥಳ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಕುರಿತ ವಿವರ ಇಲ್ಲಿದೆ.

Haveri News: ಯುವಕರು ಕಾಯಕದ ಕಡೆ ಮುಖ‌ ಮಾಡಿದರೆ ನಾಯಕರಾಗಲು ಸಾಧ್ಯ: ಡಾ.ಮಹಾಂತಪ್ರಭು ಸ್ವಾಮೀಜಿ

ಯುವಕರು ಕಾಯಕದ ಕಡೆ ಮುಖ‌ ಮಾಡಿದರೆ ನಾಯಕರಾಗಲು ಸಾಧ್ಯ: ಡಾ.ಮಹಾಂತಪ್ರಭು ಶ್ರೀ

Hukkeri Matha: ಹಾವೇರಿಯ ಹುಕ್ಕೇರಿ ಮಠದ ನಮ್ಮೂರ ಜಾತ್ರಾ ಮಹೋತ್ಸವ ಸಮಾರಂಭಕ್ಕೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಶೇಗುಣಸಿ ವಿರಕ್ತಮಠದ ಡಾ. ಮಾಹಂತಪ್ರಭು ಸ್ವಾಮೀಜಿ ಅವರು ಮಾತನಾಡಿ, ಯುವಕರು ಕಾಯಕದ ಕಡೆ ಮುಖ ಮಾಡಬೇಕು. ಕಾಯಕ ಬೆನ್ನು ಹತ್ತಿದರೆ ನೀವು ನಾಯಕರಾಗುತ್ತೀರಿ ಎಂದು ಸಲಹೆ ನೀಡಿದರು.

ಮೆಟ್ರೋದಲ್ಲಿ ಯುವತಿ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ 45 ವರ್ಷದ ಅಂಕಲ್‌

ಮೆಟ್ರೋದಲ್ಲಿ ಯುವತಿ ಮೈಮುಟ್ಟಿ 45 ವರ್ಷದ ಅಂಕಲ್‌ ಅಸಭ್ಯ ವರ್ತನೆ

ಬೆಳಗಾವಿ ಮೂಲದ ವ್ಯಕ್ತಿಯೊಬ್ಬ, ನಮ್ಮ ಮೆಟ್ರೋದಲ್ಲಿ ಯುವತಿ ಮೈ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ. ಈತ ಖಾಸಗಿ ಕಂಪನಿಯಲ್ಲಿ ಹೌಸ್‌ಕೀಪರ್‌ ಆಗಿದ್ದು, ಉಪ್ಪಾರಪೇಟೆ ಠಾಣೆಯಲ್ಲಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಂಪಿಯಲ್ಲಿ ಗುಡ್ಡ ಹತ್ತಲು ಹೋಗಿ ಬಿದ್ದ ಫ್ರಾನ್ಸ್‌ ಪ್ರವಾಸಿಗ; 2 ದಿನಗಳ ಬಳಿಕ ರಕ್ಷಣೆ

ಹಂಪಿಯಲ್ಲಿ ಗುಡ್ಡ ಹತ್ತಲು ಹೋಗಿ ಬಿದ್ದಿದ್ದ ಫ್ರಾನ್ಸ್‌ ಪ್ರವಾಸಿಗನ ರಕ್ಷಣೆ

French tourist rescued in Hampi: ಹಂಪಿಯಲ್ಲಿ ಪ್ರವಾಸಿಗ ಬಿದ್ದ ಸ್ಥಳ ನಿರ್ಜನ ಪ್ರದೇಶವಾಗಿತ್ತು. ಹೀಗಾಗಿ ಅವರು ಎರಡು ದಿನ ಅಲ್ಲೇ ಇದ್ದರು. ಬಳಿಕ ಹೇಗೋ ತೆವಳಿಕೊಂಡು ಸಮೀಪದ ಬಾಳೆ ತೋಟಕ್ಕೆ ಬಂದಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು, ರಕ್ಷಣೆ ಮಾಡಿದ್ದಾರೆ.

ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ INR 530 ಕೋಟಿಗೆ 376,000 ಚದರ ಅಡಿಗಳ ಸ್ವಾಧೀನ

INR 530 ಕೋಟಿಗೆ 376,000 ಚದರ ಅಡಿಗಳ ಸ್ವಾಧೀನ

ಭಾರತದ ಪ್ರಮುಖ ಪರ್ಯಾಯ ಆಸ್ತಿ ನಿರ್ವಹಣಾ ಸಂಸ್ಥೆಗಳಲ್ಲೊಂದಾದ EAAA Alternatives, ತನ್ನ ವಾಣಿಜ್ಯ ರಿಯಲ್ ಎಸ್ಟೇಟ್ ನಿಧಿ ರೆಂಟಲ್ ಯೀಲ್ಡ್ ಪ್ಲಸ್ (RYP) ಮೂಲಕ ಬೆಂಗಳೂರಿನ ಎಂಬಸಿ ಮಣ್ಯತಾ ಬಿಸಿನೆಸ್ ಪಾರ್ಕ್ನ ಭಾಗವಾಗಿರುವ ಗ್ರೀನ್‌ ಹಾರ್ಟ್ ಟೆಕ್ ಪಾರ್ಕ್ನಲ್ಲಿ ಸುಮಾರು 3.76 ಲಕ್ಷ ಚದರ ಅಡಿ ವಿಸ್ತೀರ್ಣದ ಆಸ್ತಿಯನ್ನು ₹530 ಕೋಟಿ ಮೊತ್ತಕ್ಕೆ ಖರೀದಿಸಿದೆ

Karnataka Politics: ನಾನು ಕಾಂಗ್ರೆಸ್‌ನ ಕಾರ್ಯಕರ್ತ, ಅದೇ ನನಗೆ ಶಾಶ್ವತ: ಡಿಕೆ ಶಿವಕುಮಾರ್‌ ಹೇಳಿಕೆಯ ಹಿಂದೇನಿದೆ?

ನಾನು ಕಾಂಗ್ರೆಸ್‌ ಕಾರ್ಯಕರ್ತ, ಅದೇ ಶಾಶ್ವತ: ಡಿಕೆಶಿ ಹೇಳಿಕೆ ಹಿಂದೇನಿದೆ?

ಸುಮಾರು 45 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ, ಪೋಸ್ಟರ್ ಕೂಡಾ ಅಂಟಿಸಿದ್ದೇನೆ, ಕಚೇರಿಯಲ್ಲಿ ಕಸವನ್ನೂ ಗುಡಿಸಿದ್ದೇನೆ. ನಾನು ಇಂದು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದರೆ, ಪಕ್ಷಕ್ಕಾಗಿ ಪಟ್ಟ ಪರಿಶ್ರಮ. ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ, ನನಗೆ ಅದೇ ಶಾಶ್ವತ. ನನ್ನ ಹಾಗೇ, ಪ್ರತೀ ಕಾರ್ಯಕರ್ತರು ಪಕ್ಷಕ್ಕಾಗಿ ಬೆವರು ಸುರಿಸುತ್ತಿದ್ದಾರೆ ಎಂದಿದ್ದಾರೆ ಡಿಕೆ ಶಿವಕುಮಾರ್.‌

Savadatti News: ಪಟ್ಟಣದ ಸ್ವಚ್ಛತೆಗೆ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

123 ಕೋಟಿಯ ಯೋಜನೆಯಲ್ಲಿ ಮೊದಲ ಹಂತವಾಗಿ 41 ಕೋಟಿ ಮಂಜೂರಾಗಿದೆ. ಇದರಲ್ಲಿ ಮಳೆ ನೀರು ಪ್ರತ್ಯೇಕವಾಗಿ ಸಾರಾಗವಾಗಿ ಸಾಗಲು ಕ್ರಮವಿರಿಸಲಾಗಿದೆ. 5 ಕೋಟಿ ವೆಚ್ಚದ ಲಂಡೇನ ಹಳ್ಳ ಹೂಳೆತ್ತುವ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಕೂಡ ಸೇರಿದೆ. ಈ ಬೃಹತ್ ಕಾಮಗಾರಿಯು ಐದು ವರ್ಷಗಳ ಕಾಲ ಗುತ್ತಿಗೆದಾರರ ನಿರ್ವಹಣೆಯಲ್ಲಿರಲಿದೆ.

