ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Mahesh Shetty Timmarodi:  ಬೇಲ್‌ ಮೇಲೆ ಹೊರ ಬಂದರೂ ತಿಮರೋಡಿಗೆ ತಪ್ಪದ ಸಂಕಷ್ಟ; ಮತ್ತೆ ನೋಟೀಸ್‌ ನೀಡುವ ಸಾಧ್ಯತೆ

ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಸಂಕಷ್ಟ

ತಿಮರೋಡಿ ಅವರಿಗೆ ಮತ್ತೆ ಸಂಕಷ್ಟ ಎದರುರಾಗಿದೆ. ಬೆಳ್ತಂಗಡಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಗೆ ವಿಚಾರಣೆ ನೋಟಿಸ್ ನೀಡಲು ಸಜ್ಜಾಗಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಮಾತನಾಡುವಾಗ ಬಿಜೆಪಿ ನಾಯಕ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉಡುಪಿಯ ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬಂಧಿಸಿದ್ದರು.

Gold Price Today: ಚಿನ್ನದ ದರದಲ್ಲಿ ಯಥಾಸ್ಥಿತಿ- ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಯಥಾಸ್ಥಿತಿ- ಇಂದಿನ ರೇಟ್‌ ಚೆಕ್‌ ಮಾಡಿ

Gold price today on 24th Aug 2025: ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿದ್ದು 9,315 ರೂ. ಇತ್ತು. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 109 ರೂ. ಏರಿಕೆಯಾಗಿ 10,162 ರೂ.ಗೆ ಬಂದು ತಲುಪಿತ್ತು. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 74,520 ರೂ. ಬಾಳಿದರೆ, 10 ಗ್ರಾಂಗೆ ನೀವು 93,150 ರೂ. ಹಾಗೂ 100 ಗ್ರಾಂಗೆ 9,31,500 ರೂ. ನೀಡಬೇಕಾಗುತ್ತದೆ.

Dharmasthala: ಧರ್ಮಸ್ಥಳ ಸಂಚುಕೋರರಿಗೆ ಸೋಲು ಸನಾತನ ಧರ್ಮಕ್ಕೆ ಗೆಲುವು : ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಆಶಯ

ಧರ್ಮಸ್ಥಳ ಸಂಚುಕೋರರಿಗೆ ಸೋಲು ಸನಾತನ ಧರ್ಮಕ್ಕೆ ಗೆಲುವು

ಅಣ್ಣಪ್ಪ ಸ್ವಾಮಿ, ಮಂಜುನಾಥಸ್ವಾಮಿ ಸೇವೆ ಸಲ್ಲಿಸುತ್ತಾ ಸಮಾಜವನ್ನು ಸನ್ಮಾರ್ಗದ ಕಡೆ ಕೊಂಡೊ ಯ್ಯುತ್ತಿದ್ದಾರೆ. ಒಂದೆಡೆ ಭಕ್ತಿ ಮತ್ತೊಂದೆಡೆ ಸಮಾಜ ಸೇವೆ ಹೆಸರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯ ವಿಶ್ವಪ್ರೀತಿ ಪಡೆದಿತ್ತು.ಇಷ್ಟೇ ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿರುವ ಸ್ತ್ರೀಶಕ್ತಿ ಸಂಘಗಳನ್ನು ಒಗ್ಗೂಡಿಸಿ ಅವರಲ್ಲಿ ಆರ್ಥಿಕ ಚೇತನ್ಯವನ್ನು ತುಂಬುವ ಸಾರ್ಥಕ ಕಾರ್ಯ ನಿವಿಘ್ನವಾಗಿ ಸಾಗಿದೆ

ಅಮ್ಮ ಟ್ರಸ್ಟ್ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ: 50 ಯೂನಿಟ್ ಸಂಗ್ರಹ

ಸ್ವಯಂಪ್ರೇರಿತ ರಕ್ತದಾನ ಶಿಬಿರ: 50 ಯೂನಿಟ್ ಸಂಗ್ರಹ

ರಕ್ತದಾನ ಶಿಬಿರ ನಡೆಸುವ ಮೂಲಕ ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಸದಸ್ಯರು ವಾರ್ಷಿಕೋತ್ಸವ ವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.ಟ್ರಸ್ಟ್ನ ಮೊದಲನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು

ರೋಗಿಗಳ ದಾಖಲೆ ನಿರ್ವಹಣೆಗೆ ಎಐ ಚಾಲಿತ ಆತ್ಮ ಐರಾ ಬಿಡುಗಡೆ

ರೋಗಿಗಳ ದಾಖಲೆ ನಿರ್ವಹಣೆಗೆ ಎಐ ಚಾಲಿತ ಆತ್ಮ ಐರಾ ಬಿಡುಗಡೆ

ನಾವು ಕೇವಲ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಗಳಿಂದ ಮೀರಿ ಆ ಮಾಹಿತಿಯನ್ನು ವಿಶ್ಲೇಷಿಸುವ, ಕನೆಕ್ಟ್ ಮಾಡುವ ಮತ್ತು ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆಗಳ ಕಡೆಗೆ ಸಾಗುತ್ತಿದ್ದೇವೆ. ಐರಾದ ಮೂಲಕ ಎಐ ಆಧರಿತ ಯಾಂತ್ರೀಕರಣ ಪ್ರಕ್ರಿಯೆ ನಡೆಯಲಿದೆ ಮತ್ತು ದೊಡ್ಡ ಪ್ರಮಾಣದ ಮಾಹಿತಿಯನ್ನು ಸ್ಪಷ್ಟ ಒಳನೋಟಗಳಾಗಿ ಪರಿವರ್ತಿಸುವ ಕೆಲಸ ನಡೆಯ ಲಿದೆ. ಈ ಮೂಲಕ ರೋಗಿ ಗಳಿಗೆ ನಾವು ಅತ್ಯುತ್ತಮ ಸೇವೆಯನ್ನು ಒದಗಿಸಲಿದ್ದೇವೆ.

V Somanna: ತುಮಕೂರು ವಿವಿಗೆ ಶಿವಕುಮಾರ ಸ್ವಾಮೀಜಿ ಹೆಸರು ಮರುನಾಮಕರಣ; ಸರ್ಕಾರಕ್ಕೆ ಸೋಮಣ್ಣ ಪತ್ರ

ತುಮಕೂರು ವಿವಿಗೆ ಶಿವಕುಮಾರ ಸ್ವಾಮೀಜಿ ಹೆಸರು ಮರುನಾಮಕರಣಕ್ಕೆ ಒತ್ತಾಯ

ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ. ಶಿವಕುಮಾರ ಸ್ವಾಮೀಜಿ (Shivakumar Swamiji) ಹೆಸರು ಮರು ನಾಮಕರಣ ಮಾಡುವಂತೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Festival Trend 2025: ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ‌ ಮೂರ್ತಿಗಳು

ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ ಮೂರ್ತಿಗಳು

ಆಗಸ್ಟ್‌ 27ರಂದು ಗಣೇಶ್‌ ಚತುರ್ಥಿ ನಡೆಯಲಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಇದೀಗ ಇಕೋ ಫ್ರೆಂಡ್ಲಿ ಮಿನಿ ಗೌರಿ-ಗಣೇಶನ ಮೂರ್ತಿಗಳದ್ದೇ ಕಾರುಬಾರು! ಪುಟ್ಟ ಮೂರ್ತಿಗಳಿಂದಿಡಿದು ಆಳೆತ್ತರದ ಮೂರ್ತಿಗಳವರೆಗಿನ ಪರಿಸರ ಸ್ನೇಹಿ ಮೂರ್ತಿಗಳು ಎಲ್ಲೆಡೆ ಲಗ್ಗೆ ಇಟ್ಟಿವೆ. ಈ ಬಗ್ಗೆ ಇಲ್ಲಿದೆ ವರದಿ.

Karnataka weather: ಯೆಲ್ಲೋ ಅಲರ್ಟ್; ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ಯೆಲ್ಲೋ ಅಲರ್ಟ್; ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29°C ಮತ್ತು 21°C ಇರುವ ಸಾಧ್ಯತೆ ಇದೆ.

