ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆನೆ ಮರಿಗೂ ಬರ್ತ್‌ ಡೇ ಭಾಗ್ಯ! ಕ್ಯೂಟ್‌ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಫಿದಾ

ಮರಿ ಆನೆಯೊಂದು ತನ್ನ ಮಾವುತನ ಜೊತೆಯಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕ್ಯೂಟ್‌ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಇದರಲ್ಲಿ ಆನೆ ಮರಿ ಮನುಷ್ಯರಂತೆ ಮೇಣದಬತ್ತಿಗಳನ್ನು ಊದಿ ಹಣ್ಣುಗಳಿಂದ ತಯಾರಿಸಿದ ಕೇಕ್ ಅನ್ನು ತಿಂದಿದೆ.

ಆನೆ ಮರಿಗೂ ಬರ್ತ್‌ ಡೇ ಭಾಗ್ಯ; ಕ್ಯೂಟ್‌ ವಿಡಿಯೊ ನೋಡಿ

Profile pavithra Apr 21, 2025 3:58 PM

ನವದೆಹಲಿ: ಜನರು ಸಾಮಾನ್ಯವಾಗಿ ಕೇಕ್ ಕತ್ತರಿಸಿಕೊಂಡು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಮರಿ ಆನೆ. ತಾನೇನು ಕಡಿಮೆ ಇಲ್ಲವೆಂಬಂತೆ ಹಣ್ಣುಗಳಿಂದ ಅಲಂಕರಿಸಿದ ವಿಶೇಷವಾದ ಕೇಕ್‌ ಕತ್ತರಿಸಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಈ ವೇಳೆ ಆನೆ ಮರಿ ಮನುಷ್ಯರಂತೆ ಮೇಣದ ಬತ್ತಿಗಳನ್ನು ಊದಿ ಕೇಕ್ ಕತ್ತರಿಸಿ ತಿಂದಿದೆ. ಆನೆ ಮರಿ ಜೊತೆ ಅದರ ಮಾವುತ ಕೂಡ ನಿಂತು ಅದರ ಹುಟ್ಟುಹಬ್ಬದ ಆಚರಣೆಯನ್ನು ಆನಂದಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ತನ್ನ ಸೊಂಡಿಲಿನ ಮೂಲಕ ಆನೆ ಮರಿ ಮೇಣದಬತ್ತಿ ಆರಿಸುತ್ತಿರುವುದು ಸೆರೆಯಾಗಿದೆ.

ಪುಟ್ಟ ಆನೆ ಮರಿ ತನ್ನ ಮಾವುತನ ಪಕ್ಕದಲ್ಲಿ ನಿಂತಿದೆ. ಅದರ ಮುಂದಿನ ತಟ್ಟೆಯಲ್ಲಿ ಕೇಕಿನಾಕಾರದಲ್ಲಿ ಹಣ‍್ಣುಗಳನ್ನು ಜೋಡಿಸಲಾಗಿದೆ. ಅದರ ಮೇಲೆ ಮೇಣದ ಬತ್ತಿ ಇಡಲಾಗಿದೆ. ಅದು ಸೊಂಡಿಲಿನಿಂದ ಮೇಣದ ಬತ್ತಿಯನ್ನು ಆರಿಸಲು ಅದರ ಮಾವುತ ಸಹಾಯ ಮಾಡಿದ್ದಾನೆ. ನಂತರ ಆನೆಯು ತನ್ನ ನೆಚ್ಚಿನ ತಿನಿಸುಗಳಾದ ಬಾಳೆಹಣ್ಣುಗಳು, ಕಲ್ಲಂಗಡಿಗಳನ್ನು ಖುಷಿಯಿಂದ ತಿಂದಿದ್ದಾನೆ.