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಬುಲೆಟ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್‌ ಎಳೆದೊಯ್ದ ಚಾಲಕ

ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕನಿಂದ ಬುಲೆಟ್ ಸವಾರನಿಗೆ ಡಿಕ್ಕಿ

Viral Video: ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ಕುಡಿತದ ಅಮಲಿನಲ್ಲಿದ್ದ ಎಸ್‌ಯುವಿ ಚಾಲಕನೊಬ್ಬ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದು ಬೈಕನ್ನು ಸುಮಾರು ದೂರದ ವರೆಗೆ ಎಳೆದೊಯ್ದ ಭೀಕರ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

Bengaluru Power Cut: ಡಿಸೆಂಬರ್‌ 27, 28 ಮತ್ತು 29ರಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ

ಡಿ.27, 28 ಮತ್ತು 29ರಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ

BESCOM News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 220/66/11 ಕೆ.ವಿ ಹೆಬ್ಬಾಳ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಡಿ.27ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

Raju Adakalli's Book Release: ಡಿ.27ರಂದು ರಾಜು ಅಡಕಳ್ಳಿ ಅವರ 'ಹಾಸ್ಯ ವಿಲಾಸ' ಕೃತಿ ಲೋಕಾರ್ಪಣೆ

ರಾಜು ಅಡಕಳ್ಳಿ ಅವರ 'ಹಾಸ್ಯ ವಿಲಾಸ' ಕೃತಿ ಲೋಕಾರ್ಪಣೆ ನಾಳೆ

ಲೇಖಕ ರಾಜು ಅಡಕಳ್ಳಿ ಅವರ ನೂತನ ಕೃತಿ ʼಹಾಸ್ಯ ವಿಲಾಸʼ ಡಿ.27ರಂದು ಶನಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ರಾಜು ಅಡಕಳ್ಳಿ ಅವರ 11ನೇ ಕೃತಿಯಾದ ಈ ʼಹಾಸ್ಯ ವಿಲಾಸʼ ದಲ್ಲಿ, ಮನಸ್ಸಿಗೆ ಮುದ ನೀಡುವ, ನವಿರಾದ ಹಾಸ್ಯ ಭರಿತ ಲೇಖನಗಳ ಸಂಗ್ರಹವಿದೆ.

Mantralaya Kannada Row: ಮಂತ್ರಾಲಯದಲ್ಲಿ ಕನ್ನಡ ಭಾಷೆಯ ಬರಹಕ್ಕೆ ತೆಲುಗರ ವಿರೋಧ

ಮಂತ್ರಾಲಯದಲ್ಲಿ ಕನ್ನಡ ಭಾಷೆಯ ಬರಹಕ್ಕೆ ತೆಲುಗರ ವಿರೋಧ

ಮಠದ ಮುಂಭಾಗದಲ್ಲಿ ''ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ' ಎಂಬ ರಾಯರ ಸ್ತೋತ್ರದ ಶ್ಲೋಕವನ್ನು ಕನ್ನಡದಲ್ಲಿ ಬರೆಯಲಾಗಿದೆ. ಈ ಕನ್ನಡ ಭಾಷೆಯ ಈ ಬರಹ ಇದೀಗ ಭಾಷಾ ಸಂಘರ್ಷಕ್ಕೆ ಕಾರಣವಾಗಿದೆ. ಮಠದಲ್ಲಿ ಕನ್ನಡ ಭಾಷೆ ಹಾಸುಹೊಕ್ಕಾಗಿರುವುದಕ್ಕೆ, ಮಂತ್ರಾಲಯದಲ್ಲಿ ಕನ್ನಡ ಬಳಕೆ ವಿರೋಧಿಸಿ ಕೆಲ ತೆಲುಗು ಭಾಷಿಗರು ಅಸಮಾಧಾನ ಹೊರಹಾಕಿದ್ದಾರೆ.

ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣದ ಸಾವಿನ ಸಂಖ್ಯೆ 2ಕ್ಕೇರಿಕೆ; ಗಾಯಾಳು ಮಂಜುಳಾ ಸಾವು

ಮೈಸೂರು ಹೀಲಿಯಂ ಸ್ಫೋಟ ಪ್ರಕರಣ; ಗಾಯಾಳು ಮಂಜುಳಾ ಸಾವು

ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್​​ ಸಿಲಿಂಡರ್​ ಸ್ಫೋಟವಾಗಿ ಬಲೂನ್‌ ಮಾರುತ್ತಿದ್ದ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ವ್ಯಾಪಾರಿ ಸಲೀಂ ಖಮರುದ್ದೀನ್ (40) ಎಂಬಾತ ಮೃತಪಟ್ಟಿದ್ದ. ಇದೀಗ ಗಾಯಾಳು ಮಂಜುಳಾ ಎಂಬುವವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸೂರಜ್‌ ನಪುಂಸಕ, ಸಂಸಾರದ ಬಗ್ಗೆ ಆತನಿಗೆ ಆಸಕ್ತಿಯೇ ಇರಲಿಲ್ಲ: ಗಾನವಿ ಕುಟುಂಬಸ್ಥರ ಆರೋಪ