Dharmasthala case: ಮಟ್ಟಣ್ಣನವರ್‌ ಬಳಿ ಇರುವ ಸಾಕ್ಷ್ಯಗಳೆಲ್ಲಾ ಸುಜಾತಾ ಭಟ್‌ ರೀತಿಯದ್ದು: ಚಕ್ರವರ್ತಿ ಸೂಲಿಬೆಲೆ

ಮಟ್ಟಣ್ಣನವರ್‌ ಬಳಿ ಇರುವ ಸಾಕ್ಷ್ಯಗಳೆಲ್ಲಾ ಸುಜಾತಾ ಭಟ್‌ ರೀತಿಯದ್ದು

Dharmasthala case: ದೊಡ್ಡವರು ಏನು ಬೇಕಾದರೂ ಮಾಡುತ್ತಾರೆ ಎಂದು ಕೆಲ ಜನ ಹೇಳುತ್ತಾರೆ. ಆದರೆ, ದೊಡ್ಡವರು ಎನಿಸಿಕೊಂಡವರು ಹಲವು ಮಂದಿ ಜೈಲಿಗೆ ಹೋಗಿದ್ದಾರೆ. ಈ ನೆಲದ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

Dharmasthala Case: ಧರ್ಮಸ್ಥಳಕ್ಕೆ ಕಳಂಕ ಅಂಟಿಸಿದವರನ್ನು ಅಣ್ಣಪ್ಪ ಸರ್ವನಾಶ ಮಾಡುತ್ತಾನೆ: ವಸಂತ್‌‌ ಗಿಳಿಯಾರ್

ಧರ್ಮಸ್ಥಳಕ್ಕೆ ಕಳಂಕ ಅಂಟಿಸಿದ ಎಲ್ಲರನ್ನೂ ಅಣ್ಣಪ್ಪ ಸರ್ವನಾಶ ಮಾಡುತ್ತಾನೆ

Vasanth Giliyar: ಬೆಂಗಳೂರಿನ ಸಂಜಯ ನಗರದಲ್ಲಿ ಶನಿವಾರ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ವಸಂತ್‌ ಗಿಳಿಯಾರ್ ಮಾತನಾಡಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಎಲ್ಲ ಕುತಂತ್ರಗಳನ್ನು ಬಯಲು ಮಾಡುತ್ತಾರೆ ಎಂದು ತಿಳಿಸಿದ್ದಾರೆ.

Mahesh Shetty Thimarodi: ಏನೂ ಕಿತ್ಕೊಳೋಕೆ ಆಗಲ್ಲ; ಕೋರ್ಟ್‌ ಆವರಣದಲ್ಲೇ ನಾಲಿಗೆ ಹರಿಬಿಟ್ಟ ಮಹೇಶ್‌ ತಿಮರೋಡಿ!

ಏನೂ ಕಿತ್ಕೊಳೋಕೆ ಆಗಲ್ಲ; ನಾಲಿಗೆ ಹರಿಬಿಟ್ಟ ಮಹೇಶ್‌ ತಿಮರೋಡಿ!

Mahesh Shetty Thimarodi: ಹಿರಿಯಡ್ಕ ಸಬ್ ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, ನಮ್ಮ ಹೋರಾಟ ಮುಂದುವರಿಯಲಿದೆ, ಸಹಕಾರ ನೀಡಿದ ವಕೀಲರಿಗೆ ಅಭಿನಂದನೆ ಸಲ್ಲಿಸುವೆ. ಅನಾಮಿಕನ ಬಂಧನದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ

Karnataka Rains: ಯೆಲ್ಲೋ ಅಲರ್ಟ್; ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಅಬ್ಬರಿಸಲಿದೆ ಮಳೆ!

ಯೆಲ್ಲೋ ಅಲರ್ಟ್; ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಅಬ್ಬರಿಸಲಿದೆ ಮಳೆ!

Karnataka Weather: ಆ.24ರಂದು ಕರಾವಳಿ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿe. ಆಗಸ್ಟ್ 26 ಮತ್ತು 27ರಂದು ಕರ್ನಾಟಕ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

S\O Muthanna Movie: ʼS/O ಮುತ್ತಣ್ಣʼ ಸಿನಿಮಾದ ಟ್ರೇಲರ್ ಔಟ್‌; ಚಿತ್ರ ಸೆ.12ಕ್ಕೆ ರಿಲೀಸ್‌

ʼS/O ಮುತ್ತಣ್ಣʼ ಸಿನಿಮಾದ ಟ್ರೇಲರ್ ಔಟ್‌; ಚಿತ್ರ ಸೆ.12ಕ್ಕೆ ರಿಲೀಸ್‌

S\O Muthanna Movie: ಪ್ರಣಮ್ ದೇವರಾಜ್ ನಾಯಕನಾಗಿ ಹಾಗೂ ʼದಿಯಾʼ ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ ʼS/O ಮುತ್ತಣ್ಣʼ ಚಿತ್ರದ ಟ್ರೇಲರ್ ಇತ್ತೀಚೆಗೆ ವಿಕ್ಟರಿ ಸಿನಿಮಾಸ್‌ನಲ್ಲಿ ಬಿಡುಗಡೆಯಾಗಿದೆ. ಚಿತ್ರವು ಸೆಪ್ಟೆಂಬರ್ 12ರಂದು ಬಿಡುಗಡೆಯಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