ಆನೆಮರಿಯ ಬರ್ತ್‌ಡೇ ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅದು ಈಗ ವೈರಲ್ ಆಗಿದೆ. ಈ ವಿಡಿಯೊವನ್ನು ಜನಪ್ರಿಯ ಮೆಮ್ ಮತ್ತು ಎಂಟರ್‌ಟೈನ್‌ಮೆಂಟ್‌ ಪೇಜ್‌ "ದಿ ಇಂಡಿಯನ್ ವ್ಯಂಗ್ಯ" ಹಂಚಿಕೊಂಡಿದೆ. ಅದ್ಭುತವಾದ ವಿಡಿಯೊ ನೆಟ್ಟಿಗರ ಹೃದಯವನ್ನು ಗೆದ್ದಿದೆ ಮತ್ತು ಅನೇಕರು ಈ ದೃಶ್ಯವನ್ನು ಕಂಡು ವಾವ್ ಎಂದು ಹೇಳಿದ್ದಾರೆ. "ಹ್ಯಾಪಿ ಬರ್ತ್ ಡೇ ಕ್ಯೂಟಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಕ್ಯೂಟಿ", ಇನ್ನೊಬ್ಬರು ಹೇಳಿದ್ದಾರೆ.

ಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸಿದಂತಹ ಘಟನೆ ನಡೆದಿದ್ದು ಇದೇ ಮೊದಲ್ಲ. ಈ ಹಿಂದೆ ಯುವಕರ ಗುಂಪೊಂದು ಬೀದಿ ನಾಯಿಯ ಹುಟ್ಟುಹಬ್ಬವನ್ನು ಆಚರಿಸಿತ್ತು. ಈ ಯುವಕರು ಪ್ರತಿ ವರ್ಷವೂ ಈ ಬೀದಿ ನಾಯಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತದೆಯಂತೆ. ಅದೇರೀತಿ ಈ ಬಾರಿಯೂ ನಾಯಿಯ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ತೆರೆದ ಜೀಪಿನಲ್ಲಿ ಮದುವೆ ಸಂಭ್ರಮದಂತೆ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಒಳಗೆ ಸೇರಿದರೆ ಗುಂಡು... ನಡುರಸ್ತೆಯಲ್ಲಿ ನಾರಿಯ ಹೈಡ್ರಾಮಾ; ಈಕೆಯ ಕಿತಾಪತಿಯ ವಿಡಿಯೋ ಇಲ್ಲಿದೆ ನೋಡಿ

ವಿಡಿಯೊದಲ್ಲಿ ಅವರು ನಾಯಿಯನ್ನು ಜೀಪ್‍ನಲ್ಲಿ ಕೂರಿಸಿಕೊಂಡು ನಗರದ ಸುತ್ತಲೂ ಕರೆದೊಯ್ಯುವುದು ಕೂಡ ಸೆರೆಯಾಗಿತ್ತು. ನಾಯಿಯ ಕುತ್ತಿಗೆಗೆ ಹೂವಿನ ಹಾರವನ್ನು ಹಾಕಿದ ಯುವಕರ ಗುಂಪು ಕೇಕ್ ಕತ್ತರಿಸಿ ನಾಯಿಗೆ ತಿನ್ನಿಸಿ ತಮ್ಮ ಪ್ರೀತಿಯ ನಾಯಿಗಾಗಿ ಹುಟ್ಟುಹಬ್ಬದ ಹಾಡನ್ನು ಹಾಡಿದ್ದಾರೆ. ಹಾಗೇ ನಾಯಿಗೆ ಸಂಬಂಧಪಟ್ಟ ದೊಡ್ಡ ಬ್ಯಾನರ್‌ ಅನ್ನು ರಸ್ತೆಯಲ್ಲಿ ಹಾಕಿದ್ದಾರೆ. ನಾಯಿಯ ಬಗ್ಗೆ ಅವರಿಗಿರುವ ವಿಶೇಷ ಭಾವನೆಯನ್ನು ಕಂಡು ನೆಟ್ಟಿಗರು ಖುಷಿಯಾಗಿದ್ದರು. ಅನೇಕರು "ಲುಡೋ ಭಾಯ್" ಗೆ ಶುಭಾಶಯಗಳನ್ನು ತಿಳಿಸಿದ್ದರು.