ಡಾ. ಸುಜಾತಾ ಕೆ.ಜೆ. ಅವರಿಗೆ ಆರ್‌ಜಿಯುಎಚ್‌ಎಸ್ ಗೌರವ
ಯೋಗ ವಿಜ್ಞಾನದಲ್ಲಿ ಪಿಎಚ್‌ಡಿ ಪದವಿಯನ್ನು ಹೊಂದಿರುವ ಅವರು, ಪಾರಂಪರಿಕ ಚಿಕಿತ್ಸಾ ಪದ್ಧತಿಗಳನ್ನು ಆಧುನಿಕ ವೈಜ್ಞಾನಿಕ ವಿಧಾನಗಳೊಂದಿಗೆ ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಉಪ ಪ್ರಾಂಶುಪಾಲರು, ಡೀನ್, ಪ್ರಾಧ್ಯಾಪಕರು, ಹೈಡ್ರೋಥೆರಪಿ ವಿಭಾಗದ ಮುಖ್ಯಸ್ಥರು ಮತ್ತು ಸ್ನಾತಕೋತ್ತರ ಸಂಯೋಜಕರಾಗಿ ಹಲವು ಹೊಣೆಗಾರಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.