Mahesh Shetty Thimarodi: ಮಹೇಶ್‌ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು

ಮಹೇಶ್‌ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು

Mahesh Shetty Thimarodi: ಬಿ.ಎಲ್‌. ಸಂತೋಷ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಜಿರೆಯ ನಿವಾಸದಲ್ಲಿ ಸೌಜನ್ಯಾ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಗುರುವಾರ ಅರೆಸ್ಟ್‌ ಮಾಡಿದ್ದರು. ಅವರಿಗೆ ಇದೀಗ ಉಡುಪಿ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

KC Veerendra Puppy: ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅರೆಸ್ಟ್;‌ ಇಡಿಯಿಂದ 12 ಕೋಟಿ ನಗದು, 6 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅರೆಸ್ಟ್;‌ 12 ಕೋಟಿ ನಗದು ಜಪ್ತಿ

illegal betting case: ಚಿತ್ರದುರ್ಗ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಶುಕ್ರವಾರ ಬಂದಿಸಿ, ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್‌ನಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆಯಲಾಯಿತು ಎಂದು ಇಡಿ ತಿಳಿಸಿದೆ.

Dharmasthala case: ನದಿಯಲ್ಲಿ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ; ಮುಸುಕುಧಾರಿಯ ಮುಖವಾಡ ಬಯಲು!

ನದಿಯಲ್ಲಿ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ಚಿನ್ನಯ್ಯ!

Mask Man Chinnaiah: ದೂರುದಾರ ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದು, ಸಿ.ಎನ್ ಚಿನ್ನಯ್ಯ ಅಲಿಯಾಸ್ ಚಿನ್ನಪ್ಪ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಸದ್ಯ ಚಿನ್ನಯ್ಯನನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ (police custody) ನೀಡಿ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ.

ಸೆಬಿ- ಪ್ರಮಾಣೀಕೃತ ಫೈನಾನ್ಷಿಯಲ್ ಕೋರ್ಸ್‌ಗಳನ್ನು ಪಠ್ಯಕ್ರಮದಲ್ಲಿ ಸಂಯೋಜಿಸಲು ಎನ್‌ಐಎಸ್‌ಎಂ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಐಎಸ್‌ಎಂಇ ಬೆಂಗಳೂರು

ಎನ್‌ಐಎಸ್‌ಎಂ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಐಎಸ್‌ಎಂಇ ಬೆಂಗಳೂರು

ಎನ್‌ಐಎಸ್‌ಎಂ ಸಂಸ್ಥೆಯು ಎನ್‌ಐಎಸ್‌ಎಂ ಪ್ರಮಾಣಪತ್ರಗಳನ್ನು ಪಡೆದ ಐಎಸ್‌ಎಂಇ ವಿದ್ಯಾರ್ಥಿ ಗಳಿಗಾಗಿ ವಿಶೇಷ ನೇಮಕಾತಿ ಪೋರ್ಟಲ್ ರಚಿಸಲಿದೆ. ಈ ಮೂಲಕ ಉದ್ಯೋಗಾವಕಾಶ ಹೆಚ್ಚಿಸಲಿದೆ. ಆರ್ಥಿಕ ಶಿಕ್ಷಣವನ್ನು ಹೆಚ್ಚು ಮಂದಿಗೆ ಒದಗಿಸಲು ಎನ್‌ಐ ಎಸ್‌ಎಂ ಸಂಸ್ಥೆಯು ಐಎಸ್‌ಎಂಇ ವಿದ್ಯಾರ್ಥಿಗಳಿಗೆ ಎಲ್ಲಾ ಇ-ಲರ್ನಿಂಗ್ ಕೋರ್ಸ್ ಗಳ ಮೇಲೆ ಶೇ.50ರವರೆಗೆ ರಿಯಾಯಿತಿಯನ್ನು ನೀಡುತ್ತದೆ.