ಸೂರಜ್‌ ನಪುಂಸಕ, ಗಂಡಸೇ ಅಲ್ಲ: ಗಾನವಿ ಕುಟುಂಬಸ್ಥರ ಆರೋಪ

Ganavi Suicide Case: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ 26 ವರ್ಷದ ನವವಿವಾಹಿತೆ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಕ್ಟೋಬರ್ 29ರಂದು ಸೂರಜ್‌ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Street Dogs: ಬೀದಿ ನಾಯಿ ದತ್ತು ತಗೊಳ್ತೀರಾ? ಬೆಂಗಳೂರಿನಲ್ಲಿದೆ ಅವಕಾಶ!

ಬೀದಿ ನಾಯಿ ದತ್ತು ತಗೊಳ್ತೀರಾ? ಬೆಂಗಳೂರಿನಲ್ಲಿದೆ ಅವಕಾಶ!

ಬೀದಿ ನಾಯಿಗಳ ದತ್ತಕವು ಪ್ರಾಣಿಕಲ್ಯಾಣವನ್ನು ಉತ್ತೇಜಿಸುವುದರ ಜೊತೆಗೆ ನಗರದಲ್ಲಿ ಸಹಬಾಳ್ವೆ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಸಹಕಾರಿಯಾಗುತ್ತದೆ. ಆಸಕ್ತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ಕೇಂದ್ರ ನಗರ ನಿಗಮವನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

New Year celebrations: ಡಿ.31ರಂದು ಬೆಂಗಳೂರಿನ ಉದ್ಯಾನ, ಕೆರೆಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌; ಪ್ರವೇಶಕ್ಕೆ ಜಿಬಿಎ ನಿರ್ಬಂಧ

ಡಿ.31ರಂದು ಬೆಂಗಳೂರಿನ ಉದ್ಯಾನ, ಕೆರೆಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

Bengaluru New Year 2026 rules: ಡಿ.31ರಂದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ನಿರ್ಧಾರ ಕೈಗೊಂಡಿದ್ದು, ಉದ್ಯಾನವನಗಳು ಮತ್ತು ಕೆರೆಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲು ತೀರ್ಮಾನಿಸಿದೆ.

Belagavi News: ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು

ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು

children Drowns in canal: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಬಳಿ ಘಟನೆ ನಡೆದಿದೆ. ಸದ್ಯ ಇಬ್ಬರು ಬಾಲಕರ ಶವಗಳನ್ನು ಸ್ಥಳೀಯರು ಹಾಗೂ ಪೊಲೀಸರು ಹೊರಗಡೆ ತೆಗೆದಿದ್ದು, ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Murder Case: ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಪ್ರಿಯಕರನಿಂದ ಸ್ಟಾಫ್‌ ನರ್ಸ್‌ ಕೊಲೆ

ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಪ್ರಿಯಕರನಿಂದ ಸ್ಟಾಫ್‌ ನರ್ಸ್‌ ಕೊಲೆ

ಸುಧಾಕರ್‌ಗೆ ಇತ್ತೀಚೆಗೆ ಕುಟುಂಬಸ್ಥರು ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ವಿಷಯ ತಿಳಿದ ಮಮತಾ, ಕೋಪಗೊಂಡು ತನ್ನನ್ನೇ ಮದುವೆಯಾಗಬೇಕು ಎಂದು ಒತ್ತಾಯಿಸಿದ್ದರು. ಅಷ್ಟೇ ಅಲ್ಲದೇ ತನ್ನನ್ನು ಬಿಟ್ಟು ಬೇರೆ ಮದುವೆಯಾದರೆ ತಾನು ಆತ್ಮಹತ್ಯೆ ಮಾಡಿಕೊಂಡು ಸುಧಾಕರ್ ಹಾಗೂ ಅವರ ಕುಟುಂಬವನ್ನು ಸಂಕಷ್ಟಕ್ಕೆ ಒಳಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

Loading...