ಸಿದ್ದೇಶ್ವರ ಸನ್ನಿಧಿಯಲ್ಲಿ ಜಟ್ಟಿಗಳ ಶಕ್ತಿ ಪ್ರದರ್ಶನ
ಪೈಗಂಬರ ಮಮದಾಪೂರ ಎಂಬ ಜಟ್ಟಿ 80ಕ್ಕೂ ಹೆಚ್ಚು ಕಿಲೋ ಭಾರದ ಸಂಗ್ರಾಣಿ ಕಲ್ಲನ್ನು ಸರಳವಾಗಿ ಎತ್ತಿ ಸಾಹಸ ಪ್ರದರ್ಶಿಸಿದರೆ, ಶಂಕ್ರಪ್ಪ ಭಾವಿ ತನ್ನ ಮೀಸೆ ಯಿಂದ 75 ಕೆಜಿ ಭಾರತದ ಕಲ್ಲನ್ನು ಎತ್ತಿದ, ಜೈ ಹನುಮಾನ ಪಾದಗಟ್ಟಿ 300 ಕೆಜಿಯಷ್ಟು ಉಸುಕಿನ ಚೀಲವನ್ನು ಹತ್ತಾರು ಬಾರಿ ಎತ್ತಿದೆ, ರಮೇಶ ಪಾಟೀಲ 50 ಕೆಜಿ ಭಾರದ ಸಂಗ್ರಾಣಿ ಕಲ್ಲನ್ನು ಹಲ್ಲಿನಿಂದ ಎತ್ತಿದರು, ಕಾಂತಪ್ಪ ಯರಗಲ್ 75 ಕೆಜಿ ಸಂಗ್ರಾಣಿ ಕಲ್ಲನ್ನು ಗಡ್ಡಕ್ಕೆ ಹಗ್ಗ ಕಟ್ಟಿಕೊಂಡು ಎಳೆದದ್ದು ನೋಡುಗರನ್ನು ರೋಮಾಂಚನವಾಗಿಸಿತು.