Dharmasthala Temple: ಧರ್ಮಸ್ಥಳ ದೇವಸ್ಥಾನದಲ್ಲಿ ಶಿವ ತಾಂಡವ ಪ್ರತ್ಯಕ್ಷ!

ಧರ್ಮಸ್ಥಳ ದೇವಸ್ಥಾನದಲ್ಲಿ ಶಿವ ತಾಂಡವ ಪ್ರತ್ಯಕ್ಷ

ಧರ್ಮಸ್ಥಳ ಕ್ಷೇತ್ರ ವಿರೋಧಿಗಳ ಸಂಚು ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ಧರ್ಮಸ್ಥಳ ದೇವಸ್ಥಾನದ ಹಿನ್ನೆಲೆಯಲ್ಲಿ ಶಿವ ತಾಂಡವ ಮಾಡುತ್ತಿರುವ ಫೋಟೊವನ್ನು ಕ್ಷೇತ್ರದ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆ ಮೂಲಕ ವಿರೋಧಿಗಳಿಗೆ ಸರಿಯಾಗಿ ತಿರುಗೇಟು ನೀಡಲಾಗಿದೆ.

ಮಲ್ಟಿಪಲ್ ಸ್ಕ್ಲಿರೋಸಿಸ್ (ಎಂಎಸ್) ಇರುವ ಜನರ ಮೂಕ ಹೋರಾಟಗಳನ್ನು “ವಾಕ್ ಇನ್ ಮೈ ಶೂಸ್” ಮೂಲಕ ಸಾರ್ವಜನಿಕ ಆರೋಗ್ಯ ಜಾಗೃತಿ

ಭಾರತೀಯ ಮಲ್ಟಿಪಲ್ ಸ್ಕ್ಲಿರೋಸಿಸ್ ಸೊಸೈಟಿಯೊಂದಿಗೆ ರಾಷ್‌ ಪಾಲುದಾರಿಕೆ

ಜಾಗತಿಕವಾಗಿ ಲಕ್ಷಗಟ್ಟಲೆ ಜನರು ಮತ್ತು ಅಂದಾಜು 2 ಲಕ್ಷ ಭಾರತೀಯರು ಮಲ್ಟಿಪಲ್ ಸ್ಕ್ಲಿರೋಸಿಸ್ ಎನ್ನುವ ಒಂದು ಜೀವ-ಮಿತಗೊಳಿಸುವ ನರ ಅಸ್ವಸ್ಥತೆಯೊಂದಿಗೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಈ ಕಾಯಿಲೆಯು ಅವರ ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇದು ನಡೆಯು ವುದು, ಅಡುಗೆ ಮಾಡುವುದು, ಸ್ನಾನ ಮಾಡುವುದು ಅಥವಾ ಮಗುವನ್ನು ಹಿಡಿಯಲು ಸಾಧ್ಯವಾಗದ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ

ಪರಮ್ ಕಲ್ಚರ್ ವತಿಯಿಂದ ಆ.24ಕ್ಕೆ ಪರಮ್ ವಿಹಾರ

ಪರಮ್ ಕಲ್ಚರ್ ವತಿಯಿಂದ ಆ.24ಕ್ಕೆ ಪರಮ್ ವಿಹಾರ

ನಗರದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿರುವ ʻಪರಮ್ ಕಲ್ಚರ್ʼ ತನ್ನ ಮಾಸಿಕ ಕಲಾ ಪ್ರದರ್ಶನವಾದ ʻಪರಮ್ ವಿಹಾರʼ ಕಾರ್ಯಕ್ರಮವನ್ನು ಸನಾತನ ಕಲಾಕ್ಷೇತ್ರದಲ್ಲಿ ಆಗಸ್ಟ್ 24ರಂದು ಆಯೋಜಿಸಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾ ಪ್ರಕಾರಗಳ ಮಿಶ್ರಣವುಳ್ಳ ಕಾರ್ಯಕ್ರಮ ಇದಾಗಿದ್ದು, ಜಗಲಿ ಟೇಲ್ಸ್‌, ತಂತ್ರ ಕಾರ್ಯಕ್ರಮಗಳು ಮಾಹಿತಿಯುಕ್ತ ಮನೋರಂಜನೆ ನೀಡಲು ಸಜ್ಜಾಗಿದೆ.

Dharmasthala Case: ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಬಂಧನ; ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

ಮಾಸ್ಕ್‌ ಮ್ಯಾನ್‌ ಬಂಧನದ ಬಗ್ಗೆ ವೀರೇಂದ್ರ ಹೆಗ್ಗಡೆ ಹೇಳಿದ್ದೇನು?

Veerendra Heggade: ಈಗ ಒಂದೊಂದೆ ಸತ್ಯ ಹೊರಗೆ ಬರುತ್ತಿವೆ. ಎಲ್ಲಾ ಆರೋಪಗಳಿಂದ ತೊಳೆದಂತಾಗಿದೆ. ಇದರ ಬಗ್ಗೆ ನಾನು ಈಗ ಹೆಚ್ಚು ಮಾತನಾಡಲ್ಲ. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ. ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಬಂಧನದ ಬಗ್ಗೆ ಅವರು ಮಾತನಾಡಿದ್ದಾರೆ.

KV Prabhakar: ರಾಷ್ಟ್ರೀಯ ಬ್ಯಾಂಕ್‌ಗಳ ಪಾಲಿಗೆ ಪತ್ರಕರ್ತರು ಹೊರಗಿನವರು: ಕೆ.ವಿ.ಪ್ರಭಾಕರ್

ರಾಷ್ಟ್ರೀಯ ಬ್ಯಾಂಕ್‌ಗಳ ಪಾಲಿಗೆ ಪತ್ರಕರ್ತರು ಹೊರಗಿನವರು: ಕೆ.ವಿ.ಪ್ರಭಾಕರ್

KV Prabhakar: ಪತ್ರಕರ್ತರ ಸಹಕಾರಿ ಸಂಘಕ್ಕೆ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಆಯೋಜಿಸಿದ್ದ "ಅಮೃತ ಸಂಭ್ರಮ" ಕಾರ್ಯಕ್ರಮ ಉದ್ಘಾಟಿಸಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಮಾತನಾಡಿದ್ದಾರೆ. ದುಡಿಯುವ ವರ್ಗಗಳ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಡೆದ ಸಹಕಾರ ಚಳವಳಿಯ ಭಾಗವಾಗಿ ಪತ್ರಕರ್ತರ ಸಹಕಾರ ಸಂಘವೂ ಜನ್ಮ ತಾಳಿದೆ. ಈ ಸಂಘದ ಸ್ಥಾಪನೆಗೆ ಮುನ್ನುಡಿ ಬರೆದ ಎಲ್ಲಾ ಹಿರಿಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.

Dharmasthala Case: ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ನ್ಯಾಯದ ಪರ ಎಂದ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ: ಡಿ.ಕೆ. ಶಿವಕುಮಾರ್

DK Shivakumar: ಧರ್ಮಸ್ಥಳದ ಕುಟುಂಬದವರೇ ಬಂದು ಮುಖ್ಯಮಂತ್ರಿಗಳ ಬಳಿ ಮಾತನಾಡಿ, ನೀವು ಎಸ್‌ಐಟಿ ರಚನೆ ಮಾಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರು ನಮ್ಮ‌‌ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಯವರು, ಗೃಹ ಸಚಿವರು ಸದನದಲ್ಲಿ ಹಾಗೂ ಸಿಎಲ್‌ಪಿ ಸಭೆಯಲ್ಲೂ ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಬೊಮ್ಮನಹಳ್ಳಿಯಿಂದ ʼಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆʼ ಧರ್ಮ ರಕ್ಷಣಾ ಯಾತ್ರೆ ಆರಂಭ

ಬೊಮ್ಮನಹಳ್ಳಿಯಿಂದ ʼಧರ್ಮಸ್ಥಳಕ್ಕೆʼ ಧರ್ಮ ರಕ್ಷಣಾ ಯಾತ್ರೆ ಆರಂಭ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವತಿಯಿಂದ ʼಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆʼ ಧರ್ಮ ರಕ್ಷಣಾ ಯಾತ್ರೆಯನ್ನು ಶನಿವಾರ ಬೆಳಗ್ಗೆ ಆರಂಭವಾಗಿದೆ. ಪೂಜೆ ನೆರವೇರಿಸಿದ ಬಳಿಕ ಶಾಸಕ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಕಾರುಗಳಲ್ಲಿ ಯಾತ್ರೆ ಆರಂಭಗೊಂಡಿತು. ಈ ಕುರಿತ ವಿವರ ಇಲ್ಲಿದೆ.

Loading...